Latest Updates
-
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್
ಸುಲಭದ ಖಾಜಾ ಸಿಹಿ ತಿಂಡಿ ಮಾಡಿ ಸವಿದಿದ್ದೀರಾ? 4 ವಸ್ತು ಇದ್ದರೆ ತಕ್ಷಣ ಮಾಡಬಹುದು!!
ಮನೆಯಲ್ಲಿ ಯಾವುದಾದರು ಶುಭ ಕಾರ್ಯ ಮಾಡುವುದು, ಅತಿಥಿಗಳು ಆಗಮಿಸುವ ಸೂಚನೆ ಇದ್ದರೆ ನೀವು ಅವರಿಗಾಗಿ ಏನಾದರು ಸಿಹಿ ತಿಂಡಿ ಮಾಡಿಯೇ ಮಾಡುತ್ತೀರಿ. ಹಾಗೆ ಹಬ್ಬವಿದ್ದರಂತು ಒಂದಾದರು ಸಿಹಿ ಮಾಡಿಯೇ ಮಾಡುತ್ತೀರಿ. ಸಿಹಿ ಇಲ್ಲದಿದ್ದರೆ ಯಾವ ಶುಭ ಕಾರ್ಯವೂ ಮುಗಿಯೋದಿಲ್ಲ. ಹಾಗೆ ನಾವಿಂದು ಎಲ್ಲರು ಸವಿಯುವಂತಹ ಸಿಹಿ ಮಾಡುವ ಕುರಿತು ತಿಳಿಯೋಣ.
ಮನೆಯಲ್ಲಿ ಸುಲಭವಾಗಿ ಸ್ವಾದಿಷ್ಟ ಸಿಹಿ ಮಾಡುವ ಕುರಿತು ನಾವು ಯೋಚಿಸುತ್ತೇವೆ. ಅದರಲ್ಲು ನಾವಿಂದು ಖಾಜಾ ಸಿಹಿ ಮಾಡುವ ಕುರಿತಂತೆ ತಿಳಿದುಕೊಳ್ಳೋಣ. ಬೇಕರಿಗಳಲ್ಲಿ ಈ ಖಾಜಾ ಸಿಹಿ ತಿಂಡಿಯ ರುಚಿ ನೋಡಿರಬಹುದು. ಅತ್ಯಂತ ರುಚಿಕರವಾಗಿ ಬಾಯಿಯಲ್ಲಿ ನೀರು ತರಿಸುವಂತಹ ಸಿಹಿ ಇದಾಗಿದೆ. ಒಂದಿಷ್ಟು ದಿನಗಳ ಕಾಲ ಇಟ್ಟು ಕೂಡ ಇದನ್ನು ಸವಿಯಬಹುದಾಗಿದೆ.

ಹಾಗಾದ್ರೆ ನಾವಿಂದು ಮನೆಯಲ್ಲಿ ಈ ಖಾಜಾ ಸಿಹಿ ತಿಂಡಿ ಮಾಡುವ ಕುರಿತಂತೆ ತಿಳಿದುಕೊಳ್ಳೋಣ. ಅದರಲ್ಲೂ ಈ ಖಾಜಾ ಸಹಿ ಮಕ್ಕಳಿಗಂತೂ ಪಂಚಪ್ರಾಣ. ಹಾಗಾದ್ರೆ ಈ ಖಾಜಾ ಸಿಹಿ ತಿಂಡಿಯನ್ನು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಈ ತಿಂಡಿ ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಖಾಜಾ ತಿಂಡಿ ಮಾಡಲು ಬೇಕಾಗುವ ಪದಾರ್ಥಗಳು
- ಮೈದಾ ಹಿಟ್ಟು - 1 ಕಪ್
- ಸಕ್ಕರೆ - 1 ಕಪ್
- ಕೆಂಪು ಬಣ್ಣ - 2 ಚಿಟಿಕೆ
- ಉಪ್ಪು
- ಏಲಕ್ಕಿ
- ತುಪ್ಪ - 2 ಚಮಚ
- ಅಡುಗೆ ಎಣ್ಣೆ
ಖಾಜಾ ತಿಂಡಿ ಮಾಡುವುದು ಹೇಗೆ?
ಮೊದಲು ಒಂದು ಬೌಲ್ ತೆಗೆದುಕೊಂಡು ಅದಕ್ಕೆ ಮೈದಾ ಹಿಟ್ಟು, ಕೆಂಪು ಬಣ್ಣ, ಚಿಟಿಕೆ ಉಪ್ಪು, ತುಪ್ಪ, ಹಾಕಿಕೊಂಡು ಡ್ರೈ ಮಿಕ್ಸ್ ಮಾಡಿಕೊಳ್ಳಿ. ಅನಂತರ ಸ್ವಲ್ಪ ಸ್ವಲ್ಪವೇ ನೀರು ಹಾಕಿಕೊಂಡು ಚಪಾತಿ ಹಿಟ್ಟಿನಂತೆ ಹದ ಮಾಡಿಕೊಳ್ಳಿ. ತೀರ ನೀರು ಹಾಕಿಕೊಂಡು ಮೆದುವಾಗಿ ಮಾಡಿಕೊಳ್ಳಬೇಕು. ನಂತರ 15 ನಿಮಿಷ ಹಿಟ್ಟನ್ನು ಹಾಗೆಯೇ ಮುಚ್ಚಿ ಇಡಿ.
ಈಗ ಒಂದು ಪಾತ್ರೆಯಲ್ಲಿ ಅರ್ಧ ಕಪ್ ನೀರು ಹಾಕಿ 1 ಕಪ್ ಸಕ್ಕರೆ ಹಾಕಿಕೊಂಡು ಪಾಕ ಮಾಡಬೇಕು. ಇದಕ್ಕೆ ಏಲಕ್ಕಿ ಹಾಕಿ ಒಂದು ಎಳೆ ಪಾಕ ಬರುವಂತೆ ಮಾಡಿಕೊಳ್ಳಬೇಕು. ನಂತರ ಇದನ್ನು ತೆಗೆದು ಬದಿಗಿಟ್ಟುಕೊಳ್ಳಿ. ನಂತರ 15 ನಿಮಿಷ ಬಿಟ್ಟ ಹಿಟ್ಟನ್ನು ಮತ್ತೆ ಮಿಕ್ಸ್ ಮಾಡಿಕೊಂಡು ಒಂದು ಉಂಡೆ ತೆಗೆದುಕೊಂಡು ಚಪಾತಿಯಂತೆ ಮೊದಲು ಲಟ್ಟಿಸಿಕೊಳ್ಳಬೇಕು. ಲಟ್ಟಿಸಿದ ಬಳಿಕ ಮೇಲೆ ತುಪ್ಪ ಹಚ್ಚಿಕೊಂಡು ಮೇಲೆ ಮೈದಾ ಹಿಟ್ಟು ಸವರಿಕೊಳ್ಳಬೇಕು.
ನಂತರ ಬಟ್ಟೆ ಸುತ್ತಿದಂತೆ ಹಿಟ್ಟನ್ನು ಒಂದು ಕಡೆಯಿಂದ ರೋಲ್ ಮಾಡಿಕೊಳ್ಳಬೇಕು. ನಂತರ ಸಣ್ಣ ಸಣ್ಣದಾಗಿ ಕತ್ತರಿಕೊಳ್ಳಬೇಕು. ನಂತರ ಬೆರಳಿನ ಸಹಾಯದಿಂದ ಕತ್ತರಿಸಿಕೊಂಡಿರುವ ಹಿಟ್ಟನ್ನು ಒತ್ತಿಕೊಳ್ಳಬೇಕು. ಗಟ್ಟಿಯಾಗಿಯೇ ಒತ್ತಿಕೊಳ್ಳಿ. ಅನಂತರ ಎಲ್ಲಾ ಹಿಟ್ಟನ್ನು ಈ ರೀತಿ ಸಣ್ಣದಾಗಿ ಮಾಡಿ ಒತ್ತಿಕೊಂಡು ರೆಡಿ ಮಾಡಿಕೊಳ್ಳಿ. ನಂತರ ಬಾಣಲೆಯಲ್ಲಿ ಎಣ್ಣೆ ಹಾಕಿಕೊಂಡು ಎಣ್ಣೆ ಕಾದ ಬಳಿಕ ಅದಕ್ಕೆ ಹಾಕಿಕೊಂಡು ಕರಿದುಕೊಳ್ಳಿ. 4ರಿಂದ5 ನಿಮಿಷ ಆದರು ಕರಿಯಬೇಕು. ಹೀಗೆ ಕರಿದ ಬಳಿಕ ಮೊದಲು ಮಾಡಿಕೊಂಡಿರುವ ಪಾಕದಲ್ಲಿ ಹಾಕಿಡಬೇಕು.
ಪಾಕ ಸ್ವಲ್ಪ ಬಿಸಿ ಬಿಸಿಯಾಗಿರಬೇಕು. ಆಗ ಕರಿದ ತಿಂಡಿಯನ್ನು ಹಾಕಿ ಸಕ್ಕರೆ ಪಾಕದಲ್ಲಿ 3ರಿಂದ 4 ನಿಮಿಷ ಬಿಡಿ. ಅನಂತರ ತೆಗೆದು ಪಾಕ ಇಳಿಯಲು ಬಿಟ್ಟು ಒಂದು ಪಾತ್ರೆಗೆ ಹಾಕಿಟ್ಟುಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಖಾಜಾ ಸಿಹಿ ತಿಂಡಿ ರೆಡಿಡಯಾಗುತ್ತದೆ. ನೀವು ಕೂಡ ಮನೆಯಲ್ಲಿ ಒಮ್ಮೆ ಇದನ್ನು ಮಾಡಿ ನೋಡಿ.



Click it and Unblock the Notifications
