Latest Updates
-
ವಿಶ್ವ ಶಿಕ್ಷಕರ ದಿನ: ಶಿಕ್ಷಕರಿಗೆ ಗೌರವ ಸಲ್ಲಿಸುವಾಗ ಪೋಷಕರು ಪಾಲಿಸಬೇಕಾದ ಶಿಷ್ಟಾಚಾರಗಳೇನು? -
ಕೇರಳ-ತಮಿಳುನಾಡು ಮಳೆ ಅಲರ್ಟ್: ನಿಮ್ಮ ಮನೆ ಮತ್ತು ಕಾರನ್ನು ಸುರಕ್ಷಿತವಾಗಿಡಲು ಈ 5 ತಕ್ಷಣದ ಕ್ರಮಗಳನ್ನು ಕೈಗೊಳ್ಳಿ! -
ಜಿಮ್ಗೆ ಹೋಗುವವರೇ ಎಚ್ಚರ! ಪ್ರೊಟೀನ್ ಸಪ್ಲಿಮೆಂಟ್ಸ್ ಮೇಲೆ FDA ದಾಳಿ, ನಕಲಿ ಉತ್ಪನ್ನ ಪತ್ತೆಹಚ್ಚುವುದು ಹೇಗೆ? -
ಏಷ್ಯನ್ ಗೇಮ್ಸ್ ಕ್ರಿಕೆಟ್ ಫೈನಲ್: ಭಾರತದ ಗೆಲುವಿನ ಸಂಭ್ರಮಕ್ಕೆ ಇಲ್ಲಿದೆ ವೈರಲ್ ಮೀಮ್ಸ್ ಮತ್ತು ಸೇಫ್ ಸೆಲೆಬ್ರೇಷನ್ ಗೈಡ್! -
ಕೋಲ್ಕತ್ತಾದಲ್ಲಿ ಕಳಪೆ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಸುರಕ್ಷಿತ ಸಮಯ ಮತ್ತು ಮಾರ್ಗಗಳನ್ನು ತಪ್ಪದೇ ತಿಳಿಯಿರಿ -
ಎಆರ್ ರಹಮಾನ್ ಬೆಂಗಳೂರು ಕಾನ್ಸರ್ಟ್: ಮೆಟ್ರೋ ಟೈಮಿಂಗ್ಸ್ ಮತ್ತು ಸುರಕ್ಷಿತವಾಗಿ ಮನೆ ಸೇರಲು ಇಲ್ಲಿದೆ ಪಕ್ಕಾ ಪ್ಲಾನ್! -
ಮುಂಬೈನಲ್ಲಿ 10% ನೀರು ಕಡಿತ: ನೀರಿನ ಅಭಾವ ಎದುರಿಸಲು ಮತ್ತು ಉಳಿತಾಯ ಮಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಹಬ್ಬದ ಸಿಹಿ ಖರೀದಿಸುವ ಮುನ್ನ ಎಚ್ಚರ! FSSAI ದಾಳಿ: ಕಳಪೆ ಖೋವಾ, ಪನ್ನೀರ್ ಪತ್ತೆ ಹೇಗೆ? -
ಭಾರತ vs ಪಾಕಿಸ್ತಾನ ಏಷ್ಯನ್ ಗೇಮ್ಸ್ ಫೈನಲ್: ಹೈ-ವೋಲ್ಟೇಜ್ ಕದನಕ್ಕೆ ಸಜ್ಜಾಗಿ, ಲೈವ್ ವೀಕ್ಷಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು!
ಎರಡು ಹೊತ್ತು ಸವಿಯಬಹುದಾದ ಕಾಬೂಲ್ ಕಡ್ಲೆ ಕುಷ್ಕ! ಥಟ್ ಅಂತ ರೆಡಿ ಮಾಡಬಹುದು
ನೀವು ಊಟದ ಸಮಯಕ್ಕೆ ಹಾಗೆ ತಿಂಡಿಯ ಸಮಯಕ್ಕೆ ಈ ಎರಡು ಸಮಯಕ್ಕೂ ಸರಿಹೊಂದುವಮತಹ ಖಾದ್ಯವನ್ನು ಮಾಡುವ ಆಲೋಚನೆಯಲ್ಲಿ ಇರುವುದು ನೋಡಬಹುದು. ಒಂದು ಹೊತ್ತು ಮಾಡಿದ ಖಾದ್ಯ ಎರಡು ಹೊತ್ತು ಸವಿಯುವಂತಾದರೆ ಕೆಲಸವೂ ಕಡಿಮೆಯಾಗುತ್ತದೆ. ಹಾಗೆ ಗಡಿ ಬಿಡಿಯಲ್ಲಿ ಥಟ್ ಅಂತ ರೆಡಿ ಮಾಡಬಹುದು ಎಂಬ ಆಲೋಚನೆಯಲ್ಲಿಯೂ ಹಲವರು ಈ ಖಾದ್ಯಗಳ ಮಾಡುತ್ತಾರೆ.
ಇಂತಹ ಸಮಯದಲ್ಲಿ ಹಲವು ಖಾದ್ಯಗಳು ನಿಮ್ಮ ನೆನಪಿಗೆ ಬರಬಹುದು. ಆದ್ರೆ ನಿತ್ಯ ಮಾಡುವಂತಹ ಪಲಾವ್, ರೈಸ್ ಬಾತ್, ಚಿತ್ರಾನ್ನ ಖಾದ್ಯಗಳ ಬದಲಾಗಿ ಈ ರೀತಿ ಸುಲಭವಾಗಿ ಮಾಡುವ ರುಚಿ ರುಚಿಯಾದ ಕುಷ್ಕ ಮಾಡಿ. ಈ ರೀತಿಯ ಕುಷ್ಕ ಎಲ್ಲರಿಗೂ ಇಷ್ಟವಾಗುತ್ತೆ. ಅದ್ರಲ್ಲೂ ಕಾಬೂಲ್ ಕಡ್ಲೆಯನ್ನು ಬಳಸಿ ಮಾಡುವಂತಹ ಕುಷ್ಕವು ವೆಜ್ ಬಿರಿಯಾನಿಯಂತಹ ರುಚಿ ನೀಡಲಿದೆ.

ಈ ಕಾಬೂಲ್ ಕಡ್ಲೆ ಕುಷ್ಕ ಬೆಳಗ್ಗೆ ಸಮಯದಲ್ಲಿ ತಿಂಡಿಯಾಗಿ, ಮಧ್ಯಾಹ್ನದ ಬಾಕ್ಸ್ಗೆ, ಅಥವಾ ಊಟಕ್ಕೆ ಇಲ್ಲವೆ ರಾತ್ರಿಯ ಊಟಕ್ಕೂ ಕೂಡ ಸವಿಯಬಹುದು. ಮಾಡೋದು ಕೂಡ ಬಹಳ ಸುಲಭ. ಹಾಗಾದ್ರೆ ಈ ಕಾಬೂಲ್ ಕಡ್ಲೆಯ ಮಸಾಲ ಕುಷ್ಕ ಮಾಡುವುದು ಹೇಗೆ? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಕಾಬೂಲ್ ಕಡ್ಲೆ ಕುಷ್ಕ ಮಾಡಲು ಬೇಕಾಗುವ ಪದಾರ್ಥಗಳು
- ಕಾಬೂಲ್ ಕಡ್ಲೆ
- ಅಕ್ಕಿ
- ಬೆಳ್ಳುಳ್ಳಿ ಶುಂಠಿ
- ಹಸಿ ಮೆಣಸು
- ಪುದಿನ ಸೊಪ್ಪು
- ಕೊತ್ತಂಬರಿ ಸೊಪ್ಪು
- ಟೊಮೆಟೋ
- ಚಕ್ಕೆ
- ಲವಂಗ
- ಪಲಾವ್ ಎಲೆ
- ಧನಿಯಾ ಪುಡಿ
- ಖಾರದ ಪುಡಿ
- ಸೋಂಪು ಕಾಳು
- ಉಪ್ಪು
- ಎಣ್ಣೆ
ಕಾಬೂಲ್ ಕಡ್ಲೆ ಕುಷ್ಕ ಮಾಡುವ ವಿಧಾನವೇನು?
ಮೊದಲು ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಬಳಿಕ ಒಂದು ಈರುಳ್ಳಿ ಹಾಕಿ, ಎರಡು ಬೆಳ್ಳುಳ್ಳಿ, ಶುಂಠಿ, ಹಸಿ ಮೆಣಸು ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಈಗ ಇದಕ್ಕೆ ಟೊಮೆಟೋ ಹಾಕಿ 2 ನಿಮಿಷ ಫ್ರೈ ಮಾಡಿ. ಈಗ ಪುದಿನ ಸೊಪ್ಪು ಹಾಗೂ ಕೊತ್ತಂಬರಿ ಸೊಪ್ಪು ಹಾಕಿ ಫ್ರೈ ಮಾಡಿ. ಈಗ ಒಲೆ ಆಫ್ ಮಾಡಿ ತಣ್ಣಗಾಗಲು ಬಿಡಿ.
ಈಗ ಒಂದು ಬೌಲ್ಗೆ 2 ಕಪ್ ಅಕ್ಕಿ ಹಾಕಿಕೊಂಡು ನೀರಿನಲ್ಲಿ ತೊಳೆದು ಅಕ್ಕಿ ಮುಳುಗುವಷ್ಟು ನೀರು ಹಾಕಿ ನೆನೆಯಲು ಬಿಡಿ. 15 ನಿಮಿಷ ನೆನೆಯಬೇಕು. ಹಾಗೆ ಕಾಬೂಲ್ ಕಡ್ಲೆ ಕೂಡ ರಾತ್ರಿಯೇ ನೆನೆಯಲು ಬಿಡಬೇಕು. ಈಗ ತಣ್ಣಗಾದ ಮಸಾಲೆಗಳನ್ನು ಒಂದು ಮಿಕ್ಸಿ ಜಾರ್ಗೆ ಹಾಕಿಕೊಂಡು ಅದಕ್ಕೆ ಖಾರದ ಪುಡಿ ಹಾಕಿ ನೀರು ಹಾಕಿ ನುಣ್ಣಗೆ ರುಬ್ಬಬೇಕು.
ಈಗ ಒಲೆ ಮೇಲೆ ಒಂದು ಕುಕ್ಕರ್ ಇಟ್ಟು ಎಣ್ಣೆ ಹಾಕಿ ಬಿಸಿಯಾಗಲು ಬಿಡಿ. ಇದಕ್ಕೆ ಚಕ್ಕೆ, ಲವಂಗ, ಪಲಾವ್ ಎಲೆ, ಸೋಂಪು ಕಾಳು, ಚಕ್ರಮೊಗ್ಗು, ಈರುಳ್ಳಿ ಸಹ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ಇದಕ್ಕೆ ರುಬ್ಬಿರುವ ಮಸಾಲೆಯನ್ನು ಸೇರಿಸಿಕೊಳ್ಳಿ. ಹಾಗೆ ಒಮ್ಮೆ ಮಿಕ್ಸ್ ಮಾಡಿಕೊಂಡು ಇದಕ್ಕೆ 1 ಚಮಚ ಧನಿಯಾ ಪುಡಿ, ನೆನೆಸಿಟ್ಟ ಕಾಬೂಲ್ ಕಡ್ಲೆ ಸೇರಿಸಿಕೊಂಡು ಮಿಕ್ಸ್ ಮಾಡಿ.
2 ನಿಮಿಷ ಮಿಕ್ಸ್ ಬೇಯಿಸಿದ ಬಳಿಕ ಇದಕ್ಕೆ ನೀರು ಸೇರಿಸಿ. 2 ಕಪ್ ಅಕ್ಕಿಗೆ 4 ಕಪ್ ನೀರು ಇದಕ್ಕೆ ಸೇರಿಸಿ. ಹಾಗೆ ಉಪ್ಪು ಸಹ ಸೇರಿಸಿ ಮಿಕ್ಸ್ ಮಾಡಿ 2 ನಿಮಿಷ ಬೇಯಲು ಬಿಡಿ. ನಂತರ ಅಕ್ಕಿ ಸೇರಿಸಿ ಮಿಕ್ಸ್ ಮಾಡಿ ಕೊತ್ತಂಬರಿ ಸೊಪ್ಪು ಹಾಕಿ ಮುಚ್ಚಳ ಮುಚ್ಚಿ 2 ಸೀಟಿ ಹೊಡೆಯಲು ಬಿಡಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯಾದ ಈ ಕಾಬೂಲ್ ಕಡ್ಲೆ ಕುಷ್ಕ ಸಿದ್ದವಾಗಿರುತ್ತೆ.



Click it and Unblock the Notifications
