Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಗರಿ ಗರಿಯಾದ ಕರಾವಳಿ ಶೈಲಿಯ ಹಲಸಿನ ಹಣ್ಣಿನ ದೋಸೆ..! ಇಲ್ಲಿದೆ ರೆಸಿಪಿ
ಮೇ ತಿಂಗಳಿನಿಂದ ಆರಂಭವಾಗೋ ಹಲಸಿನ ಹಣ್ಣಿನ ಸೀಸನ್ ಬಹಳ ದಿನಗಳ ಕಾಲ ಇರುತ್ತದೆ. ಹಲಸಿನ ಸೀಸನ್ ಆರಂಭವಾಗುತ್ತಿದ್ದಂತೆಯೇ ಎಲ್ಲರ ಮನೆಯಲ್ಲಿ ಹಲಸಿನ ಚಿಪ್ಸ್, ಹಲಸಿನ ಹಪ್ಪಳ, ಹಲಸಿನ ಹಣ್ಣಿನ ಇಡ್ಲಿ ಹೀಗೆ ಹಲಸಿನ ಕಂಬಳವೇ ಆರಂಭಗೊಳ್ಳುತ್ತದೆ. ಆದರೆ ಹಲಸಿನ ಹಣ್ಣಿನ ದೋಸೆ ಮಾಡುವಾಗ ಅನೇಕರು ಕೆಲವು ಸಮಸ್ಯೆಗಳನ್ನು ಎದುರಿಸುತ್ತಾರೆ.
ದೋಸೆ ತವಾದಿಂದ ಸುಲಭವಾಗಿ ಏಳುತ್ತಿಲ್ಲ ಎಂದು ಅನೇಕರು ಹೇಳುತ್ತಾರೆ. ಈ ರೀತಿಯ ಸಮಸ್ಯೆ ಬಾರದಂತೆ ಗರಿಗರಿಯಾದ ಪಕ್ಕಾ ಕರಾವಳಿ ಶೈಲಿಯ ಹಲಸಿನ ಹಣ್ಣಿನ ದೋಸೆ ತಯಾರಿಸುವ ವಿಧಾನವನ್ನು ತಿಳಿದುಕೊಳ್ಳೋಣ.

ಹಲಸಿನ ಹಣ್ಣಿನ ದೋಸೆ ತಯಾರಿಸಲು ಬೇಕಾಗುವ ಸಾಮಗ್ರಿಗಳು
- ಹಲಸಿನ ಹಣ್ಣಿನ ತೊಳೆ :4 ಕಪ್
- ತೆಂಗಿನ ತುರಿ 2 ಕಪ್
- ಬೆಲ್ಲ 1/2 ಕಪ್ (ಹಲಸಿನ ಹಣ್ಣಿನ ಸಿಹಿಯನ್ನು ಅವಲಂಭಿಸಿ ನಿರ್ಧರಿಸುವುದು)
- ಕಾಳು ಮೆಣಸು 12
- ನೀರು - ಅಳತೆಗೆ ತಕ್ಕಷ್ಟು
- ಅಕ್ಕಿ - 2 ಕಪ್
- ಎಣ್ಣೆ - ಸ್ವಲ್ಪ
ಮಾಡುವ ವಿಧಾನ
ಅಕ್ಕಿಯನ್ನು ಐದು ಗಂಟೆಗಳ ಕಾಲ ನೀರಿನಲ್ಲಿ ನೆನೆಹಾಕಬೇಕು. ಹಲಸಿನ ಹಣ್ಣಿನಿಂದ ಹಲಸಿನ ತೊಳೆಗಳನ್ನು ತೆಗೆದು ಬೇರುಗಳಿಂದ ಬೇರ್ಪಡಿಸಿ ತೆಗೆದು ಇಟ್ಟುಕೊಂಡಿರಬೇಕು. ಅಕ್ಕಿ ಚೆನ್ನಾಗಿ ನೆನೆದ ಬಳಿಕ ಮಿಕ್ಸಿ ಜಾರಿಗೆ ಅಕ್ಕಿ, ಬೆಲ್ಲ, ಕಾಯಿತುರಿ, ಕಾಳುಮೆಣಸು ಹಾಕಿ ಅಳತೆಗೆ ತಕ್ಕಷ್ಟು ನೀರನ್ನು ಬೆರೆಸಿ ರುಬ್ಬಿಟ್ಟುಕೊಂಡು ಹಿಟ್ಟನ್ನು ಒಂದು ರಾತ್ರಿ ಹಾಗೆಯೇ ಇಟ್ಟುಕೊಳ್ಳಿ.
ನೀವು ರುಬ್ಬಿಕೊಂಡಿರುವ ದೋಸೆ ಹಿಟ್ಟು ನುಣ್ಣಗೆ ಇದ್ದರೆ ಮಾತ್ರ ದೋಸೆ ಚೆನ್ನಾಗಿ ಏಳುತ್ತದೆ. ಇಲ್ಲವಾದಲ್ಲಿ ದೋಸೆ ಸರಿಯಾಗಿ ಏಳುವುದಿಲ್ಲ. ಹಲಸಿನ ತೊಳೆಗಳ ಪ್ರಮಾಣ ಅತಿಯಾದರೂ ದೋಸೆ ಸರಿಯಾಗಿ ಏಳುವುದಿಲ್ಲ. ಹೀಗಾಗಿ ಈ ಎಲ್ಲಾ ಅಂಶಗಳನ್ನು ನೀವು ಗಮನದಲ್ಲಿಟ್ಟುಕೊಳ್ಳಬೇಕು. ಇನ್ನು ಮಾರನೆಯ ದಿನ ಹೆಂಚಿಗೆ ಎಣ್ಣೆಯನ್ನು ಸವರಿ ದೋಸೆಯನ್ನು ಹೊಯ್ದುಕೊಳ್ಳಿ .
ಗರಿಗರಿಯಾದ ಹಲಸಿನ ಹಣ್ಣಿನ ದೋಸೆಯನ್ನು ನೀವು ತುಪ್ಪದೊಂದಿಗೆ ಸವಿಯಲು ನೀಡಿ. ಮಳೆಗಾಲಕ್ಕೆ ಹೇಳಿ ಮಾಡಿಸಿದಂತಹ ಈ ಹಲಸಿನ ಹಣ್ಣಿನ ದೋಸೆ ನಿಮ್ಮ ಬೆರಳನ್ನು ನಾಲಿಗೆ ಚಪ್ಪರಿಸುವಂತೆ ಮಾಡುತ್ತದೆ. ದೋಸೆ ಹಿಟ್ಟನ್ನು ತಯಾರಿಸುವಾಗ ಕಾಳು ಮೆಣಸು ಹಾಕಿದ್ದರಿಂದ ನಿಮಗೆ ಯಾವುದೇ ರೀತಿಯ ಆ್ಯಸಿಡಿಟಿ ಸಮಸ್ಯೆಗಳು ಕಾಣಿಸಿಕೊಳ್ಳುವುದಿಲ್ಲ.
ಹಲಸಿನ ಹಣ್ಣಿನ ಸೇವನೆಯಿಂದ ಆರೋಗ್ಯ ಪ್ರಯೋಜನ : ಹಲಸಿನ ಹಣ್ಣುಗಳಲ್ಲಿ ನಾರಿನಂಶ ಅಗಾಧ ಪ್ರಮಾಣದಲ್ಲಿದ್ದು ಇವುಗಳು ನಿಮ್ಮ ಚಯಾಪಚಯ ಕ್ರಿಯೆಯನ್ನು ಸರಾಗಗೊಳಿಸಲು ನೆರವಾಗುತ್ತವೆ. ಪೊಟ್ಯಾಷಿಯಂನಿಂದ ಸಮೃದ್ಧವಾಗಿರುವ ಹಲಸಿನ ಹಣ್ಣುಗಳು ರಕ್ತದ ಪ್ರವಾಹವನ್ನು ನಿಯಂತ್ರಿಸುವ ಮೂಲಕ ಅಧಿಕ ರಕ್ತದೊತ್ತಡ ಸಮಸ್ಯೆಗೆ ಪರಿಹಾರ ನೀಡುತ್ತವೆ.
ಅಲ್ಲದೇ ದೇಹದಲ್ಲಿ ರಕ್ತದ ಪ್ರಮಾಣ ಹೆಚ್ಚಲು ಕೂಡ ಹಲಸಿನ ಹಣ್ಣುಗಳು ಕೊಡುಗೆ ನೀಡುತ್ತವೆ. ಮಳೆಗಾಲದಲ್ಲಿ ವಿವಿಧ ಕಾಯಿಲೆಗಳು ಎದುರುಗಾವುದು ಹೆಚ್ಚು. ಆದರೆ ಹಲಸಿನ ಹಣ್ಣಿನಲ್ಲಿರುವ ರೋಗ ನಿರೋಧಕ ಶಕ್ತಿಯಿಂದಾಗಿ ನಿಮಗೆ ಯಾವುದೇ ಕಾಯಿಲೆಗಳು ಬಾರದಂತೆ ನೋಡಿಕೊಳ್ಳುತ್ತದೆ.
ಹಲಸಿನ ಹಣ್ಣುಗಳು ಕ್ಯಾಲ್ಸಿಯಂ ಅಂಶಗಳನ್ನು ಹೊಂದಿದ್ದು ಇವುಗಳು ನಿಮ್ಮ ಮೂಳೆಗಳನ್ನು ಬಲಪಡಿಸುವಲ್ಲಿ ನೆರವಾಗುತ್ತವೆ. ಅಲ್ಲದೇ ಇವುಗಳಲ್ಲಿ ಇರುವ ವಿಟಮಿನ್ ಎ ಅಂಶವು ನಿಮ್ಮ ಕಣ್ಣುಗಳ ಆರೋಗ್ಯವನ್ನು ಸುಧಾರಿಸುವ ಕಾರ್ಯವನ್ನು ಕೂಡ ಮಾಡುತ್ತವೆ. ಖನಿಜಾಂಶಗಳನ್ನು ಹೇರಳವಾಗಿ ಹೊಂದಿರುವ ಹಲಸಿನ ಹಣ್ಣುಗಳು ದೇಹದಲ್ಲಿ ಹಾರ್ಮೊನ್ಗಳ ಏರುಪೇರುಗಳನ್ನು ನಿಯಂತ್ರಿಸುವ ಕಾರ್ಯವನ್ನು ಮಾಡುತ್ತವೆ. ಗರ್ಭಿಣಿಯರು ಹಲಸಿನ ಹಣ್ಣನ್ನು ಮಧ್ಯಮ ಪ್ರಮಾಣದಲ್ಲಿ ಸೇವನೆ ಮಾಡಿದರೆ ಗರ್ಭದಲ್ಲಿರುವ ಮಗುವಿನ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಲಾಗುತ್ತದೆ.



Click it and Unblock the Notifications
