Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
15 ನಿಮಿಷದಲ್ಲಿ ಬೊಂಬಾಟ್ ರುಚಿಯ ಜಿಲೇಬಿ ಮಾಡಬಹುದು..! ಹಿಟ್ಟು ಈ ರೀತಿ ರೆಡಿ ಮಾಡಿ..!
ಸಿಹಿ ತಿಂಡಿ ಮಾಡಿ ಸವಿಯೋದು ಎಲ್ಲರ ಬಯಕೆ ಆಗಿರುತ್ತೆ, ಅದ್ರಲ್ಲೂ ಜಿಲೇಬಿ ಎಲ್ಲರ ಮಚ್ಚಿನ ಸಿಹಿ ತಿಂಡಿ. ರಸ್ತೆ ಬದಿ ಸಿಗುವ ಜಿಲೇಬಿ ಸವಿಯಲು ಜನ ಸಾಲಿನಲ್ಲಿ ನಿಂತಿರುತ್ತಾರೆ. ದೇಶದ ಯಾವ ಮೂಲೆಗೆ ಹೂದ್ರು ಅಲ್ಲಿ ಜಿಲೇಬಿ ಸಿಕ್ಕೆ ಸಿಗುತ್ತೆ. ಈಗಂತೂ ಚಿತ್ರ ವಿಚಿತ್ರ ಜಿಲೇಬಿಗಳು ಬಂದಿವೆ.
ಬೇರೆ ಬೇರೆ ಬಣ್ಣದ ಜಿಲೇಬಿ ಸಿಗುತ್ತೆ. ಕಪ್ಪು, ಹಳದಿ, ಕೆಂಪು, ಕೇಸರಿ ಹೀಗೆ ಹತ್ತಾರು ಬಗೆ ಇದೆ. ಬಾಯಲ್ಲಿ ಇಟ್ಟರೆ ಕರಗುವ ಜಿಲೇಬಿ ಅಂದ್ರೆ ಎಲ್ಲರಿಗೂ ಸಿಕ್ಕಾಪಟ್ಟೆ ಇಷ್ಟ. ಮಕ್ಕಳಿಂದ ಹಿಡಿದು ಹಿರಿಯರು ಸಹ ಇದನ್ನು ಸವಿಯುತ್ತಾರೆ. ಸಕ್ಕರೆ ಪಾಕದಿಂದ ತುಂಬಿಕೊಂಡಿರುವ ರುಚಿಕರವಾದ ಸಿಹಿ ತಿಂಡಿ ಎಂದರೆ ಜಿಲೇಬಿ. ಇದರ ಒಂದು ತುಂಡನ್ನು ಬಾಯಲ್ಲಿ ಇರಿಸಿಕೊಂಡರೆ ಸಾಕು ನಾಲಿಗೆ ಮತ್ತೆ ಮತ್ತೆ ಬೇಕು ಎನ್ನುವ ಬಯಕೆಯನ್ನು ಹೆಚ್ಚಿಸುತ್ತದೆ.

ಹಬ್ಬ, ಶುಭ ಸಮಾರಂಭದಲ್ಲಿ ಜಿಲೇಬಿ ಇರಲೇಬೇಕು. ಉತ್ತರ ಭಾರತದಲ್ಲಂತೂ ಬೆಳಗ್ಗಿನ ತಿಂಡಿಗೆ ಜಿಲೇಬಿ ಸವಿಯುವವರು ಇದ್ದಾರೆ. ಆದ್ರೆ ಈ ಜಿಲೇಬಿ ಮಾಡುವುದು ಕಷ್ಟ ಎಂದು ಹಲವರು ಅಂದುಕೊಂಡಿರುತ್ತಾರೆ. ಆದ್ರೆ ಜಿಲೇಬಿ ಮಾಡುವುದು ತುಂಬಾನೆ ಸುಲಭ.
ನಾವಿಂದು ಸಹ ಸಿಹಿ ಸಿಹಿಯಾದ ಈ ಜಿಲೇಬಿಯನ್ನು ಕೇವಲ 15 ನಿಮಿಷದಲ್ಲಿ ಮಾಡುವುದು ಹೇಗೆ ಎಂಬುದನ್ನು ತಿಳಿಯೋಣ, ಜಿಲೇಬಿ ಮಾಡಲು ಬೇಕಾಗುವ ಪದಾರ್ಥಗಳು ಯಾವುದು? ಮಾಡುವ ವಿಧಾನವೇನು? ಹಿಟ್ಟು ಮಾಡುವುದು ಹೇಗೆ ಎಂಬುದನ್ನು ನಾವಿಂದು ತಿಳಿಯೋಣ.
ಜಿಲೀಬಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಸಕ್ಕರೆ - 2 ಕಪ್
- ನೀರು - 1 ಕಪ್
- ಏಲಕ್ಕಿ ಪುಡಿ - 1/4 ಟೀಸ್ಪೂನ್
- ನಿಂಬೆ ರಸ - 1/2 ಟೀಸ್ಪೂನ್
- ಕೇಸರಿ ಬಣ್ಣ
- ಮೈದಾ - 1 ಕಪ್
- ತುಪ್ಪ - 1 ಟೀಸ್ಪೂನ್
- ಉಪ್ಪು
- ಹುರಿಯಲು
ಜಿಲೀಬಿ ಮಾಡುವುದು ಹೇಗೆ?
ಮೊದಲು ಸಕ್ಕರೆ ಪಾಕ ಮಾಡಲು 2 ಕಪ್ ಸಕ್ಕರೆ ತೆಗೆದುಕೊಂಡು ಒಂದು ಕಪ್ ನೀರು ಹಾಕಿಕೊಂಡು ಕುದಿಯಲು ಬಿಡಿ. ಸಕ್ಕರೆ ಕರಗಿ ದಪ್ಪವಾಗಿ ಪಾಕವಾಗಬೇಕು. ಇದಕ್ಕೆ ಏಲಕ್ಕಿ ಪುಡಿ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಇದರ ಜೊತೆಗೆ ಅರ್ಧ ಚಮಚ ನಿಂಬೆ ರಸ ಹಾಕಿಕೊಂಡಿ ಮಿಕ್ಸ್ ಮಾಡಿಕೊಳ್ಳಿ.
ಈಗ ಒಂದು ಬೌಲ್ಗೆ ಮೈದಾ ಹಿಟ್ಟು, ಹುಳಿ ಮೊಸರು, ಕೇಸರಿ ಬಣ್ಣ, ಹಾಕಿ ಸ್ವಲ್ಪ ಸ್ವಲ್ಪ ನೀರು ಹಾಕಿಕೊಳ್ಳುತ್ತಾ ಹಿಟ್ಟು ಕಲಸಿಕೊಳ್ಳಿ. ಹಿಟ್ಟು ಗಂಟು ಇರದಂತೆ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ದೋಸೆ ಹಿಟ್ಟಿಗಿಂತ ಸ್ವಲ್ಪ ಗಟ್ಟಿ ಇರುವಂತೆ ಹಿಟ್ಟು ರೆಡಿ ಮಾಡಿಕೊಳ್ಳಿ.
ಹಿಟ್ಟು ಮಾಡಿಕೊಳ್ಳುವಾಗ ಇನೋ ಪೌಡರ್ (ಸೋಡಾ) ಹಾಕಿಕೊಳ್ಳಿ. ಸ್ವಲ್ಪವೇ ನೀರು ಹಾಕಿ ಮಿಕ್ಸ್ ಮಾಡಿಕೊಳ್ಳಿ. ಈ ಸೋಡಾ ಹಾಕುವುದರಿಂದ ಜಿಲೇಬಿ ಉಬ್ಬಿ ಬರುತ್ತದೆ. ಇದರ ಬಳಿಕ ತುಪ್ಪ ಹಾಕಿ ಮಿಕ್ಸ್ ಮಾಡಿದರೆ ಜಿಲೇಬಿ ಹಿಟ್ಟು ರೆಡಿಯಾಗಿತ್ತದೆ.
ಈಗ ಒಲೆ ಮೇಲೆ ಎಣ್ಣೆ ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ಬಳಿಕ ಜಿಲೇಬಿಯನ್ನು ಯಾವುದಾದರು ಪ್ಲಾಸ್ಟಿಕ್ ಗೆ, ಬಟ್ಟೆಗೆ ಹಾಕಿ ತುದಿಯಲ್ಲಿ ತೂತು ಮಾಡಿಕೊಳ್ಳಿ. ಬಳಿಕ ನಿಧಾನವಾಗಿ ಎಣ್ಣೆಗೆ ಒಂದೊಂದೆಯಾಗಿ ಜಿಲೇಬಿ ಬಿಟ್ಟುಕೊಳ್ಳಿ. ಜಿಲೇಬಿ ಬಿಟ್ಟ ಬಳಿಕ ಚೆನ್ನಾಗಿ ಕಾಯಿಸಿಕೊಳ್ಳಿ. ನಂತರ ಸಕ್ಕರೆ ಪಾಕಕ್ಕೆ ಹಾಕಿ ಅದ್ದಬೇಕು. ಒಂದೆರಡು ನಿಮಿಷ ಪಾಕದಲ್ಲಿಟ್ಟು ಬಳಿಕ ತೆಗೆದು ಒಂದು ಪಾತ್ರೆಗೆ ಹಾಕಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಜಿಲೇಬಿ ರೆಡಿಯಾಗಿರುತ್ತದೆ.



Click it and Unblock the Notifications
