Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಮಕ್ಕಳ ಬಾಯಲ್ಲಿ ನೀರು ತರಿಸುವ ಕಾಜು ಮಸಾಲ ಬಿಸ್ಕತ್! ಸುಲಭದ ಸ್ನ್ಯಾಕ್ಸ್!
ನೀವು ಮನೆಯಲ್ಲಿ ಸ್ನ್ಯಾಕ್ಸ್ ಸವಿಯಲು ಬಹಳ ಇಷ್ಟಪಡುವ ಮಂದಿ ಆಗಿರಬಹುದು. ಹಾಗೆ ಸಂಜೆ ಸಮಯದಲ್ಲಿ ಟೀ ಕಾಫಿಯ ಜೊತೆಗೆ ಸವಿಯಲು ಯಾವುದಾದರು ಸ್ನ್ಯಾಕ್ಸ್ ಅನ್ನು ನೀವು ಇಷ್ಟಪಡಬಹುದು. ಹೀಗಿರುವಾಗ ಮಸಾಲೆ ತುಂಬಿರುವ ಕಡ್ಲೆಗಳು, ತಿಂಡಿಗಳು ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಹಾಗೆ ಮಸಾಲೆ ಗೋಡಂಬಿ ಅಥವಾ ಬಿಸ್ಕತ್ ರೀತಿಯಲ್ಲಿ ಸಿಗುವ ಗೋಡಂಬಿಯನ್ನು ನೀವು ಸಹ ಸವಿದಿರಬಹುದು,
ಅಂಗಡಿ, ಬೇಕರಿಗಳಲ್ಲಿ ಪ್ಯಾಕ್ ಮಾಡಲಾದ ಈ ತಿಂಡಿಗಳು ಬಹಳ ಸಿಹಿಯಾಗಿರುತ್ತೆ. ಮಕ್ಕಳು ಈ ಸಿಹಿಯ ಗೋಡಂಬಿ ಬಿಸ್ಕತ್ ಸವಿಯೋಕೆ ಇಷ್ಟಪಡುತ್ತಾರೆ. ಹಾಗೆ ಮನೆಯಲ್ಲೂ ಸಹ ಇದನ್ನು ನಾವು ಮಾಡಿ ಸವಿಯಬಹುದು. ನಾವಿಂದು ಮನೆಯಲ್ಲಿ ಮಕ್ಕಳಿಗಾಗಿ ಈ ಗೋಡಂಬಿ ಬಿಸ್ಕತ್ ಮಾಡಿ ಸವಿಯಲು ನೀಡಿ. ಇದನ್ನು ಮಾಡುವ ಕುರಿತಾಗಿ ನಾವಿಂದು ತಿಳಿದುಕೊಳ್ಳೋಣ.

ಈ ಗೋಡಂಬಿ ಅಥವಾ ಕಾಜು ಮಸಾಲೆ ಬಿಸ್ಕತ್ ಮಾಡುವುದು ಬಹಳ ಸುಲಭ, ಹಾಗೆ ಇದು ಸಿಹಿಯಾದ ತಿಂಡಿ ಆಗಿರೋದ್ರಿಂದ ಮನೆ ಮಂದಿಗೆಲ್ಲಾ ಇಷ್ಟವಾಗುತ್ತೆ. ಹಾಗಾದ್ರೆ ನಾವಿಂದು ಈ ಗೋಡಂಬಿ ಮಸಾಲೆ ಬಿಸ್ಕತ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಗೋಡಂಬಿ ಅಥವಾ ಕಾಜು ಮಸಾಲೆ ಬಿಸ್ಕತ್ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
ಮೈದಾ
ಅಜ್ವೈನಾ
ಉಪ್ಪು
ತುಪ್ಪ ಅಥವಾ ಎಣ್ಣೆ
ಸೋಡಾ
ಖಾರದ ಪುಡಿ
ಚಾಟ್ ಮಸಾಲೆ
ಕಾಳು ಮೆಣಸಿನ ಪುಡಿ
ಗೋಡಂಬಿ ಅಥವಾ ಕಾಜು ಮಸಾಲೆ ಬಿಸ್ಕತ್ ಮಾಡುವುದು ಹೇಗೆ?
ಮೊದಲು ಒಂದು ಬೌಲ್ನಲ್ಲಿ 2 ಕಪ್ ಮೈದಾ ಹಿಟ್ಟು ತೆಗೆದುಕೊಂಡು ನಂತರ ಕಾಲು ಸ್ಪೂನ್ ಅಜ್ವೈನ, ಉಪ್ಪು, ಚಿಟಿಕೆ ಅಡುಗೆ ಸೋಡಾ ಹಾಕಿ ಡ್ರೈ ಮಿಕ್ಸ್ ಮಾಡಿ. ನಂತರ ಸ್ವಲ್ಪ ಅಂದರೆ 5 ಸ್ಪೂನ್ ತುಪ್ಪ ಹಾಕಿಕೊಳ್ಳಿ. ನಂತರ ಕೈಯಿಂದ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ತುಪ್ಪ ಚೆನ್ನಾಗಿ ಹಿಡಿಯಬೇಕು. ಈ ಹಿಟ್ಟು ಉಂಡೆ ಕಟ್ಟುವಂತೆ ಹದವಾಗಬೇಕು.
ನಂತರ ಸ್ವಲ್ಪ ಸ್ವಲ್ಪವೇ ನೀರು ಹಾಕಿಕೊಂಡು ಹದ ಮಾಡಿಕೊಳ್ಳಿ. ಹಿಟ್ಟು ಗಟ್ಟಿಯಾಗಿರಲಿ. ಚಪಾತಿ ಹಿಟ್ಟಿಗಿಂತ ಹಟ್ಟಿಯಾದ ಹಿಟ್ಟನ್ನು 15 ನಿಮಿಷ ನೆನೆಯಲು ಬಿಡಿ. ಅನಂತರ ಉಂಡೆ ಕಟ್ಟಿಕೊಂಡು ಚಪಾತಿ ಮಣೆಯಲ್ಲಿ ಲಟ್ಟಿಸಿಕೊಳ್ಳಿ. ಪೂರಿಯ ಗಾತ್ರಕ್ಕೆ ದಪ್ಪವಾಗಿ ಇದನ್ನು ಲಟ್ಟಿಸಿಕೊಳ್ಳಿ. ಅನಂತರ ಇದನ್ನು ಗೋಡಂಬಿ ರೀತಿಯ ಆಕಾರ ಬರಲು ಒಂದು ಉಂಗುರ ರೀತಿಯ ಯಾವುದಾದರು ವಸ್ತು ಬೇಕಾಗುತ್ತದೆ. ಅರ್ಧ ಚಂದ್ರಾಕಾರವಾಗಿ ಹಿಟ್ಟುಗಳನ್ನು ಕತ್ತರಿಸಿಕೊಳ್ಳಬೇಕು.
ನಂತರ ಒಲೆ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿ ಕಾಯಲು ಬಿಡಿ. ನಂತರ ಕಾಜುವಿನಂತೆ ಕತ್ತರಿಸಿಕೊಂಡ ಹಿಟ್ಟನ್ನು ಎಣ್ಣೆಯಲ್ಲಿ ಹಾಕಿ ಕರಿದುಕೊಳ್ಳಿ. ಈಗ ಕಾಳು ಮೆಣಸಿನ ಪುಡಿ, ಚಾಟ್ ಮಾಸಲೆ, ಖಾರದ ಪುಡಿ, ಸಕ್ಕರೆ ಪುಡಿ ತೆಗೆದುಕೊಂಡು ಮಿಕ್ಸ್ ಮಾಡಿ ಒಂದಿ ಬೌಲ್ಗೆ ಹಾಕಿಟ್ಟುಕೊಳ್ಳಿ. ನಂತರ ಈ ಮಸಾಲೆಗೆ ಕರಿದುಕೊಂಡಿರುವ ಕಾಜು ಬಿಸ್ಕತ್ ಅನ್ನು ಹಾಕಿಕೊಂಡು ಚೆನ್ನಾಗಿ ಈ ಎಲ್ಲಾ ಪದಾರ್ಥ ಹಿಡಿಯುವಂತೆ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಸವಿಯಲು ಈ ಕಾಜು ಮಸಾಲೆ ಬಿಸ್ಕತ್ ರೆಡಿಯಾಗುತ್ತದೆ.
ಈ ಕಾಜು ಬಿಸ್ಕತ್ ಮಾಡಲು ಗೋಡಂಬಿಯ ಅವಶ್ಯಕತೆ ಇಲ್ಲ. ಹಾಗೆ ಇದರ ರುಚಿ ನೀವು ಒಮ್ಮೆ ಸವಿದರೆ ಪದೇ ಪದೇ ಮಾಡಿ ಸವಿಯಲು ಮುಂದಾಗುತ್ತೀರಿ. ಹಾಗೆ ಮಕ್ಕಳಿಗೆ ಇದು ಬಹಳ ಇಷ್ಟವಾಗುವ ತಿಂಡಿ. ಸಂಜೆ ಸಮಯದಲ್ಲಿ ಸ್ನ್ಯಾಕ್ಸ್ ಆಗಿಯೂ ಇದನ್ನು ಸವಿಯಬಹುದು.



Click it and Unblock the Notifications
