Latest Updates
-
ಬಾಂದ್ರಾ ಫೇರ್ ರಶ್: ಕಪಲ್ಸ್ ಹುಷಾರ್! ಟ್ರಾಫಿಕ್ ಜಾಮ್ನಲ್ಲಿ ಸಿಲುಕದಂತೆ ಡೇಟಿಂಗ್ ಪ್ಲಾನ್ ಮಾಡುವುದು ಹೇಗೆ? -
ಅಪಾರ್ಟ್ಮೆಂಟ್ನಲ್ಲಿ ಗಣೇಶ ವಿಸರ್ಜನೆ: ಪರಿಸರ ಸ್ನೇಹಿಯಾಗಿ ಆಚರಿಸಲು ಇಲ್ಲಿವೆ 5 ಸಿಂಪಲ್ ಟಿಪ್ಸ್ -
ಹಬ್ಬದ ಸೀಸನ್ನಲ್ಲಿ ಎಚ್ಚರ! ಮಾರುಕಟ್ಟೆಯಲ್ಲಿ ನಕಲಿ 'ಅನಲಾಗ್ ಪನೀರ್' ಹಾವಳಿ: ಅಸಲಿ ಪನೀರ್ ಗುರುತಿಸುವುದು ಹೇಗೆ? -
iPhone 18 ಪ್ರೀ-ಆರ್ಡರ್ ಆರಂಭ: ನಿಮ್ಮ ಫೋನ್ ಬುಕ್ ಮಾಡುವ ಮುನ್ನ ಈ 5 ವಿಷಯಗಳನ್ನು ಮಿಸ್ ಮಾಡ್ಬೇಡಿ! -
ಬೀಚ್ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿದ್ದೀರಾ? ಗಾಯಗಳಾಗದಂತೆ ಕೆಲಸ ಮಾಡಲು ಈ ಸುರಕ್ಷತಾ ಟಿಪ್ಸ್ ಮಿಸ್ ಮಾಡಬೇಡಿ! -
ಇಂದಿನ ಲವ್ ಜಾತಕ: ನಿಮ್ಮ ಪ್ರೀತಿಯನ್ನು ಗಟ್ಟಿಗೊಳಿಸಲು ಇಂದಿನ ಬೆಸ್ಟ್ ಟಿಪ್ಸ್ ಮತ್ತು ಡೇಟಿಂಗ್ ಐಡಿಯಾಗಳು -
₹1,000 ಕ್ಕಿಂತ ಕಡಿಮೆ ಬಜೆಟ್ನಲ್ಲಿ ಮನೆಗೆ ಹೊಸ ಲುಕ್: ಬಿದಿರಿನ ಅಲಂಕಾರಿಕ ವಸ್ತುಗಳ ಮ್ಯಾಜಿಕ್! -
ನೆಸ್ಲೆ ಶಿಶು ಆಹಾರದ ಮೇಲೆ FSSAI ಕಣ್ಣು: ನಿಮ್ಮ ಮಗುವಿನ ಸುರಕ್ಷತೆಗಾಗಿ ಪೋಷಕರು ತಿಳಿಯಲೇಬೇಕಾದ ವಿಷಯಗಳು -
ವಿಶ್ವಕರ್ಮ ಪೂಜೆ ಸಂಭ್ರಮ: ಗಾಳಿಪಟ ಹಾರಿಸುವಾಗ ಈ ಸುರಕ್ಷತಾ ನಿಯಮಗಳನ್ನು ಮರೆಯದಿರಿ! -
IMD ಮಳೆ ಅಲರ್ಟ್: ಸಿಡಿಲು-ಮಳೆಯಿಂದ ಪಾರಾಗಲು ಈ ನಿಯಮ ಪಾಲಿಸಿ, ಮನೆಯಲ್ಲೇ ಫಿಟ್ ಆಗಿರಿ
ಅನ್ನದ ಜೊತೆಗೆ ಅಮೃತ..ಈ ಕೇರಳ ಸ್ಟೈಲ್ ಹುಳಿ ಮಜ್ಜಿಗೆ ಸಾರು ಮಾಡಿ ನೋಡಿ..!!
ಬೇಸಿಗೆಯಲ್ಲಿ ತಂಪು ತಂಪಾಗಿ ಮಜ್ಜಿಗೆ ಜೊತೆಗೆ ಸವಿಯುವ ಅಭ್ಯಾಸ ಇಟ್ಟುಕೊಂಡಿರುತ್ತೇವೆ. ಬಿಸಿಲಿನಲ್ಲಿ ತಂಪಾದ ಆಹಾರ ದೇಹಕ್ಕೆ ಬಹಳ ಉತ್ತಮ. ಹಾಗೆ ಹೆಚ್ಚು ದ್ರವ, ನೀರು ಕುಡಿಯುವುದು ಕೂಡ ಅಷ್ಟೇ ಉತ್ತಮ. ಹೀಗಾಗಿ ನಾವು ಊಟದ ಜೊತೆಗೆ ಹೆಚ್ಚು ಮಸಾಲೆಗಳು, ಖಾರ, ಡ್ರೈ ಆಗಿರುವ ಆಹಾರ ಸೇವನೆ ಮಾಡುವುದನ್ನು ತಪ್ಪಿಸುವುದು ಉತ್ತಮ.
ಹೀಗಾಗಿ ಮಧ್ಯಾಹ್ನ ಹಾಗೂ ರಾತ್ರಿಯ ಊಟದಲ್ಲಿ ನಾವು ತಂಪಾಗಿರುವ ಒಂದು ಸಾರನ್ನು ಮಾಡಲು ಮುಂದಾಗೋಣ. ಅದರಲ್ಲೂ ನೀವು ಕೇರಳ ಶೈಲಿಯ ಹುಳಿ ಮಜ್ಜಿಗೆ ಸಾರಿನ ಕುರಿತು ಕೇಳಿರಬಹುದು. ಅತ್ಯಂತ ರುಚಿಕರವಾದ ಈ ಸಾರು ಮಾಡಿದ್ರೆ ಊಟದ ಜೊತೆಗೆ ಬೇರೆ ಯಾವ ಖಾದ್ಯ ಕೂಡ ಅಗತ್ಯವಿರುವುದಿಲ್ಲ.

ಈ ಹುಳಿ ಮಜ್ಜಿಗೆ ಸಾರಿಗೆ ಒಂದು ಒಗ್ಗರಣೆ ನೀಡಿದರೆ ಸಾಕು ಅದರ ರುಚಿಯಲ್ಲಿ ನೀವು ಭರ್ಜರಿ ಊಟ ಮಾಡೋದು ಪಕ್ಕ. ಹಾಗಾದ್ರೆ ಕೇರಳ ಶೈಲಿಯ ಹುಳಿ ಮಜ್ಜಿಗೆ ಸಾರು ಮಾಡುವುದು ಹೇಗೆ ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ. ಹಾಗೆ ಈ ಮಜ್ಜಿಗೆ ಸಾರನ್ನು ಮಾಡಿ ಊಟದ ಜೊತೆಗೆ ಸವಿದು ರುಚಿ ನೋಡೋಣ.
ಹುಳಿ ಮಜ್ಜಿಗೆ ಸಾರು ಮಾಡಲು ಬೇಕಾಗುವ ಪದಾರ್ಥಗಳು, ಹುಳಿ ಮಜ್ಜಿಗೆ ಸಾರು ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿಯೋಣ.
ಹುಳಿ ಮಜ್ಜಿಗೆ ಸಾರು ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಕುಂಬಳಕಾಯಿ
- ಮೊಸರು - 200 ಗ್ರಾಂ
- ಖಾರದ ಪುಡಿ
- ಅರಿಶಿನ ಪುಡಿ
- ಕರಿಬೇವು
- ತೆಂಗಿನಕಾಯಿ
- ಜೀರಿಗೆ
- ಹಸಿರು ಮೆಣಸಿನಕಾಯಿ
- ಈರುಳ್ಳಿ
- ಸಾಸಿವೆ
- ಇಂಗು
- ಕೆಂಪು ಮೆಣಸು
- ಅಡುಗೆ ಎಣ್ಣೆ
- ರುಚಿಗೆ ತಕ್ಕಷ್ಟು ಉಪ್ಪು
ಹುಳಿ ಮಜ್ಜಿಗೆ ಸಾರು ಮಾಡುವ ವಿಧಾನವೇನು?
ಮೊದಲು ಬೂದು ಕುಂಬಳಕಾಯಿಯನ್ನು ಸಣ್ಣದಾಗಿ ಕತ್ತರಿಸಿಕೊಂಡು ಅದನ್ನು ಒಂದು ಕುಕ್ಕರ್‌ಗೆ ಹಾಕಿಕೊಂಡು ಸ್ವಲ್ಪ ನೀರು, ಅರಶಿಣ, ಖಾರದ ಪುಡಿ, ಕರಿಬೇವು, ಉಪ್ಪು ಹಾಕಿ 15 ನಿಮಿಷ ಬೇಯಿಸಿಕೊಳ್ಳಿ.
ಈಗ ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಕತ್ತರಿಸಿಕೊಂಡ ತೆಂಗಿನಕಾಯಿ, ಹಸಿ ಮೆಣಸು, ಜೀರಿಗೆ, ಈರುಳ್ಳಿ ಹಾಕಿಕೊಂಡು ರುಬ್ಬಿಕೊಳ್ಳಿ. ಈ ಮಸಾಲೆ ಆದಷ್ಟು ಗಟ್ಟಿಯಾಗಿ ಇರಲಿ. ಈಗ ಮೊಸರನ್ನು ಒಂದು ಬೌಲ್‌ಗೆ ಹಾಕಿಕೊಂಡು ಸ್ವಲ್ಪ ನೀರು ಹಾಕಿಕೊಂಡು ತೆಳು ಮಾಡಿಕೊಳ್ಳಿ. ಈಗ ಒಲೆ ಮೇಲೆ ಕುದಿಯುತ್ತಿರುವ ಕುಂಬಳಕಾಯಿಗೆ ರುಬ್ಬಿರುವ ಮಸಾಲೆಗಳ ಹಾಕಿಕೊಳ್ಳಿ.
ಈ ಮಸಾಲೆ ಹಾಕಿದ ಬಳಿಕ ನಿಮಗೆ ಎಷ್ಟು ನೀರು ಬೇಕೋ ಅಷ್ಟು ಹಾಕಿ. ಹಾಗೆ 1 ನಿಮಿಷ ಬಿಟ್ಟು ಒಲೆ ಆಫ್ ಮಾಡಿಕೊಂಡು ಕೆಳಗೆ ಇಳಿಸಿಕೊಳ್ಳಿ. ಈಗ ಮಿಕ್ಸ್ ಮಾಡಿಕೊಂಡಿರುವ ಮೊಸರನ್ನು ಇದಕ್ಕೆ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಈಗ ಇದಕ್ಕೊಂದು ಒಗ್ಗರಣೆ ಮಾಡಿ. ಒಲೆ ಮೇಲೆ ಚಿಕ್ಕ ಪಾತ್ರೆ ಇಟ್ಟು ಎಣ್ಣೆ, ಸಾಸಿವೆ, ಜೀರಿಗೆ, ಒಣ ಮೆಣಸು, ಕರಿಬೇವು, ಇಂಗು ಹಾಕಿ ಒಗ್ಗರಣೆಯನ್ನು ಈ ಸಾರಿಗೆ ಹಾಕಿ ಮುಚ್ಚಳ ಮುಚ್ಚಿಬಿಡಿ.
ಎರಡು ನಿಮಿಷ ಬಿಟ್ಟು ಒಮ್ಮೆ ಮಿಕ್ಸ್ ಮಾಡಿ ರುಚಿ ನೋಡಿಕೊಳ್ಳಿ. ಇಷ್ಟಾದರೆ ಕೇರಳ ಶೈಲಿಯ ಈ ಹುಳಿ ಮಜ್ಜಿಗೆ ಸಾರು ರೆಡಿಯಾಗುತ್ತೆ. ಅನ್ನದ ಜೊತೆಗೆ ಅಮೃತ ಸವಿದಂತಾಗುತ್ತೆ. ನೀವು ಕೂಡ ಮನೆಯಲ್ಲಿ ಇದನ್ನೊಮ್ಮೆ ಟ್ರೈ ಮಾಡಿ ನೋಡಿ. ಈ ಸಾರನ್ನು ಬೂದು ಕುಂಬಳಕಾಯಿ ಬದಲಿಗೆ ಸೌತೆಕಾಯಿಯಲ್ಲೂ ಮಾಡಬಹುದು, ಹಾಗೂ ಸೋರೆಕಾಯಿ ಕೂಡ ಅದ್ಭುತ ರುಚಿ ನೀಡಲಿದೆ.



Click it and Unblock the Notifications
