Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
10 ನಿಮಿಷದಲ್ಲಿ ಕಡ್ಲೆಪುರಿ ಉಂಡೆ ಮಾಡಿ: ಬಹಳ ಸುಲಭದ ಸಿಹಿ ತಿಂಡಿ ಇದು..!
ನಾವು ಚಿಕ್ಕವರಿರುವಾಗ ಕಡ್ಲೆಪುರಿ ಸವಿದಿರುವ ನೆನೆಪು ನಿಮಗೂ ಇರಬಹುದು. ಏಕೆಂದರೆ ಕಡಿಮೆ ದುಡ್ಡಿನಲ್ಲಿ ಹೆಚ್ಚು ರುಚಿಕರವಾಗಿ ಸಿಗುತ್ತಿದ್ದ ತಿಂಡಿ ಅಂದ್ರೆ ಅದು ಕಡ್ಲೆ ಪುರಿ. ಬೇಕರಿ, ಅಂಗಡಿಗಳಲ್ಲಿ ಈ ಮಂಡಕ್ಕಿಯಿಂದ ಮಾಡಿರುವ ಉಂಡೆಯನ್ನು ನೋಡಿದ್ರೆ ಬಾಯಲ್ಲಿ ನೀರು ಬರುತ್ತಿತ್ತು. ಚಿಕ್ಕವರು ಮಾತ್ರವಲ್ಲ ದೊಡ್ಡವರು ಕೂಡ ಇದನ್ನು ಸವಿಯಲು ಇಷ್ಟಪಡುತ್ತಿದ್ದರು.
ಆದ್ರೆ ಇತ್ತೀಚಿಗೆ ಈ ತಿಂಡಿಗಳನ್ನು ನಾವು ನೋಡುವುದೇ ಅಪರೂಪ ಎನ್ನುವಂತಾಗಿದೆ. ಅಂಗಡಿಗಳಲ್ಲಿ ಅಪರೂಪಕ್ಕೆ ಈ ತಿಂಡಿ ಕಾಣಸಿಗುತ್ತದೆ. ಆದ್ರೆ ಇದನ್ನು ಮನೆಯಲ್ಲೇ ಅದ್ಭುತವಾಗಿ ಮಾಡಿ ನಾವು ಸವಿಯಬಹುದು. ಹಾಗೆ ಮಕ್ಕಳಿದ್ದರೆ ಈ ತಿಂಡಿ ಮಾಡಿ ಕೊಟ್ಟು ನೋಡಿ, ಅವರಿಗೆ ಬೇರೆ ಅಂಗಡಿ ತಿಂಡಿಯ ರುಚಿ ಹಿಡಿಸೋದಿಲ್ಲ.

ಇದನ್ನು ಮನೆಯಲ್ಲಿ ಮಾಡುವುದು ಹೇಗೆ ಎಂಬ ನಿಮ್ಮ ಪ್ರಶ್ನೆಗೆ ನಾವಿಂದು ಉತ್ತರ ನೀಡಲಿದ್ದೇವೆ. ಕಡಿಮೆ ವಸ್ತುಗಳ ಬಳಸಿಕೊಂಡು, ಕಡಿಮೆ ಸಮಯದಲ್ಲಿ ಈ ಕಡ್ಲೆ ಪುರಿಯನ್ನು ಮಾಡಬಹುದು, ಅದರಲ್ಲೂ ಬಹಳ ರುಚಿಕರವಾಗಿ ಇದನ್ನು ಮಾಡಿ ಒಂದಿಷ್ಟು ದಿನ ಶೇಖರಿಸಿ ಇಟ್ಟು ಕೂಡ ಸವಿಯಬಹುದು.
ಹಾಗಾದ್ರೆ ಈ ಕಡ್ಲೆ ಪುರಿ ಉಂಡೆ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಕಡ್ಲೆ ಪುರಿ ಮಾಡಲು ಎಷ್ಟು ಸಮಯ ಹಿಡಿಯಲಿದೆ? ಎಂಬ ಕುರಿತಾಗಿ ನಾವಿಂದು ತಿಳಿದುಕೊಳ್ಳೋಣ.
ಕಡ್ಲೆಪುರಿ ಉಂಡೆ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಮಂಡಕ್ಕಿ ಅಥವಾ ಕಡ್ಲೆಪುರಿ- 4 ಕಪ್
- ಬೆಲ್ಲ- 1 ಕಪ್
- ತುಪ್ಪ
ಕಡ್ಲೆಪುರಿ ಉಂಡೆ ಮಾಡುವ ವಿಧಾನ
ಮೊದಲು ಅಳತೆಗೆ ಒಂದು ಕಪ್ ತೆಗೆದುಕೊಳ್ಳಿ. ಈ ಕಪ್‌ನಲ್ಲಿ 1 ಕಪ್ ಬೆಲ್ಲವನ್ನು ತೆಗೆದುಕೊಂಡು ಒಲೆ ಮೇಲೆ ಬಾಣಲೆ ಇಟ್ಟು ಅದಕ್ಕೆ ಹಾಕಿ ಬಳಿಕ ಬೆಲ್ಲ ಹಾಕಿ ಸ್ವಲ್ಪ ನೀರು ಹಾಕಿಕೊಂಡು ಕರಗಲು ಬಿಡಿ. ಬೆಲ್ಲ ಕರಗುವವರೆಗೂ ತಿರುಗಿಸುತ್ತಾ ಇರಿ. ಇದು ಸ್ವಲ್ಪ ನೀರಾಗಬೇಕು. ನಂತರ ಇದನ್ನು ಜರಡಿ ಹಿಡಿದು ಸೋಸಿಕೊಂಡು ಮತ್ತೆ ಅದೇ ಪಾತ್ರೆಗೆ ಹಾಕಿ ಕುದಿಯಲು ಬಿಡಿ.
5 ನಿಮಿಷ ಕುದಿಸಿಕೊಂಡು ಪಾಕ ಮಾಡಿಕೊಳ್ಳಿ. ಚೆನ್ನಾಗಿ ಎರಡು ಎಳೆಯ ಪಾಕವಾಗಬೇಕು. ಈಗ ಇದೇ ಬೆಲ್ಲಕ್ಕೆ ಒಂದು ಸ್ಪೂನ್ ತುಪ್ಪ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಅನಂತರ ಇದಕ್ಕೆ ಮಂಡಕ್ಕಿಯನ್ನು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. (ಮಂಡಕ್ಕಿ ಗರಿ ಗರಿ ಇಲ್ಲದಿದ್ದರೆ ಮೊದಲು ಒಂದು ಬಾಣಲೆಯಲ್ಲಿ ಹಾಕಿ ಸ್ವಲ್ಪ ಹುರಿದುಕೊಂಡು ಇದಕ್ಕೆ ಬಳಸಿಕೊಳ್ಳಿ)
ಮಂಡಕ್ಕಿ ಬೆಲ್ಲದ ಪಾಕದೊಂದಿಗೆ ಚೆನ್ನಾಗಿ ಮಿಕ್ಸ್ ಆಗಬೇಕು. ಈಗ ಒಲೆ ಆಫ್ ಮಾಡಿಕೊಂಡು ಮಂಡಕ್ಕಿಯನ್ನು ಮಿಕ್ಸ್ ಮಾಡಿಕೊಳ್ಳಿ. ಬಿಸಿ ಇದ್ದಾಗಲೇ ಇದನ್ನು ಉಂಡೆ ಕಟ್ಟಬೇಕು. ಕೈಯನ್ನು ನೀರಿಗೆ ಅದ್ದಿಕೊಂಡು ಬಿಸಿ ಇದ್ದಾಗಲೇ ನಿಮಗೆ ಯಾವ ಗಾತ್ರಕ್ಕೆ ಬೇಕೋ ಆ ಗಾತ್ರಕ್ಕೆ ಉಂಡೆ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮಿಷ್ಟದ ಕಡ್ಲೆ ಪುರಿ ಉಂಡೆ ರೆಡಿಯಾಗುತ್ತದೆ. ಇದನ್ನು ಒಂದು ತಿಂಗಳ ಕಾಲ ಬೇಕಾದರು ಇಟ್ಟು ಸವಿಯಬಹುದು. ಮಕ್ಕಳಿಗೆ ಇದು ಬಹಳ ಇಷ್ಟವಾಗುತ್ತೆ.



Click it and Unblock the Notifications
