Latest Updates
-
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ?
ರೆಸ್ಟೋರೆಂಟ್ ರುಚಿಯ ಜೀರಾ ರೈಸ್ ಮಾಡಿ ನೋಡಿ..! ಅದ್ಭುತ ರುಚಿಯ ರೆಸಿಪಿ ಇದು!!
ನೀವು ಹೋಟೆಲ್ ಆಥವಾ ರೆಸ್ಟೋರೆಂಟ್ಗೆ ತೆರಳದ್ದಾಗ ಅದರಲ್ಲೂ ವೆಜ್ ಪ್ರಿಯರ ಕಣ್ಣಿಗೆ ಪಲಾವ್, ರೈಸ್ ಬಾತ್, ಫ್ರೈಡ್ ರೈಸ್ ಹಾಗೆ ಜೀರಾ ರೈಸ್ ಕಡೆಗೆ ಹೆಚ್ಚು ಒಲುವು ಹೊಂದುವುದು ನೋಡಿದ್ದೇವೆ. ಹೀಗಾಗಿ ಜೀರಾ ರೈಸ್ಗೆ ಹೆಚ್ಚು ಬೇಡಿಕೆ ಇರೋದು ನೋಡಬಹುದು. ಅತ್ಯಂತ ರುಚಿಕರವಾಗಿ ಈ ಜೀರಾ ರೈಸ್ ಮಾಡಿಸ ಸವಿಯಬಹುದು.
ಈ ಹೋಟೆಲ್ನಲ್ಲಿ ಹಾಗೂ ರೆಸ್ಟೋರೆಂಟ್ನಲ್ಲಿ ಮಾಡುವಂತೆಯೇ ನಾವು ಮನೆಯಲ್ಲಿ ಇಂದು ಈ ಜೀರಾ ರೈಸ್ ಮಾಡುವ ಕುರಿತು ತಿಳುದುಕೊಳ್ಳೋಣ. ಮನೆಯಲ್ಲಿ ಈ ಜೀರಾ ರೈಸ್ ಮಾಡಿದ್ರೆ ಎಲ್ಲರಿಗೂ ಇಷ್ಟ ಆಗೋದ್ರಲ್ಲಿ ಅನುಮಾನವೇ ಇಲ್ಲ. ಎಲ್ಲಾ ಸಮಯದಲ್ಲೂ ಇದನ್ನು ಸವಿಯಬಹುದು. ಬೆಳಗ್ಗೆ ತಿಂಡಿಗೆ, ಮಧ್ಯಾಹ್ನದ ಊಟಕ್ಕೆ ಅಥವಾ ರಾತ್ರಿ ಊಟಕ್ಕೂ ಕೂಡ ಮಾಡಿ ಸವಿಯಬಹುದು.

ಹಾಗಾದ್ರೆ ನಾವು ಈ ಜೀರಾ ರೈಸ್ ಅನ್ನು ಮನೆಯಲ್ಲೇ ಮಾಡುವುದು ಹೇಗೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ. ಈ ಜೀರಾ ರೈಸ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಜೀರಾ ರೈಸ್ ಮಾಡುವ ಸರಿಯಾದ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಜೀರಾ ರೈಸ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಜೀರಾ ಅಕ್ಕಿ- 500 ಗ್ರಾಂ
- ಈರುಳ್ಳಿ - 2
- ತುಪ್ಪ- 50 ಮಿಲಿ
- ಜೀರಿಗೆ
- ಕಾಳು ಮೆಣಸಿನ ಪುಡಿ
- ಗೋಡಂಬಿ
- ಹಸಿ ಮೆಣಸಿನಕಾಯಿ
- ಎಣ್ಣೆ
- ಉಪ್ಪು
ಜೀರಾ ರೈಸ್ ಮಾಡುವ ವಿಧಾನವೇನು?
ಮೊದಲು ಅಳತೆ ಕಪ್ ತೆಗೆದುಕೊಂಡು ಅದರಲ್ಲಿ ಜೀರಾ ಅಕ್ಕಿ ತೆಗೆದುಕೊಂಡು ಒಂದು ಬೌಲ್ಗೆ ಹಾಕಿ ಚೆನ್ನಾಗಿ ತೊಳೆದುಕೊಳ್ಳಿ. ನಂತರ ಒಂದು ಕುಕ್ಕರ್ ಗೆ ಈ ರೈಸ್ ಹಾಕಿ 1 ಕಪ್ ಅಕ್ಕಿಗೆ ಮೂರು ಕಪ್ ನೀರು ಹಾಕಿಕೊಳ್ಳಿ. 4 ಕಪ್ ನೀರಿನ ಅಗತ್ಯವಿಲ್ಲ. ನಂತರ ಇದಕ್ಕೆ ಸ್ಪೂನ್ ಎಣ್ಣೆ, ಉಪ್ಪು ಕೂಡ ಸೇರಿಸಿ ಒಮ್ಮೆ ತಿರುಗಿಸಿಕೊಂಡು ಮುಚ್ಚಳ ಮುಚ್ಚಿ 2 ಸೀಟಿ ಹೊಡೆಯಲು ಬಿಡಿ.
2 ಸೀಟಿ ಹೊಡೆದ ಬಳಿಕ ತಣ್ಣಗಾಗಲು ಬಿಟ್ಟು ಮುಚ್ಚಳ ತೆರೆಯಿರಿ. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ತುಪ್ಪ ಹಾಕಿಕೊಂಡು ಬಳಿಕ ಇದಕ್ಕೆ ಗೋಡಂಬಿ ಹಾಕಿ ಫ್ರೈ ಮಾಡಿ ತೆಗೆದಿಟ್ಟುಕೊಳ್ಳಿ. ನಂತರ ಇದೇ ಪಾತ್ರೆಗೆ ಜೀರಿಗೆ, ಹಸಿ ಮೆಣಸು ಹಾಕಿ ಫ್ರೈ ಮಾಡಿ. ನಂತರ ಇದಕ್ಕೆ ಸಣ್ಣದಾಗಿ ಹೆಚ್ಚಿರುವ ಈರುಳ್ಳಿ ಹಾಕಿ 3 ನಿಮಿಷ ಫ್ರೈ ಮಾಡಿಕೊಳ್ಳಿ. ನಂತರ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಕ್ಸ್ ಮಾಡುತ್ತಾ ಒಲೆ ಆಫ್ ಮಾಡಿಕೊಳ್ಳಿ.
ಈಗ ಕುಕ್ಕರ್ನಲ್ಲಿರುವ ಅನ್ನವನ್ನು ಹುಡು ಹುಡಿಯಾಗಿ ಮಾಡಿಕೊಂಡು ನಿಧಾನವಾಗಿ ಈ ಒಲೆ ಮೇಲಿನ ಪಾತ್ರೆಗೆ ಹಾಕಿಕೊಳ್ಳಿ. ನಂತರ ಇದರ ಮೇಲೆ ಮೆಣಸಿನ ಪುಡಿ, ಫ್ರೈ ಮಾಡಿರುವ ಹೋಡಂಬಿ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಮಸಾಲೆ ಚೆನ್ನಾಗಿ ಹಿಡಿಯುವಂತೆ ನಿಧಾನವಾಗಿ ಮಿಕ್ಸ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಜೀರಾ ರೈಸ್ ರೆಸಿಪಿ ರೆಡಿಯಾಗುತ್ತದೆ. ಈ ರೀತಿ ನೀವು ಕೂಡ ಮನೆಯಲ್ಲಿ ಈ ಜೀರಾ ರೈಸ್ ಮಾಡಿ ನೋಡಿ.



Click it and Unblock the Notifications
