Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಕಾಯಿ-ಈರುಳ್ಳಿ ಹಾಕದೆ ಸಖತ್ ರುಚಿಯ ಚಟ್ನಿ ಮಾಡಿ..! ಇಲ್ಲಿದೆ ರೆಸಿಪಿ
ಬೆಳ್ಗಗೆ ತಿಂಡಿಗೆ ಏನು ಮಾಡಬೇಕು ಅನ್ನೋ ಪ್ರಶ್ನೆಯಿಂದ ಹಿಡಿದು ಆ ತಿಂಡಿಗೆ ಯಾವ ಚಟ್ನಿ ಮಾಡಬೇಕು ಅನ್ನೋದು ಸಹ ಗೊಂದಲವೇ ಆಗಿರುತ್ತದೆ. ಅದ್ರಲ್ಲೂ ಗೃಹಿಣಿಯರು ಈ ರೀತಿ ಸಮಸ್ಯೆ ಎದುರಿಸುತ್ತಾರೆ. ಯಾವ ತಿಂಡಿ ಮಾಡಿದರೆ ಯಾವ ಚಟ್ನಿ ಮಾಡಬೇಕು. ಕಡಿಮೆ ಸಮಯದಲ್ಲಿ ಕಡಿಮೆ ವಸ್ತು ಬಳಸಿ ಯಾವ ಚಟ್ನಿ ಮಾಡಬಹುದು ಎಂಬುದೇ ಎಲ್ಲರ ಪ್ರಶ್ನೆಯಾಗಿರುತ್ತೆ.
ಅದ್ರಲ್ಲೂ ಬೆಳಗ್ಗೆ ಇಡ್ಲಿ, ದೋಸೆ ಇದ್ದರಂತು ಅದರ ಸವಿಯಲು ಸೈಡ್ ಡಿಶ್ ಆಗಿ ಯಾವುದಾದರು ಚಟ್ನಿ ಇರಲೇ ಬೇಕು. ಆದ್ರೆ ಯಾವ ಚಟ್ನಿ ಮಾಡಬೇಕು ಅನ್ನೋದು ಯಾರಿಗೂ ತಿಳಿದಿರುವುದಿಲ್ಲ. ಹೀಗಾಗಿ ನಾವಿಂದು ಈ ರೀತಿ ತಿಂಡಿ ಹಾಗೂ ಊಟದ ಜೊತೆಗೂ ಸವಿಯಬಹುದಾದ ಒಳ್ಳೆಯ ಚಟ್ನಿ ಯಾವುದು ನೋಡೋಣ.

ಬೆಳಗ್ಗೆ ತಿಂಡಿಗೆ ಹೇಳಿ ಮಾಡಿಸಿದ ಚಟ್ನಿ ಅಂದ್ರ ಕಡಲೆ ಬೀಜದ ಚಟ್ನಿ. ಹೌದು ಬೆಳಗ್ಗೆಯ ಎಲ್ಲಾ ತಿಂಡಿಗೂ ಈ ಕಡಲೆ ಬೀಜದ ಚಟ್ನಿ ಸಖತ್ ರುಚಿ ನೀಡುತ್ತದೆ. ಜೊತೆಗೆ ಆರೋಗ್ಯಕ್ಕೂ ಉತ್ತಮವಾದ ಚಟ್ನಿ ಇದಾಗಿದೆ. ಕಡಲೆ ಬೀಜದಲ್ಲಿ ಅತ್ಯುತ್ತಮ ಪ್ರಮಾಣದ ಪ್ರೋಟೀನ್ ಸಿಗಲಿದೆ.
ಹಾಗಾದ್ರೆ ನಾವಿಂದು ಈ ಕಡಲೆ ಬೀಜದ ಚಟ್ನಿ ಮಾಡುವುದು ಹೇಗೆ? ಅದಕ್ಕೆ ಬೇಕಾಗು ಪದಾರ್ಥಗಳೇನು? ಮಾಡುವುದು ಹೇಗೆ? ಎಂಬುದನ್ನು ತಿಳಿದುಕೊಳ್ಳೋಣ.
ಕಡಲೆ ಬೀಜದ ಚಟ್ನಿ ಮಾಡಲು ಬೇಕಾಗುವ ಪದಾರ್ಥಗಳು
- ಕಡಲೆ ಬೀಜ- 1 ಕಪ್
- ಹುರಿ ಗಡಲೆ- 2 tbs
- ಉದ್ದಿನಬೇಳೆ - 2 ಚಮಚ
- ಹುಣಸೆಹಣ್ಣು - 10 ಗ್ರಾಂ
- ಕರಿಬೇವಿನ ಎಲೆಗಳು - 2 tbs
- ಬೆಳ್ಳುಳ್ಳಿ - 5 ಪೀಸ್
- ಕೆಂಪು ಮೆಣಸಿನ ಪುಡಿ - 1 ಟೀಸ್ಪೂನ್
- ಇಂಗು- 1/4 ಟೀಸ್ಪೂನ್
- ಒಣ ಕೆಂಪು ಮೆಣಸಿನಕಾಯಿ - 2
- ಜೀರಿಗೆ - 1/4 ಟೀಸ್ಪೂನ್
- ಸಾಸಿವೆ ಬೀಜಗಳು - 1/4 ಟೀಸ್ಪೂನ್
- ರುಚಿಗೆ ಉಪ್ಪು
- ಅಡುಗೆ ಎಣ್ಣೆ
ಕಡಲೆ ಬೀಜದ ಚಟ್ನಿ ಮಾಡುವ ವಿಧಾನ
ಮೊದಲು ಒಲೆ ಮೇಲೆ ಪಾತ್ರೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಳ್ಳಿ, ಎಣ್ಣೆ ಕಾದ ಬಳಿಕ ಅದಕ್ಕೆ ಉದ್ದಿನ ಬೇಳೆ, ಕಡಲೆ ಬೀಜ, ಬೆಳ್ಳುಳ್ಳಿ, ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. 4 ನಿಮಿಷ ಫ್ರೈ ಮಾಡಿಕೊಂಡ ಬಳಿಕ ಅದಕ್ಕೆ ಸ್ವಲ್ಪ ನೀರು ಹಾಕಿಕೊಳ್ಳಿ.
ಈ ರೀತಿ ನೀರು ಹಾಕಿದ ಮೇಲೆ ಅದಕ್ಕೆ ಹುಣಸೆ ಹುಳಿ ಹಿಂಡುಕೊಳ್ಳಿ ಬಳಿಕ ಉಪ್ಪು ಹಾಕಿ ಕುದಿಯಲು ಬಿಡಿ. 5 ನಿಮಿಷ ಕುದಿಯಲು ಬಿಟ್ಟು ಒಲೆ ಆಫ್ ಮಾಡಿಕೊಳ್ಳಿ. ಇದಾದ ಬಳಿಕ ತಣ್ಣಗಾಗಲು ಕೆಲ ಹೊತ್ತು ಬಿಡಿ. ತಣ್ಣಗಾದ ಬಳಿಕ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ.
ಪೇಸ್ಟ್ನಂತೆ ಬರುವಂತೆ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ರುಬ್ಬಿಕೊಂಡ ಚಟ್ನಿಗೆ ಸ್ವಲ್ಪ ನೀರು ಹಾಕಿಕೊಳ್ಳಿ. ಈಗ ಇದಕ್ಕೆ ಒಗ್ಗರಣೆ ಮಾಡಿಕೊಳ್ಳಿ. ಒಲೆ ಮೇಲೆ ಪಾತ್ರೆ ಇಟ್ಟು ಎಣ್ಣೆ ಹಾಕಿ ಅದಕ್ಕೆ ಸಾಸಿವೆ, ಜೀರಿಗೆ, ಕರಿಬೇವು, ಒಣಮೆಣಸು ಹಾಕಿಕೊಳ್ಳಿ, ಬಳಿಕ ಇಂಗು ಒಂದು ಚಿಟಿಕೆ ಅರಶಿಣ ಬೇಕಾದರೆ ಹಾಕಿ ಮಿಕ್ಸ್ ಮಾಡಿ. 2 ನಿಮಿಷ ಕರಿದ ಬಳಿಕ ಒಲೆ ಆಫ್ ಮಾಡಿಕೊಂಡು ಚಟ್ನಿಗೆ ಹಾಕಿಕೊಳ್ಳಿ.
ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಕಡಲೆ ಬೀಜದ ಚಟ್ನಿ ರೆಡಿಯಾಗಿರುತ್ತದೆ. ಇದು ಇಡ್ಲಿ, ದೋಸೆ, ಪೂರಿ, ಚಪಾತಿಗೆ ಹೇಳಿ ಮಾಡಿಸಿದ ಚಟ್ನಿಯಂತೆ ರುಚಿಕರವಾಗಿರುತ್ತೆ. ನೀವು ಸಹ ಒಮ್ಮೆ ಟ್ರೈ ಮಾಡಿ ನೋಡಿ ಇದರ ರುಚಿಗೆ ನೀವು ಸಹ ಫಿದಾ ಆಗುತ್ತೀರಿ. ಇದಕ್ಕೆ ಕಾಯಿ, ಈರುಳ್ಳಿ ಯಾವುದು ಬೇಕಾಗಿಲ್ಲ ಕೆಲವೇ ವಸ್ತು ಬಳಸಿ ಸಿಂಪಲ್ ಆಗಿ ಮಾಡಬಹುದು.



Click it and Unblock the Notifications
