Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಮದುವೆ ಮನೆಯ ತೊಂಡೆಕಾಯಿ ಸುಕ್ಕಾ ಪಲ್ಯ..! ನೀವೆಂದು ಮಾಡಿರದ ರುಚಿ ಇದು.!
ನೀವು ಊಟದ ಜೊತೆಗೆ ಒಂದು ಪಲ್ಯ ಮಾಡಿ ಸವಿಯುವುದನ್ನು ಇಷ್ಟಪಡುತ್ತಿದ್ದರೆ ಹಲವು ಬಗೆಯ ತರಕಾರಿಗಳಿಂದ ರುಚಿ ರುಚಿಯ ಪಲ್ಯ ಮಾಡಿ ಸವಿದಿರುತ್ತೀರಿ. ಅದರಲ್ಲೂ ಕೆಲವೊಂದು ಪಲ್ಯವು ನಿಮ್ಮ ಊಟ, ತಿಂಡಿಯ ರುಚಿ ದುಪ್ಪಟ್ಟು ಮಾಡುತ್ತವೆ, ಅದರಲ್ಲಿ ನಾವಿಂದು ಅತ್ಯಂತ ರುಚಿಕರ ತೊಂಡೆಕಾಯಿ ಕಡಲೆ ಸುಕ್ಕ ಮಾಡಿ ಸವಿದಿದ್ದೀರಾ?
ನೀವು ಮದುವೆ ಮನೆ ಅಥವಾ ಶುಭ ಸಮಾರಂಭದ ಸಮಯದಲ್ಲಿ ಅಡುಗೆ ಭಟ್ಟರು ಮಾಡಿರುವಂತಹ ಅತ್ಯಮತ ರುಚಿ ರುಚಿಯ ಈ ತೊಂಡೆಕಾಯಿ ಕಡ್ಲೆ ಸುಕ್ಕಾ ರೀತಿಯ ಪಲ್ಯ ಸವಿದಿರುತ್ತೀರಿ. ಇಷ್ಟೊಂದು ರುಚಿಯಲ್ಲಿ ನೀವು ಮನೆಯಲ್ಲೂ ಮಾಡಿ ಸವಿದಿರುವುದಿಲ್ಲ. ಈ ಪಲ್ಯವನ್ನು ನೀವು ಮತ್ತೆ ಮತ್ತೆ ಹಾಕಿಸಿಕೊಂಡು ಸವಿಯಲು ನೀವು ಮುಂದಾಗಿರುತ್ತೀರಿ.

ಈ ಪಲ್ಯ ಮಾಡಿದರೆ ಊಟಕ್ಕೂ ತಿಂಡಿಗೂ ಅದ್ಭುತವಾಗಿ ರುಚಿ ನೀಡುತ್ತೆ. ಹಾಗಾದ್ರೆ ಇದನ್ನು ಮಾಡುವುದು ಹೇಗೆ ಅನ್ನೋದು ನಿಮಗೆ ಗೊತ್ತಾ? ಮದುವೆ ಮನೆಯಲ್ಲಿ ಮಾಡುವಂತಹ ಈ ಪಲ್ಯ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ತೊಂಡೆಕಾಯಿ ಸುಕ್ಕಾ ಕಡ್ಲೆ ಪಲ್ಯ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ತೊಂಡೆಕಾಯಿ
- ಕಡಲೆ
- ಈರುಳ್ಳಿ
- ಉಪ್ಪು
- ಕರಿಬೇವು
- ಬೆಳ್ಳುಳ್ಳಿ
- ಅರಶಿಣ
- ಜೀರಿಗೆ
- ಕೊತ್ತಂಬರಿ ಕಾಳು
- ಉದ್ದಿನ ಬೇಳೆ
- ತೆಂಗಿನ ಕಾಯಿ ತುರಿ
ತೊಂಡೆಕಾಯಿ ಸುಕ್ಕಾ ಕಡ್ಲೆ ಪಲ್ಯ ಮಾಡುವ ವಿಧಾನವೇನು?
ಮೊದಲು ತೊಂಡೆಕಾಯಿಯನ್ನು ಚೆನ್ನಾಗಿ ತೊಳೆದು ನಿಮಗೆ ಬೇಕಾದ ಆಕಾರದಲ್ಲಿ ಹೆಚ್ಚಿಕೊಳ್ಳಬಹುದು. ಒಂದು ತೊಂಡೆಕಾಯಿಯಲ್ಲಿ 4 ಭಾಗ ಮಾಡಬಹುದು, ಇಲ್ಲವೆ ವೃತ್ತಾಕಾರವಾಗಿಯೂ ಕತ್ತರಿಸಿಕೊಳ್ಳಬಹುದು. ನಂತರ ಒಂದು ಕುಕ್ಕರ್ಗೆ ಈ ತೊಂಡೆಕಾಯಿಯನ್ನು ಹಾಕಿ ಸ್ವಲ್ಪ ನೀರು ಉಪ್ಪು ಹಾಕಿ ಮುಚ್ಚಳ ಮುಚ್ಚಿ ಬೇಯಲು ಬಿಡಿ. 1 ಸೀಟಿ ಹೊಡೆಸಿಕೊಂಡರೆ ಸಾಕಾಗುತ್ತದೆ.
ಈಗ ಇನ್ನೊಂದು ಕಡೆ ಕಡಲೆಯನ್ನು ರಾತ್ರಿಯೆ ನೆನೆಹಾಕಿಡಬೇಕು. ನಂತರ ಇದನ್ನು ಕೂಡ ಮತ್ತೊಂದು ಕುಕ್ಕರ್ನಲ್ಲಿ ಹಾಕಿ ನೀರು, ಉಪ್ಪು ಹಾಕಿ ಮುಚ್ಚಳ ಮುಚ್ಚಿ ಮೂರು ಸೀಟಿ ಹೊಡೆಸಿಕೊಳ್ಳಬೇಕು. ಕಡ್ಲೆ ಸಂಪೂರ್ಣ ಮೆತ್ತಗಾಗಬೇಕು.
ಈಗ ಒಂದು ಬಾಣಲೆ ಒಲೆ ಮೇಲೆ ಇಟ್ಟಿ ಅದಕ್ಕೆ ಒಣ ಮೆಣಸು ಹಾಕಿ ಸ್ಪೂನ್ ಎಣ್ಣೆ ಹಾಕಿ ಫ್ರೈ ಮಾಡಿ. ನಂತರ ಇದಕ್ಕೆ ಜೀರಿಗೆ, ಕೊತ್ತಂಬರಿ ಕಾಳು ಹಾಕಿ ಫ್ರೈ ಮಾಡಿ ಕೊನೆಯಲ್ಲಿ ಮೆಂತ್ಯ ಕೂಡ ಹಾಕಿಕೊಂಡು ಬಿಸಿ ಮಾಡಿಕೊಂಡು ಒಲೆ ಆಫ್ ಮಾಡಿ ತಣ್ಣಗಾಗಲು ಬಿಡಿ. ಈ ಮಸಾಲೆಗಳು ತಣ್ಣಗಾದ ಬಳಿಕ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಹಾಕಿಕೊಳ್ಳಿ.
ಮಿಕ್ಸಿಯಲ್ಲಿ ನುಣ್ಣಗೆ ಪುಡಿ ಮಾಡಿಕೊಳ್ಳಿ, ನೀರು ಹಾಕದೆ ಪುಡಿ ಮಾಡಿಕೊಳ್ಳಿ. ನಂತರ ಮಿಕ್ಸಿ ಜಾರ್ನಿಂದ ತೆಗೆಯದೆ ಅದರ ಮೇಲೆ ತೆಂಗಿನಕಾಯಿ ತುರಿ ಹಾಕಿ ಮತ್ತೆ ರುಬ್ಬಿಕೊಳ್ಳಿ. 2ರಿಂದ 3 ಸುತ್ತು ಹೊಡೆಸಿಕೊಂಡು ಮಿಕ್ಸಿ ಆಫ್ ಮಾಡಿಕೊಳ್ಳಿ. ಈಗ ಒಲೆ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿ ಸಾಸಿವೆ, ಉದ್ದಿನ ಬೇಳೆ ಹಾಕಿ ಬಿಸಿ ಮಾಡಿ ಬಳಿಕ ಬೆಳ್ಳುಳ್ಳಿ, ಕರಿಬೇವು, ಈರುಳ್ಳಿ ಹಾಕಿ 1 ನಿಮಿಷ ಫ್ರೈ ಮಾಡಿ. ಈಗ ಮಿಕ್ಸಿಯಲ್ಲಿ ರುಬ್ಬಿಕೊಂಡಿರುವ ಮಸಾಲೆಯನ್ನು ಇದಕ್ಕೆ ಹಾಕಿ ಫ್ರೈ ಮಾಡಿ. 2 ನಿಮಿಷ ಫ್ರೈ ಮಾಡಿ.
ಈಗ ಬೇಯಿಸಿಕೊಂಡಿರುವ ಕಡಲೆ ಹಾಗೂ ತೊಂಡೆಕಾಯಿಯನ್ನು ಈ ಬಾಣಲೆಗೆ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ತುಂಬಾನೆ ಡ್ರೈ ಅನಿಸಿದರೆ ಸ್ವಲ್ಪವೇ ಸ್ವಲ್ಪ ನೀರು ಹಾಕಿಕೊಂಡು ಮಿಕ್ಸ್ ಮಾಡಿ. ಆದಷ್ಟು ಡ್ರೈ ಆಗಿಯೇ ಇರಲಿ. ಹೀಗೆ 3 ನಿಮಿಷ ಮಿಕ್ಸ್ ಮಾಡಿಕೊಳ್ಳಿ. ಇಷ್ಟಾದರೆ ಈ ಪಲ್ಯ ರೆಡಿಯಾಗುತ್ತದೆ, ಬಾಣಲೆಯಲ್ಲಿ ಹೆಚ್ಚು ಸಮಯ ಬೇಯುವ ಅವಶ್ಯಕತೆ ಇರುವುದಿಲ್ಲ.



Click it and Unblock the Notifications
