Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಕೇರಳ ಸ್ಟೈಲ್ನ ಮೀನು ಕರಿ; ಬಾಯಲ್ಲಿ ನೀರು ತರಿಸುವ ರುಚಿ ಇದು!
ನಾನ್ವೆಜ್ ಪ್ರಿಯರು ಮೀನಿನಂದ ಮಾಡುವ ಹಲವು ಖಾದ್ಯಗಳ ಸವಿಯಲು ಇಷ್ಟಪಡುತ್ತಾರೆ. ಚಿಕನ್, ಮಟನ್ಗಿಂತ ಹಲವರಿಗೆ ಮೀನ ರುಚಿಯ ರೆಸಿಪಿಗಳನ್ನು ಸವಿಯಲು ಇಷ್ಟಪಡುತ್ತಾರೆ. ಹಾಗೆ ಮೀನು ಆರೋಗ್ಯಕ್ಕೆ ಬಹಳ ಉತ್ತಮ ಖಾದ್ಯ. ಸಮುದ್ರದ ಮೀನುಗಳು ಹಲವು ಆರೋಗ್ಯಕರ ಅಂಶಗಳನ್ನು ಹೊಂದಿವೆ.
ಮೀನಿನ ಸಾಂಬಾರ್, ಕರಿ, ಫ್ರೈ ಹೀಗೆ ಹಲವು ರೀತಿಯ ಖಾದ್ಯಗಳ ಮಾಡಿ ಸವಿಯೋದು ನೋಡಿರುತ್ತೀರಿ. ಹೋಟೆಲ್ಗಳಲ್ಲಿ ಮೀನಿನ ಹಲವು ರೀತಿಯ ರೆಸಿಪಿಗಳು ಬಾಯಲ್ಲಿ ನೀರು ತರಿಸಲಿವೆ. ಹಾಗೆ ಮಾಂಸಹಾರಿಗಳು ಮೀನು ರುಚಿಯಲ್ಲಿ ಅದರ ಸಾಂಬಾರ್ ಮಾಡಿ ಸವಿಯೋದಕ್ಕೆ ಇಷ್ಟಪಡುತ್ತಾರೆ. ಅದರ ರುಚಿಕರ ಕರಿ ಅಂದ್ರೆ ಬಾಯಲ್ಲಿ ನೀರು ಬರುವುದು ಖಚಿತ.

ಆದ್ರೆ ಹಲವು ಬಗೆಯ ಖಾದ್ಯಗಳ ಪೈಕಿ ನಾವಿಂದು ಕೇರಳ ಶೈಲಿಯ ಮೀನ ಕರಿ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ. ಕೇರಳ ಕೆಲವು ಸ್ಪೆಷಲ್ ಕರಿಗಳಲ್ಲಿ ಈ ಮೀನು ಕರಿ ಕೂಡ ಒಂದು. ಕೇರಳ ಭಾಗದಲ್ಲಿ ವಿಶೇಷ ಮಸಾಲೆಗಳ ಬಳಸಿಕೊಂಡು ಈ ಕರಿ ಮಾಡುತ್ತಾರೆ. ನಾವಿಂದು ಸುಲಭವಾಗಿ ಈ ಕರಿ ಮಾಡುವ ಕುರಿತು ತಿಳಿದುಕೊಳ್ಳೋಣ.
ಕೇರಳ ಸ್ಟೈಲ್ನ ಮೀನು ಕರಿ ಮಾಡುವುದು ಹೇಗೆ? ಮಾಡುವ ವಿಧಾನವೇನು? ಮೀನು ಕರಿ ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ. ಹಾಗೆ ಈ ಕರಿಗೆ ಯಾವ ಮಸಾಲೆಗಳನ್ನು ಬಳಸಲಾಗುತ್ತದೆ ಎಂಬುದನ್ನು ಸಹ ತಿಳಿಯೋಣ.
ಕೇರಳ ಮೀನು ಕರಿಗೆ ಬೇಕಾಗುವ ಸಾಮಗ್ರಿಗಳು
- ಮೀನು
- ಸಣ್ಣ ಈರುಳ್ಳಿ - 10
- ಟೊಮೆಟೊ - 1
- ತೆಂಗಿನಕಾಯಿ ತುರಿ - 1 ಕಪ್
- ಹಸಿಮೆಣಸು - 2
- ಬೆಳ್ಳುಳ್ಳಿ - 3
- ಹುಣಸೆಹಣ್ಣು - ಸಣ್ಣ ನಿಂಬೆ ಗಾತ್ರದಷ್ಟು
- ಮೆಣಸಿನಕಾಯಿ
- ಕೊತ್ತಂಬರಿ ಪುಡಿ
- ಅರಿಶಿನ
- ಸಾಸಿವೆ ಪುಡಿ - 1 ಚಮಚ
- ಮೆಣಸು
- ಕರಿಬೇವು
- ಎಣ್ಣೆ,
- ಉಪ್ಪು
ಕೇರಳ ಮೀನು ಕರಿ ಮಾಡುವ ವಿಧಾನವೇನು?
ಮೊದಲು ಮೀನಿನ ತುಂಡುಗಳನ್ನು ಚೆನ್ನಾಗಿ ತೊಳೆದು ಬಳಿಕ ಅದಕ್ಕೆ ಉಪ್ಪು ಹಾಗು ಅರಶಿಣ ಹಚ್ಚಿ ಪಕ್ಕದಲ್ಲಿ ಇರಿಸಿ. ಹಾಗೆ ಒಂದು ಬೌಲ್ಗೆ ಹುಣಸೆ ಹುಳಿ ಹಾಗೂ ನೀರು ಹಾಕಿ ನೆನೆಯಲು ಇಟ್ಟುಕೊಳ್ಳಿ.
ಒಂದು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಜೀರಿಗೆ, ಸಾಸಿವೆ, ಮೆಣಸಿಕಾಯಿ ಹಾಕಿ ಮಧ್ಯಮ ಉರಿಯಲ್ಲಿ ಹುರಿದುಕೊಳ್ಳಿ. ಬಳಿಕ ಒಲ್ ಆಫ್ ಮಾಡಿಕೊಂಡು ತಣ್ಣಗಾಗಲು ಬಿಡಿ. ಎಲ್ಲಾ ವಸ್ತುಗಳು ತಣ್ಣಗಾದ ಬಳಿಕ ಒಂದು ಮಿಕ್ಸಿ ಜಾರ್ಗೆ ಹಾಕಿಕೊಂಡು ನೀರು ಹಾಕಿ ನುಣ್ಣಗೆ ರುಬ್ಬಿ ಇಟ್ಟುಕೊಳ್ಳಿ.
ಈಗ ಮತ್ತೆ ಅದೇ ಬಾಣಲೆಗೆ ಎಣ್ಣೆ ಹಾಕಿ ನಂತರ ಬೆಳ್ಳುಳ್ಳಿ, ಕತ್ತರಿಸಿಕೊಂಡ ಈರುಳ್ಳಿ ಹಾಕಿ ಹುರಿದುಕೊಳ್ಳಿ. ನಂತರ ಟೊಮೆಟೋ ಸಹ ಸೇರಿಸಿ ಮೃದುವಾಗುವವರೆಗೂ ಹುರಿದುಕೊಳ್ಳಬೇಕು. ಹಾಗೆ ಅನಂತರ ಅರಿಶಿನ ಪುಡಿ, ಮೆಣಸಿನ ಪುಡಿ, ಕೊತ್ತಂಬರಿ ಪುಡಿ ಮತ್ತು ಮೊದಲೇ ರುಬ್ಬಿದ ಮಸಾಲಾ ಪುಡಿಯನ್ನು ಸೇರಿಸಿ ಒಂದು ನಿಮಿಷ ಹುರಿಯಿರಿ. ಈ ಮಿಶ್ರಣ ತಣ್ಣಗಾದ ನಂತರ ಅದನ್ನು ಮಿಕ್ಸಿ ಜಾರ್ನಲ್ಲಿ ಹಾಕಿ ತುರಿದ ತೆಂಗಿನಕಾಯಿ ಮತ್ತು ಸ್ವಲ್ಪ ನೀರು ಸೇರಿಸಿ ನಯವಾದ ಪೇಸ್ಟ್ ಮಾಡಿಕೊಳ್ಳಿ.
ಈಗ ಒಂದು ಪಾತ್ರೆ ಒಲೆ ಮೇಲೆ ಇಟ್ಟು ಅದಕ್ಕೆ ಮತ್ತೆ ಎಣ್ಣೆ ಸೇರಿಸಿಕೊಂಡು ನಂತರ ಹಸಿ ಮೆಣಸು ಹಾಕಿ ಹುರಿದುಕೊಳ್ಳಿ. ರುಬ್ಬಿದ್ದ ತೆಂಗಿನಕಾಯಿ-ಮಸಾಲ ಪೇಸ್ಟ್, ಸಾಕಷ್ಟು ಉಪ್ಪು ಮತ್ತು ಒಂದು ಕಪ್ ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಹಾಗೆ ಮೊದಲು ಮಾಡಿದ್ದ ಪೇಸ್ಟ್ಗೆ ಸ್ವಲ್ಪ ನೀರು ಹಾಕಿ ಸಹ ಮಿಕ್ಸ್ ಮಾಡಿ. ಇದಕ್ಕೆ ಹುಣಸೆ ಹುಳಿಯನ್ನು ಹಾಕಿ ಕುದಿಸಿಕೊಳ್ಳಿ. ಕುದಿಯುವಾಗ ಮೀನಿನ ತುಂಡುಗಳನ್ನು ಇದಕ್ಕೆ ಹಾಕಿ ಮಿಶ್ರಣ ಮಾಡಿ. ಹಾಗೆ ಕುದಿಯಲು ಬಿಟ್ಟು 10 ನಿಮಿಷ ಹಾಗೆಯೇ ಬಿಡಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ ಇಳಿಸಿಕೊಳ್ಳಿ.



Click it and Unblock the Notifications
