Latest Updates
-
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್
ಗರಿಗರಿಯ ಖಾರಸೇವ್ ಮಾಡುವುದು ಹೇಗೆ? ಎಷ್ಟೊಂದು ಸುಲಭ ಗೊತ್ತಾ?
ಸಂಜೆ ಸಮಯದಲ್ಲಿ ನಾವು ಸ್ನ್ಯಾಕ್ಸ್ ಆಗಿ ಹತ್ತು ಹಲವು ರೀತಿ ಖಾದ್ಯ ಸವಿದಿರುತ್ತೇವೆ. ಅದ್ರಲ್ಲೂ ಬೇಕರಿ ಖಾದ್ಯ ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಅತಿಥಿಗಳು ಬಂದಾಗ, ಶುಭ ಕಾರ್ಯವಿದ್ದಾಗ, ಮನೆಯಲ್ಲಿ ಹಬ್ಬವಿದ್ದರೆ ಯಾವುದಾದರು ಬೇಕರಿ ತಿಂಡಿ ಬಳಸುವುದು ಸರ್ವೆ ಸಾಮಾನ್ಯ. ಈ ತಿಂಡಿಗಳನ್ನು ಮನೆಯಲ್ಲೇ ಮಾಡಿ ಸವಿಯುವುದರಿಂದ ಅದೆಷ್ಟು ಲಾಭವಿದೆ ಗೊತ್ತಾ?
ಅದ್ರಲ್ಲೂ ನಾವು ಮಸಾಲೆ ಕಡಲೆ, ಚಕ್ಲಿ, ಕೇಕ್, ಕರಿದ ತಿಂಡಿಗಳನ್ನ ಮನೆಗಳಲ್ಲಿ ಮಾಡಿರುತ್ತೇವೆ. ಆದ್ರೆ ನಾವಿಂದು ಮನೆಯಲ್ಲೇ ಖಾರಸೇವ್ ಮಾಡುವ ಕುರಿತು ತಿಳಿಯೋಣ. ಖಾರಸೇವ್ ಎಲ್ಲರಿಗೂ ಅತ್ಯಂತ ಪ್ರಿಯವಾದ ಕರಿದ ತಿಂಡಿಯಾಗಿದೆ. ಊಟದ ಸಮಯದಲ್ಲೂ ಕೆಲವರು ಖಾರಸೇವ್ ಬಳಸುತ್ತಾರೆ.

ಖಾರಸೇವ್ ಟೀ-ಕಾಫಿ ಜೊತೆಗೆ ಸವಿಯಲು ಬಹಳ ರುಚಿ ನೀಡಲಿದೆ. ಮಕ್ಕಳಿಂದ ಹಿಡಿದು ಹಿರಿಯರವರೆಗೂ ಹೆಚ್ಚಾಗಿ ಇದನ್ನು ಸವಿಯಲು ಇಷ್ಟಪಡುತ್ತಾರೆ. ಖಾರಸೇವ್ ಬೇಕರಿಯಲ್ಲಿ ಒಂದೊಂದು ರೀತಿಯಲ್ಲಿ ಮಾಡುತ್ತಾರೆ. ಆದ್ರೆ ಮನೆಯಲ್ಲಿ ಮಾಡುವುದು ಹೇಗೆ? ಹೌದು ನಾವಿಂದು ಮನೆಯಲ್ಲೇ ಈ ಖಾರಸೇವ್ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಖಾರಸೇವ್ ಮಾಡುವ ವಿಧಾನವೇನು? ಎಂಬುದನ್ನು ನಾವಿಂದು ನೋಡೋಣ.
ಖಾರಸೇವ್ ಮಾಡಲು ಬೇಕಾಗುವ ಪದಾರ್ಥಗಳು
- ಕಡಲೆ ಹಿಟ್ಟು - 2 ಕಪ್
- ಅಕ್ಕಿ ಹಿಟ್ಟು ಅರ್ಧ ಕಪ್
- ಖಾರದ ಪುಡಿ
- ಜೀರಿಗೆ
- ಅರಶಿಣ
- ಒಂಕಾಳು
- ಉಪ್ಪು
- ಎಣ್ಣೆ
ಖಾರಸೇವ್ ಮಾಡುವ ವಿಧಾನವೇನು?
ಮೊದಲು ಒಂದು ಬೌಲ್ ತೆಗೆದುಕೊಂಡು ಅದಕ್ಕೆ ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಖಾರದ ಪುಡಿ, ಜಿರಿಗೆ, ಓಂಕಾಳು, ಅರಶಿನ ಪುಡಿ, ಉಪ್ಪು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಈಗ 2 ಸ್ಪೂನ್ ಎಣ್ಣೆಯನ್ನು ಬಿಸಿ ಮಾಡಿಕೊಂಡು ಅದನ್ನು ಈ ಮಿಕ್ಸ್ಗೆ ಹಾಕಿ ಮಿಶ್ರಣ ಮಾಡಿಕೊಳ್ಳಿ.
ಈಗ ಈ ಹಿಟ್ಟು ಮುಷ್ಟಿ ಕಟ್ಟಿದರೆ ಉಂಡೆಯಾಗಬೇಕು. ಈ ಹದಕ್ಕೆ ರೆಡಿ ಮಾಡಿಕೊಳ್ಳಿ. ಈಗ ಸ್ವಲ್ಪ ಸ್ವಲ್ಪವೇ ನೀರು ಹಾಕಿಕೊಳ್ಳುತ್ತಾ ಹಿಟ್ಟು ಕಲಿಸಿಕೊಳ್ಳಿ. ಈ ಹಿಟ್ಟು ಚಪಾತಿ ಹಿಟ್ಟಿನ ಹದ ಬರುವಂತೆ ಮಾಡಿಕೊಳ್ಳಬೇಕು. ಚಪಾತಿ ಹಿಟ್ಟಿಗಿಂತ ಸ್ವಲ್ಪವೇ ಸ್ವಲ್ಪ ತೆಳುವಾಗಿರುವಂತೆ ಹಿಟ್ಟು ರೆಡಿ ಮಾಡಿಕೊಳ್ಳಿ.
ಈಗ ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಳ್ಳಿ. ಬಳಿಕ ಎಣ್ಣೆ ಕಾದ ಬಳಿಕ ಖಾರಸೇವ್ ಮಾಡುವ ಅಚ್ಚು ತೆಗೆದುಕೊಳ್ಳಿ, ಒಂದು ರಂಧ್ರ ಅಥವಾ ಮೂರು ರಂಧ್ರವಿರುವ ಅಚ್ಚು ಇದ್ದರೂ ಒಳ್ಳೆಯದೇ. ನಂತರ ಹಿಟ್ಟನ್ನು ಈ ಅಚ್ಚಿನೊಳಗೆ ಬಿಗಿಯಾಗಿ ಹಾಕಿಕೊಳ್ಳಿ, ನಂತರ ನಿಧಾನವಾಗಿ ಅಚ್ಚನ್ನು ಒತ್ತಿಕೊಂಡು ಹಿಟ್ಟನ್ನು ಎಲೆಯೊಳಗೆ ಬಿಡಿ.
ಮೊದಲು ಎಣ್ಣೆಯಲ್ಲಿ ಸಂಪೂರ್ಣ ನೊರೆಗಳು ಬರುತ್ತವೆ. ಈ ನೊರೆ ಕಡಿಮೆಯಾಗುವರೆಗೂ ಕಡಿಮೆ ಉರಿಯಲ್ಲಿ ಕಾಯಲು ಬಿಡಿ. ನಂತರ ಎರಡೂ ಕಡೆ ಗರಿಗರಿಯಾಗುವಂತೆ ಕಾಯಿಸಿಕೊಳ್ಳಿ. ಈಗ ಖಾರಸೇವ್ ಅನ್ನು ಎಣ್ಣೆಯಿಂದ ತೆಗೆದು ಒಂದು ಪಾತ್ರೆಗೆ ಎಣ್ಣೆ ಇಳಿಯಲು ಬಿಡಿ. ನಂತರ ಇದೇ ವಿಧಾನದಲ್ಲಿ ಮಾಡಿ.
ನಂತರ ಉದ್ದ ಉದ್ದವಿರುವ ಖಾರಸೇವ್ ಅನ್ನು ನೀವು ಬೇಕಾದರೆ ಸಣ್ಣಸಣ್ಣದಾಗಿ ಮಾಡಿಕೊಳ್ಳಬಹುದು. ಇಲ್ಲವೆ ಹಾಗೆಯೇ ಬಿಡಬಹುದು. ಇದನ್ನು ಒಂದು ಸ್ಟೀಲ್ ಡಬ್ಬದಲ್ಲಿ ಹಾಕಿ ಗಾಳಿ ಆಡದಂತೆ ಇಟ್ಟರೆ 2 ತಿಂಗಳ ಕಾಲ ಇಡಬಹುದು. ಸವಿಯಲು ಸಹ ಅಷ್ಟೇ ರುಚಿ ನೀಡುತ್ತದೆ. ನೀವು ಸಹ ಫ್ರೀ ಟೈಮಲ್ಲಿ ಮನೆಯಲ್ಲಿ ಇದನ್ನು ಮಾಡಿ ಸವಿಯಬಹುದು. ಹಾಗೆ ಶುಭ ಕಾರ್ಯದಲ್ಲಿ, ಹಬ್ಬದಲ್ಲೂ ಇದನ್ನು ಬಳಸಬಹುದು.



Click it and Unblock the Notifications
