Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಖಾನಾವಳಿ ಸ್ಟೈಲ್‌ನ ಚಟ್ನಿ ಪುಡಿ ಮನೆಯಲ್ಲೇ ಮಾಡಿ..! ಇಲ್ಲಿದೆ ನೋಡಿ ವಿಧಾನ!
ಊಟದ ಜೊತೆಗೆ ತಿಂಡಿಯನ್ನು ಚಟ್ನಿ ಜೊತೆಗೆ ಸವಿಯಲು ಇಷ್ಟಪಡುವವರಾಗಿದ್ದರೆ ನಿತ್ಯ ಒಂದಲ್ಲಾ ಒಂದು ರೀತಿಯ ಚಟ್ನಿ ಮಾಡಿ ಸವಿಯಲು ಮುಂದಾಗಿರುತ್ತೀರಿ. ಹಾಗೆ ತಿಂಡಿಯೊಂದಿಗೆ ಚಟ್ನಿಯೊಂದು ಇದ್ದರೇನೆ ಅಂದು ಬಹಳ ರುಚಿ ರುಚಿಯಾದ ತಿಂಡಿ ಸವಿದ ಅನುಭವ ಆಗೋದು. ಇನ್ನು ಖಾನಾವಳಿಗಳಲ್ಲಿ ಮಾಡುವಂತೆ ಚಟ್ನಿ ಪುಡಿಯನ್ನು ನೀವು ಸಹ ಮನೆಯಲ್ಲಿ ಮಾಡಿರಬಹುದು. ಈ ಪುಡಿಯನ್ನು ಹೆಚ್ಚು ದಿನಗಳ ಕಾಲ ಇಟ್ಟು ಸವಿಯಬಹುದು.
ಖಾನಾವಳಿಗಳು ಉತ್ತರ ಕರ್ನಾಟಕ ಭಾಗದಲ್ಲಿ ಬಹಳ ಫೇಮಸ್. ಹಾಗೆ ಅಲ್ಲಿ ನೀಡುವ ಊಟ ಸಹ ಎಲ್ಲಕಡೆ ಬಹಳ ಹೆಸರುವಾಸಿ, ಇನ್ನು ಅವರು ಊಟ ಹಾಗೆ ತಿಂಡಿಯ ಜೊತೆಗೆ ನೀಡುವಂತಹ ಚಟ್ನಿ ಪುಡಿಯಂತು ಬಾಯಿ ರುಚಿಗೆ ಹೇಳಿ ಮಾಡಿಸಿದ ಖಾದ್ಯ ಎನ್ನಬಹುದು. ಈ ಚಟ್ನಿ ಪುಡಿಯೊಂದಿಗೆ ನೀವು ಊಟ ಮಾಡಿದ್ರೆ ಅದರ ರುಚಿಯೇ ಬೇರೆ.

ಆದ್ರೆ ಈ ರೀತಿ ಖಾನಾವಳಿ ಸ್ಟೈಲ್‌ನಲ್ಲಿ ಚಟ್ನಿ ಪುಡಿ ಮಾಡುವುದು ಹೇಗೆ ಅನ್ನೋದು ನಿಮಗೆ ಗೊತ್ತಾ? ಈ ಚಟ್ನಿ ಪುಡಿಯನ್ನು ಮನೆಯಲ್ಲಿ ಮಾಡುವುದು ಹೇಗೆ ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ. ಖಾನಾವಳಿ ಸ್ಟೈಲ್‌ನ ಚಟ್ನಿ ಪುಡಿ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಖಾನಾವಳಿ ಸ್ಟೈಲ್‌ನ ಚಟ್ನಿ ಪುಡಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಶೇಂಗಾ- 1 ಕಪ್
- ಎಣ್ಣೆ
- ಉಪ್ಪು
- ಜೀರಿಗೆ
- ಖಾರದ ಪುಡಿ
- ಬೆಳ್ಳುಳ್ಳಿ- 10 ಎಸಳು
ಖಾನಾವಳಿ ಸ್ಟೈಲ್‌ನ ಚಟ್ನಿ ಪುಡಿ ಮಾಡುವುದು ಹೇಗೆ ನೋಡಿ
ಮೊದಲಿಗೆ ಒಂದು ಕಪ್ ಶೇಂಗಾವನ್ನು ಬಾಣಲೆಗೆ ಹಾಕಿಕೊಂಡು ಚೆನ್ನಾಗಿ ಫ್ರೈ ಮಾಡಿಕೊಳ್ಳಬೇಕು. ಮಧ್ಯಮ ಉರಿಯಲ್ಲಿ ಶೇಂಗಾವನ್ನು ಹುರಿದುಕೊಳ್ಳಬೇಕು. 4 ನಿಮಿಷದ ಬಳಿಕ ಗ್ಯಾಸ್ ಆಫ್ ಮಾಡಿಕೊಂಡು ಬಾಣಲೆಯಿಂದ ತೆಗೆದು ತಣ್ಣಗಾಗಲು ನೆಲದ ಮೇಲೆ ಅಥವಾ ತಟ್ಟೆಯಲ್ಲಿ ಹಾಕಿಟ್ಟುಕೊಳ್ಳಿ.
ಅನಂತರ ಸಿಪ್ಪೆ ಬಿಡಿಸಲು ಮತ್ತೊಂದು ತಟ್ಟೆಯಿಂದ ಇಲ್ಲವೆ ಕೈಯಿಂದ ನಿಧಾನವಾಗಿ ಒತ್ತಿಕೊಳ್ಳಬೇಕು. ಈಗ ಶೇಂಗಾ ಸಿಪ್ಪೆ ಬಿಟ್ಟುಕೊಳ್ಳುತ್ತದೆ. ಕೆಲವೊಂದು ಶೇಂಗಾ ಸಿಪ್ಪೆ ಬಿಡುವುದಿಲ್ಲ ಹಾಗೆ ಇದ್ದರೂ ಸಮಸ್ಯೆಯಿಲ್ಲ. ಈಗ ಮತ್ತೆ ಹುರಿದ ಶೇಂಗಾವನ್ನು ಬಾಣಲೆಗೆ ಹಾಕಿಕೊಂಡು ಮತ್ತೆ ಹುರಿದುಕೊಳ್ಳಿ. 2 ನಿಮಿಷ ಹುರಿದ ಬಳಿಕ 2 ಸ್ಪೂನ್ ಎಣ್ಣೆ ಹಾಕಿ ಮತ್ತೆ ಹುರಿಯಲು ಬಿಡಿ.
ಮತ್ತೆ 3 ನಿಮಿಷ ಹುರಿದ ಬಳಿಕ ಗ್ಯಾಸ್ ಆಫ್ ಮಾಡಿಕೊಂಡು ಇದಕ್ಕೆ ಖಾರದ ಪುಡಿ, ಉಪ್ಪು, ಜೀರಿಗೆ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ನಂತರ ಇದನ್ನು ಒಂದು ಮಿಕ್ಸಿ ಜಾರ್‌ಗೆ ಹಾಕಿಕೊಂಡು 10 ಬೆಳ್ಳುಳ್ಳಿ ಎಸಳು ಹಾಕಿಕೊಂಡು ರುಬ್ಬಬೇಕು. ಆಗಾಗ ಆಫ್ ಆನ್ ಮಾಡಿಕೊಂಡು ತರಿ ತರಿಯಾಗಿ ರುಬ್ಬಿಕೊಳ್ಳಬೇಕು. ನಿಮಗೆ ಖಾರ ಹೆಚ್ಚು ಬೇಕಿದ್ದರೆ ಗುಂಟೂರು ಖಾರದ ಪುಡಿ ಬಳಸಿ, ಇಲ್ಲದಿದ್ದರೆ ಸಾಮಾನ್ಯ ಖಾರದ ಪುಡಿ ಸಕಾಗುತ್ತೆ.
ಇಷ್ಟಾದರೆ ನಿಮ್ಮ ಮುಂದೆ ಖಾನಾವಳಿ ಶೈಲಿಯ ಶೇಂಗಾ ಚಟ್ನಿ ಪುಡಿ ರೆಡಿಯಾಗುತ್ತದೆ. ಇದನ್ನು ನೀವು ಊಟ, ತಿಂಡಿಯ ಜೊತೆಗೆ ಸವಿಯಬಹುದು. ಇದನ್ನು 15 ದಿನಗಳ ಕಾಲ ಇಟ್ಟು ಸವಿಯಬಹುದು. ಇದರ ರುಚಿ ಸವಿದರೆ ಮತ್ತೆ ಬೇರೆ ಚಟ್ನಿ ಮಾಡಿ ಸವಿಯಲು ನೀವು ಮುಂದಾಗೋದಿಲ್ಲ. ನೀವು ಸಹ ಈ ರೀತಿ ಚಟ್ನಿ ಪುಡಿ ಮಾಡಿ ನೋಡಿ. ನೀವು ಊಟದೊಂದಿಗೆ, ದೋಸೆ, ಇಡ್ಲಿ, ರೊಟ್ಟಿ, ಚಪಾತಿಯೊಂದಿಗೂ ಇದನ್ನು ಸವಿಯಲು ನೀಡಬಹುದು. ಇದರ ಮೇಲೆ ಗಟ್ಟಿ ಮೊಸರು ಹಾಕಿಕೊಂಡು ಸವಿಯಲು ಕುಳಿತರೆ ತಟ್ಟೆ ಅನ್ನು ನೋಡ ನೋಡುತ್ತಿದ್ದಂತೆ ಖಾಲಿಯಾಗುತ್ತೆ.



Click it and Unblock the Notifications
