Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಬಾಯಲ್ಲಿ ಇಟ್ಟರೆ ಕರಗುವಂತಹ ಕೇಸರಿಬಾತ್ ಮಾಡಿ..! ಸಿಂಪಲ್ ರೆಸಿಪಿ
ನಮಗೆ ಹಬ್ಬ ಅಥವಾ ವಿಶೇಷ ಸಮಾರಂಭದಲ್ಲಿ ಸಿಹಿ ತಿಂಡಿ ಮಾಡುತ್ತೇವೆ. ಅದರಲ್ಲೂ ಕೇಸರಿಬಾತ್ ಅಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಮಕ್ಕಳಿಂದ ಹಿಡಿದು ಹಿರಿಯರ ವರೆಗೂ ಬಾಯಿ ಚಪ್ಪರಿಸಿ ಇದನ್ನು ಸವಿಯಬಹುದು. ಬಾಯಲ್ಲಿ ಇಟ್ಟರೆ ಸಾಕು ತಾನಾಗಿಯೆ ಕರಗುವ ಈ ಕೇಸರಿ ಎಲ್ಲರಿಗೂ ಇಷ್ಟದ ತಿಂಡಿ.
ಕೇಸರಿಬಾತು ಎಂದರೆ ಬಾಯಿ ಚಪ್ಪರಿಸಿ ಸವಿಯುತ್ತಾರೆ. ಅದರಲ್ಲು ಗೋಡಂಬಿ, ದ್ರಾಕ್ಷಿ, ತುಪ್ಪ ಹಾಕಿ ಮಾಡುವ ಕೇಸರಿಬಾತು ಎಲ್ಲಿಗೂ ಅಚ್ಚುಮೆಚ್ಚು. ಆದರೆ ಮಾಡುವಾಗ ಬಹುತೇಕ ಮಂದಿ ಯಡುವುತ್ತಾರೆ. ಯಾವುದಾದರು ಒಂದು ವಸ್ತು ಹೆಚ್ಚಾಗಿ ಹಾಕಿ ಅದರ ರುಚಿಯನ್ನು ಕೆಡಿಸುತ್ತಾರೆ.

ಸಾಮಾನ್ಯವಾಗಿ ಮನೆಗೆ ಯಾರಾದರು ಅತಿಥಿಗಳು ಬಂದಾಗ ಅವರಿಗೆ ಕೇಸರಿ ಬಾತನ್ನೇ ಸಿಹಿಯಾಗಿ ಮಾಡುತ್ತಾರೆ. ಇದು ಎಲ್ಲರಿಗೂ ತಿಳಿದ ಸಾಮಾನ್ಯ ಸಿಹಿತಿಂಡಿ. ಈ ಕೇಸರಿ ಬಾತು ಮಾಡಲು ಹೆಚ್ಚು ಸಾಮಗ್ರಿಗಳ ಅಗತ್ಯವಿಲ್ಲ. ಜೊತೆಗೆ ಕಡಿಮೆ ಸಮಯದಲ್ಲಿ ಈ ತಿಂಡಿ ಮಾಡಬಹುದು.
ಇನ್ನು ನೀವೇನಾದರು ತೂಕ ಇಳಿಸುವ ಪ್ರಯತ್ನದಲ್ಲಿದ್ದರೆ ನೀವು ಅನಾನಸ್ ಕೇಸರಿ ಬಾತು ಮಾಡಿ ಸವಿಯಬಹುದು. ಆದರೆ ನಾವಿಂದು ರುಚಿ ರುಚಿಕರ ಕೇಸರಿ ಬಾತ್ ಮಾಡುವುದು ಹೇಗೆ ಎಂಬುದನ್ನು ನಾವಿಂದು ನೋಡೋಣ. ಜೊತೆಗೆ ಕೇಸರಿಬಾತು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು, ಮಾಡುವುದು ಹೇಗೆ ಎಂಬುದನ್ನು ಇಲ್ಲಿ ನೀಡಲಾಗಿದೆ.
ರುಚಿಕರ ಕೇಸರಿಬಾತು ಬೇಕಾಗುವ ವಸ್ತುಗಳಿವು
- ರವೆ - 1 ಕಪ್
- ತುಪ್ಪ
- ಲವಂಗ
- ದ್ರಾಕ್ಷಿ
- ಬಾದಾಮಿ, ಪಿಸ್ತ
- ಸಕ್ಕರೆ - 1 ಕಪ್
- ಕೇಸರಿ ಬಣ್ಣ
- ಅನಾನಸ್ ಎಸೆನ್ಸ್
ಕೇಸರಿ ಬಾತು ಮಾಡುವ ವಿಧಾನ
ಮೊದಲು ಒಲೆ ಮೇಲೆ ಪಾತ್ರೆಯಿಟ್ಟು ಅದಕ್ಕೆ ತುಪ್ಪ ಹಾಕಿಕೊಳ್ಳಿ. ಈ ಕೇಸರಿ ಬಾತು ಮಾಡಲು ಸ್ವಲ್ಪ ತುಪ್ಪ ಜಾಸ್ತಿ ಬಳಸಿ. ಬಳಿಕ ತುಪ್ಪ ಬಿಸಿಯಾದ ಮೇಲೆ ಅದಕ್ಕೆ ಗೋಡಂಬಿ, ದ್ರಾಕ್ಷಿ, ಲವಂಗ, ಪಿಸ್ತ, ಬಾದಾಮಿ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ.
ಬಳಿಕ ಈ ಎಲ್ಲಾ ವಸ್ತು ತೆಗೆದಿಟ್ಟುಕೊಳ್ಳಿ. ಈಗ ಅದೇ ಪಾತ್ರೆಗೆ ರವೆ ಹಾಕಿಕೊಂಡು ಚೆನ್ನಾಗಿ ಫ್ರೈ ಮಾಡಿ. ನೀವು ಉಪ್ಪಿಟ್ಟು ಮಾಡಲು ಬಳಸುವ ಅದೇ ಸಾಮಾನ್ಯ ರೆವಯನ್ನು ಈ ಕೇಸರಿ ಬಾತು ಮಾಡಲು ಬಳಸಿ. ರವೆಯನ್ನು ಚೆನ್ನಾಗಿ ಹುರಿದುಕೊಳ್ಳಿ. ರವೆ ಕಂದು ಬಣ್ಣಕ್ಕೆ ತಿರುಗುವವರೆಗೂ ಫ್ರೈ ಮಾಡಿಕೊಳ್ಳಬೇಕು.
ಈಗ ಯಾವ ಕಪ್ನಲ್ಲಿ ರವೆ ತೆಗೆದುಕೊಂಡಿದ್ದೀರೋ ಅದೇ ಕಪ್ನಲ್ಲಿ 3 ಕಪ್ ನೀರು ಹಾಕಿಕೊಳ್ಳಿ. ನೀರು ಹಾಕಿದ ಬಳಿಕ ಅದಕ್ಕೆ ಕೇಸರಿ ಬಣ್ಣ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಇದೆಲ್ಲಾ ಹಾಕಿದ ಮೇಲೆ ರವೆ ಬೇಯಲು ಬಿಡಿ ಚೆನ್ನಾಗಿ ತಿರುಗಿಸಿಕೊಳ್ಳಿ.
ಬಳಿಕ ಇದಕ್ಕೆ ತುಪ್ಪ ಹಾಕಿಕೊಳ್ಳಿ, ಇದಕ್ಕೆ ಏಲಕ್ಕಿ ಪುಡಿ, ಸಕ್ಕರೆ, ಪೈನಾಪಲ್ ಎಸೆನ್ಸ್ ಹಾಗೂ ಹುರಿದುಕೊಂಡಿದ್ದ ಎಲ್ಲಾ ಡ್ರೈ ಫ್ರೂಟ್ಸ್ ಅನ್ನು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಒಂದು ನಿಮಿಷ ಕಾಯಲು ಬಿಟ್ಟು ಒಲೆಯನ್ನು ಆಫ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಕೇಸರಿ ಬಾತು ಸವಿಯಲು ಸಿದ್ಧವಾಗುತ್ತದೆ.



Click it and Unblock the Notifications
