Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಹಬ್ಬದ ಊಟಕ್ಕೆ ಕಾಬೂಲ್ ತೊಂಡೆಕಾಯಿ ಪಲ್ಯ ಮಾಡಿ! ಇಲ್ಲಿದೆ ರೆಸಿಪಿ
ಹಬ್ಬ ಹತ್ತಿರವಾಗುತ್ತಿದೆ ಶ್ರಾವಣ ಮಾಸ ಆರಂಭವಾದರೆ ಹಬ್ಬಗಳು ಸಾಲು ಸಾಲಾಗಿ ಬರುತ್ತದೆ. ಹಬ್ಬ ಅಂದ ಮೇಲೆ ಹಬ್ಬದ ಅಡುಗೆ, ಸಿಹಿ ಇದ್ದೇ ಇರುತ್ತೆ. ಹಬ್ಬಕ್ಕೆ ಸಿಹಿ ಮಾಡೋದು ನಡೆದುಕೊಂಡು ಬಂದಿದೆ. ಹಬ್ಬದ ಊಟ ಅಂದ್ರೆ ಅಲ್ಲಿ ಮೂರ್ನಾಲ್ಕು ಬಗೆಯ ಖಾದ್ಯ ಅಂತೂ ಇದ್ದೇ ಇರುತ್ತೆ. ಹಬ್ಬದ ಅಡುಗೆಗೆ ಯಾವುದಾದರು ಪಲ್ಯ ಮಾಡಿರಲೇ ಬೇಕು. ಹಬ್ಬಕ್ಕೆ ತೊಂಡೆಕಾಯಿ ಪಲ್ಯ ಮಾಡಿ.
ತೊಂಡೆಕಾಯಿ ಪಲ್ಯ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಮಾಡುತ್ತಾರೆ. ಆದ್ರೆ ಮದುವೆ ಮನೆಯಲ್ಲಿ, ಶುಭ ಸಮಾರಂಭದ ವೇಳೆ ಮಾಡಲಾಗುವ ಕಾಬೂಲ್ ಕಡ್ಲೆ ಹಾಕಿ ಮಾಡುವ ತೊಂಡೆಕಾಯಿ ಪಲ್ಯ ಎಲ್ಲರಿಗೂ ಅಚ್ಚುಮೆಚ್ಚು. ಆದ್ರೆ ಈ ತೊಂಡೆಕಾಯಿ ಪಲ್ಯವನ್ನ ವಿಶೇಷವಾಗಿ ಮಾಡೋದು ಹೇಗೆ?

ತೊಂಡೆಕಾಯಿ ಪಲ್ಯಕ್ಕೆ ಕಾಬೂಲ್ ಕಡ್ಲೆ ಹಾಕಿ ಮಾಡಿದರೆ ಅದರ ರುಚಿ ಅದ್ಭುತವಾಗಿರುತ್ತೆ. ಇದನ್ನು ಹಬ್ಬದ ಅಡುಗೆ ಜೊತೆ ಮಾಡಿದರೆ ಹಬ್ಬದ ಊಟಕ್ಕೂ ಒಂದು ಕಳೆ ಬರುತ್ತೆ. ಆದ್ರೆ ಈ ಪಲ್ಯ ಮಾಡೋದಾದ್ರು ಹೇಗೆ? ತೊಂಡೆಕಾಯಿ ಕಾಬೂಲ್ ಕಡ್ಲೆ ಪಲ್ಯ ಮಾಡಲು ಯಾವೆಲ್ಲಾ ಪದಾರ್ಥ ಬೇಕು?, ಈ ಪಲ್ಯ ಮಾಡುವುದು ಹೇಗೆ? ಈ ಪಲ್ಯ ಮಾಡಲು ಎಷ್ಟು ಸಮಯ ಬೇಕು ಎನ್ನುವುದು ನಾವಿಂದು ನೋಡೋಣ.
ತೊಂಡೆಕಾಯಿ ಕಾಬೂಲ್ ಪಲ್ಯ ಮಾಡಲು ಬೇಕಾಗುವ ಪದಾರ್ಥಗಳೇನು?
- ಕಾಬುಲ್ ಕಡ್ಲೆ - ಅರ್ಧ ಕಪ್
- ತೊಂಡೆಕಾಯಿ - ಅರ್ಧ ಕೆಜಿ
- ತೆಂಗಿನಕಾಯಿ ತುರಿ
- ಎಣ್ಣೆ
- ಮೆಣಸಿನಕಾಯಿ - 6
- ಕಡ್ಲೆಬೇಳೆ
- ಉದ್ದಿನ ಬೇಳೆ
- ಜೀರಿಗೆ
- ಸಾಸಿವೆ
- ಅರಿಶಿಣದ ಪುಡಿ
- ಹುಣಸೆಹಣ್ಣು
- ಕರಿಬೇವಿನ ಸೊಪ್ಪು
- ಉಪ್ಪು
ತೊಂಡೆಕಾಯಿ ಕಾಬೂಲ್ ಪಲ್ಯ ಮಾಡುವುದು ಹೇಗೆ?
ಮೊದಲು ಕಾಬೂಲ್ ಕಡ್ಲೆಯನ್ನ ಹಿಂದಿನ ದಿನ ರಾತ್ರಿ ಬೌಲ್ಗೆ ಹಾಕಿ ನೀರು ಹಾಕಿ ನೆನೆಸಿಡಬೇಕು. ಬಳಿಕ ಬೆಳಗ್ಗೆ ಅದರ ನೀರು ತೆಗೆದು ಕುಕ್ಕರ್ಗೆ ಹಾಕಿ ಚೆನ್ನಾಗಿ ಬೇಯಿಸಬೇಕು. 2 ಸೀಟಿ ಹೊಡೆಸಿಕೊಂಡರೆ ಸಾಕಾಗುತ್ತದೆ. ಬಳಿಕ ಕುಕ್ಕರ್ ಮುಚ್ಚಳ ತೆಗೆದು ಅದಕ್ಕೆ ತೊಂಡೆಕಾಯಿ ಹಾಕಬೇಕು. ಇದಕ್ಕು ಮೊದಲು ಈ ತೊಂಡೆಕಾಯಿಯನ್ನು ತೆಗೆದುಕೊಂಡು ಅದನ್ನ ನೇರವಾಗಿ ಕತ್ತರಿಸಿಕೊಳ್ಳಿ. ಒಂದು ಕಾಯಿಯಲ್ಲಿ 4ರಿಂದ 5 ಭಾಗ ಅಗುವಂತೆ ಕತ್ತರಿಸಿಕೊಳ್ಳಬೇಕು.
ನಂತರ ಕಾಬೂಲ್ ಕಡ್ಲೆಯೊಂದಿಗೆ ಕುಕ್ಕರ್ಗೆ ಹಾಕಿ ಇದನ್ನು ಸಹ ಬೇಯಿಸಬೇಕು. ಇದಕ್ಕೆ ಉಪ್ಪು ಸಹ ಹಾಕಿಕೊಂಡು ಒಂದು ಸೀಟಿ ಹೊಡೆಸಿಕೊಳ್ಳಬೇಕು. ನಂತರ ಕುಕ್ಕರ್ ತಣ್ಣಗಾಗಲು ಬದಿಗಿಟ್ಟು ಒಲೆ ಮೇಲೆ ಒಂದು ಪಾತ್ರೆ ಇಟ್ಟುಕೊಳ್ಳಿ. ನಂತರ ಆ ಪಾತ್ರೆಗೆ ಸ್ವಲ್ಪ ಕಡಲೆ ಬೇಳೆ, ಉದ್ದಿನ ಬೇಳೆ, ಸಾಸಿವೆ, ಜೀರಿಗೆ ಹಾಕಿ ಹುರಿದುಕೊಳ್ಳಿ. 5 ನಿಮಿಷ ಹುರಿದರೆ ಸಾಕು. ಇದೆಲ್ಲವನ್ನು ತೆಗದಿಟ್ಟು ಈಗ ಅದೇ ಪಾತ್ರೆಗೆ 6 ಒಣ ಮೆಣಸು, ಎಣ್ಣೆ ಹಾಕಿ ಎರಡು ನಿಮಿಷ ಫ್ರೈ ಮಾಡಿ.
ನಂತರ ಈ ಎಲ್ಲಾ ವಸ್ತುಗಳನ್ನು ಮಿಕ್ಸಿ ಜಾರ್ಗೆ ಹಾಕಿಕೊಂಡು ತರಿ ತರಿಯಾಗಿ ರುಬ್ಬಿಕೊಳ್ಳಿ. ನಂತರ ಅದಕ್ಕೆ ತೆಂಗಿನ ತುರಿ ಹಾಕಿ ಕೊಂಡು ರುಬ್ಬಿಕೊಳ್ಳಿ. ತರಿತರಿ ಮಿಶ್ರಣ ಇರಲಿ. ಈಗ ಕುಕ್ಕರ್ ಮುಚ್ಚಳ ತೆಗೆದು ಅದರಲ್ಲಿರುವ ನೀರು ಹೊರಗೆ ಹಾಕಿ.
ಈಗ ಒಂದು ಪಾತ್ರೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ, ಸಾಸಿವೆ, ಕಡಲೆ ಬೇಳೆ, ಉದ್ದಿನ ಬೇಳೆ ಹಾಕಿ ಫ್ರೈ ಮಾಡಿ. ಇದಕ್ಕೆ ಅರಶಿಣ ಪುಡಿ, ಕರಿಬೇವು, ಹಾಕಿ ದ ಬಳಿಕ ಮಿಕ್ಸಿಯಲ್ಲಿ ಪುಡಿ ಮಾಡಿಕೊಂಡ ಮಸಾಲೆಯನ್ನು ಹಾಕಿಕೊಂಡು 2 ನಿಮಿಷ ಫ್ರೈ ಮಾಡಿಕೊಳ್ಳಿ. ನಂತರ ಸ್ವಲ್ಪ ಹುಣಸೆ ಹುಳಿಯ ನೀರು ಹಾಕಿ ಮಿಕ್ಸ್ ಮಾಡಿಕೊಳ್ಳಿ.
ಇದೆಲ್ಲಾ ಕ್ರಮದ ಬಳಿಕ ಇದಕ್ಕೆ ಬೇಯಿಸಿಟ್ಟ ಕಡ್ಲೆ ಹಾಗೂ ತೊಂಡೆಕಾಯಿಯನ್ನು ಇದಕ್ಕೆ ಹಾಕಿ ಮಿಕ್ಸ್ ಮಾಡಿ. ಈ ವೇಳೆ ರುಚಿ ನೋಡಿಕೊಂಡು ಉಪ್ಪು ಹಾಕಿಕೊಳ್ಳಿ. 5 ನಿಮಿಷ ಬೇಯಿಸಿಕೊಂಡರೆ ಸಾಕಾಗುತ್ತದೆ. ಇಷ್ಟಾದರೆ ನಿಮ್ಮ ಮುಂದೆ ತೊಂಡೆಕಾಯಿ ಕಾಬೂಲ್ ಕಡ್ಲೆ ಪಲ್ಯ ರೆಡಿಯಾಗುತ್ತದೆ. ಇದನ್ನು ಹಬ್ಬದ ಊಟಕ್ಕೆ ಮಾಡಿ ಸವಿಯಿರಿ.



Click it and Unblock the Notifications
