Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಅದ್ಭುತ ರುಚಿಯ ಕೇರಳ ಶೈಲಿ ಬಾಳೆಹಣ್ಣಿನ ಕೇಕ್ ಮಾಡಿ..! ಇಲ್ಲಿದೆ ಸಿಂಪಲ್ ರೆಸಿಪಿ
ನೀವು ಬೇಕರಿಯಲ್ಲಿ ಅಥವಾ ಅಂಗಡಿಯಲ್ಲಿ ಹತ್ತು ಹಲವು ರೀತಿಯ ಕೇಕ್‌ಗಳ ನೋಡಿರುತ್ತೀರಿ. ಅದರಲ್ಲಿ ಒಂದಿಷ್ಟು ಸವಿದಿರುತ್ತೀರಿ. ಹಾಗೆ ಕೇಕ್ ಸವಿಯಲು ಎಲ್ಲರಿಗೂ ಇಷ್ಟವೇ. ಕೇಕ್ ಅಂದರೆ ಮಕ್ಕಳಂತು ಕುಣಿದು ಕುಪ್ಪಳಿಸುತ್ತಾರೆ. ಹೀಗಾಗಿ ಬೇಕರಿ ಮಂದಿ ಕೇಕ್ ಅನ್ನ ಎಲ್ಲರಿಗೂ ಕಾಣುವಂತೆ ಅಲಂಕಾರ ಮಾಡಿ ಇರಿಸಿರುತ್ತಾರೆ.
ಇನ್ನು ಕೆಲವೊಂದು ಬೇಕರಿಯಲ್ಲಿ ವಿಶೇಷವಾದ ಕೇಕ್‌ಗಳ ಮಾಡುತ್ತಾರೆ. ಅದರಲ್ಲಿ ಕೇರಳ ಶೈಲಿಯಲ್ಲಿ ಮಾಡುವ ಕೆಲವೊಂದು ಕೇಕ್‌ಗಳು ಗ್ರಾಹಕರನ್ನು ಸೆಳೆಯುತ್ತವೆ. ಹಾಗೆ ನೋಡಿದರೆ ಬಾಳೆಹಣ್ಣಿನ ಕೇಕ್ ಎಲ್ಲರ ಇಷ್ಟದ ಕೇಕ್ ಆಗಿರುತ್ತೆ. ಬಾಳೆಹಣ್ಣಿನ ಸ್ವಾದವನ್ನೇ ಹೊಂದಿರುವ ಈ ಕೇಕ್ ಬಹಳ ರುಚಿ ನೀಡುತ್ತೆ.

ಸಂಜೆ ಸ್ನ್ಯಾಕ್ಸ್ ಆಗಿ ಟೀ ಟೈಮ್‌ನಲ್ಲಿ ಈ ಕೇಕ್ ಸವಿಯಲು ಸಿಕ್ಕರಂತು ಅದರ ರುಚಿಯೇ ಬೇರೆ. ನೀವು ಕೇರಳ ಮೂಲದ ಬೇಕರಿಗಳಲ್ಲಿ ಈ ರೀತಿಯ ಕೇಕ್‌ಗಳನ್ನು ಖಂಡಿತ ನೋಡಬಹುದು. ಅದನ್ನು ಸುಲಭವಾಗಿ ಮಾಡಬಹುದಾಗಿದ್ದು, ಹಲವರು ಮನೆಯಲ್ಲೂ ಮಾಡಿ ಸವಿಯುತ್ತಾರೆ. ಹಾಗಾದ್ರೆ ನಾವಿಂದು ಈ ಬಾಳೆಹಣ್ಣಿನ ಕೇಕ್ ಮಾಡುವುದು ಹೇಗೆ ಎಂಬುದನ್ನು ನೋಡೋಣ.
ಬಾಳೆ ಹಣ್ಣಿನ ಕೇಕ್ ಮಾಡಲು ಬೇಕಾಗುವ ಪದಾರ್ಥಗಳೇನು? ಬಾಳೆಹಣ್ಣಿನ ಕೇಕ್ ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯುತ್ತದೆ? ಎಂಬೆಲ್ಲಾ ಮಾಹಿತಿ ತಿಳಿದುಕೊಂಡು ನಾವು ಸಹ ಮನೆಯಲ್ಲಿ ಮಾಡಲು ಟ್ರೈ ಮಾಡೋಣ.
ಬಾಳೆಹಣ್ಣಿನ ಕೇಕ್ ಮಾಡಲು ಬೇಕಾಗುವ ಪದಾರ್ಥಗಳು
- ಬಾಳೆಹಣ್ಣು : 2 ಅಥವಾ 3 (ದೊಡ್ಡ ಗಾತ್ರ)
- ಸಕ್ಕರೆ - 1/2 ಕಪ್
- ದಾಲ್ಚಿನ್ನಿ ಪುಡಿ - 1/2 ಟೀಸ್ಪೂನ್
- ಬೇಕಿಂಗ್ ಪೌಡರ್ - 1/2 ಟೀಸ್ಪೂನ್
- ಅಡಿಗೆ ಸೋಡಾ - 1/2 ಟೀಸ್ಪೂನ್
- ವೆನಿಲ್ಲಾ ಫ್ಲೇವರ್ - 4-5 ಹನಿ
- ಎಣ್ಣೆ
- ಮೈದಾ - 3/4 ಕಪ್
- ಚಾಕೊಚಿಪ್ಸ್ - 1/4 ಕಪ್
ಬಾಳೆಹಣ್ಣಿನ ಕೇಕ್ ಮಾಡುವುದು ಹೇಗೆ?
ಒಂದು ಬೌಲ್‌ಗೆ ಮೂರು ಬಾಳೆಹಣ್ಣು ಸಿಪ್ಪೆ ಬಿಡಿಸಿಕೊಂಡು ಹಾಕಿ, ಅದಕ್ಕೆ ಅಗತ್ಯ ಸಕ್ಕರೆ ಸೇರಿಸಿ ಪುಡಿ ಮಾಡಿಕೊಳ್ಳಿ. ಬಾಳೆಹಣ್ಣಿಗೆ ಸಕ್ಕರೆ ಬೆರೆಯುವಂಯೆ ಪುಡಿ ಮಾಡಿಕೊಳ್ಳಿ. ಇದು ರಸಾಯನದ ಹದ ಬರುವವರಗೆ ಮಿಕ್ಸ್ ಮಾಡಿಕೊಳ್ಳಬೇಕು. ಈಗ ಇದಕ್ಕೆ ಕಾಲು ಕಪ್ ಎಣ್ಣೆ ಸೇರಿಸಿಕೊಳ್ಳಿ. ಇದಕ್ಕೆ ವೆನಿಲ್ಲಾ ಫ್ಲೇವರ್ ಎಸ್ಸೆನ್ಸ್ ಸೇರಿಸಿ ಮಿಕ್ಸ್ ಮಾಡಿಕೊಳ್ಳಿ.
ಈಗ ಅದೇ ಬೌಲ್‌ಗೆ ಮೈದಾ ಹಿಟ್ಟು ಸೇರಿಸಬೇಕು. ಸೇರಿಸುವಾಗಲೇ ಜರಡಿ ಹಿಡಿದು ನುಣ್ಣಗೆ ಇರುವ ಹಿಟ್ಟನ್ನು ಮಾತ್ರ ಸೇರಿಸಬೇಕು. ಇದಕ್ಕೆ ಚಿಟಿಕೆಯಷ್ಟು ಉಪ್ಪು, ಸರಿಯಾದ ಪ್ರಮಾಣದಲ್ಲಿ ಸೋಡಾ ಹಾಗೂ ಬೇಕಿಂಗ್ ಪೌಡರ್ ಸೇರಿಸಿಕೊಳ್ಳಿ. ಈ ಹಿಟ್ಟನ್ನು ಗಂಟುಗಳು ಆಗದಂತೆ ಮಿಕ್ಸ್ ಮಾಡಿಕೊಳ್ಳಿ.
ಕೊನೆಯದಾಗಿ ಅದಕ್ಕೆ ಚಾಕೋಚಿಪ್ಸ್ ಹಾಕಿಕೊಳ್ಳಿ. ಚಾಕೋಚಿಪ್ಸ್ ಇಲ್ಲದಿದ್ದರೆ ಗೋಡಂಬಿ, ದ್ರಾಕ್ಷಿಯನ್ನು ಸಣ್ಣದಾಗಿ ಕತ್ತರಿಸಿಕೊಂಡು ಇದಕ್ಕೆ ಹಾಕಿಕೊಳ್ಳಬಹುದು. ಈಗ ಹಿಟ್ಟು ಅಂಟು ಅಂಟಾಗಿ ಬರುವಂತೆ ಕಲಸಿಟ್ಟುಕೊಳ್ಳಿ. ಈಗ ಒಂದು ಅಚ್ಚು ಪಾತ್ರೆ ಅಥವಾ ಟ್ರೇ ತೆಗೆದುಕೊಂಡು ಅದಕ್ಕೆ ಬಟರ್ ಪೇಪರ್ ಹಾಕಿಕೊಳ್ಳಬೇಕು. ಬಟರ್ ಪೇಪರ್ ಅಂಗಡಿಗಳಲ್ಲಿ ಸಿಗುತ್ತದೆ. ಇದನ್ನು ಪಾತ್ರೆಯ ಒಳಗೆ ಹಾಕಿ ಅದರ ಮೇಲೆ ಎಣ್ಣೆ ಸವರಿಕೊಳ್ಳಬೇಕು.
ನಂತರ ಈ ಹಿಟ್ಟನ್ನು ಈ ಟ್ರೇಗೆ ಚೆನ್ನಾಗಿ ಹಿಡಿಯುವಂತೆ ಹಾಕಿಕೊಳ್ಳಿ. ಈಗ ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದರ ಒಳಗೆ ಒಂದು ಹಬೆ ಹೋಗಬಹುದಾದ ಸಣ್ಣ ಮುಚ್ಚಳ ಇಡಬೇಕು. ನಂತರ ಸಣ್ಣ ಉರಿಯಲ್ಲಿ 10 ನಿಮಿಷ ಕಾಯಿಸಿಕೊಂಡ ಬಳಿಕ ಈ ಹಿಟ್ಟನ್ನು ಅದರ ಮೇಲೆ ಇಟ್ಟು ಮುಚ್ಚಳ ಮುಚ್ಚಿ.
ಸುಮಾರು 30 ನಿಮಿಷಗಳ ಕಾಲ ಕಾಯಿಸಿಕೊಳ್ಳಿ. ನಂತರ ಮುಚ್ಚಳ ತೆಗೆದು ಕೇಕ್ ಹೊರಗೆ ಇಟ್ಟು ತಣ್ಣಗಾಗಲು ಬಿಡಬೇಕು. ತಣ್ಣಗಾದ ಬಳಿಕ ಚಾಕುವಿನಿಂದ ನಿಧಾನವಾಗಿ ಬದಿಗಳನ್ನು ತೆಗೆದುಕಂಡು ಕೇಕ್ ಅನ್ನು ಒಂದು ತಟ್ಟಗೆ ಹಾಕಿ. ನಂತರ ನಿಮಗೆ ಹೇಗೆ ಬೇಕೋ ಹಾಗೆ ಕತ್ತರಿಸಿಕೊಳ್ಳಿ.



Click it and Unblock the Notifications
