Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಮನೆಯಲ್ಲಿ ರುಚಿ ರುಚಿಯ ಖಾರಾ ಸೇವ್ ಮಾಡೋದು ಹೇಗೆ?
ಸಂಜೆ ಮನೆಯಲ್ಲಿ ಟೀ ಕಾಫಿ ಜೊತೆ ಯಾವುದಾದ್ರು ತಿಂಡಿ ಇದ್ದರೆ ಸವಿಯೋಕೆ ಚೆನ್ನಾಗಿರುತ್ತೆ. ಹೀಗಾಗಿ ಬಹುತೇಕರ ಮನೆಯಲ್ಲಿ ಬೇಕರಿ ತಿಂಡಿಯೋ ಅಂಗಡಿಯಿಂದ ತಂದಿರುವ ತಿಂಡಿ ಇದ್ದೇ ಇರುತ್ತೆ. ಆದ್ರೆ ಬೇಕರಿ ತಿಂಡಿಯನ್ನ ಎಷ್ಟು ದಿನ ಹಣ ಕೊಟ್ಟು ತಂದು ಸವಿಯಬಹುದು?
ಈ ತಿಂಡಿಗಳೆಂದರೆ ಇಷ್ಟಪಡದ ಮಕ್ಕಳಿಲ್ಲ. ಮಕ್ಕಳಷ್ಟೆ ಅಲ್ಲ ದೊಡ್ಡವರು ಕೂಡ ಮನೆಯಲ್ಲಿ ಸಂಜೆ ವೇಳೆ ಸ್ಬಲ್ಪ ತಿಂಡಿ ಸವಿಯಲು ಇಷ್ಟಪಡುತ್ತಾರೆ. ಹೀಗೆ ಸಂಜೆಯ ಸ್ನ್ಯಾಕ್ಸ್ ಆಗಿ ಖಾರಾ ಸೇವ್ ಸವಿಯೋಕೆ ಎಲ್ಲರಿಗೂ ಇಷ್ಟವಾಗುತ್ತೆ. ಟೀ-ಕಾಫಿ ಜೊತೆಯಲ್ಲಿ ಸವಿಯೋಕೆ ಖಾರ ಖಾರವಾಗಿ ಬಾಯಿಗೆ ಸಿಗುವ ಈ ಖಾರಾ ಸೇವ್ ಬಹಳ ರುಚಿ ನೀಡುತ್ತೆ.

ಹಾಗಾದ್ರೆ ಈ ಖಾರಾ ಸೇವ್ ಅನ್ನು ಮನೆಯಲ್ಲೇ ಮಾಡುವುದು ಹೇಗೆ? ಖಾರಾ ಸೇವ್ ಮಾಡಲು ಬೇಕಾಗುವ ಪದಾರ್ಥಗಳೇನು?, ಖಾರಾ ಸೇವೆ ಮಾಡುವ ವಿಧಾನವೇನು? ಇದಕ್ಕೆ ಹಿಟ್ಟು ಹೇಗೆ ರೆಡಿ ಮಾಡಿಕೊಳ್ಳಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಖಾರಾ ಸೇವ್ ಮಾಡಲು ಬೇಕಾಗುವ ಪದಾರ್ಥಗಳು
- ಕಡಲೆ ಹಿಟ್ಟು- 2 ಕಪ್
- ಅಕ್ಕಿ ಹಿಟ್ಟು
- ಖಾರದ ಪುಡಿ
- ಜೀರಿಗೆ
- ಎಣ್ಣೆ
- ಒಂಕಾಳು
- ಅರಶಿಣ
- ಉಪ್ಪು
- ಚಕ್ಕುಲಿ ಅಚ್ಚು
- ಕರಿಬೇವು
ಖಾರಾ ಸೇವ್ ಮಾಡುವ ಸರಿಯಾದ ವಿಧಾನ
ಒಂದು ಬೌಲ್ನಲ್ಲಿ 2 ಕಪ್ ಕಡಲೇ ಹಿಟ್ಟು ಹಾಕಿಕೊಳ್ಳಿ. ಇದಕ್ಕೆ ಅರ್ಧ ಕಪ್ ಅಕ್ಕಿ ಹಿಟ್ಟು, ಖಾರದ ಪುಡಿ, ಜೀರಿಗೆ, ಒಂಕಾಳು (ಜಜ್ಜಿಕೊಂಡು), ಅರಶಿಣ ಪುಡಿ, ಉಪ್ಪು ಹಾಕಿಕೊಂಡು ಕೈಯಿಂದ ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ 2 ಸ್ಪೂನ್ ಬಿಸಿ ಎಣ್ಣೆಯನ್ನು ಹಾಕಿಕೊಳ್ಳಿ. ಬಳಿಕ ಇದನ್ನು ಮಿಕ್ಸ್ ಮಾಡಿ. ತಣ್ಣಗಾದಾಗ ಕೈಯಲ್ಲಿ ಮಿಕ್ಸ್ ಮಾಡಿ.
ನಂತರ ಸ್ವಲ್ಪ ಸ್ವಲ್ಪ ನೀರು ಹಾಕಿಕೊಂಡು ಹಿಟ್ಟು ಹದ ಮಾಡಿಕೊಳ್ಳಿ. ಹಿಟ್ಟು ಚಪಾತಿ ಮಾಡಲು ಮಾಡಿಕೊಳ್ಳುವ ಹಿಟ್ಟಿನಂತೆ ಮಾಡಿ. ಈ ಹಿಟ್ಟು ಸ್ವಲ್ಪ ಗಟ್ಟಿಯಾಗಿರಬೇಕು. ಹಿಟ್ಟು ರೆಡಿಯಾದ ತಕ್ಷಣ ಕಡ್ಡಿ ಖಾರ ಮಾಡುವ ಅಚ್ಚಿನೊಳಗೆ ಈ ಹಿಟ್ಟನ್ನು ಹಾಕಿಕೊಳ್ಳಿ. ಅಥವಾ ಚಕ್ಕುಲಿಯ ಅಚ್ಚಿನಲ್ಲೂ ಇದನ್ನು ಮಾಡಬಹುದು.
ಈ ಅಚ್ಚಿಗೆ ಹಿಟ್ಟು ಹಾಕಿ ನೇರವಾಗಿ ಒಲೆ ಮೇಲೆ ಇಟ್ಟಿರುವ ಎಣ್ಣೆ ಪಾತ್ರೆಗೆ ಒತ್ತಿಕೊಳ್ಳಿ. ಇದು ಕಡ್ಡಿ ಕಡ್ಡಿಯಾಗಿ ಬರಲಿ. ಎಣ್ಣೆಯಲ್ಲಿ ನೊರೆ ಸಂಪೂರ್ಣ ಹೋಗುವವರೆಗೂ ಈ ರೀತಿ ಕರಿದುಕೊಳ್ಳಿ. ನಂತರ ಎಣ್ಣೆಯಿಂದ ಹೊರಗೆ ತೆಗೆದು ಎಣ್ಣೆ ಡ್ರೈ ಆಗುವಂತೆ ಇಡಿ. ನಂತರ ಒಂದು ಪಾತ್ರೆಗೆ ಹಾಕಿಕೊಳ್ಳಿ. ತಣ್ಣಗಾಗಲು ಬಿಟ್ಟುಕೊಳ್ಳಿ, ಬಳಿಕ ಇದಕ್ಕೆ ಒಂದೆರಡು ಕರಿಬೇವಿನ ಎಲೆಗಳನ್ನು ಸಹ ಹಾಕಿ ಎಣ್ಣೆಯಿಂದ ತಕ್ಷಣ ತೆಗೆದುಕೊಳ್ಳಬಹುದು.
ಈ ಎಲ್ಲಾ ಖಾರಾ ಸೇವ್ ಅನ್ನು ಒಂದು ಪಾತ್ರೆಗೆ ಹಾಕಿದ ಬಳಿಕ ಅದನ್ನು ನೀವು ಪುಡಿ ಮಾಡಿಕೊಳ್ಳಬಹುದು. ಅಂದರೆ ಉದ್ದ ಉದ್ದ ಕಡ್ಡಿಗಳಿದ್ದರೆ ಅದನ್ನು ಸಣ್ಣದಾಗಿ ಮಾಡಿ ಬಾಕ್ಸ್ಗೆ ಹಾಕಿಡಿ. ಇದು ಸುಮಾರು 20 ದಿನ ಸಹ ಇಟ್ಟು ಸವಿಯಬಹುದು. ಈ ಸ್ನ್ಯಾನ್ಸ್ ಮಾಡೋದು ತುಂಬಾನೆ ಸುಲಭ. ಹಾಗೆ ಕಡಿಮೆ ವಸ್ತುಗಳು ಇದ್ದರೂ ಸಾಕು. ಹಾಗಾದ್ರೆ ನೀವು ಸಹ ಒಮ್ಮೆ ಮನೆಯಲ್ಲಿ ಈ ಸ್ನ್ಯಾನ್ಸ್ ಮಾಡಿ ನೋಡಿ.



Click it and Unblock the Notifications
