Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಮನೆಯಲ್ಲೇ ಮಾಡಿ ಸೂಪರ್ ಟೇಸ್ಟ್ನ ಕೇರಳ ಶೈಲಿಯ ಬಾಳೆಹಣ್ಣಿನ ಹಲ್ವಾ!
ಹಬ್ಬದಲ್ಲಿ ಎಲ್ಲರ ಮನೆಯಲ್ಲಿ ಸಿಹಿ ಮಾಡುವುದು ಸಾಮಾನ್ಯ ಹಾಗೆ ಬಗೆ ಬಗೆಯ ವಿಶೇಷ ರುಚಿಯ ಸಿಹಿ ಮಾಡಲು ಎಲ್ಲರಿಗೂ ಇಷ್ಟವಾಗುತ್ತೆ. ನಿಮ್ಮ ಮನೆಯಲ್ಲೂ ಸುಲಭವಾಗಿ ಮಾಡುವ ಸಿಹಿ ತಿಂಡಿ ಮಾಡಿ ಸವಿದಿರುತ್ತೀರಿ. ನಾವಿಂದು ಹಬ್ಬಕ್ಕಾಗಿ ಮಾಡುವ ರುಚಿಯ ಸ್ವೀಟ್ ಮಾಡುವುದು ಹೇಗೆ ಎನ್ನುವುದನ್ನು ತಿಳಿದುಕೊಳ್ಳೋಣ.
ಅದ್ರಲ್ಲೂ ಕೇರಳ ಶೈಲಿಯಲ್ಲಿ ಹಲ್ವಾ ಮಾಡುವುದು ನೀವೆಲ್ಲಾ ಇಷ್ಟಪಡಬಹುದು. ಹಾಗೆ ಈ ಹಲ್ವಾದ ರುಚಿಗೆ ಎಲ್ಲರ ಬಾಯಲ್ಲೂ ನೀರು ಬರೋದು ಖಚಿತ. ಹಾಗೆ ಬಾಳೆಹಣ್ಣು ಬಳಸಿ ಮಾಡುವ ವಿಶೇಷ ರುಚಿಯ ಹಲ್ವಾ ಮಾಡುವ ಕುರಿತು ತಿಳಿದುಕೊಳ್ಳೋಣ. ಹಲ್ವಾ ಅಂದ್ರೆ ಎಲ್ಲರ ಬಾಯಲ್ಲೂ ನೀರು ಬರುತ್ತೆ. ಆದ್ರೆ ಬಾಳೆಹಣ್ಣು ಬಳಸಿ ವಿಶೇಷ ರುಚಿಯ ಹಲ್ವಾ ಮಾಡುವ ಕುರಿತು ತಿಳಿಯೋಣ.

ಈ ಕೇರಳ ಶೈಲಿಯಲ್ಲಿ ಬಾಳೆಹಣ್ಣು ಹಲ್ವಾ ಮಾಡೋದು ಹೇಗೆ? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಕೇರಳ ಶೈಲಿಯ ಬಾಳೆಹಣ್ಣಿನ ಹಲ್ವಾ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
ಬಾಳೆಹಣ್ಣು
ತುಪ್ಪ
ಬೆಲ್ಲ
ಕೇರಳ ಶೈಲಿಯ ಬಾಳೆಹಣ್ಣಿನ ಹಲ್ವಾ ಮಾಡುವುದು ಹೇಗೆ?
ಮೊದಲಿಗೆ ಹಣ್ಣಾಗಿರುವ ಬಾಳೆಹಣ್ಣಗಳನ್ನು ಸಿಪ್ಪೆ ತೆಗೆದು ಬಳಿಕ ಒಂದು ಬೌಲ್ಗೆ ಹಾಕಿಟ್ಟುಕೊಳ್ಳಿ. 1 ಕೆ.ಜಿ ಬಾಳೆಹಣ್ಣಿ ಇದ್ದರೆ ಉತ್ತಮ. ನಂತರ ಬಾಳೆಹಣ್ಣನ್ನು ಕತ್ತರಿಸಿಕೊಂಡು ಒಂದು ಮಿಕ್ಸಿ ಜಾರ್ಗೆ ಹಾಕಿಕೊಳ್ಳಿ. ಅದನ್ನು ಪೇಸ್ಟ್ ರೀತಿ ಮಾಡಿಕೊಳ್ಳಿ. ಹಾಗೆ ಒಂದು ಅಚ್ಚು ಪ್ಲೇಟ್ಗೆ ತುಪ್ಪ ಸವರಿಕೊಂಡು ಇಟ್ಟುಕೊಳ್ಳಿ. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಪುಡಿ ಮಾಡಿಕೊಂಡ ಬೆಲ್ಲ ಹಾಕಿ ಕರಗಿಸಿಕೊಳ್ಳಿ.
ಸ್ವಲ್ಪ ನೀರು ಸಹ ಹಾಕಿ ಕರಗಲು ಬಿಡಿ. ಅರ್ಧ ಕೆ,ಜಿ ಬೆಲ್ಲ ಬಳಸಿ. ಬೆಲ್ಲದ ಪಾಕ ಮಾಡಬೇಡಿ. ಕರಗಿದರೆ ಸಾಕಾಗುತ್ತದೆ. ಬೆಲ್ಲ ಕರಗಿದ ಬಳಿಕ ಅದನ್ನು ತೆಗೆದು ಬದಿಗಿಟ್ಟುಕೊಳ್ಳಿ. ಈಗ ಒಲೆ ಮೇಲೆ ಮತ್ತೊಂದು ಬಾಣಲೆ ಇಟ್ಟು ಅದಕ್ಕೆ ಸ್ವಲ್ಪ ತುಪ್ಪ ಹಾಕಿಕೊಳ್ಳಿ. ಅನಂತರ ಮಿಕ್ಸಿಯಲ್ಲಿ ರುಬ್ಬಿದ್ದ ಬಾಳೆಹಣ್ಣಿನ ಮಿಶ್ರಣವನ್ನು ಹಾಕಿಕೊಂಡು ಚೆನ್ನಾಗಿ ಫ್ರೈ ಮಾಡಿಕೊಳ್ಳಿ. 2 ನಿಮಿಷದ ಬಳಿಕ ಬೆಲ್ಲದ ನೀರನ್ನು ಇದಕ್ಕೆ ಹಾಕಿ ಗಂಟುಗಳು ಇಲ್ಲದಂತೆ ಮಿಕ್ಸ್ ಮಾಡಬೇಕು.
ಗಟ್ಟಿ ಆಗುವವರೆಗೂ ಮಿಕ್ಸ್ ಮಾಡುತ್ತಾ ಇರಿ. ನಂತರ 1 ಸ್ಪೂನ್ ತುಪ್ಪ ಹಾಕಿ ಮಿಕ್ಸ್ ಮಾಡಿ. 2 ನಿಮಿಷದ ಬಳಿಕ ಮತ್ತೆ ತುಪ್ಪ ಹಾಕಿ ಮಿಕ್ಸ್ ಮಾಡಿ. ಸಣ್ಣ ಉರಿಯಲ್ಲಿ ಇಟ್ಟು ಆಗಾಗ ತುಪ್ಪ ಹಾಕುತ್ತಾ ಮಿಶ್ರಣ ಮಾಡುತ್ತಿರಿ. ಇದು ಗಟ್ಟಿಯಾಗಲು ಆರಂಭಿಸಿದಾಗ ಒಟ್ಟು 5 ಚಮಚ ತುಪ್ಪ ಈ ಮಿಶ್ರಣಕ್ಕೆ ಹಾಕಿ. ಸ್ವಲ್ಪ ಅಂಟು ಅಂಟಾಗಿ ಬರುವಾಗ ಬಾಣಲೆಯಿಂದ ತುಪ್ಪ ಸವರಿದ ತಟ್ಟೆಗೆ ಹಾಕಿಕೊಳ್ಳಬೇಕು.
ಈ ಸಮಯದಲ್ಲಿ ಬೇಕಿದ್ದರೆ ಏಲಕ್ಕಿ ಪುಡಿ ಹಾಕಿಕೊಳ್ಳಬಹುದು, ಈಗ ನೇರವಾಗಿ ತಟ್ಟೆಗೆ ಹಾಕಿ ಮೇಲೆ ಸವರಿಕೊಂಡು ಗಟ್ಟಿಯಾಗಲು ಬಿಡಿ. ಸ್ವಲ್ಪ ಗಟ್ಟಿಯಾದ ಬಳಿಕ ನಿಮಗೆ ಯಾವ ಗಾತ್ರಕ್ಕೆ ಬೇಕೋ ಹಾಗೆ ಕತ್ತರಿಸಿಕೊಂಡರೆ ನಿಮ್ಮ ಮುಂದೆ ಈ ರುಚಿ ರುಚಿಯ ಬಾಳೆಹಣ್ಣಿನ ಹಲ್ವಾ ರೆಡಿಯಾಗುತ್ತೆ, ನೀವು ಸಹ ಮನೆಯಲ್ಲಿ ಇದನ್ನು ಮಾಡಿ ನೋಡಿ.
ಹಬ್ಬದ ಸಮಯದಲ್ಲಿ ಈ ಸಿಹಿ ತಿಂಡಿ ಮಾಡಿದರೆ ಎಲ್ಲರಿಗೂ ಇಷ್ಟವಾಗುತ್ತೆ. ಹಾಗೆ ಮಕ್ಕಳಿಗಂತು ಇದನ್ನು ಒಮ್ಮೆ ಸವಿದರೆ ಮತ್ತೆ ಮತ್ತೆ ಮಾಡಲು ಹೇಳುತ್ತಾರೆ ಇದನ್ನು ಮಾಡೋದು ಕೂಡ ಬಹಳ ಸುಲಭ.



Click it and Unblock the Notifications
