Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಪಾಕವಿಲ್ಲದೆ..ಸಕ್ಕರೆ ಬಳಸದೆ 2 ವಸ್ತು ಇದ್ದರೆ ಬೆಲ್ಲದ ಮಿಠಾಯಿ ರೆಡಿ..! ಮಾಡೋದು ಹೇಗೆ?
ನೀವು ಚಿಕ್ಕವರಿರುವಾಗ ಅಂಗಡಿಗಳಲ್ಲಿ, ಬೇಕರಿಗಳಲ್ಲಿ ಮಿಠಾಯಿ ಸವಿದಿರುವ ನೆನಪು ಇದ್ಯಾ? ಮಿಠಾಯಿ ಆಗೆಲ್ಲಾ ಒಂದು ರೂಪಾಯಿಗೆ ಸಿಗುತ್ತಿದ್ದ ಅತ್ಯಂತ ರುಚಿಕರ ತಿಂಡಿಯಾಗಿತ್ತು. ಕೊಬ್ಬರಿ, ಬೆಲ್ಲದ ರುಚಿ ಒಮ್ಮೆ ಸವಿದರೆ ಅದರ ರುಚಿ ಹೇಳತೀರದು. ಈಗಲೂ ಬಾಯಲ್ಲಿ ನೀರು ತರಿಸುವಂತಹ ರುಚಿಯಲ್ಲಿ ಈ ಬೆಲ್ಲದ ಮಿಠಾಯಿ ಸಿಗುತ್ತಿತ್ತು. ಒಣ ಕೊಬ್ಬರಿಯ ರುಚಿ ಬಾಯಲ್ಲಿ ಇನ್ನೂ ಹಾಗೆ ಇದೆ ಎನ್ನುವ ಅನುಭವವಾಗುತ್ತೆ.
ಈ ಬೆಲ್ಲದ ಮಿಠಾಯಿ ಈಗ ಕಡಿಮೆಯಾಗಿದೆ. ಯಾವ ಅಂಗಡಿಯಲ್ಲಿ ಹುಡುಕಿದರೂ ಸಿಗಲ್ಲ. ಸಿಕ್ಕರೂ ಅದರ ರುಚಿ ಬಣ್ಣ ಈಗ ಬದಲಾಗಿದೆ, ದರವೂ ಹೆಚ್ಚಾಗಿದೆ. ಆದ್ರೆ ಈ ಮಿಠಾಯಿಯನ್ನ ಮನೆಯಲ್ಲೂ ಮಾಡಬಹುದು. ಅದೆಷ್ಟೋ ಮನೆಯಲ್ಲಿ ಬೆಲ್ಲದ ಮಿಠಾಯಿಯನ್ನ ಸಿಹಿಯಾಗಿ ಮಾಡುತ್ತಿದ್ದರು. ಶುಭ ಕಾರ್ಯಕ್ರಮದಲ್ಲಿ, ಅತಿಥಿಗಳಿಗೆ ನೀಡಲು, ಹಬ್ಬದಲ್ಲಿ ಮಿಠಾಯಿ ಮಾಡುತ್ತಿದ್ದರು.

ಈ ರುಚಿ ಮಕ್ಕಳಿಗಂತು ಬಹಳ ಇಷ್ಟವಾಗಿತಿತ್ತು. ಹಿರಿಯರಿಗೂ ಕೂಡ ಬಹಳ ಇಷ್ಟದ ತಿಂಡಿ ಇದು. ಇನ್ನು ಇದಕ್ಕೆ ಸಕ್ಕರೆ ಪಾಕದ ಅಗತ್ಯವಿಲ್ಲದೆ ಬೆಲ್ಲದಲ್ಲಿ ಮಾಡುವುದರಿಂದ ಆರೋಗ್ಯಕ್ಕೂ ಒಳ್ಳೆಯದು. ಮಾಡುವುದು ಕೂಡ ತುಂಬ ಸುಲಭವಾಗಿತ್ತು. ಹಾಗಾದ್ರೆ ನಾವಿಂದು ಬೆಲ್ಲದ ಮಿಠಾಯಿ ಮಾಡುವ ಕುರಿತು ತಿಳಿದುಕೊಳ್ಳೋಣ.
ಬೆಲ್ಲದ ಮಿಠಾಯಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಬೆಲ್ಲದ ಮಿಠಾಯಿ ಮಾಡುವುದು ಹೇಗೆ?, ಬೆಲ್ಲದ ಮಿಠಾಯಿ ಮಾಡಲು ಯಾವೆಲ್ಲಾ ತಯಾರಿ ಬೇಕಾಗುತ್ತದೆ? ಎಷ್ಟು ಸಮಯ ಹಿಡಿಯುತ್ತದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಬೆಲ್ಲದ ಮಿಠಾಯಿ ಮಾಡಲು ಬೇಕಾಗುವ ಪದಾರ್ಥಗಳು
- ಬೆಲ್ಲ - 1 ಬೌಲ್
- ತೆಂಗಿನ ಕಾಯಿ ತುರಿ - 2 ಬೌಲ್
- ಏಲಕ್ಕಿ - 5
- ತುಪ್ಪ
ಬೆಲ್ಲದ ಮಿಠಾಯಿ ಮಾಡುವುದು ಹೇಗೆ?
ಮೊದಲು ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ತೆಂಗಿನಕಾಯಿ ತುರಿ ಹಾಕಿ ಒಂದೆರಡು ಸುತ್ತು ರುಬ್ಬಬೇಕು. ಸ್ವಲ್ಪ ಪುಡಿ ಪುಡಿ ಆದರೆ ಸಾಕಾಗುತ್ತದೆ. ನೀರು ಹಾಕಿಕೊಳ್ಳದೆ ರುಬ್ಬಬೇಕು. ನುಣ್ಣಗೆ ರುಬ್ಬಿಕೊಳ್ಳಬೇಡಿ. ತುಂಬಾ ನುಣ್ಣಗೆ ರುಬ್ಬಿಕೊಂಡರೆ ಮಿಠಾಯಿ ಚೆನ್ನಾಗಿ ಬರುವುದಿಲ್ಲ. ಅಂಟು ಅಂಟಾಗುವ ಸಾಧ್ಯತೆ ಇರುತ್ತದೆ.
ಈಗ ಉಂಡೆ ಬೆಲ್ಲವನ್ನು ಜಜ್ಜಿ ಪುಡಿ ಪುಡಿ ಮಾಡಿಟ್ಟುಕೊಳ್ಳಿ. 2 ಬೌಲ್ ತೆಂಗಿನ ತುರಿ ತೆಗೆದುಕೊಂಡಿದ್ದರೆ 1 ಕಪ್ ಬೆಲ್ಲ ತೆಗೆದುಕೊಳ್ಳಿ. ಇದಕ್ಕೆ ಏಲಕ್ಕಿಯನ್ನು ಬಿಡಿಸಿ ಅದರ ಕಾಳನ್ನು ಜಜ್ಜಿ ಪುಡಿ ಮಾಡಿಟ್ಟುಕೊಳ್ಳಿ.
ಈಗ ಒಂದು ಪಾತ್ರೆ ಒಲೆ ಮೇಲೆ ಇಟ್ಟು ರುಬ್ಬಿಕೊಂಡ ತೆಂಗಿನ ತುರಿ ಹಾಕಿಕೊಳ್ಳಿ. 2 ನಿಮಿಷ ಹುರಿದ ಬಳಿಕ ಇದಕ್ಕೆ 2 ಸ್ಪೂನ್ ತುಪ್ಪ ಹಾಕಿ 3 ನಿಮಿಷ ಹುರಿದುಕೊಳ್ಳಿ. ಈಗ ಜಜ್ಜಿಕೊಂಡಿರುವ ಬೆಲ್ಲವನ್ನು ಹಾಕಿಕೊಂಡು ಮಿಕ್ಸ್ ಮಾಡಿ. ನಿಧಾನವಾಗಿ ತಿರುಗಿಸುತ್ತಾ ಹೋದಂತೆ ಬೆಲ್ಲದ ಜೊತೆ ಕಾಯಿ ಬೆರೆತು ಹೋಳಿಗೆಯ ಹೂರ್ಣದಂತೆ ಬದಲಾಗುತ್ತದೆ. 25 ನಿಮಿಷ ಇದನ್ನು ತಿರುಗಿಸುತ್ತಾ ಇರಿ.
ಈಗ ಒಂದು ತಟ್ಟೆಗೆ ಚೂರು ತುಪ್ಪ ಸವರಿಕೊಂಡು ಮಿಠಾಯಿ ಹಾಕಲು ತಯಾರಿ ಮಾಡಿ ಇಡಿ. ಒಲೆ ಮೇಲೆ ಇರುವ ಮೀಠಾಯಿ ಗಟ್ಟಿ ಗಟ್ಟಿ ಆಗುತ್ತಿದೆ ಎಂಬುದು ತಿಳಿಯುತ್ತಿದ್ದಂತೆ ಅದನ್ನು ತಟ್ಟೆಗೆ ಹಾಕಿಕೊಳ್ಳಬೇಕು. ನಂತರ ನಿಮಗೆ ಎಷ್ಟು ದಪ್ಪಕ್ಕೆ ಬೇಕೋ ಹಾಗೆ ಸವರಿಕೊಳ್ಳಿ. ಇಷ್ಟಾದ ಬಳಿಕ ಯಾವ ಗಾತ್ರಕ್ಕೆ ಬೇಕೋ ಆ ಗಾತ್ರಕ್ಕೆ ಕತ್ತರಿಸಿಕೊಂಡು ತಣ್ಣಗಾಗಲು ಬಿಡಿ. ಇಷ್ಟಾದರೆ ನಿಮ್ಮ ಮುಂದೆ ಬೆಲ್ಲದ ಮಿಠಾಯಿ ರೆಡಿಯಾಗುತ್ತದೆ. ನೀವು ಸಹ ಒಮ್ಮೆ ಮನೆಯಲ್ಲಿ ಇದನ್ನು ಟ್ರೈ ಮಾಡಿ ನೋಡಿ.



Click it and Unblock the Notifications
