Latest Updates
-
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ! -
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್! -
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ!
ಬೆಳಗ್ಗೆ ಘಮ ಘಮ ಎನ್ನುವ ಕಿಚಡಿ ಮಾಡಿ..! ರುಚಿಗೆ ಫಿದಾ ಆಗದವರಿಲ್ಲ!
ಬೆಳಗ್ಗಿನ ತಿಂಡಿಗೆ ಯಾವ ಪದಾರ್ಥ ಮಾಡಬೇಕು ಅನ್ನೋದು ನಿಮ್ಮ ಕಷ್ಟದ ಪ್ರಶ್ಮೆಯಲ್ಲಿ ಒಂದಾಗಿರುತ್ತದೆ. ಏಕೆಂದರೆ ನಿತ್ಯವೂ ಒಂದು ಹೊಸ ಹೊಸ ರುಚಿ ಮಾಡುವುದು ಕಷ್ಟದ ಕೆಲಸ. ಅದರಲ್ಲೂ ಬೆಳಗ್ಗೆ ಎದ್ದಾಗ ತಿಂಡಿ ಮಾಡುವುದು ಏನು ಎಂಬುದೇ ಬಹುದೊಡ್ಡ ಪ್ರಶ್ನೆ. ಕೆಲವರು ಗಡಿಬಿಡಿಯಲ್ಲಿ ಯಾವ ತಿಂಡಿ ಮಾಡಬಹುದು ಎಂಬುದನ್ನು ಮನಗೊಂಡು ಚಿತ್ರಾನ್ನ, ಪುಳಿಯೋಗರೆ, ಪಲಾವ್ ಮಾಡುತ್ತಾರೆ.
ಆದ್ರೆ ನಿತ್ಯವೂ ಇದೇ ರೈಸ್ ತಿಂಡಿಗಳ ಮಾಡಿದರೆ ಸವಿಯಲು ಯಾರಿಗೆ ತಾನೆ ಮನಸಾಗುತ್ತದೆ ಹೇಳಿ. ಕೆಲವರಿಗೆ ಇದಂತು ದೊಡ್ಡ ಸಮಸ್ಯೆಯೇ ಸರಿ. ಅದಕ್ಕೆ ಅವರು ನಿತ್ಯ ಬೇರೆ ಬೇರೆ ಹೊಸ ತಿಂಡಿ ಮಾಡುವ ಆಲೋಚನೆ ಅಂತು ಮಾಡಿರುತ್ತಾರೆ. ಅವರಿಗೆ ಏನು ಮಾಡಬೇಕು ಅನ್ನೋದೆ ಗೊಂದಲ ಹುಟ್ಟಿಸುತ್ತೆ.

ಅಂತವರ ಗೊಂದಲ ದೂರ ಮಾಡಲು ನಾವಿಂದು ರುಚಿ ರುಚಿಯ ತಿಂಡಿ ಕಿಚಡಿಯನ್ನು ಮಾಡುವುದು ಹೇಗೆ ಎಂಬುದನ್ನು ತಿಳಿಸಿಕೊಡುತ್ತೇವೆ. ಕಿಚಡಿ ರೈಸ್ ಕೆಲವರಿಗೆ ಏನೆಂದು ತಿಳಿದಿರುವುದಿಲ್ಲ ಆದ್ರೆ ಇದನ್ನು ಒಮ್ಮೆ ಅವರು ರುಚಿ ನೋಡಿದರೆ ಮತ್ತೆಂದು ಮರೆಯದೆ ಅದನ್ನೇ ಮಾಡುತ್ತಾರೆ. ಸಿಂಪಲ್ ಆಗಿ ಇದೊಂದು ರೀತಿಯ ಬಿಸಿ ಬೇಳೆ ಬಾತ್ ಎನ್ನಬಹುದು. ಆದ್ರೆ ಅದಕ್ಕೂ ಕಿಚಡಿಗೂ ಅಜಗಜಾಂತರ ವ್ಯತ್ಯಾಸವಿದೆ. ರುಚಿಯಲ್ಲೂ ವ್ಯತ್ಯಾಸವಿದೆ.
ಹಾಗಾದ್ರೆ ಈ ಕಿಚಡಿ ಮಾಡುವುದು ಹೇಗೆ? ಕಿಚಡಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಕಿಚಡಿ ಮಾಡುವ ಸರಿಯಾದ ಪಾಕ ವಿಧಾನವೇನು? ಎಷ್ಟು ಸಮಯ ಹಿಡಿಯುತ್ತದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಕಿಚಡಿ ಮಾಡಲು ಬೇಕಾಗುವ ಪದಾರ್ಥಗಳು
- ಅಕ್ಕಿ - 1 ಕಪ್
- ಹೆಸರು ಬೇಳೆ - 1/4 ಕಪ್
- ಮಸೂರ್ ದಾಲ್ - 1/4 ಕಪ್
- ಪಲಾವ್ ಎಲೆ - 1
- ದಾಲ್ಚಿನ್ನಿ - 2 ಪೀಸ್
- ಜೀರಾ-1/4 ಸ್ಪೂನ್
- ಲವಂಗ- 2
- ಏಲಕ್ಕಿ- 2
- ಈರುಳ್ಳಿ- 1
- ಟೊಮೆಟೊ - 1
- ಶುಂಠಿ ಬೆಳ್ಳುಳ್ಳಿ ಪೇಸ್ಟ್ - 1 ಟೀಸ್ಪೂನ್
- ಹಸಿರು ಮೆಣಸಿನಕಾಯಿ - 4
- ಒಣ ಮೆಣಸು -4
- ಅರಿಶಿನ ಪುಡಿ - 1/4 ಟೀಸ್ಪೂನ್
- ಕೆಂಪು ಮೆಣಸಿನ ಪುಡಿ - 1/2 ಟೀಸ್ಪೂನ್
- ಕೊತ್ತಂಬರಿ ಪುಡಿ - 1 ಟೀಸ್ಪೂನ್
- ಕಸೂರಿ ಮೇಥಿ - 1 ಟೀಸ್ಪೂನ್
- ಕೊತ್ತಂಬರಿ ಸೊಪ್ಪು - 2 tbs
- ಗರಂ ಮಸಾಲಾ ಪುಡಿ - 1/4 ಟೀಸ್ಪೂನ್
- ಬೆಳ್ಳುಳ್ಳಿ - 5 ಪೀಸ್ ಗಳು
- ಕರಿಬೇವಿನ ಎಲೆಗಳು - 1 tbs
- ಜೀರಿಗೆ - 1/4 ಟೀಸ್ಪೂನ್
- ಇಂಗು - 1/4 ಟೀಸ್ಪೂನ್
- ತುಪ್ಪ - 2 ಟೀಸ್ಪೂನ್
- ನೀರು
- ಅಡುಗೆ ಎಣ್ಣೆ
- ರುಚಿಗೆ ಉಪ್ಪು
ಕಿಚಡಿ ಮಾಡುವುದು ಹೇಗೆ?
ಮೊದಲು ಒಲೆ ಮೇಲೆ ಪಾತ್ರೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಏಲಕ್ಕಿ, ಜೀರಿಗೆ, ಲವಂಗ, ಪಲಾವ್ ಎಲೆಯನ್ನು ಹಾಕಿಕೊಂಡಿ ಫ್ರೈ ಮಾಡಿ. ಇದಕ್ಕೆ ಈರುಳ್ಳಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಹಸಿಮೆಣಸು, ಟೊಮೆಟೋ (ಚಿಕ್ಕದಾಗಿ ಹೆಚ್ಚಿರುವುದು ಹಾಕಿಕೊಂಡಿ ಮಿಕ್ಸ್ ಮಾಡಿ.
ಇದಕ್ಕೆ ದನಿಯಾ, ಖಾರದ ಪುಡಿ, ಅರಶಿಣ ಪುಡಿ, ಹಾಕಿಕೊಳ್ಳಿ ಇದಕ್ಕೆ ಸ್ವಲ್ಪ ನೀರು, ಉಪ್ಪು ಹಾಕಿಕೊಳ್ಳಿ. ಕುದಿಬರಲು ಬಿಡಿ. ಇನ್ನೊಂದು ಕಡೆ ಪಾತ್ರೆಗೆ ಅಕ್ಕಿ, ಹೆಸರು ಬೇಳೆ, ಮಸೂರ್ ದಾಲ್ ಹಾಗೂ ನೀರು ಹಾಕಿಕೊಂಡು ಚೆನ್ನಾಗಿ ತೊಳೆದುಕೊಳ್ಳಿ. ಬಳಿಕ ನೀರು ತೆಗೆದು ಅದನ್ನು ಒಲೆ ಮೇಲೆ ಕುದಿಯುತ್ತಿರುವ ಮಸಾಲಗೆ ಹಾಕಿಕೊಳ್ಳಿ.
1 ನಿಮಿಷದ ವರೆಗೂ ಬಿಡಿ ಬಳಿಕ ಅದಕ್ಕೆ 2 ಗ್ಲಾಸ್ ಅಕ್ಕಿ ಬೇಳೆ ಹಾಕಿದ್ದರೆ 6 ಗ್ಲಾಸ್ ನೀರು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಬಳಿಕ ಮುಚ್ಚಳ ಹಾಕಿ 2 ಸೀಟಿ ಹೊಡೆಯಲು ಬಿಡಿ. 2 ಸೀಟಿ ಹೊಡೆದ ಬಳಿಕ ಮುಚ್ಚಳ ತೆಗೆದು ಕಸೂರಿ ಮೇಥೆ, ಕೊತ್ತಂಬರಿ ಸೊಪ್ಪು, ಗರಂ ಮಸಾಲ ಹಾಕಿಕೊಂಡು ಕುದಿಸಿಕೊಳ್ಳಿ.
ಇನ್ನೊಂದು ಕಡೆ ಒಗ್ಗರಣೆ ರೆಡಿ ಮಾಡಿ. ಒಂದು ಪಾತ್ರೆ ಇಟ್ಟು ಅದಕ್ಕೆ ಎಣ್ಣೆ ಅಥವಾ ತುಪ್ಪ ಹಾಕಿ ಜೊತೆಗೆ ಬೆಳ್ಳುಳ್ಳಿ, ಜೀರಿಗೆ, ಸಾಸಿವೆ ಹಾಕಿ ಫ್ರೈ ಮಾಡಿ, ಇಂಗು, ಒಣ ಮೆಣಸು, ಕರಿಬೇವು ಹಾಕಿ ಮಿಕ್ಸ್ ಮಾಡಕೊಳ್ಳಿ. ಇಷ್ಟು ಹಾಕಿ ಒಲೆ ಆಫ್ ಮಾಡಿ. ಬಳಿಕ ಇದನ್ನು ಕುಕ್ಕರ್‌ನಲ್ಲಿರುವ ಕಿಚಡಿಗೆ ಹಾಕಿ ಮಿಕ್ಸ್ ಮಾಡಿಕೊಳ್ಳಿ.
ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಘಮ ಘಮ ಎನ್ನುವ ಕಿಚಡಿ ರೆಡಿಯಾಗುತ್ತದೆ. ಬಿಸಿಯಾಗಿದ್ದಾಗಲೆ ಕಿಚಡಿ ತಿಂದರೆ ಅದರ ರುಚಿ ದುಪ್ಪಟ್ಟಾಗುತ್ತದೆ.



Click it and Unblock the Notifications