Latest Updates
-
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು!
ಕೂದಲು ಉದುರುವಿಕೆ ತಡೆಯೋಕೆ ಇಲ್ಲಿದೆ ಕರಿಬೇವಿನ ಚಟ್ನಿ!
ನೀವು ಹೊಸ ರೀತಿಯ ಅಥವಾ ಬಗೆ ಬಗೆಯ ಖಾದ್ಯಗಳು, ಅಥವಾ ಆರೋಗ್ಯದ ದೃಷ್ಟಿಯಲ್ಲಿ ನಿಮಗೆ ಸಹಕಾರಿಯಾಗುವಂತಹ ರೆಸಿಪಿಗಳ ಟ್ರೈ ಮಾಡುವ ಮಂದಿ ಆಗಿದ್ದರೆ ಯಾವಾಗಲು ಹೊಸದನ್ನು ಆಲೋಚಿಸುತ್ತೀರಿ. ಅದ್ರಲ್ಲೂ ಬಾಯಿ ರುಚಿ ಹೆಚ್ಚಿಸುವುದು ಸೇರಿ ಆರೋಗ್ಯಕ್ಕೂ ಉತ್ತಮ ಎನಿಸುವಂತಹ ಖಾದ್ಯಗಳ ಸವಿಯುವುದು ಬಹಳ ಸಂತಸ ನೀಡಬಹುದು.
ಹಾಗೆ ನಾವಿಂದು ಇಂತಹ ರುಚಿಕರ ಹಾಗೆ ಆರೋಗ್ಯಕ್ಕೂ ಉತ್ತಮವಾದ ಕರಿವೇವಿನ ಚಟ್ನಿ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ. ಈ ಕರಿಬೇವಿನ ಚಟ್ನಿ ನಿಮ್ಮ ಆರೋಗ್ಯಕ್ಕೆ ಎಷ್ಟು ಉತ್ತಮ ಎಂಬುದನ್ನು ತಿಳಿದರೆ ನೀವು ಸಹ ಅಚ್ಚರಿ ಪಡುತ್ತೀರಿ. ಕರಿಬೇವು ಆರೋಗ್ಯದ ದೃಷ್ಟಿಯಲ್ಲಿ ಬಹಳ ಉತ್ತಮ. ಹಾಗೆ ಬಹಳ ಪರಿಣಾಮಕಾರಿ ಕೂಡ ಹೌದು.

ಹತ್ತಾರು ಆಯುರ್ವೇದ ಚಿಕಿತ್ಸೆಗಳಲ್ಲೂ ನಾವು ಈ ಕರಿಬೇವಿನ ಬಳಕೆ ಮಾಡುವುದು ನೋಡಬಹುದು. ಹಾಗೆ ಈ ಕರಿಬೇವಿನಿಂದ ಮಾಡುವಂತಹ ಚಟ್ನಿ ರುಚಿಯ ಜೊತೆಗೆ ನಿಮ್ಮ ಆರೋಗ್ಯದ ದೃಷ್ಟಿಯಿಂದ ಬಹಳ ಉತ್ತಮ. ಕರಿಬೇವು ನಿಮ್ಮ ಕೂದಲು ಉದುರುವಿಕೆ, ಶುಗರ್ ನಿರ್ವಹಣೆಗೆ ಬಹಳ ಸಹಕಾರಿಯಾಗಲಿದೆ. ಹೀಗಾಗಿ ನಾವಿಂದು ಈ ಕರಿಬೇವಿನ ಚಟ್ನಿ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ.
ಕರಿಬೇವಿನ ಚಟ್ನಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇಣು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಕರಿಬೇವಿನ ಚಟ್ನಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಕರಿಬೇವು- 2ರಿಂದ 3 ಕಟ್ಗಳು
- ಬೆಳ್ಳುಳ್ಳಿ- 2
- ಹುರಿಗಡಲೆ- ಸ್ವಲ್ಪ
- ಜೀರಿಗೆ
- ಎಳ್ಳು
- ಎಣ್ಣೆ
- ಉಪ್ಪು
- ಒಣ ಕೊಬ್ಬರಿ
- ಸಕ್ಕರೆ
ಕರಿಬೇವಿನ ಚಟ್ನಿ ಮಾಡುವುದು ಹೇಗೆ?
ಕರಿಬೇವನ್ನು ಮೊದಲು ಚೆನ್ನಾಗಿ ತೊಳೆದು ನೀರು ಇಲ್ಲದಂತೆ ನೋಡಿಕೊಳ್ಳಿ. ಹಾಗೆ ಒಂದು ತಟ್ಟೆಯಲ್ಲಿ ಬಿಡಿಸಿಕೊಂಡು ಒಟ್ಟುಕೊಳ್ಳಿ. ಈಗ ಒಂದು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿಕೊಂಡು ಬಳಿಕ ಅದಕ್ಕೆ ಅರ್ಧ ಕಪ್ ಹುರಿಗಡಲೆ ಹಾಕಿಕೊಂಡು ಚೆನ್ನಾಗಿ 1 ನಿಮಿಷ ಫ್ರೈ ಮಾಡಿಕೊಂಡು ತೆಗೆದು ಒಂದು ತಟ್ಟೆಗೆ ಹಾಕಿಟ್ಟುಕೊಳ್ಳಿ.
ನಂತರ ಜಿರಿಗೆ, ಎಳ್ಳು ಹಾಕಿಕೊಂಡು ಮತ್ತೆ ಫ್ರೈ ಮಾಡಿಕೊಂಡು ತೆಗೆದು ಒಂದು ಬೌಲ್ಗೆ ಹಾಕಿಟ್ಟುಕೊಳ್ಳಿ. ಈಗ ಎರಡು ಬೆಳ್ಳುಳ್ಳಿ ಕೂಡ ಈ ಬಾಣಲೆಗೆ ಹಾಕಿಕೊಂಡು ಹುರಿದು ತೆಗೆದಿಟ್ಟುಕೊಳ್ಳಿ. ಮತ್ತೆ ಬಾಣಲೆಗೆ ಮತ್ತೆ ಎಣ್ಣೆ ಹಾಕಿ ಬಿಡಿಸಿಕೊಂಡಿರುವ ಕರಿಬೇವಿನ ಎಲೆಯನ್ನು ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ಒಂದೆರಡು ನಿಮಿಷ ಚೆನ್ನಾಗಿ ಹುರಿದಾಗ ಅದು ಪುಡಿಯಾಗುವಂತೆ ಹದ ಮಾಡಿ. ಈಗ ಮತ್ತೆ ಅದೇ ಬಾಣಲೆಗೆ ಒಣ ಕೊಬ್ಬರಿ ಕೂಡ ಹಾಕಿಕೊಂಡು 1 ನಿಮಿಷ ಹುರಿದುಕೊಂಡು ತೆಗೆದಿಟ್ಟುಕೊಳ್ಳಿ.
ಈಗ ಫ್ರೈ ಮಾಡಿಕೊಂಡ ಎಲ್ಲಾ ಪದಾರ್ಥಗಳು ತಣ್ಣಗಾಗಲು ಬಿಟ್ಟು ಬಳಿಕ ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಹಾಕಿ ರುಬ್ಬಿಕೊಳ್ಳಿ. ಇದು ಸ್ವಲ್ಪ ಮೆತ್ತನೆಯ ಪುಡಿ ಬರುತ್ತದೆ. ಅದನ್ನು ಪ್ಲೇಟ್ಗೆ ಹಾಕಿ ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ಸಕ್ಕರೆ (ಖಾರ ಬೇಕಿದ್ದರೆ ಖಾರದ ಪುಡಿ ಸಹ ಹಾಕಿಕೊಳ್ಳಿ) ಇಷ್ಟಾದರೆ ನಿಮ್ಮ ಮುಂದೆ ಕರಿಬೇವಿನ ಚಟ್ನಿ ರೆಡಿಯಾಗುತ್ತದೆ. ಒಂದು ಬಾಕ್ಸ್ಗೆ ಹಾಕಿಟ್ಟರೆ 1 ತಿಂಗಳು ಇಡಬಹುದು.
ಈ ಚಟ್ನಿಯನ್ನು ನೀವು ಊಟದ ಜೊತೆಗೆ ತಿಂಡಿಯ ಜೊತೆಗೆ ಸವಿಯಲು ನೀಡಬಹುದು. ರುಚಿಗೂ ಸೈ ಹಾಗೆ ಆರೋಗ್ಯಕ್ಕೂ ಕೂಡ ಇದು ಬಹಳ ಉತ್ತಮವಾಗಿದೆ. ಹೀಗಾಗಿ ನೀವು ಸಹ ಇದನ್ನು ಮನೆಯಲ್ಲಿ ಟ್ರೈ ಮಾಡಿ ನೋಡಿ.



Click it and Unblock the Notifications
