Latest Updates
-
ಪರಿಸರ ಸ್ನೇಹಿ ಡೇಟಿಂಗ್: ₹300 ರೊಳಗೆ ನಿಮ್ಮ ಪ್ರೀತಿಯನ್ನು ಹಸಿರಾಗಿಸುವ 12 ಅದ್ಭುತ ಐಡಿಯಾಗಳು! -
ಬೆಂಗಳೂರು ಮಳೆ: ಮನೆಯಲ್ಲಿ ನೀರು ನುಗ್ಗಿದೆಯೇ? ತೇವ ಮತ್ತು ದುರ್ವಾಸನೆ ಹೋಗಲಾಡಿಸಲು ಇಲ್ಲಿವೆ ಸರಳ ಟಿಪ್ಸ್! -
ಡೆಂಗ್ಯೂ ಆತಂಕ: ಮಧುಮೇಹಿಗಳು ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿದೆ ವಿಶೇಷ ಆಹಾರ ಪ್ಲಾನ್ -
iPhone 18 ಸೇಲ್: ನಿಮ್ಮ ಹೊಸ ಫೋನ್ ಪಡೆಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ದೆಹಲಿ-ಎನ್ಸಿಆರ್ ಮಳೆ ಎಚ್ಚರಿಕೆ: ಹೊರಗೆ ಹೋಗುವ ಬದಲು ಮನೆಯಲ್ಲೇ ಮಾಡಿ 12 ನಿಮಿಷದ ವರ್ಕೌಟ್! -
ಸೆಪ್ಟೆಂಬರ್ 15ರ ಲವ್ ರಾಶಿಫಲ: ನಿಮ್ಮ ಸಂಗಾತಿಯ ಮನ ಗೆಲ್ಲಲು ಈ 2 ನಿಮಿಷದ ಸೂತ್ರ ಬಳಸಿ! -
ಮಳೆಗಾಲದ ಎಚ್ಚರಿಕೆ: ಮುಂಬೈ-ಪುಣೆಯಲ್ಲಿ ಮನೆ ಸೋರಿಕೆ ತಡೆಯಲು 30 ನಿಮಿಷದ ಸಿಂಪಲ್ ಟಿಪ್ಸ್ -
ಅಡುಗೆಮನೆ ಬಜೆಟ್ ಏರಿಕೆ: ₹30 ಕ್ಕಿಂತ ಕಡಿಮೆ ವೆಚ್ಚದಲ್ಲಿ ಆರೋಗ್ಯಕರ ಪ್ರೋಟೀನ್ ಆಹಾರ ಪಡೆಯುವುದು ಹೇಗೆ? -
iOS 27 ಅಪ್ಡೇಟ್ ನಂತರ ಫೋನ್ ಬ್ಯಾಟರಿ ಬೇಗ ಖಾಲಿಯಾಗುತ್ತಿದೆಯೇ? ಗಾಬರಿಯಾಗಬೇಡಿ, ಈ ಟಿಪ್ಸ್ ಫಾಲೋ ಮಾಡಿ! -
ಗಣೇಶ ವಿಸರ್ಜನೆ: ಮೂರ್ತಿ ಹೊರುವಾಗ ಬೆನ್ನು ನೋವು ಕಾಡದಿರಲು ಈ ಸರಳ ಟಿಪ್ಸ್ ಪಾಲಿಸಿ
ಕರಾವಳಿ ಸ್ಟೈಲ್‌ನ ರುಚಿ ರುಚಿ ಪುಳಿಯೋಗರೆ ಮನೆಯಲ್ಲೇ ಮಾಡಿ! ಮಾಡೋದು ಹೇಗೆ?
ಬೆಳಗ್ಗೆಯ ತಿಂಡಿಗೆ ನೀವು ವಿವಿಧ ಬಗೆ ಬಗೆಯ ತಿಂಡಿಗಳ ಮಾಡಿ ಸವಿಯುವುದು ಸಾಮಾನ್ಯ. ಅದ್ರಲ್ಲೂ ರೈಸ್‌ನಿಂದ ಮಾಡುವಂತಹ ಹಲವು ಬಗೆಯ ತಿಂಡಿಗಳೆಂದರೆ ನಿಮಗೂ ಇಷ್ಟವಾಗುತ್ತೆ. ಇನ್ನು ಹಲವು ಬಗೆಯ ತಿಂಡಿಗಳಲ್ಲಿ ಹೋಟೆಲ್ ರುಚಿಯ ಪುಳಿಯೋಗರೆ ಅಂದ್ರೆ ಬಹುತೇಕರ ಬಾಯಲ್ಲಿ ನೀರು ಬರಲಿದೆ. ಹಾಗೆ ಪುಳಿಯೋಗರೆ ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ.
ಬ್ರೇಕ್ ಫಾಸ್ಟ್‌ಗೆ ಪುಳಿಯೋಗರೆ ಸವಿಯುವುದು ಬಹಳಷ್ಟು ಮಂದಿಗೆ ಇಷ್ಟವಾಗುತ್ತೆ. ಪುಳಿಯೋಗರೆಯನ್ನು ಕೂಡ ಹಲವು ರೀತಿಯಲ್ಲಿ ಮಾಡಿ ಸವಿಯುವುದು ನೋಡಬಹುದು. ಹಾಗೆ ಹುಡಿ ಹುಡಿಯಾದ ಪುಳಿಯೋಗರೆ ಸವಿಯೋದು ಎಲ್ಲರಿಗೂ ಇಷ್ಟವಾಗುತ್ತೆ. ಪುಳಿಯೋಗೆಯ ಗೊಜ್ಜು ಮನೆಯಲ್ಲಿ ಮಾಡಿಕೊಂಡರೆ ಸುಲಭವಾಗಿ ಕಡಿಮೆ ಸಮಯದಲ್ಲಿ ಪುಳಿಯೋಗರೆ ಮಾಡಿ ಸವಿಯಬಹುದು.

ಹಾಗೆ ಹೋಟೆಲ್‌ಗಳಲ್ಲಿ ಸಿಗುವಂತಗ ರುಚಿ ರುಚಿಯ ಪುಳಿಯೋಗರೆ ಮನೆಯಲ್ಲಿ ಮಾಡಿದರೆ ಎಲ್ಲರಿಗೂ ಇಷ್ಟವಾಗುತ್ತೆ. ಹಾಗಾದ್ರೆ ನಾವಿಂದು ಕರಾವಳ ಭಾಗದಲ್ಲಿ ಮಾಡುವಂತಹ ರುಚಿ ರುಚಿಯ ಪುಳಿಯೋಗರೆ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ.
ನೀವು ಕರಾವಳಿ ಹೋಟೆಲ್‌ಗಳಲ್ಲೂ ಕೂಡ ಈ ರೀತಿಯ ಪುಳಿಯೋಗರೆ ರುಚಿ ನೋಡಿಬಹುದು. ಈ ರುಚಿಯಲ್ಲಿ ಮನೆಯಲ್ಲೇ ನಾವಿಂದು ಪುಳಿಯೋಗರೆ ಮಾಡೋದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ.
ಪುಳಿಯೋಗರೆ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ರೈಸ್
- ಪುಳಿಯೋಗರೆ ಪೌಡರ್
- ಉದ್ದಿನ ಬೇಳೆ
- ಕಡಲೆ ಬೇಳೆ
- ಸಾಸಿವೆ
- ಶೇಂಗಾ
- ತುಪ್ಪ
- ಎಣ್ಣೆ
- ಉಪ್ಪು
- ಕರಿಬೇವು
- ಕೊತ್ತಂಬರಿ ಸೊಪ್ಪು
- ಒಣ ಮೆಣಸು
- ಹುಣಸೆ ಹುಳಿ
- ತೆಂಗಿನಕಾಯಿ ತುರಿ
ಪುಳಿಯೋಗರೆ ಮಾಡುವ ವಿಧಾನವೇನು?
ಮೊದಲು ಒಂದು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ತುಪ್ಪ ಹಾಗೂ ಎಣ್ಣೆಯನ್ನು ಹಾಕಿಕೊಂಡು ಶೇಂಗಾ ಹಾಕಿ ಹುರಿದುಕೊಳ್ಳಬೇಕು. ಚೆನ್ನಾಗಿ ಹುರಿದುಕೊಂಡು ಬಳಿಕ ತೆಗೆದು ಬದಿಗಿಟ್ಟುಕೊಳ್ಳಿ. ಈಗ ಅದೇ ಬಾಣಲೆಗೆ ಕಡಲೆ ಬೇಳೆ, ಉದ್ದಿನ ಬೇಳೆ, ಸಾಸಿವೆ ಹಾಕಿ ಹುರಿದುಕೊಳ್ಳಿ. 2 ನಿಮಿಷದ ಬಳಿಕ ಕರಿಬೇವು, ಒಣ ಮೆಣಸು ಕೂಡ ಹಾಕಿ ಫ್ರೈ ಮಾಡಿಕೊಳ್ಳಿ.
ಈಗ ಅರ್ಧ ನಿಂಬೆ ಗಾತ್ರದ ಹುಣಸೆ ಹುಳಿಯನ್ನು ನೀರಿನಲ್ಲಿ ನೆನೆಸಿ ಅದರ ನೀರನ್ನು ಇದಕ್ಕೆ ಹಾಕಿಕೊಳ್ಳಬೇಕು. ನಂತರ ಚೆನ್ನಾಗಿ ಮಿಕ್ಸ್ ಮಾಡಿ 2 ನಿಮಿಷ ಕುದಿಯಲು ಬಿಡಿ. ನಂತರ ಇದಕ್ಕೆ ಯಾವುದಾದರು ಪುಳಿಯೋಗರೆ ಪೌಡರ್ ಹಾಕಿಕೊಳ್ಳಿ. ಬೇಕಿದ್ದರೆ ಸ್ವಲ್ಪ ಉಪ್ಪು ಸಹ ಹಾಕಿಕೊಂಡು ಮಿಕ್ಸ್ ಮಾಡಿ. ಪುಳಿಯೋಗರೆ ಪೌಡರ್‌ಗೆ ಉಪ್ಪು ಕೂಡ ಹಾಕಿರುತ್ತಾರೆ, ಹೀಗಾಗಿ ರುಚಿ ನೋಡಿ ಹಾಕಿಕೊಳ್ಳಿ.
ಈಗ ಕತ್ತರಿಸಿಕೊಂಡಿರುವ ಕೊತ್ತಂಬರಿ, ಹಾಗೆ ಮೊದಲು ಹುರಿದುಕೊಂಡಿದ್ದ ಕಡಲೆ ಬೀಜವನ್ನು ಸಹ ಹಾಕಿಕೊಂಡು ಚೆನ್ನಾಗಿ ಹುರಿದುಕೊಳ್ಳಲು ಮುಂದಾಗಿ. 2 ನಿಮಿಷ ಬಿಟ್ಟು ಒಲೆ ಉರಿಯನ್ನು ಸಣ್ಣಗೆ ಇಟ್ಟುಕೊಳ್ಳಿ. ಅನಂತರ ಈ ಬಾಣಲೆಗೆ ಮೊದಲೇ ಮಾಡಿಕೊಂಡಿರುವ ಹುಡಿ ಹುಡಿಯಾದ ಅನ್ನವನ್ನು ಇದಕ್ಕೆ ಹಾಕಿ ಮಿಕ್ಸ್ ಮಾಡಬೇಕು. ಈ ಗೊಜ್ಜು ಚೆನ್ನಾಗಿ ಅನ್ನಕ್ಕೆ ಹಿಡಿಯುವಂತೆ ಕಲಸಿಕೊಳ್ಳಬೇಕು. ಕೊನೆಯಲ್ಲಿ ಬೇಕಿದ್ದರೆ ತೆಂಗಿನಕಾಯಿ ತುರಿಯನ್ನು ಹಾಕಿ ಮಿಕ್ಸ್ ಮಾಡಬಹುದು. ಇಷ್ಟಾದರೆ ನಿಮ್ಮ ಮುಂದೆ ಕರಾವಳಿ ರುಚಿಯ ಪುಳಿಯೋಗರೆ ರೆಡಿಯಾಗುತ್ತದೆ.
ನೀವು ಕೂಡ ಈ ರೀತಿ ಹೋಟೆಲ್ ರುಚಿಯಲ್ಲಿ ಪುಳಿಯೋಗರೆ ಮಾಡಿ ನೋಡಿ. ಬೆಳಗ್ಗೆ ತಿಂಡಿಗೆ ಹಾಗೆ ಮಧ್ಯಾಹ್ನದ ಬಾಕ್ಸ್‌ಗೂ ಕೂಡ ಇದು ಅದ್ಭುತ ರುಚಿ ನೀಡಲಿದೆ.



Click it and Unblock the Notifications
