Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ದೇಹ ತಂಪು ಮಾಡಬೇಕಾ? ಬೇಸಿಗೆಯಲ್ಲಿ ಅಮೃತ ಈ ಜ್ಯೂಸ್!
ಬೇಸಿಗೆ ಆರಂಭಗೊಳ್ಳುತ್ತಿದೆ, ಹಗಲು ವಿಪರೀತ ಬಿಸಿಲು ಹಾಗೆ ಸಂಜೆ ಸಮಯದಲ್ಲಿ ತಾಪಮಾನ ಇಳಿಕೆಯಾಗಲಿದೆ ಈ ಸಮಯದಲ್ಲಿ ನಿಮ್ಮ ದೇಹ ಕೂಡ ತಾಪಮಾನಕ್ಕೆ ಹೊಂದಿಕೊಳ್ಳಬೇಕಾಗುತ್ತದೆ. ಆದ್ರೆ ಇದೇ ಸಮಯದಲ್ಲಿ ದೇಹ ಹೆಚ್ಚು ಉಷ್ಣತೆಯಿಂದ ಕೂಡಿರಲಿದೆ. ನೀವು ಸೇವಿಸುವ ಆಹಾರ ಹಾಗೆ ತಾಪಮಾನದ ಕಾರಣದಿಂದ ದೇಹ ಕೂಡ ಹೆಚ್ಚು ಉಷ್ಣವಿಂದ ಕೂಡಿರಲಿದೆ.
ಆದ್ರೆ ದೇಹ ತಂಪು ಮಾಡಲು ನೀವು ಹಲವು ರೀತಿಯ ಟ್ರಿಕ್ಸ್ ಮಾಡಿರಬಹುದು. ಹೆಚ್ಚು ನೀರು ಕುಡಿಯುವುದು, ಮಜ್ಜಿಗೆ ಸೇವಿಸುವುದು ಹಾಗೆ ಮಸಾಲೆ ಕಡಿಮೆ ಸೇವಿಸುವುದು ನೋಡಬಹುದು. ಆದ್ರೆ ನಾವಿಂದು ದೇಹವನ್ನು ತಂಪಾಗಿಸುವ ಜ್ಯೂಸ್ ಅನ್ನು ಮನೆಯಲ್ಲೇ ಮಾಡಿ ಕುಡಿಯುವ ಕುರಿತಾಗಿ ತಿಳಿದುಕೊಳ್ಳೋಣ.

ನಾವಿಂದು ದೇಹಕ್ಕೆ ತಂಪು ನೀಡುವ ತಂಪು ತಂಪಿನ ಬಾದಾಮ್ ಮಿಲ್ಕ್ ಮನೆಯಲ್ಲೇ ಮಾಡಿ ಕುಡಿಯುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ. ನೀವು ಅಂಗಡಿಗಳಲ್ಲಿ, ಬೇಕರಿಗಳಲ್ಲಿ ಬಾದಾಮ್ ಮಿಲ್ಕ್ ಅನ್ನು ಕುಡಿದಿರುತ್ತೀರಿ. ಹಾಗೆ ಅದರ ರುಚಿ ಅಷ್ಟೇ ಅಲ್ಲ ದೇಹಕ್ಕೂ ಬಹಳ ತಂಪು ನೀಡುವಂತಹ ಜ್ಯೂಸ್ ಇದು.
ಹಾಗಾದ್ರೆ ಈ ಬಾದಾಮ್ ಮಿಲ್ಕ್ ಜ್ಯೂಸ್ ಅನ್ನು ಮನೆಯಲ್ಲಿ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಬಾದಾಮ್ ಮಿಲ್ಕ್ ಜ್ಯೂಸ್ ಮಾಡಲು ಬೇಕಾಗುವ ವಸ್ತುಗಳು
ಬಾದಾಮಿ/ಪೌಡರ್
ಏಲಕ್ಕಿ ಪುಡಿ
ಸಕ್ಕರೆ
ಹಾಲು
ಕೇಸರಿ
ಡ್ರೈ ಫ್ರೂಟ್ಸ್
ಬಾದಾಮ್ ಮಿಲ್ಕ್ ಜ್ಯೂಸ್ ಮಾಡುವುದು ಹೇಗೆ?
ಈ ಬಾದಾಮ್ ಮಿಲ್ಕ್ ಜ್ಯೂಸ್ ಮಾಡಲು ಹಿಂದಿನ ದಿನ ಬಾದಾಮಿಗಳನ್ನು ನೀರಿನಲ್ಲಿ ನೆನೆಸಿಡಬೇಕು. ಇಲ್ಲವೆ ಬಾದಾಮ್ ಪೌಡರ್ ಅನ್ನು ಸಿದ್ದವಾಗಿಡಬೇಕು. ಮೊದಲು ಬಾದಾಮಿಯನ್ನು ಮಿಕ್ಸಿಯಲ್ಲಿ ಹಾಕಿ ಹಾಲು ಸಹ ಹಾಕಿ ರುಬ್ಬಿಕೊಳ್ಳಿ. ಒಂದು ವೇಳೆ ಬಾದಾಮಿ ಪೌಡರ್ ಇದ್ದರೆ ಹೀಗೆ ಮಾಡುವ ಅವಶ್ಯಕತೆ ಇಲ್ಲ.
ಈಗ ಒಲೆ ಮೇಲೆ ಸ್ವಲ್ಪ ಹಾಲು ಇಟ್ಟು ಕಾಯಲು ಬಿಡಿ. ಹಾಲು ಕಾಯುವಾಗ ಆಗಾತ ತಿರುಗಿಸುತ್ತಾ ಇರಿ, ಹಾಗೆ ಇದು ಕುದಿಬರುವ ಸಮಯದಲ್ಲಿ ಹಾಲಿಗೆ ರುಬ್ಬಿಕೊಂಡಿದ್ದ ಬಾದಾಮಿ ಪುಡಿ ಹಾಕಿ ಇಲ್ಲವೆ ರೆಡಿ ಮೇಡ್ ಬಾದಾಮಿ ಪೌಡರ್ ಅನ್ನು ಇದೇ ಸಮಯದಲ್ಲಿ ಹಾಕಿಕೊಳ್ಳಬೇಕು. ಪುಡಿ ಹಾಕುತ್ತಾ ಮಿಕ್ಸ್ ಮಾಡಿಕೊಳ್ಳಬೇಕು.
ಈಗ ಕೇಸರಿ ಇದ್ದರೆ ಹಾಕಿಕೊಳ್ಳಿ. ಕುದಿಬರುವಾಗ ಇದಕ್ಕೆ ರುಚಿಗೆ ತಕ್ಕಷ್ಟು ಸಕ್ಕರೆ ಸೇರಿಸಿಕೊಳ್ಳಿ. ಈಗ ಮನೆಯಲ್ಲಿ ಯಾವುದೇ ಡ್ರೈ ಫ್ರೂಟ್ಸ್ ಇದ್ದರೆ ಹಾಕಿಕೊಳ್ಳಬಹುದು. ಪಿಸ್ತಾ, ಗೋಡಂಬಿ ಹಾಗೆ ಗಸೆಗಸೆ ಕೂಡ ಹಾಕಿಕೊಳ್ಳಬಹುದು. ಇದನ್ನು 1 ನಿಮಿಷ ಕುದಿಬರಲು ಬಿಟ್ಟು ಏಲಕ್ಕಿ ಪುಡಿ ಹಾಕಿ ಮಿಕ್ಸ್ ಮಾಡಿಕೊಂಡು ಒಲೆ ಆಫ್ ಮಾಡಿಕೊಳ್ಳಿ.
ನಂತರ ನೀವು ಈ ಹಾಲನ್ನು ಬಿಸಿಯಾಗಿಯೂ ಸೇವಿಸಬಹುದು, ಇಲ್ಲದಿದ್ದರೆ ತಣ್ಣನೆ ಮಾಡಿಕೊಂಡು ಇಲ್ಲವೆ ಫ್ರಿಡ್ಜ್ನಲ್ಲಿಟ್ಟು ತಣ್ಣಗೆ ಮಾಡಿಕೊಂಡು ಬಿಸಿಲಿನ ಸಮಯದಲ್ಲಿ ಸೇವಿಸಬಹುದು. ಇದು ದೇಹಕ್ಕೆ ಬಹಳ ತಂಪು ನೀಡಲಿದೆ. ನೀವು ಕೂಡ ಮನೆಯಲ್ಲಿ ಇದನ್ನು ಮಾಡಿ ಒಮ್ಮೆ ಸವಿದು ನೋಡಿ. ನಿಮ್ಮ ದೇಹ ಹೀಟ್ ಆಗಿದ್ದರೆ ಈ ಬಾದಾಮ್ ಮಿಲ್ಕ್ ಸೇವಿಸಿ ನೋಡಿ.



Click it and Unblock the Notifications
