Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಸಂಕ್ರಾಂತಿ ಸ್ಪೆಷಲ್ ಖಾರ ಪೊಂಗಲ್; ಈ ರುಚಿ ತಿಂಡಿ ನೀವೂ ಮಾಡಿ ನೋಡಿ!
ಜನವರಿಯಲ್ಲಿ ಹಿಂದೂಗಳಿಗೆ ಮೊದಲ ಹಬ್ಬ ಎಂದರೆ ಅದು ಸಂಕ್ರಾಂತಿ. ದಕ್ಷಿಣ ಭಾರತ ಮಾತ್ರವಲ್ಲ ಉತ್ತರ ಭಾರತದ ಹಲವು ಭಾಗದಲ್ಲಿ ಮಕರ ಸಂಕ್ರಾಂತಿ ಹಬ್ಬ ಆಚರಿಸಲಾಗುತ್ತದೆ. ದಕ್ಷಿಣ ಭಾರತದಲ್ಲಿ ಹಲವು ರೀತಿಯ ಹೆಸರುಗಳಿಂದ ಕರೆಯಲಾಗುತ್ತದೆ. ಸಂಕ್ರಾಂತಿಯಲ್ಲಿ ವಿವಿಧ ರೀತಿಯ ತಿಂಡಿಗಳು ಮಾಡಿ ಸವಿಯೋದು ಕಾಮನ್. ಅದ್ರಲ್ಲೂ ಸಂಕ್ರಾಂತಿಯಲ್ಲಿ ಪೊಂಗಲ್ ಸವಿಯೋಕೆ ಎಲ್ಲರಿಗೂ ಇಷ್ಟವಾಗುತ್ತೆ.
ಪೊಂಗಲ್ ರುಚಿಯನ್ನು ಒಮ್ಮೆ ನೀವು ಮಾಡಿ ಸವಿದರೆ ಪದೇ ಪದೇ ಮಾಡೋದು ಖಚಿತ. ಹಾಗೆ ತಮಿಳುನಾಡು ಶೈಲಿಯಲ್ಲಿ ನೀವು ಪೊಂಗಲ್ ಮಾಡಿದ್ರೆ ಮನೆಯಲ್ಲಿ ಎಲ್ಲರಿಗೂ ಇಷ್ಟವಾಗೋದು ಖಚಿತ. ಹಾಗೆ ಈ ಪೊಂಗಲ್‌ನಲ್ಲು ಹಲವು ಬಗೆಗಳಿವೆ. ಖಾರ ಪೊಂಗಲ್, ಸ್ವೀಟ್ ಪೊಂಗಲ್, ಬೇಳೆ ಪೊಂಗಲ್, ರೈಸ್ ಪೊಂಗಲ್ ಹೀಗೆ ಹತ್ತಾರು ವಿಧಾನದಲ್ಲಿ ಈ ಪೊಂಗಲ್ ಮಾಡಿ ಸವಿಯಬಹುದು.

ಹಾಗೆ ತಮಿಳುನಾಡಿನಲ್ಲಿ ವಿಶೇಷ ಹಾಗೂ ವಿಭಿನ್ನ ರೀತಿಯ ಪೊಂಗಲ್ ಮಾಡಿ ಸವಿಯೋದು ನೋಡಿರುತ್ತೀರಿ. ಈ ಪೊಂಗಲ್‌ಗಳು ಎಲ್ಲರಿಗೂ ಇಷ್ವವಾಗುವ ರೀತಿಯ ಸ್ವಾದ ಹೊಂದಿರಲಿವೆ. ಇಷ್ಟೆಲ್ಲಾ ವಿವಿಧ ಖಾದ್ಯಗಳ ನಡುವೆ ನಾವಿಂದು ಖಾರ ಪೊಂಗಲ್ ಮಾಡಿ ಸವಿಯುವ ಕುರಿತು ತಿಳಿದುಕೊಳ್ಳೋಣ. ಖಾರ ಪೊಂಗಲ್ ಮಾಡುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ.
ಖಾರ ಪೊಂಗಲ್ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ತಿಳಿದುಕೊಳ್ಳಿ.
ಖಾರ ಪೊಂಗಲ್ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಅಕ್ಕಿ
- ಹೆಸರು ಬೇಳೆ
- ತುಪ್ಪ
- ಎಣ್ಣೆ
- ಗೋಡಂಬಿ
- ಜೀರಿಗೆ
- ಶುಂಠಿ
- ಅರಶಿಣ
- ಕೊತ್ತಂಬರಿ ಸೊಪ್ಪು
- ಕೊಬ್ಬರಿ
- ಉಪ್ಪು
- ಕಾಳು ಮೆಣಸು
- ಕರಿಬೇವು
ಖಾರ ಪೊಂಗಲ್ ಮಾಡುವುದು ಹೇಗೆ?
ಒಂದು ಬೌಲ್‌ಗೆ 1 ಕಪ್ ಅಕ್ಕಿ ಹಾಗೆ 1 ಕಪ್ ಹೆಸರು ಬೇಳೆ ಹಾಕಿ ನೀರು ಹಾಕಿಕೊಂಡು ತೊಳೆದುಕೊಳ್ಳಿ. ನಂತರ ನೀರು ಬಸಿದು ಒಲೆ ಮೇಲೆ ಕುಕ್ಕರ್ ಇಟ್ಟು ಅದಕ್ಕೆ ಈ ಎರಡು ಪದಾರ್ಥಗಳ ಹಾಕಿಕೊಳ್ಳಿ. ಹಾಗೆ ಅದಕ್ಕೆ 1 ಚಮಚ ತುಪ್ಪ ಅಥವಾ ಎಣ್ಣೆ ಹಾಕಿ ಹುರಿದುಕೊಳ್ಳಿ. 1 ನಿಮಿಷ ಹುರಿದ ಬಳಿಕ ಇದಕ್ಕೆ ಅಳತೆ ಕಪ್‌ನಲ್ಲಿ 6 ಕಪ್ ನೀರು ಹಾಕಿಕೊಳ್ಳಿ.
ನೀರು ಹಾಕಿದ ಬಳಿಕ ಉಪ್ಪು, ಅರಶಿಣ ಹಾಕಿ ಮಿಕ್ಸ್ ಮಾಡಿಕೊಂಡು ಕುಕ್ಕರ್ ಮುಚ್ಚಳ ಮುಚ್ಚಿ 2 ಸೀಟಿ ಹೊಡೆಯಲು ಬಿಡಿ. ಅನಂತರಸಿಪಿಪ ತಣ್ಣಗಾಗಲು ಬಿಟ್ಟು ಮುಚ್ಚಳ ತೆಗೆದು ಒಮ್ಮೆ ಮಿಕ್ಸ್ ಮಾಡಿಕೊಳ್ಳಿ. ಗಟ್ಟಿಯಾಗಿದ್ದರೆ 1 ಲೋಟ ಬಿಸಿ ನೀರು ಹಾಕಿ ಮಿಕ್ಸ್ ಮಾಡಿಕೊಳ್ಳಿ. ತೆಳುವಾಗಿದ್ದರೆ ಹಾಕುವುದು ಬೇಡ.
ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಅಥವಾ ತುಪ್ಪ ಹಾಕಿಕೊಂಡು ನಂತರ ಜೀರಿಗೆ, ಕಾಳು ಮೆಣಸು, ಗೋಡಂಬಿ ಹಾಕಿ ಫ್ರೈ ಮಾಡಿ. ನಂತರ ಇದಕ್ಕೆ ಒಣ ಕೊಬ್ಬರಿ, ಕರಿಬೇವು, ಹಸಿ ಮೆಣಸು, ಶುಂಠಿ ಸಹ ಹಾಕಿಕೊಂಡು ಮಿಕ್ಸ್ ಮಾಡಿ. ನಂತರ ಈ ಒಗ್ಗರಣೆಯನ್ನು ಕುಕ್ಕರ್‌ನಲ್ಲಿನ ಪೊಂಗಲ್‌ಗೆ ಸೇರಿಸಿಕೊಳ್ಳಿ. ನಂತರ ರುಚಿ ನೋಡಿ ಉಪ್ಪು ಹಾಕಿಕೊಂಡು, ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿಕೊಳ್ಳಿ.
ಇಷ್ಟಾದರೆ ನಿಮ್ಮ ಮುಂದೆ ಸಂಕ್ರಾಂತಿ ಸ್ಪೆಷಲ್ ಖಾರ ಪೊಂಗಲ್ ಹಾಕಿಕೊಂಡು ಸವಿದು ನೋಡಿ. ಬೆಳಗ್ಗೆ ಬ್ರೇಕ್ ಫಾಸ್ಟ್‌ಗೆ ಇದು ಬಹಳ ಉತ್ತಮ ಖಾದ್ಯ ಎನ್ನಬಹುದು. ನೀವು ಸಹ ಮಾಡಿ ನೋಡಿ.



Click it and Unblock the Notifications
