Latest Updates
-
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು!
ಕೇರಳ ಸ್ಟೈಲ್ನ ಈ ಅಪ್ಪಮ್ ಮಾಡೋದು ಹೇಗೆ? 5 ನಿಮಿಷದಲ್ಲಿ ರೆಡಿ ಮಾಡಬಹುದು.!
ನೀವು ಬೆಳಗ್ಗೆ ತಿಂಡಿಗೆ ನಿಮ್ಮಿಷ್ಟದ ಅಡುಗೆ ಮಾಡಿ ಸವಿಯಲು ಮುಂದಾಗೋದು ಕಾಮನ್. ಏಕಂದ್ರೆ ಬೆಳಗ್ಗೆ ತಿಂಡಿ ಚೆನ್ನಾಗಿದ್ದರೆ ಇಡಿ ದಿನ ನೀವು ಆರಾಮವಾಗಿ ಕೆಲಸ ಮಾಡಿಕೊಂಡಿರುತ್ತೀರಿ. ಹೀಗಾಗಿ ಇಡ್ಲಿ, ದೋಸೆ, ಪೂರಿ, ಚಪಾತಿಯಂತಹ ತಿಂಡಿಗಳನ್ನು ಹೆಚ್ಚಾಗಿ ಮಾಡುತ್ತಾರೆ. ಇನ್ನ ಸ್ಪೆಷಲ್ ಆಗಿ ತಿಂಡಿ ಇಷ್ಟಪಡುವವರು. ಪಲಾವ್, ವಾಂಗಿಬಾತ್, ರೈಸ್ ಬಾತ್, ಪುಳಿಯೋಗರೆ ಹೀಗೆ ಕೆಲವೊಂದು ಮಸಾಲ ಭರಿತ ತಿಂಡಿಗಳ ಸವಿಯಲು ಇಷ್ಟಪಡುತ್ತಾರೆ.
ಆದ್ರೆ ಕೇರಳ ಸ್ಟೈಲ್ನಲ್ಲಿ ಅಲ್ಲಿ ಬಹಳ ಫೇಮಸ್ ಆಗಿರುವ ತಿಂಡಿ ಅಂದ್ರೆ ಅದು ಅಪ್ಪಮ್. ಕೇರಳ ಸ್ಟೈಲ್ನ ಹಲವು ರೀತಿಯ ಖಾದ್ಯಗಳ ನಾವು ಸವಿಯಲು ಇಷ್ಟಪಡುತ್ತೇವೆ. ಕೆಲವೊಂದು ನಮ್ಮ ಪ್ರಾದೇಶಿಕತೆಗೂ ಹತ್ತಿರವಾದ ತಿಂಡಿಯನ್ನು ಅವರು ಮಾಡಿ ಸವಿಯುತ್ತಾರೆ. ಅದರಲ್ಲೀ ಈ ಅಪ್ಪಮ್, ಪಡ್ಡು, ಇಡ್ಲಿ, ದೋಸೆ ಇನ್ನು ಹಲವು ಸೇರಿವೆ.

ದೋಸೆಯ ರೀತಿಯಲ್ಲಿ ಮಾಡುವ ಈ ಅಪ್ಪಮ್ ಬೆಳಗ್ಗೆ ತಿಂಡಿಯ ಜೊತೆಗೆ ಬಹಳ ರುಚಿಕರವಾಗಿರುತ್ತೆ. ಹೀಗಾಗಿ ನಾವಿಂದು ಅಪ್ಪಮ್ ಮಾಡಿ ಅದರ ರುಚಿ ಹೇಗಿದೆ ಎಂಬುದನ್ನು ನಾವಿಂದು ಸವಿದು ನೋಡೋಣ. ಈ ಅಪ್ಪನ್ ದೋಸೆ ರೀತಿಯೇ ರುಚಿ ನಿಡಲಿದೆ. ನೀವು ಕೂಡ ಮನೆಯಲ್ಲಿ ಇದನ್ನು ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.
ಕೇರಳ ಸ್ಟೈಲ್ನ ಅಪ್ಪಮ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಈ ಅಪ್ಪಮ್ ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಕೇರಳ ಸ್ಟೈಲ್ನ ಅಪ್ಪಮ್ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಚಿರೋಟಿ ರವೆ - 1/2 ಕಪ್
- ಮೊಸರು - 1/4 ಕಪ್
- ಸಕ್ಕರೆ - 1/2 ಟೀಸ್ಪೂನ್
- ಈನೋ - 1/4 ಟೀಸ್ಪೂನ್
- ಅಡುಗೆ ಎಣ್ಣೆ
- ರುಚಿಗೆ ಉಪ್ಪು
ಕೇರಳ ಸ್ಟೈಲ್ನ ಅಪ್ಪಮ್ ಮಾಡುವ ವಿಧಾನವೇನು?
ಈಗ ಮಿಕ್ಸಿ ಜಾರ್ಗೆ ರವೆ ಹಾಕಿಕೊಂಡು ಅದಕ್ಕೆ ಮೊಸರು, ಉಪ್ಪು, ಸಕ್ಕರೆ, ಅರ್ಧ ಕಪ್ ನೀರು ಹಾಕಿಕೊಂಡು ರುಬ್ಬಿಕೊಳ್ಳಬೇಕು 2 ನಿಮಿಷದಲ್ಲಿ ನುಣ್ಣಗೆ ಆಗುತ್ತದೆ. ನಂತರ ಒಂದು ಬೌಲ್ಗೆ ಹಾಕಿಕೊಂಡು ಮತ್ತೆ ಈ ಹಿಟ್ಟು ತೆಳುಮಾಡಿಕೊಳ್ಳಬೇಕು. ಅಂದರೆ ಸ್ವಲ್ಪ ನೀರು ಹಾಕಿ ನೀವು ನೀರ್ ದೋಸೆಗೆ ಹಿಟ್ಟು ಮಾಡಿಕೊಳ್ಳುವಂತೆ ಮಾಡಿಕೊಳ್ಳಿ.
ನಂತರ ಇದಕ್ಕೆ ಈನೋ ಹಾಕಿಕೊಳ್ಳಬೇಕು. ಕಾಲು ಸ್ಪೂನ್ ಈನೋ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಇದರಿಂದ ಅಪ್ಪಮ್ ಮೃದುವಾಗಿ ಬರುತ್ತದೆ. ಈಗ ಒಲೆ ಮೇಲೆ ಕವಲಿ ಅಥವಾ ಪಾನ್ ಇಟ್ಟುಕೊಂಡು ಸ್ವಲ್ಪ ಬಿಸಿ ಮಾಡಿಕೊಳ್ಳಿ. ಇದಕ್ಕೆ ಹೆಚ್ಚು ಎಣ್ಣೆ ಹಚ್ಚಿಕೊಳ್ಳುವುದು ಬೇಡ. 2ರಿಂದು ಮೂರು ಹನಿ ಹಾಕಿ ಸ್ವಲ್ಪ ಸವರಿಕೊಂಡರೆ ಸಾಕು. ನಂತರ ಮಧ್ಯದಲ್ಲಿ ಹಿಟ್ಟು ಹಾಕಿ ಹಾಗೆ ನಿಧಾನಕ್ಕೆ ಹರಡಿ ಬಿಡಿ.
2 ರಿಂದ ಮೂರು ನಿಮಿಷಗಳ ಕಾಲ ಬೇಯಿಸಿಕೊಳ್ಳಬೇಕು. ಮೇಲೆ ಮುಚ್ಚಳ ಮುಚ್ಚಿಕೊಂಡು ಬೇಯಿಸಬೇಕು. ನಂತರ ಕಾವಲಿಯಿಂದ ತೆಗೆದರೆ ಅಪ್ಪಮ್ ರೆಡಿಯಗುತ್ತದೆ. ಇದು ಅತ್ಯಂತ ಸುಲಭದ ಹಾಗೆ ರುಚಿಕರ ತಿಂಡಿಯಾಗಿದೆ. ಇದನ್ನು ಸವಿಯಲು ಜೊತೆಗೆ ಒಂದು ಚಟ್ನಿ ಇದ್ದರೆ ನಿಮಗೆ ಅತ್ಯಂತ ರುಚಿ ನೀಡಲಿದೆ. ಹೆಚ್ಚಾಗಿ ತೆಂಗಿನಕಾಯಿ ಚಟ್ನಿ, ಹುರಿಗಡಲೆ, ನೆಲಗಡಲೆ ಚಟ್ನಿ ಇದಕ್ಕೆ ಬೊಂಬಾಟ್ ರುಚಿ ನೀಡಲಿದೆ. ನೀವು ಕೂಡ ಮನೆಯಲ್ಲಿ ಈ ಕೇರಳ ಸ್ಟೈಲ್ನ ಅಪ್ಪಮ್ ಮಾಡಿ ಸವಿದು ಅದರ ರುಚಿ ನೋಡಿ.



Click it and Unblock the Notifications