Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಹಬ್ಬದೂಟದ ಮಜಾ ಹೆಚ್ಚಿಸುತ್ತೆ ಬಿಸಿ ಕಜ್ಜಾಯ..! ಮಾಡೋದು ತುಂಬಾ ಸಿಂಪಲ್..!
ಹಬ್ಬಗಳು ಬರುತ್ತಿವೆ ಅಂದ್ರೆ ಅಲ್ಲಿ ಯಾವ ಸಿಹಿ ತಿಂಡಿ ಮಾಡೋದು ಅನ್ನೋದೆ ಯೋಚನೆ ಆಗಿರುತ್ತೆ. ಯಾಕೆಂದ್ರೆ ನಮ್ಮ ಮುಂದೆ ನೂರಾರು ತಿಂಡಿಯ ಪ್ರಕಾರಗಳು ಬಂದು ಹೋಗುತ್ತವೆ. ಹೀಗಾಗಿ ಯಾವ ತಿಂಡಿ ಮಾಡಿದರೆ ಉತ್ತಮ ಎಂಬುದೇ ಯಾವಾಗಲು ಕಾಡುವ ಗೊಂದಲ. ಆದ್ರೆ ನೀವು ಹಬ್ಬಕ್ಕೆ ಸಿಂಪಲ್ ಆಗಿರುವ ರುಚಿಕರ ತಿಂಡಿ ಮಾಡಲು ಮುಂದಾಗಿದ್ದರೆ ನಿಮಗೆ ಕಜ್ಜಾಯ ಉತ್ತಮ ಆಯ್ಕೆ ಆಗಿರಬಹುದು.
ಕಜ್ಜಾಯ ಕರ್ನಾಟಕದ ಅತಿ ಪ್ರಸಿದ್ಧ ಸಿಹಿ ತಿನಿಸು. ಎಣ್ಣೆಯಲ್ಲಿ ಕರಿದು ಮಾಡುವ ಈ ಕಜ್ಜಾಯ ಎಂದರೆ ಎಲ್ಲರಿಗೂ ಇಷ್ಟ. ಹಬ್ಬ ಇನ್ನಿತರ ವಿಶೇಷ ಸಂದರ್ಭಗಳಲ್ಲಿ ತಯಾರಿಸುವ ಈ ಕಜ್ಜಾಯದ ಪ್ರಸ್ತಾಪವನ್ನು ಹಾಡು, ಗಾದೆಯಲ್ಲೂ ಕಾಣಬಹುದು. ಕಜ್ಜಾಯ ಮಾಡಿ ಗಾಳಿಯಾಡದ ಡಬ್ಬದಲ್ಲಿ ಮುಚ್ಚಿಟ್ಟರೆ ವಾರವಿಡೀ ಇದರ ರುಚಿಯನ್ನು ಸವಿಯಬಹುದು.

ಇನ್ನು ಯುಗಾದಿಗೆ ವಿಶೇಷವಾಗಿ ಕಜ್ಜಾಯ ಮಾಡಿ ಸವಿಯಬಹುದು. ಕೆಲವೇ ವಸ್ತುಗಳನ್ನು ಬಳಸಿ ಕಜ್ಜಾಯ ಮಾಡಿ ಸವಿದರೆ ಈ ರುಚಿಯನ್ನು ನೀವು ಬಹಳ ಕಾಲ ನೆನಪಿನಲ್ಲಿಟ್ಟುಕೊಳ್ಳುತ್ತೀರಿ. ಇತ್ತೀಚಿಗೆ ಮಾರುಕಟ್ಟೆಯಲ್ಲೂ ಕಜ್ಜಾಯಗಳು ಸಿಗುತ್ತವೆ. ಬಹುಪಾಲು ಮಂದಿ ಮಾರುಕಟ್ಟೆಯಲ್ಲಿ ಸಿಗುವ ಕಜ್ಜಾಯ ತಂದು ಸವಿಯುತ್ತಾರೆ, ಇಲ್ಲವೆ ಪೂಜೆ, ನೈವೇದ್ಯಕ್ಕೆ ಬಳಸುತ್ತಾರೆ. ಆದರೆ ಇದನ್ನು ಮನೆಯಲ್ಲಿಯೇ ಅತ್ಯಂತ ಕಡಿಮೆ ಸಮಯದಲ್ಲಿ ಮಾಡಬಹುದು.
ಹಾಗಾದ್ರೆ ನಾವಿಂದು ಮನೆಯಲ್ಲಿ ಕಜ್ಜಾಯ ಮಾಡಲು ಬೇಕಾಗುವ ಪದಾರ್ಥಗಳೇನು? ಯಾವ ಪಾಕ ವಿಧಾನ ಬಳಸಿ ಕಜ್ಜಾಯ ಮಾಡಬಹುದು. ಇದನ್ನು ಮಾಡಲು ಎಷ್ಟು ಸಮಯ ಹಿಡಿಯುತ್ತದೆ ಎಂಬ ಕುರಿತು ತಿಳಿದುಕೊಳ್ಳೋಣ.
ಗೋಧಿ ಹಿಟ್ಟಿನ ಕಜ್ಜಾಯ ಮಾಡಲು ಬೇಕಾಗುವ ಪದಾರ್ಥಗಳೇನು ?
- ಗೋಧಿ ಹಿಟ್ಟು - 1/2 ಕಪ್
- ಅಕ್ಕಿ ಹಿಟ್ಟು - 1/2 ಕಪ್
- ಬೆಲ್ಲ - 1 ಕಪ್
- ಬಿಳಿ ಎಳ್ಳು - 1 ಟೀಸ್ಪೂನ್
- ಏಲಕ್ಕಿ ಪುಡಿ- 1/4 ಟೀಸ್ಪೂನ್
- ತುಪ್ಪ-2 tbsp
- ಉಪ್ಪು
- ಅಡುಗೆ ಎಣ್ಣೆ
ಗೋಧಿ ಹಿಟ್ಟಿನ ಕಜ್ಜಾಯ ಮಾಡೋದು ಹೇಗೆ?
ಮೊದಲು ಒಂದು ಪಾತ್ರೆ ಇಟ್ಟು ಅದಕ್ಕೆ ಪುಡಿ ಮಾಡಿರುವ ಬೆಲ್ಲ ಹಾಕಿ ಒಂದು ಕಪ್ ನೀರು ಹಾಕಿ ಕರಗಿಸಿಕೊಳ್ಳಿ. ಬಳಿಕ ಇನ್ನೊಂದು ಪಾತ್ರೆಗೆ ಸೋಸಿಕೊಳ್ಳಿ. ಇದನ್ನು 3 ನಿಮಿಷ ಕಾಯಿಸಿಕೊಳ್ಳಿ. ಇದನ್ನು ಬೆಲ್ಲದ ಪಾಕ ಮಾಡಬೇಡಿ, ಸ್ವಲ್ಪ ಅಂಟು ಅಂಟು ಆದರೆ ಸಾಕು. 2 ರಿಂದ 3 ನಿಮಿಷ ಕಾಯಿಸಿದರೆ ಸಾಕು.
ಬಳಿಕ ಇದಕ್ಕೆ ಅರ್ಧ ಕಪ್ ಗೋಧಿ ಹಾಗೂ ಅಕ್ಕಿ ಹಿಟ್ಟು ಹಾಕಿ ಮಿಶ್ರಣ ಮಾಡಿ ಬಳಿಕ ಉಪ್ಪು, ಏಲಕ್ಕಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ, ಉರಿಯನ್ನು ಮದ್ಯಮ ಕ್ರಮದಲ್ಲಿ ಇಟ್ಟು ಕಾಯಿಸಿ. ಹಿಟ್ಟು ಗಂಟು ಆಗದಂತೆ ಮಾಡಿಕೊಳ್ಳಬೇಕು. ಹಿಟ್ಟು ಬೆಣ್ಣೆಯಷ್ಟು ನುಣುಪಾಗಬೇಕು. ಬಳಿಕ ಇದಕ್ಕೆ ಒಂದು ಸ್ಪೂನ್ ತುಪ್ಪ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
ನಂತರ 5 ನಿಮಿಷ ತಣ್ಣಗಾಗಲು ಆ ಹಿಟ್ಟನ್ನು ಬಿಡಿ. ಬಳಿಕ ಪ್ಲಾಸ್ಟಿಕ್ ಅಥವಾ ಬಾಲೆಎಳೆ ತೆಗೆದುಕೊಂಡು ಅದಕ್ಕೆ ಎಣ್ಣೆ ಹಚ್ಚಿಕೊಳ್ಳಿ, ನಿಮ್ಮ ಕೈಗೂ ಎಣ್ಣೆ ಹಚ್ಚಿಕೊಂಡು ಹಿಟ್ಟನ್ನು ಸಣ್ಣ ಗೋಲಿ ಅಥವಾ ನಲ್ಲಿಕಾಯಿ ಆಕಾರದಲ್ಲಿ ತೆಗೆದುಕೊಂಡು ಚಪಾತಿಯಂತೆ ದಪ್ಪವಾಗಿ ಲಟ್ಟಿಸಿಕೊಳ್ಳಿ.
ಇನ್ನೊಂದು ಕಡೆ ಪಾತ್ರೆಯಲ್ಲಿ ಎಣ್ಣೆ ಕಾಯಲು ಬಿಡಿ. ಎಣ್ಣೆ ಕಾದ ಬಳಿಕ ಈ ಕಜ್ಜಾಯವನ್ನು ಎಣ್ಣೆಗೆ ಬಿಡಿ. ಅಂಗೈ ಅಗಲದ ಕಜ್ಜಾಯ ಮಾಡಿ ಎಣ್ಣೆಗೆ ಬಿಟ್ಟು ಎರಡೂ ಕಡೆ ಕಾಯಿಸಿಕೊಳ್ಳಿ. ಕಜ್ಜಾಯ ಚೆನ್ನಾಗಿ ಕಾಯಬೇಕು, ಗೋಲ್ಡನ್ ಬ್ರೌನ್ ಕಲರ್ ಬಂದರೆ ಸಾಕು. ನಂತರ ಚೆನ್ನಾಗಿ ಎಣ್ಣೆ ಒಣಗಲು ಬಿಡಿ. ಇಷ್ಟಾದರೆ ನಿಮ್ಮ ಮುಂದೆ ಕಜ್ಜಾಯ ರೆಡಿ. ಇದನ್ನು ಒಂದು ಡಬ್ಬದಲ್ಲಿ ಹಾಕಿ ಇಟ್ಟರೆ ಎಷ್ಟು ದಿನವಾದರು ಬಿಟ್ಟು ರುಚಿ ರುಚಿಯಾಗಿ ಸವಿಯಬಹುದು.



Click it and Unblock the Notifications
