Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಅನ್ನ, ಚಪಾತಿ ಎಲ್ಲದಕ್ಕೂ ತೊಂಡೆಕಾಯಿ ಗ್ರೇವಿ ಸಖತ್ ಟೇಸ್ಟಿ..!
ನೀವು ಮನೆಯಲ್ಲಿ ಊಟಕ್ಕೆ ಸೈಡ್ಸ್ ಆಗಿ ಏನೆಲ್ಲಾ ಖಾದ್ಯ ಬಳಸುತ್ತೀರಿ? ನೀವು ಯಾವುದಾದರು ತರಕಾರಿಯ ಪಲ್ಯ, ಗ್ರೇವಿ, ಹಪ್ಪಳ, ಉಪ್ಪಿನಕಾಯಿ ಹೀಗೆ ಒಂದಲ್ಲಾ ಒಂದು ರೀತಿಯ ಖಾದ್ಯ ಊಟದ ಜೊತೆ ಬಳಸಿರುತ್ತೀರಿ. ಯಾಕಂದ್ರೆ ಊಟದ ಜೊತೆ ಯಾವುದಾದರು ಖಾದ್ಯ ಇದ್ದರೇನೇ ಊಟ ಚೆನ್ನಾಗಿ ಸೇರುವುದು.
ಇನ್ನು ಊಟದ ಜೊತೆ ತರಕಾರಿ ಸಾಂಬಾರ್ ಇದ್ದರಂತು ಅದರ ಜೊತೆ ಯಾವುದಾದರು ತರಕಾರಿಯ ಪಲ್ಯ ಇರಲೇಬೇಕು. ಆದ್ರೆ ಎಲ್ಲಾ ಸಾಂಬಾರ್ ಜೊತೆ ಸವಿಯಲು ಉತ್ತಮ ಪಲ್ಯ ಎಂದರೆ ಅದು ತೊಂಡೆಕಾಯಿ ಪಲ್ಯ. ಆರೋಗ್ಯದ ದೃಷ್ಟಿಯಿಂದ ತೊಂಡೆಕಾಯಿ ಬಹಳ ಉತ್ತಮ ತರಕಾರಿ. ಇದರ ಜೊತೆ ತೊಂಡೆಕಾಯಿ ಪಲ್ಯ ಊಟಕ್ಕೆ ಹೇಳಿ ಮಾಡಿಸಿದ ಪಲ್ಯವಾಗಿದೆ.

ಹಾಗಾದ್ರೆ ನಾವಿಂದು ತೊಂಡೆಕಾಯಿ ಗ್ರೇವಿ/ಪಲ್ಯ ಮಾಡುವುದು ಹೇಗೆ? ಈ ಪಲ್ಯ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ತೊಂಡೆಕಾಯಿ ಪಲ್ಯ ಮಾಡಲು ಎಷ್ಟು ಸಮಯ ಬೇಕು? ಮಾಡುವ ಪಾಕವಿಧಾನ ಸೇರಿ ಎಲ್ಲಾ ಮಾಹಿತಿ ನಾವಿಲ್ಲಿ ತಿಳಿಯೋಣ.
ತೊಂಡೆಕಾಯಿ ಪಲ್ಯ/ಗ್ರೇವಿ ಮಾಡಲು ಬೇಕಾಗುವ ಪದಾರ್ಥಗಳು
ತೊಂಡೆಕಾಯಿ - ಕಾಲು ಕೆ.ಜಿ
ಕಡಲೆ - ಸ್ವಲ್ಪ
ಗೋಡಂಬಿ - 5
ದಾಲ್ಚಿನ್ನಿ - 2 ಪೀಸ್
ಲವಂಗ- 2
ಏಲಕ್ಕಿ- 1
ಬಿಳಿ ಎಳ್ಳು - 1/2 tbs
ಗಸಗಸೆ - 1/2 tbs
ಕೊಬ್ಬರಿ ಪುಡಿ - 2 tbs
ಜೀರಿಗೆ - 1/2 ಟೀಸ್ಪೂನ್
ಪಲಾವ್ ಎಲೆ - 1
ಈರುಳ್ಳಿ- 2
ಟೊಮೆಟೊ- 2
ಶುಂಠಿ ಬೆಳ್ಳುಳ್ಳಿ ಪೇಸ್ಟ್ - 1 tbs
ಅರಿಶಿನ ಪುಡಿ - 1/4 ಟೀಸ್ಪೂನ್
ಕೆಂಪು ಮೆಣಸಿನ ಪುಡಿ - 1 ಟೀಸ್ಪೂನ್
ಕೊತ್ತಂಬರಿ ಪುಡಿ - 1 tbs
ಕೊತ್ತಂಬರಿ ಸೊಪ್ಪು - 2 tbs
ಎಣ್ಣೆ
ಉಪ್ಪು
ಮೊದಲು ತೊಂಡೆಕಾಯಿಯನ್ನು ಚೆನ್ನಾಗಿ ತೊಳೆದು ಮಧ್ಯದಲ್ಲಿ ಸೀಳಿಕೊಳ್ಳಬೇಕು ಆದರೆ ಕತ್ತರಿಸಬಾರದು. ಈಗ ಪಾತ್ರೆ ಇಟ್ಟು ಅದಕ್ಕೆ ನೆಲಕಡಲೆ ಹಾಕಿ ಹುರಿದುಕೊಳ್ಳಿ. ಇದಕ್ಕೆ ಗೋಡಂಬಿ, ಚಕ್ಕೆ, ಲವಂಗ, ಏಲಕ್ಕಿ ಹಾಕಿಕೊಂಡು ಚೆನ್ನಾಗಿ ಹುರಿದುಕೊಳ್ಳಿ. 2 ನಿಮಿಷದ ಬಳಿಕ, ಬಿಳಿ ಎಳ್ಳು, ಕೊಬ್ಬರಿ ಪುಡಿ ಹಾಕಿಕೊಂಡು ಫ್ರೈ ಮಾಡಿ.
ಬಳಿಕ ಇನ್ನೊಂದು ಪಾತ್ರೆಯಲ್ಲಿ ಎಣ್ಣೆ ಹಾಕಿ ಒಲೆ ಮೇಲೆ ಇಟ್ಟು ಅದಕ್ಕೆ ತೊಳೆದಿಟ್ಟುಕೊಂಡ ತೊಂಡೆಕಾಯಿ ಹಾಕಿಕೊಂಡು ಫ್ರೈ ಮಾಡಿ. ಗೋಲ್ಡನ್ ಕಲರ್ ಆಗುವವರೆಗೂ ಪ್ರೈ ಮಾಡಿ. ಬಳಿಕ ತೊಂಡೆಕಾಯಿಗಳ ಎತ್ತಿಟ್ಟುಕೊಂಡು ಅದೇ ಪಾತ್ರೆಗೆ ಸೋಂಕಾಳು, ಪಲಾವ್ ಎಲೆ, ಈರುಳ್ಳಿ ಹಾಕಿಕೊಂಡು ಫ್ರೈ ಮಾಡಿ. ಬಳಿಕ ಟೊಮೆಟೊ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿಕೊಳ್ಳಿ.
ಇದೇ ವೇಳೆ ಹುರಿದುಕೊಂಡಿದ್ದ ಮಸಾಲೆಯನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ, ಬಳಿಕ ಅದನ್ನು ಒಲೆ ಮೇಲೆ ಬೇಯುತ್ತಿರುವ ಮಸಾಲೆಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಅದಕ್ಕೆ ಅರಶಿನ, ಖಾರದ ಪುಡಿ, ಧನಿಯಾ ಪುಡಿ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಮಧ್ಯಮ ಉರಿಯಲ್ಲಿಟ್ಟು ಚೆನ್ನಾಗಿ ಹುರಿದುಕೊಳ್ಳಿ. 1 ನಿಮಿಷ ಕಾಯಿಸಿದರೆ ಸಾಕು. ಬಳಿಕ ಇದಕ್ಕೆ ತೊಂಡೆಕಾಯಿ ಹಾಕಿಕೊಳ್ಳಿ. ಬಳಿಕ ಉಪ್ಪು ಹಾಕಿ ಚೆನ್ನಾಗಿ ಬೇಯಲು ಇಡಿ. ಇದಕ್ಕೆ ಸ್ವಲ್ಪ ನೀರು ಹಾಕಿ ಮುಚ್ಚಳ ಅರ್ಧ ಮುಚ್ಚಿ ಬೇಯಲು ಬಿಡಿ. 5 ನಿಮಿಷ ಬೆಂದರೆ ಸಾಕು. ಇಷ್ಟಾದರೆ ನಿಮ್ಮ ಮುಂದೆ ತೊಂಡೆಕಾಯಿ ಗ್ರೇವಿ ರೆಡಿಯಾಗಿರುತ್ತೆ. ಇದನ್ನು ಊಟಕ್ಕೂ ಹಾಗೂ ಚಪಾತಿ, ದೋಸೆಗೂ ಬಳಸಬಹುದು.



Click it and Unblock the Notifications
