Latest Updates
-
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು!
ಅಪರೂಪದ ಹಲಸಿನಕಾಯಿ ಸಾಂಬಾರ್ ಮಾಡುವುದು ಹೇಗೆ? ಈ ರುಚಿ ಸವಿದಿದ್ದೀರಾ?
ಬೇಸಿಗೆಯ ಸಮಯ ಆರಂಭಗೊಳ್ಳುತ್ತಿದ್ದರೆ ಹಲಸಿನ ಕಾಯಿಯ ಸೀಸನ್ ಆರಂಭಗೊಳ್ಳಲಿದೆ. ಹಲಸಿನ ಹಣ್ಣಿನ ಹಲವು ಖಾದ್ಯಗಳ ಮಾಡುವುದು ಸಾಮಾನ್ಯ. ಅದರಂತೆ ಹಲಸಿನ ಕಾಯಿಯ ಹಲವು ಬಗೆಯ ಖಾದ್ಯಗಳನ್ನು ಸಹ ಮಾಡಿ ಸವಿಯೋದು ನೋಡಬಹುದು. ಹಲಸಿನ ಕಾಯಿಯ ಸಾಂಬಾರ್ ಮಾಡಿದ್ರೆ ಊಟದೊಂದಿಗೆ ಅದ್ಭುತ ರುಚಿ ತರಲಿದೆ.
ಎಲ್ಲಾ ಕಾಲದಲ್ಲೂ ಈ ಹಲಸಿನ ಕಾಯಿ ಸಾಂಬಾರ್ ಮಾಡಲು ಸಿಗುವುದಿಲ್ಲ. ಅಪರೂಪಕ್ಕೆ ಸಿಗುವ ಈ ಹಲಸಿನಕಾಯಿಯ ಸಾಂಬಾರ್ ಮಾಡಿದ್ರೆ ಮನೆ ಮಂದಿಗೆಲ್ಲಾ ಇಷ್ವವಾಗುತ್ತೆ. ಹಾಗೆ ಊಟದೊಂದಿಗೆ ಮಾತ್ರವಲ್ಲದೆ ತಿಂಡಿಯೊಂದಿಗೂ ಇದನ್ನು ಸವಿಯಲು ಬಯಸುತ್ತಾರೆ. ಆದ್ರೆ ಹಲವರಿಗೆ ಈ ಹಲಸಿನಕಾಹಿ ಸಾಂಬಾರ್ ಮಾಡುವುದು ಹೇಗೆ ಅನ್ನೋದು ತಿಳಿದಿರೋದಿಲ್ಲ.

ನಾವಿಂದು ಮನೆಯಲ್ಲಿ ಸುಲಭವಾಗಿ ಈ ಹಲಸಿನಕಾಯಿ ಸಾಂಬಾರ್ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ. ಯಾವ ರೀತಿ ಇದನ್ನು ಹೆಚ್ಚಿಕೊಳ್ಳಬೇಕು. ಯಾವೆಲ್ಲಾ ಮಸಾಲೆ ಪದಾರ್ಥವನ್ನು ಹಾಕಿ ಮಾಡಬೇಕು ಎಂಬುದು ಹಾಗೆ ಎಷ್ಟು ಸಮಯ ಹಿಡಿಯಲಿದೆ ಎಂಬೆಲ್ಲಾ ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳೋಣ.
ಹಲಸಿನಕಾಯಿ ಸಾಂಬಾರ್ ಮಾಡಲು ಯಾವೆಲ್ಲಾ ವಸ್ತುಗಳು ಬೇಕು
- ಹಲಸಿನಕಾಯಿ- ಒಂದು
- ಟೊಮೆಟೋ
- ಈರುಳ್ಳಿ
- ಲವಂಗ
- ಚಕ್ಕೆ
- ಸಾಂಬಾರ್ ಪುಡಿ
- ತೆಂಗಿನಕಾಯಿ ತುರಿ
- ಕೊತ್ತಂಬರಿ ಸೊಪ್ಪು
- ಉಪ್ಪು
- ಎಣ್ಣೆ
- ಶುಂಠಿ ಬೆಳ್ಳುಳ್ಳಿ ಪೇಸ್ಟ್
- ಖಾರದ ಪುಡಿ
ಹಲಸಿನಕಾಯಿ ಸಾಂಬಾರ್ ಮಾಡುವುದು ಹೇಗೆ?
ಹಲಸಿನಕಾಯಿಯ ಸಿಪ್ಪೆ ತೆಗೆದು ಅನಂತರ ಸಣ್ಣದಾಗಿ ಹೆಚ್ಚಿಕೊಂಡು ನೀರಿನಲ್ಲಿ ಹಾಕಿಡಬೇಕು. ಈ ಸಾಂಬಾರ್ ಗೆ ನೀವು ಅವರೆಕಾಳು ಹಾಕಿ ಮಾಡಿಕೊಳ್ಳಬಹುದು. ಈಗ ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ತೆಂಗಿನಕಾಯಿ ತುರಿ, 2 ಟೊಮೆಟೋ, 2 ಈರುಳ್ಳಿ, ಚಕ್ಕೆ ಲವಂಗ, ಸಾಂಬಾರ್ ಪುಡಿ, ಕೊತ್ತಂಬರಿ ಸೊಪ್ಪು ಹಾಕಿಕೊಂಡು ನೀರು ಹಾಕಿ ನುಣ್ಣಗೆ ರುಬ್ಬಿ ತೆಗೆದಿಟ್ಟುಕೊಳ್ಳಿ.
ಒಲೆ ಮೇಲೆ ಕುಕ್ಕರ್ ಇಟ್ಟು ಅದಕ್ಕೆ ಎಣ್ಣೆ ಹಾಕಿ ಬಿಸಿಯಾಗಲು ಬಿಡಿ. ಅನಂತರ ಸಾಸಿವೆ, ಈರುಳ್ಳಿ, ಕರಿಬೇವು, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಟೊಮೆಟೋ ಹಾಕಿ ಫ್ರೈ ಮಾಡಿಕೊಳ್ಳಿ. 2 ನಿಮಿಷ ಬಿಟ್ಟು ಈಗ ರುಬ್ಬಿಕೊಂಡಿದ್ದ ಮಸಾಲೆಯಲ್ಲಿ ಅರ್ಧ ಭಾಗ ಮಾತ್ರ ಈಗ ಕುಕ್ಕರ್ಗೆ ಹಾಕಿ ಮಿಶ್ರಣ ಮಾಡಿಕೊಳ್ಳಿ. ಅನಂತರ ಇದಕ್ಕೆ ಕತ್ತರಿಸಿ ಇಟ್ಟುಕೊಂಡಿದ್ದ ಹಲಸಿನಕಾಯಿ ಅನ್ನು ಸಹ ಇದಕ್ಕೆ 2ರಿಂದ 3 ನಿಮಿಷ ಫ್ರೈ ಮಾಡಿಕೊಳ್ಳಿ.
ಈಗ ರುಬ್ಬಿದ್ದ ಎಲ್ಲಾ ಮಸಾಲೆಯನ್ನು ಇದಕ್ಕೆ ಹಾಕಿ ಮತ್ತೆ 2 ನಿಮಿಷ ಫ್ರೈ ಮಾಡಿಕೊಳ್ಳಿ. ಅನಂತರ ನೀರು ಸೇರಿಸಿಕೊಳ್ಳಿ, ನಿಮಗೆ ಯಾವ ಪ್ರಮಾಣದಲ್ಲಿ ಸಾಂಬಾರ್ ಇರಬೇಕೋ ಆ ಹದಕ್ಕೆ ನೀರು ಹಾಕಿ. ಕೊನೆಯಲ್ಲಿ ರುಚಿಗೆ ತಕ್ಕಷ್ಟು ಉಪ್ಪು ಸಹ ಹಾಕಿಕೊಳ್ಳಿ. ಈಗ ಮುಚ್ಚಳ ಮುಚ್ಚಿ 1 ಸೀಟಿ ಹೊಡೆಯಲು ಬಿಡಿ. ಇದಾದ ಬಳಿಕ ಕುಕ್ಕರ್ ತಣ್ಣಗಾದ ಬಳಿಕ ಮುಚ್ಚಳ ತೆಗೆದು ಒಮ್ಮೆ ಮಿಶ್ರಣ ಮಾಡಿಕೊಳ್ಳಿ.
ಇಷ್ಟಾದರೆ ಸಾಂಬಾರ್ ಸಿದ್ದವಾಗುತ್ತೆ. ಬೇಕಿದ್ದರೆ ಒಗ್ಗರಣೆಯೂ ಹಾಕಿಕೊಳ್ಳಬಹುದು, ಇಲ್ಲದಿದ್ದರೆ ಹೀಗೆಯೇ ಸವಿಯಬಹುದು. ನೀವು ಸಹ ಮನೆಯಲ್ಲಿ ಹಲಸಿನಕಾಯಿ ಸಾಂಬಾರ್ ಅನ್ನು ಮಾಡಿ ನೋಡಿ.



Click it and Unblock the Notifications
