Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಈ ಕಜ್ಜಾಯ ನೀವು ತಿಂಗಳಗಟ್ಟಲೆ ಇಟ್ಟರೂ ಹಾಳಾಗಲ್ಲ: ದೀಪಾವಳಿಗೆ ಸುಲಭ ರೆಸಿಪಿ
ದೀಪಾವಳಿ ಹತ್ರ ಬರ್ತಾ ಇದೆ, ದೀಪಾವಳಿ ಅಂದರೆ ಬಗೆಬಗೆಯ ತಿಂಡಿ ತಿನಿಸು ಮಾಡುತ್ತೇವೆ, ಅದರಲ್ಲೊಂದು ಕಜ್ಜಾಯ, ಇಲ್ಲಿ ಮಾಡಿ ತುಂಬಾ ದಿನ ಇಡಬಹುದಾದ ಕಜ್ಜಾಯ ರೆಸಿಪಿ ನೀಡಿದ್ದೇವೆ. ಈ ಕಜ್ಜಾಯನೀವು ಈಗಲೇ ಬೇಕಾದರೆ ಮಾಡಿಡಬಹುದು, ಹಬ್ಬದ ದಿನಗಳಲ್ಲಿ ಕೆಲಸ ಅಧಿಕವಿರುತ್ತದೆ, ಈ ರೀತಿ ಕೆಲವೊಂದು ತಿನಿಸು ಮೊದಲೇ ಮಾಡಿಟ್ಟರೆ ಒಳ್ಳೆಯದು. ಬನ್ನಿ ಈ ಕಜ್ಜಾಯ ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಗ್ರಿ
2 ಕಪ್ ಅಕ್ಕಿ
ಒಂದೂವರೆ ಕಪ್ ಬೆಲ್ಲ
2 ಚಮಚ ಗಸೆಗಸೆ
2 ಚಮಚ ಬಿಳಿ ಎಳ್ಳು
ತುಪ್ಪ 3-4 ಚಮಚ
ಅಕ್ಕಿ ಪುಡಿ ರೆಡಿ ಮಾಡಿ
2 ಕಪ್ ಬೆಳ್ತಕ್ಕಿಯನ್ನು ರಾತ್ರಿ ನೆನೆ ಹಾಕಿ, 10-12 ಗಂಟೆ ನೆನೆ ಹಾಕಿದರೆ
ಒಳ್ಳೆಯದು.
ನಂತರ ನೀರು ಸೋಸಿ, ಒಂದು ದೊಡ್ಡ ಬಟ್ಟೆ ಹರಡಿ ಅಕ್ಕಿಯನ್ನು ಅದರ ಮೇಲೆ ಒಣಗಲು
ಹರಡಿ
ಅಕ್ಕಿ ತುಂಬಾ ಒಣಗಬಾರದು, 10-15 ನಮಿಷ ಹರಡಿದರೆ ಸಾಕು, ಅದರ ನೀರಿನಂಶ ಸಂಪೂರ್ಣ
ಹೋಗಬೇಕು
ಈಗ ಅಕ್ಕಿಯನ್ನು ಮಿಕ್ಸಿ ಜಾರ್ಗೆ ಹಾಕಿ ನುಣ್ಣನೆ ರುಬ್ಬಿ.
ಹಿಟ್ಟು ತರಿತರಿ ಇರಬಾರದು ನುಣ್ಣನೆ ಇರಬೇಕು, ತರಿ ತರಿ ಅಕ್ಕಿ ಕಾಳು ಇದ್ದರೆ
ಅದನ್ನು ಜರಡಿ ಮಾಡಿ, ನಮ್ಮ ಕಡೆ ಹೊಂದ್ರಿ ಮಾಡುವುದು ಅಂತಾರೆ, ಆವಾಗ ನಿಮಗೆ
ನುಣ್ಣನೆಯ ಪುಡಿ ಸಿಗುತ್ತೆ, ಕಜ್ಜಾಯ ಮಾಡಲು ಪುಡಿ ನುಣ್ಣನೆ ಇರಬೇಕು.
ಸ್ಟೆಪ್ 2
ಒಂದೂವರೆ ಕಪ್ ಬೆಲ್ಲವನ್ನು ಪುಡಿ ಮಾಡಿ
ಸ್ಟೆಪ್ 3
ಈಗ ನೀವು ಸ್ವಲ್ಪ ಅಕ್ಕಿ ಹಿಟ್ಟು, ಸ್ವಲ್ಪ ಬೆಲ್ಲದ ಪುಡಿ ಹಾಕಿ ಮಿಕ್ಸಿಯಲ್ಲಿ
ರುಬ್ಬಿ
ನೀವು ಅಕ್ಕಿ ಮತ್ತು ಬೆಲ್ಲ ಜೊತೆಯಾಗಿ ರುಬ್ಬಿದರೆ ಮಿಶ್ರಣ ಪೇಸ್ಟ್ ರೀತಿ
ಬರುತ್ತದೆ.
ಸ್ಟೆಪ್ 4
ಸ್ವಲ್ಪ ಗಸೆ ಹಾಗೂ ಬಿಳಿ ಎಳ್ಳನ್ನು ರೋಸ್ಟ್ ಮಾಡಿ, ಅದನ್ನು ಮಿಶ್ರಣ ಜೊತೆ
ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ
ಕೈಯಿಂದಲೂ ಮಿಕ್ಸ್ ಮಾಡಬಹುದು ಅಥವಾ ಸ್ಪೂನ್ನಿಂದ ಮಿಕ್ಸ್ ಮಾಡಬಹುದು.
ಬಳಿಕ ಆ ಮಿಶ್ರಣವನ್ನು ಒಂದು ಡಬ್ಬದಲ್ಲಿ ಹಾಕಿ ಅದರಲ್ಲಿ 2 ಚಮಚ ತುಪ್ಪ ಹಾಕಿ ಅದನ್ನು ಮುಚ್ಚಿಡಿ, ಈ ಮಿಶ್ರಣವನ್ನು ನೀವು ಒಂದು ದಿನವಿಡಿ.
ಸ್ಟೆಪ್ 5
ಮಾರನೇಯ ದಿನ ಆ ಹಿಟ್ಟನ್ನು ಬೌಲ್ಗೆ ಹಾಕಿ ಮತ್ತೊಮ್ಮೆ ಕೈಯಿಂದ ಚೆನ್ನಾಗಿ
ಮಿಕ್ಸ್ ಮಾಡಿ, ಬೇಕಿದ್ದರೆ ಮತ್ತೆ 1 ಚಮಚ ತುಪ್ಪ ಸೇರಿಸಿ
ಈಗ ಅದರಿಂದ ಚಿಕ್ಕ-ಚಿಕ್ಕ ಉಂಡೆ ಕಟ್ಟಿ
ಸ್ಟೆಪ್ 6
ಉಂಡೆಯನ್ನು ಪ್ಲಾಸ್ಟಿಕ್ನಲ್ಲಿ ಮೆಲ್ಲನೆ ತಟ್ಟಿ, ನೀವು ಉಂಡೆ ಇಟ್ಟು ಮತ್ತೊಂದು
ಪ್ಲಾಸ್ಟಿಕ್ ಅದರ ಮೇಲೆ ಇಟ್ಟು ಒಂದು ಪ್ಲೇಟ್ ತೆಗೆದು ಮೆಲ್ಲನೆ ಪ್ರೆಸ್
ಮಾಡಿದರೆ ರೌಂಡ್ ಶೇಪ್ಗೆ ಬರುತ್ತದೆ.
ಸ್ಟೆಪ್ 7
ಈಗ ನೀವು ಎಣ್ಣೆಯನ್ನು ಕಾಯಿಸಿ, ಆ ಎಣ್ಣೆಗೆ ತಟ್ಟಿದ ಹಿಟ್ಟು ಹಾಕಿ, ಹಿಟ್ಟು
ಎಣ್ಣೆಯೊಳಗೆ ಮುಳುಗುವಷ್ಟು ಎಣ್ಣೆ ಇರಲಿ, ನಂತರ ಮಗುಚಿ ಹಾಕಿ
ಪೂರಿ ರೀತಿ ಉಬ್ಬಿ ಬರುತ್ತದೆ, ಕಜ್ಜಾಯ ಕಂದು ಬಣ್ಣಕ್ಕೆ ಬರುವಾಗ ತೆಗೆಯಿರಿ, ಈ
ರೀತಿ ಒಂದೊಂದೇ ಕಜ್ಜಾಯ ಮಾಡಿ ಡಬ್ಬದಲ್ಲಿ ಹಾಕಿಟ್ಟರೆ ಹಬ್ಬದ ಸಮಯದಲ್ಲಿ
ಸವಿಯಬಹುದು.
ಬರಿ ಹಬ್ಬದ ಸಮಯದಲ್ಲಿ ಮಾತ್ರವಲ್ಲ ಇತರ ಸಮಯದಲ್ಲಿಯೂ ಮಾಡಿಟ್ಟು ಸವಿಯಬಹುದು, ಅಲ್ಲದೆ ಈ ಕಜ್ಜಾಯ ಎಣ್ಣೆ ಕೂಡ ತುಂಬಾ ಹೀರಿಕೊಳ್ಳುವುದಿಲ್ಲ.



Click it and Unblock the Notifications
