Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಮದುವೆ ಮನೆ ಶೈಲಿಯ ತೊಂಡೆಕಾಯಿ ಮಸಾಲೆ ಪಲ್ಯ..! ಮಾಡುವ ವಿಧಾನ ಇಲ್ಲಿದೆ!
ಊಟದ ಜೊತೆಗೆ ಒಂದು ಪಲ್ಯ ಮಾಡಿ ಸವಿಯುವುದು ಸಾಮಾನ್ಯವಾಗಿ ಎಲ್ಲರು ಇಷ್ಟಪಡುತ್ತಾರೆ. ಅದರಲ್ಲು ವಿಶೇಷ ತರಕಾರಿಗಳ ಬಳಸಿಕೊಂಡು ಮಾಡುವಂತಹ ಪಲ್ಯವು ಅದ್ಭುತ ರುಚಿ ನೀಡಲಿದೆ. ಅದರಲ್ಲೂ ಬೆಂಡೆಕಾಯಿ ಪಲ್ಯ, ಬಿನ್ಸ್, ಕೋಸು, ಆಲೂಗಡ್ಡೆ ಹೀಗೆ ಈ ಸಾಲು ಬೆಳೆಯುತ್ತಲೇ ಹೋಗುತ್ತದೆ. ಹಾಗೆ ಈ ಸಾಲಿನಲ್ಲಿ ತೊಂಡೆಲಾಯಿ ಮಸಾಲೆ ಪಲ್ಯ ಮಾಡಿದರೆ ಊಟದ ರುಚಿ ಹೆಚ್ಚಾಗುವುದು ಖಚಿತ.
ಈ ತೊಂಡೆಕಾಯಿಯ ಪಲ್ಯವನ್ನು ರುಚಿಕರ ಮಸಾಲೆಗಳ ಬಳಸಿ ಮಾಡುವುದರಿಂದ ಮದುವೆ ಮನೆಯಲ್ಲಿ ಮಾಡಿದಂತೆಯೇ ರುಚಿಯ ಪಲ್ಯ ಮನೆಯಲ್ಲಿ ಮಾಡಬಹುದು. ತೊಂಡೆಕಾಯಿಯ ಪಲ್ಯವನ್ನು ನೀವು ಕೂಡ ಮನೆಯಲ್ಲಿ ಮಾಡಿರುತ್ತೀರಿ. ಆದ್ರೆ ಮಸಾಲೆಗಳ ಹಾಕಿ, ಒಂದಿಷ್ಟು ಕೊಬ್ಬರಿ ತುರಿ ಹಾಕಿ ಮಾಡುವಂತಹ ಮದುವೆ ಮನೆ ಶೈಲಿಯ ಈ ಪಲ್ಯ ಮಾಡಿದ್ರೆ ಖಂಡಿತ ನೀವು ಇಷ್ಟಪಡುತ್ತೀರಿ. ಹಾಗೆ ಯಾವಾಗಲು ಮಾಡಿ ಸವಿಯಲು ಮುಂದಾಗುತ್ತೀರಿ.

ಆದ್ರೆ ಈ ತೊಂಡೆಕಾಯಿಯ ಮಸಾಲೆ ಪಲ್ಯ ಮಾಡುವುದು ಹೇಗೆ? ತೊಂಡೆಕಾಯಿ ಆರೋಗ್ಯದ ದೃಷ್ಟಿಯಲ್ಲಿ ಬಹಳ ಉತ್ತಮ ತರಕಾರಿ ಹೀಗಾಗಿ ತೊಂಡೆಕಾಯಿಯ ಸಂಬಾರ್, ಚಟ್ನಿ, ಪಲ್ಯ ಮಾಡಿ ಸವಿಯುತ್ತಾರೆ. ನಾವಿಂದು ಈ ತೊಂಡೆಕಾಯಿಯಿಂದ ಮಾಡುವ ಅದ್ಭುತ ರುಚಿಯ ಪಲ್ಯ ಮಾಡುವ ಕುರಿತು ತಿಳಿಯೋಣ.
ಈ ತೊಂಡೆಕಾಯಿ ಪಲ್ಯ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ತೊಂಡೆಕಾಯಿ ಪಲ್ಯ ಮಾಡುವ ವಿಧಾನವೇನು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ತೊಂಡೆಕಾಯಿ ಮಸಾಲೆ ಪಲ್ಯ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ತೊಂಡೆಕಾಯಿ
- ಅರಶಿಣ
- ತೆಂಗಿನ ತುರಿ
- ಕಡಲೆ ಬೇಳೆ
- ಉದ್ದಿನ ಬೇಳೆ
- ಜೀರಿಗೆ
- ಸಾಸಿವೆ
- ಎಣ್ಣೆ
- ಉಪ್ಪು
- ಕೊತ್ತಂಬರಿ ಸೊಪ್ಪು
- ಒಣ ಮೆಣಸು
- ಹಸಿ ಮೆಣಸು
ತೊಂಡೆಕಾಯಿ ಮಸಾಲೆ ಪಲ್ಯ ಮಾಡುವುದು ಹೇಗೆ?
ಮೊದಲು ತೊಂಡೆಕಾಯಿಯನ್ನು ಉದ್ದವಾಗಿ ಕತ್ತರಿಸಿಕೊಂಡು ಅದನ್ನು ಕುಕ್ಕರ್ಗೆ ಹಾಕಿ ಅರಶಿಣ, ಉಪ್ಪು ಹಾಕಿಕೊಂಡು ತೊಂಡೆಕಾಯಿ ಮುಳುಗುವಷ್ಟು ನೀರು ಹಾಕಿ ಒಂದು ಸೀಟಿ ಹೊಡೆಸಿಮಕೊಂಡು ಇಟ್ಟುಕೊಳ್ಳಿ. ಈಗ ಒಂದು ಮಿಕ್ಸಿ ಜಾರ್ಗೆ ತೆಂಗಿನ ಕಾಯಿ ತುರಿ, ಸಾಸಿವೆ, ಜೀರಿಗೆ, ಹಸಿ ಮೆಣಸು ಹಾಕಿಕೊಂಡು ರುಬ್ಬಿಕೊಳ್ಳಿ. ತರಿ ತರಿಯಾಗಿ ರುಬ್ಬಿಕೊಂಡು ಒಂದು ಬೌಲ್ಗೆ ಹಾಕಿಟ್ಟುಕೊಳ್ಳಿ.
ಈಗ ಒಂದು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಬಳಿಕ ಉದ್ದಿನ ಬೇಳೆ, ಕಡಲೆ ಬೇಳೆ, ಸಾಸಿವೆ, ಜೀರಿಗೆ, ಕರಿಬೇವು, ಒಣ ಮೆಣಸು, ಹಾಕಿ ಫ್ರೈ ಮಾಡಿಕೊಳ್ಳಿ. 1 ನಿಮಿಷ ಫ್ರೈ ಮಾಡಿಕೊಂಡ ಬಳಿಕ ಇದಕ್ಕೆ ಬೇಯಿಸಿಕೊಂಡಿರುವ ತೊಂಡೆಕಾಯಿಯನ್ನು ಇದಕ್ಕೆ ಹಾಕಿ ಮಿಕ್ಸ್ ಮಾಡಿಕೊಳ್ಳಿ.
ಈಗ ಇದಕ್ಕೆ ಉಪ್ಪು, ಹಾಗೆ ಮಿಕ್ಸಿಯಲ್ಲಿ ತರಿತರಿಯಾಗಿ ರುಬ್ಬಿಕೊಂಡಿದ್ದ ಮಸಾಲೆ ಪದಾರ್ಥಗಳನ್ನು ಕೂಡ ಇದಕ್ಕೆ ಹಾಕಿಕೊಂಡು ತಿರುಗಿಸಿಕೊಳ್ಳಿ. 2ರಿಂದ 3 ನಿಮಿಷ ಸಣ್ಣ ಉರಿಯಲ್ಲಿ ತಿರುಗಿಸುತ್ತಾ ಬೇಯಿಸಿಕೊಳ್ಳಿ. ಕೊನೆಯಲ್ಲಿ ಇದಕ್ಕೆ ಕೊತ್ತಂಬರಿ ಸೊಪ್ಪು ಹಾಕಿಕೊಂಡು ಒಲೆ ಆಫ್ ಮಾಡಿ ಮಿಕ್ಸ್ ಮಾಡಿಕೊಂಡು ಒಲೆಯಿಂದ ಇಳಿಸಿಕೊಂಡರೆ ಅದ್ಭುತವಾದ ತೊಂಡೆಕಾಯಿ ಪಲ್ಯ ನಿಮ್ಮ ಮುಂದೆ ಇರಲಿದೆ. ನೀವು ಕೂಡ ಮನೆಯಲ್ಲಿ ಈ ರೀತಿ ರುಚಿಯ ತೊಂಡೆಕಾಯಿ ಪಲ್ಯ ಮಾಡಿ ನೋಡಿ.



Click it and Unblock the Notifications
