Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಮನೆ ಅಕ್ಕಿಯಲ್ಲಿ ಹೋಟೆಲ್ ಸ್ಟೈಲ್ ಜೀರಾ ರೈಸ್..! ಹೇಗೆ ಮಾಡೋದು ಗೊತ್ತಾ?
ನೀವು ಹೋಟೆಲ್, ರಸ್ಟೋರೆಂಟ್ಗೆ ತೆರಳಿದಾಗ ಅದರಲ್ಲೂ ವೆಜ್ ಪ್ರಿಯರಾಗಿದ್ದರೆ ನಿಮಗೆ ಕಾರ್ಡ್ನಲ್ಲಿ ಕಾಣಿಸುವ ಹಲವು ಖಾದ್ಯಗಳ ಪೈಕಿ ಮೊದಲು ನಿಮ್ಮ ಕಣ್ಣಿಗೆ ಬೀಳುವುದು ಜೀರಾ ರೈಸ್. ವೆಜ್ ಪ್ರಿಯರಲ್ಲಿ ಪಲಾವ್, ಫ್ರೈಡ್ ರೈಸ್ ಜೊತೆಗೆ ಜೀರಾ ರೈಸ್ ಕೂಡ ಬಾಯಲ್ಲಿ ನೀರು ತರಿಸುತ್ತದೆ. ಹೋಟೆಲ್ನಲ್ಲಿ ಸಿಗುವಂತ ಈ ಜೀರಾ ರೈಸ್ ಸವಿಯಲು ಎಲ್ಲರಿಗೂ ಇಷ್ಟವಾಗುತ್ತೆ. ಹುಡಿ ಹುಡಿಯ ಈ ರೈಸ್ ಖಾದ್ಯ ಸವಿಯೋದು ಅಂದರೆ ಎಲ್ಲರಿಗೂ ಪ್ರಿಯ.
ಆದ್ರೆ ಹೋಟೆಲ್ನಲ್ಲಿ ಬಾಸ್ಮತಿ ರೈಸ್ ಬಳಸಿ ಈ ಜೀರಾ ರೈಸ್ ಮಾಡುವುದು ನೋಡಬಹುದು. ಹೀಗಾಗಿ ಅದ್ಭುತ ರುಚಿ ಹಾಗೆ ಹುಡಿ ಹುಡಿಯಾಗಿ ಖಾದ್ಯ ರೆಡಿಯಾಗುತ್ತೆ. ಹೋಗಾಗಿ ಹೋಟೆಲ್ನ ಜೀರಾ ರೈಸ್ ಬಹಳ ರುಚಿ ನೀಡಲಿದೆ. ಆದ್ರೆ ಮನೆಯಲ್ಲಿ ಅದೇ ರೀತಿ ಸಾಮಾನ್ಯ ರೈಸ್ ಬಳಸಿಯೂ ಈ ಜೀರಾ ರೈಸ್ ಮಾಡಬಹುದು ಎಂಬುದು ನಿಮಗೆ ಗೊತ್ತಾ?

ಹೌದು ಮನೆಯಲ್ಲಿ ಇರುವ ಸಾಮನ್ಯ ರೈಸ್ಯಿಂದಲೇ ಈ ರುಚಿ ರುಚಿಯ ಜೀರಾ ರೈಸ್ ಮಾಡಬಹುದು. ಹಾಗಾದ್ರೆ ನಾವಿಂದು ಈ ಜೀರಾ ರೈಸ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮನೆ ಅಕ್ಕಿಯಲ್ಲಿ ಜೀರಾ ರೈಸ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಅಕ್ಕಿ
- ಪಲಾವ್ ಎಲೆ
- ಅಡುಗೆ ಎಣ್ಣೆ
- ತುಪ್ಪ
- ಜೀರಿಗೆ
- ಗೋಡಂಬಿ
- ಹಸಿ ಮೆಣಸಿನಕಾಯಿ
- ಈರುಳ್ಳಿ
- ಕಾಳು ಮೆಣಸಿನ ಪುಡಿ
- ರುಚಿಗೆ ತಕ್ಕಷ್ಟು ಉಪ್ಪು
- ಕೊತ್ತಂಬರಿ ಸೊಪ್ಪು
ಮನೆ ಅಕ್ಕಿಯಲ್ಲಿ ಜೀರಾ ರೈಸ್ ಮಾಡುವುದು ಹೇಗೆ?
ಮೊದಲು ಒಂದು ಕುಕ್ಕರ್ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಗೂ ತುಪ್ಪ ಹಾಕಿಕೊಳ್ಳಿ. ನಂತರ ಜೀರಿಗೆ ಹಾಗೂ ಗೋಡಂಬಿ ಹಾಕಿ ಅರ್ಧ ನಿಮಿಷ ಫ್ರೈ ಮಾಡಿಕೊಳ್ಳಿ. ಸಣ್ಣ ಉರಿಯಲ್ಲಿ ಇದನ್ನು ಫ್ರೈ ಮಾಡಿಕೊಳ್ಳಿ. 15 ಪೀಸ್ ಗೋಡಂಬಿ ಬಳಸಿ. ನಂತರ ಇದಕ್ಕೆ ಮಧ್ಯಕ್ಕೆ ಸೀಳಿಕೊಂಡಿರುವ ಹಸಿ ಮೆಣಸು ಕೂಡ ಹಾಕಿ, ಹಾಗೆ ಸಣ್ಣದಾಗಿ ಕತ್ತರಿಸಿಕೊಂಡಿರುವ ಈರುಳ್ಳಿ ಸಹ ಹಾಕಿ ಫ್ರೈ ಮಾಡಿ.
ಈರುಳ್ಳಿ ಹಾಕಿದ ಬಳಿಕ 2 ನಿಮಿಷ ಫ್ರೈ ಮಾಡಿ. ನಂತರ ಇದಕ್ಕೆ ಕಾಳು ಮೆಣಸು ಪುಡಿ ಸೇರಿಸಿ ಮಿಕ್ಸ್ ಮಾಡಿಕೊಳ್ಳಿ. ನಂತರ 2 ಕಪ್ ಸಾಮಾನ್ಯ ಅಕ್ಕಿಯನ್ನು ಸೇರಿಸಿಕೊಳ್ಳಿ. ಅಕ್ಕಿ ಹಾಕುವ ಮುನ್ನ ಒಂದು ಬಾರಿ ತೊಳೆದು ತಕ್ಷಣ ಸೇರಿಸಿಕೊಳ್ಳಿ. ಅಕ್ಕಿಯನ್ನು ನೆನೆಸಿ ಇಡಲು ಮುಂದಾಗಬೇಡಿ. ಅಕ್ಕಿ ಹಾಕಿದ ಬಳಿಕ ಸ್ವಲ್ಪ ಕಾಲ ಮಿಕ್ಸ್ ಮಾಡಿಕೊಳ್ಳಿ.
2 ಕಪ್ ಅಕ್ಕಿ ಹಾಕಿದ್ದರೆ ಇದಕ್ಕೆ 3 ಮುಕ್ಕಾಲು ಕಪ್ ನೀರು ಹಾಕಿ. ಅಥವಾ 4 ಕಪ್ಗಿಂತ ಸ್ವಲ್ಪ ಕಡಿಮೆ ನೀರು ಹಾಕಿಕೊಳ್ಳಿ. ನಂತರ ರುಚಿಗೆ ತಕ್ಕಷ್ಟು ಉಪ್ಪು, ಹಾಗೆ ಸಣ್ಣದಾಗಿ ಕತ್ತರಿಸಿಕೊಂಡಿರುವ ಕೊತ್ತಂಬರಿ ಸೇರಿಸಿ ಮಿಕ್ಸ್ ಮಾಡಿಕೊಂಡು ಮುಚ್ಚಳ ಮುಚ್ಚಿ ಎರಡು ಸೀಟಿ ಹೊಡೆಸಿಕೊಳ್ಳಿ. ನಂತರ ಕುಕ್ಕರ್ ಸಂಪೂರ್ಣ ತಣ್ಣಗಾಗಲು ಬಿಡಿ. ಅನಂತರ ಕುಕ್ಕರ್ ಮುಚ್ಚಳ ತೆರೆದು ಮಿಕ್ಸ್ ಮಾಡಿಕೊಂಡರೆ ನಿಮ್ಮ ಮುಂದೆ ಜೀರಾ ರೈಸ್ ರೆಡಿಯಾಗುತ್ತದೆ. ನೀವು ಅಳತೆ ಪ್ರಕಾರ ನೀರು, ಅಕ್ಕಿ ಹಾಕಿ ಮಾಡಿದರೆ ಹೋಟೆಲ್ ರುಚಿಯ ಜೀರಾ ರೈಸ್ ರೆಡಿಯಾಗುತ್ತದೆ. ನೀವು ಕೂಡ ಮನೆಯಲ್ಲಿ ಈ ರೀತಿ ರೈಸ್ ಮಾಡಿ ನೋಡಿ.



Click it and Unblock the Notifications
