Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಚಟ್ನಿ ರೆಸಿಪಿ: ಸಕತ್ ರುಚಿಯಾಗಿರುತ್ತೆ ಕಡ್ಲೆಬೇಳೆ ಚಟ್ನಿ, ದೋಸೆಗೂ ಸೈ, ಗಂಜಿಗೂ ಸೈ
ಬೆಳಗ್ಗಿನ ಉಪಾಹಾರದ ದೋಸೆಗೆ, ಮಧ್ಯಾಹ್ನದ ಅನ್ನ, ಗಂಜಿಗೆ ಈ ಚಟ್ನಿ ಸೂಪರ್ ಕಾಂಬಿನೇಷನ್. ಕಡ್ಲೆಬೇಳೆ ಹುರಿದು ಮಾಡುವ ಚಟ್ನಿ ಇದಾಗಿದೆ, ಈ ಚಟ್ನಿ ಕೊಬ್ಬರಿ ಚಟ್ನಿಯೇ ಆದರೂ ರುಚಿಯಲ್ಲಿ ತುಂಬಾನೇ ಭಿನ್ನವಾಗಿರುತ್ತದೆ, ಟೇಸ್ಟ್ ಸೂಪರ್ ಅನಿಸುವುದು, ಈ ಗಟ್ಟಿ ಚಟ್ನಿ ಮಾಡುವುದು ಹೇಗೆ ಎಂದು ನೋಡೋಣ ಬನ್ನಿ:

ಬೇಕಾಗುವ ಸಾಮಗ್ರಿ
ಚೆನ್ನಾ ದಾಲ್ 3 ಚಮಚ
ಉದ್ದಿನ ಬೇಳೆ 1ಚಮಚ
ಎಣ್ಣೆ 3 ಚಮಚ
ಒಣ ಮೆಣಸು 3
ತೆಂಗಿನ ತುರಿ 1ಕಪ್
ಸ್ವಲ್ಪ ಹುಣಸೆಹಣ್ಣು
ರುಚಿಗೆ ತಕ್ಕ ಉಪ್ಪು
ಸ್ವಲ್ಪ ನೀರು
ಸಾಸಿವೆ 1 ಚಮಚ
ಸ್ವಲ್ಪ ಇಂಗು
ಒಗ್ಗರಣೆ ಹಾಕಲು
1 ಚಮಚ ಉದ್ದಿನ ಬೇಳೆ
ಎಣ್ಣೆ 1 ಚಮಚ
ಸ್ವಲ್ಪ ಕರಿಬೇವು
ಒಣ ಮೆಣಸು 2
ತಯಾರಿಸುವುದು ಹೇಗೆ?
* ಪ್ಯಾನ್ ಬಿಸಿ ಮಾಡಿ ಎಣ್ಣೆ ಹಾಕಿ
* ಅದಕ್ಕೆ ಚನ್ನಾ ದಾಲ್ ಹಾಕಿ 1 ಚಮಚ ಉದ್ದಿನ ಬೇಳೆ ಹಾಕಿ
* ಅವುಗಳು ಕಂದು ಬಣ್ಣ ಬರುವವರೆಗೆ ಸ್ವಲ್ಪ ಕರಿಬೇವು ಹಾಕಿ
*ನಂತರ ಉರಿಯಿಂದ ಇಳಿಸಿ ತಣ್ಣಗಾಗಲು ಬಿಡಿ.
* ನಂತರ ಬ್ಲೆಂಡರ್‌ಗೆ ತೆಂಗಿನ ತುರಿ, ಹುಣಸೆಹಣ್ಣು, ರೋಸ್ಟ್ ಮಾಡಿದ ಕರಿಬೇವು,
ಬೇಳೆಗಳನ್ನು ಹಾಕಿ, ಖಾರ ಸೇರಿಸಿ, ರುಚಿಗೆ ತಕ್ಕ ಉಪ್ಪು ಸೇರಿಸಿ ಸ್ವಲ್ಪ ನೀರು
ಹಾಕಿ ಬ್ಲೆಂಡ್ ಮಾಡಿ,
* ತುಂಬಾ ನುಣ್ಣನೆ ರುಬ್ಬಬೇಡಿ, ಸ್ವಲ್ಪ -ಸ್ವಲ್ಪ ತರಿತರಿ ರುಬ್ಬಿ.
* ನಂತರ ಒಗ್ಗರಣೆ ಹಾಕಿ
ಒಗ್ಗರಣೆಗೆ ಸ್ವಲ್ಪ ಇಂಗು ಹಾಕಿದರೆ ಇನ್ನೂ ಟೇಸ್ಟ್.
ಇತರ ಸಲಹೆ
*ಬೇಳೆಗಳನ್ನು ರೋಸ್ಟ್ ಮಾಡುವಾಗ ಅದುಸೀದು ಹೋಗಬಾರದು, ಕಡಿಮೆ ಉರಿಯಲ್ಲಿ ಕಂದು
ಬಣ್ಣಕ್ಕೆ ಬರುವವರೆಗೆ ಫ್ರೈ ಮಾಡಿ.
* ಖಾರ ನಿಮ್ಮ ರುಚಿಗೆ ತಕ್ಕಷ್ಟು ಸೇರಿಸಿ
* ನೀವು ಹಸಿ ಮೆಣಸು ಬಳಸುವ ಬದಲಿಗೆ ಒಣ ಮೆಣಸು ಹಾಕಿ.



Click it and Unblock the Notifications
