Latest Updates
-
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು
ಮಕ್ಕಳ ಬಾಯಲ್ಲಿ ನೀರು ತರಿಸುವ ಬೆಲ್ಲದ ಅನ್ನ ಮಾಡಿ..! ಎಷ್ಟೊಂದು ಸುಲಭ ಗೊತ್ತಾ?
ಬಾಯಿಗೆ ರುಚಿ ತರುಚಿಯಾಗಿ ಸಿಗುವಂತಹ ಹತ್ತು ಹಲವು ರೀತಿಯ ಖಾದ್ಯ ಮಾಡಿಕೊಂಡು ಸವಿಯುವುದು ಕಾಮನ್, ಆದ್ರೆ ನಾವು ಆರೋಗ್ಯಕ್ಕೂ ಮುಖ್ಯ ಹಾಗೆ ಬಾಯಿಗು ರುಚಿ ನೀಡುವಂತಹ ಖಾದ್ಯ ಮಾಡಿ ಸವಿಯುವುದು ಬಲು ಅಪರೂಪ. ಹೀಗಾಗಿ ನಾವಿಂದು ಬೆಲ್ಲದ ಅನ್ನ ಮಾಡುವ ಕುರಿತು ತಿಳಿಯೋಣ. ಬೆಲ್ಲದ ಅನ್ನ ನೀವೆಲ್ಲಾ ಸವಿದಿರುತ್ತೀರಿ. ಆದ್ರೆ ಅದನ್ನು ಮಾಡುವಾಗ ಸ್ವಲ್ಪ ಯಡವಟ್ಟಾದರು ನೀರು ನೀರಾಗುತ್ತದೆ.
ನಾವಿಂದು ಈ ಬೆಲ್ಲದ ಅನ್ನ ಮಾಡಿ ಸಂಜೆ ಸ್ನ್ಯಾಕ್ಸ್‌ಗೆ ಅಥವಾ ಬೆಳಗ್ಗೆ ತಿಂಡಿಗೆ ಸವಿದರೆ ಅದರ ರುಚಿ ಬೊಂಬಾಟ್ ಆಗಿರುತ್ತೆ. ಹೀಗಾಗಿ ನಾವಿಂದು ಮನೆಯಲ್ಲಿ ಸರಿಯಾದ ರೀತಿಯಲ್ಲಿ ಬೆಲ್ಲದ ಅನ್ನ ಮಾಡುವ ಕುರಿತಂತೆ ತಿಳಿದುಕೊಳ್ಳೋಣ. ಈ ಬೆಲ್ಲದ ಅನ್ನ ಮಾಡುವುದ ಹೇಗೆ? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬ ಕುರಿತು ತಿಳಿಯೋಣ.

ಬೆಲ್ಲದ ಅನ್ನ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ. ಇದರ ರುಚಿ ಹೇಗಿರಲಿದೆ ಎಂಬ ಕುರಿತಂತೆ ನಾವಿಂದು ತಿಳಿದುಕೊಳ್ಳೋಣ. ಈ ಬೆಲ್ಲದ ಅನ್ನವನ್ನ ಮಕ್ಕಳು ಇಷ್ಟ ಪಟ್ಟು ಸವಿಯುತ್ತಾರೆ. ಹಾಗೆ ಇದನ್ನು ಕಡಿಮೆ ವಸ್ತುಗಳ ಬಳಸಿ, ಕಡಿಮೆ ಸಮಯದಲ್ಲಿ ಮಾಡಬಹುದು. ಮಾಡುವ ವಿಧಾನ ಇಲ್ಲಿ ನೀಡಿದ್ದೇವೆ ನೋಡಿ.
ಬೆಲ್ಲದ ಅನ್ನ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಒಂದು ಲೋಟ ಅಕ್ಕಿ
- ಬೆಲ್ಲ- 1 ಬೌಲ್
- ಗೋಡಂಬಿ
- ದ್ರಾಕ್ಷಿ
- ಬಾದಾಮಿ
- ಏಲಕ್ಕಿ
- ತುಪ್ಪ
- ಎಣ್ಣೆ
ಬೆಲ್ಲದ ಅನ್ನ ಮಾಡುವ ವಿಧಾನ
ಬೆಲ್ಲದ ಅನ್ನ ಮಾಡಲು ಮೊದಲು 1 ಗ್ಲಾಸ್‌ನಲ್ಲಿ ಅಕ್ಕಿ ತೆಗೆದುಕೊಂಡು ಅದನ್ನು ಒಂದು ಬೌಲ್‌ಗೆ ಹಾಕಿ ತೊಳೆದುಕೊಂಡು ಬಳಿಕ ನೆನೆಸಿಡಬೇಕು. ಈಗ ಬೆಲ್ಲದ ಉಂಡೆಗಳನ್ನು ಪುಡಿ ಪುಡಿ ಮಾಡಿಕೊಂಡು ಒಂದು ಬೌಲ್‌ಗೆ ಹಾಕಿಟ್ಟುಕೊಳ್ಳಬೇಕು.
ಈಗ ಒಲೆ ಮೇಲೆ ಒಂದು ಕುಕ್ಕರ್ ಇಟ್ಟು ಅದಕ್ಕೆ ತುಪ್ಪ ಹಾಕಿ ತುಪ್ಪ ಕಾದ ಬಳಿಕ ಅದರಲ್ಲಿ ಏಲಕ್ಕಿ ಪುಡಿ, ಗೋಡಂಬಿ, ದ್ರಾಕ್ಷಿ, ಬಾದಾಮಿ ಹಾಕಿಕೊಂಡು ಚೆನ್ನಾಗಿ ಫ್ರೈ ಮಾಡಿಕೊಳ್ಳಬೇಕು. ಬಳಿಕ ಇದಕ್ಕೆ ಪುಡಿ ಮಾಡಿಕೊಂಡಿರು ಬೆಲ್ಲವನ್ನು ಹಾಕಿ ಕಲಸಿಕೊಳ್ಳಿ ಆಗ ಬೆಲ್ಲ ಕರಗುತ್ತದೆ. ಇಲ್ಲವೆ ಅಳತೆ ಪ್ರಕಾರವಾಗಿ ನೀರು ಹಾಕಿಕೊಳ್ಳಿ.
ನೀರು ಅಕ್ಕಿಯ ಅಳತೆಯಂತೆ ತೆಗೆದುಕೊಂಡು ಇದಕ್ಕೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿದರೆ ಬೆಲ್ಲ ಕರಗುತ್ತದೆ. ಈ ವೇಳೆ ಚಿಟಿಕೆಯಷ್ಟು ಉಪ್ಪು ಸಹ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಈಗ ನೀರು ಕುದಿಬರಲು ಬಿಡಬೇಕು. ನೀರು ಕುದಿ ಬರಲು ಆರಂಭಿಸಿದಾಗ ತೊಳೆದು ರೆಡಿ ಮಾಡಿಕೊಂಡಿರುವ ಅಕ್ಕಿಯನ್ನು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ.
ಅನಂತರ ಕುಕ್ಕರ್ ಮುಚ್ಚಳ ಮುಚ್ಚಿ ಸುಮಾರು ಮೂರು ಸೀಟಿ ಹೊಡೆಯಲು ಬಿಡಬೇಕು. ಮೂರು ಸೀಟಿ ಹೊಡೆದ ಬಳಿಕ ಗ್ಯಾಸ್ ಆಫ್ ಮಾಡಿ ಕುಕ್ಕರ್‌ನಿಂದ ಗ್ಯಾಸ್ ಖಾಲಿಯಾಗಲು ಕಾದು ಅನಂತರ ಮುಚ್ಚಳ ತೆರೆದು ಒಮ್ಮೆ ಮಿಕ್ಸ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಬೆಲ್ಲದ ಅನ್ನ ರೆಡಿಯಾಗುತ್ತದೆ. ಇದನ್ನು ನೀವು ಮನೆಯಲ್ಲಿ ಯಾವುದಾದರು ಪೂಜೆ ವೇಳೆ ಪ್ರಸಾದವಾಗಿ, ಬೆಳಗ್ಗೆ ತಿಂಡಿಗೆ, ಮಕ್ಕಳಿಗೆ ನೀಡಲು ಕೂಡ ಮಾಡಿಕೊಳ್ಳಬಹುದು. ನೀವು ಕೂಡ ಮನೆಯಲ್ಲಿ ಒಮ್ಮೆ ಇದನ್ನು ಟ್ರೈ ಮಾಡಿ ನೋಡಿ.



Click it and Unblock the Notifications