Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
5 ನಿಮಿಷದಲ್ಲಿ ಗೋಧಿ ಮಸಾಲೆ ದೋಸೆ ಮಾಡಬಹುದು ಅಂದ್ರೆ ನಂಬ್ತೀರಾ?; ಇಲ್ಲಿದೆ ರೆಸಿಪಿ
ನೀವು ಬೆಳಗ್ಗೆ ತಿಂಡಿಗೆ ಎಷ್ಟೊಂದು ವೆರೈಟಿ ತಿಂಡಿಗಳ ಮಾಡಿ ಸವಿದಿರುತ್ತೀರಿ. ಅದರಲ್ಲೂ ಹೊಸ ಹೊಸ ಬಗೆಯ ತಿಂಡಿ ಮಾಡುವುದು ಅಂದರೆ ಕೆಲವರಿಗೆ ಬಹಲ ಇಷ್ಟವಾಗಿರುತ್ತೆ. ಪ್ರತಿ ದಿನವೂ ಒಂದೇ ರೀತಿಯ ಖಾದ್ಯಗಳ ಸವಿಯುವುದು ಅಂದ್ರೆ ಯಾರಿಗೆ ತಾನೆ ಇಷ್ಟವಿರುತ್ತೆ ಹೇಳಿ. ಎಲ್ಲರಿಗೂ ಒಂದೇ ರುಚಿ ತಿಂಡಿ ಸವಿಯೋಕೆ ಇಷ್ಟವಾಗೋದಿಲ್ಲ. ಹೀಗಾಗಿ ಹೊಸದೇನಾದರು ತಿಂಡಿ ಮಾಡಿ ಸವಿಯಲು ಇಷ್ಟಪಡುವವರಿಗೆ ಈ ಹೊಸ ರೆಸಿಪಿಯನ್ನು ನಾವಿಂದು ಹೇಳಲಿದ್ದೇವೆ.
ಹೌದು ಬೆಳಗ್ಗೆ ಗಡಿಬಿಡಿಯಲ್ಲೂ ನಾವಿಂದು ಹೇಳುವ ಸ್ಪೆಷಲ್ ರೆಸಿಪಿ ಮಾಡಿ ಸವಿಯಬಹುದು. ಇದಕ್ಕೆ ವಿಶೇಷ ತಯಾರಿಯೂ ಬೇಕಿಲ್ಲ. ಹಾಗೆ ವಿಶೇಷ ವಸ್ತುಗಳು ಕೂಡ ಬೇಕಾಗಿಲ್ಲ. ನೀವು ಅಂದುಕೊಂಡ ಸಮಯದಲ್ಲಿ ಸುಲಭವಾಗಿ ಈ ತಿಂಡಿ ಮಾಡಬಹುದು. ನಾವಿಂದು ಇನ್ಸ್ಟಂಟ್ ಆಗಿ ಮಾಡುವಂತಹ ಮಸಾಲೆ ಗೋಧಿ ದೋಸೆ ಕುರಿತಂತೆ ತಿಳಿದುಕೊಳ್ಳೋಣ.

ನೀವೆಲ್ಲಾ ಸುಲಭವಾಗಿ ಮಾಡಬಹುದಾದ, ಮೆತ್ತನೆಯ ಗೋಧಿ ದೋಸೆಯನ್ನು ಬೆಳಗ್ಗೆ ಮಾಡಿ ಸವಿದಿರುತ್ತೀರಿ. ರೋಸ್ಟ್ ಮಾಡಿ ಸವಿದರೆ ಅದರ ರುಚಿ ದುಪ್ಪಟ್ಟಾಗುತ್ತೆ, ಗೋಧಿ ದೋಸೆಯ ಜೊತೆಗೆ ನಲಗಡಲೆ ಅಥವಾ ಹುರಿಗಡಲೆಯ ಚಟ್ನಿ ಬೊಂಬಾಟ್ ರುಚಿ ನೀಡುತ್ತೆ. ನೀವು ಕೂಡ ಇದನ್ನು ಸವಿದು ನೋಡಿರುತ್ತೀರಿ.
ಹಾಗಾದ್ರೆ ಬೆಳಗ್ಗೆ ತಿಂಡಿಗೆ ಸುಲಭವಾಗಿ ಇನ್ಸ್ಟಂಟ್ ಆಗಿ ಈ ಗೋಧಿ ಮಸಾಲೆ ದೋಸೆ ಮಾಡೋದು ಹೇಗೆ? ಈ ದೋಸೆ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು?, ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಗೋಧಿ ಮಸಾಲೆ ದೋಸೆ ಮಾಡಲು ಬೇಕಾಗುವ ವಸ್ತುಗಳು
- ಗೋಧಿ ಹಿಟ್ಟು - 2 ಕಪ್
- ರವೆ - ಅರ್ಧ ಕಪ್
- ಕಾಳು ಮೆಣಸಿನ ಪುಡಿ- ಕಾಲು ಚಮಚ
- ಜೀರಿಗೆ- 1/2 ಟೀಸ್ಪೂನ್
- ಹಸಿರು ಮೆಣಸಿನಕಾಯಿ - 2
- ಕರಿಬೇವು
- ಕೊತ್ತಂಬರಿ ಸೊಪ್ಪು
- ಅಡುಗೆ ಎಣ್ಣೆ
- ರುಚಿಗೆ ತಕ್ಕಷ್ಟು ಉಪ್ಪು
ಗೋಧಿ ಮಸಾಲೆ ದೋಸೆ ಮಾಡುವ ವಿಧಾನವೇನು?
ಮೊದಲು ಒಂದು ಬೌಲ್ ತೆಗೆದುಕೊಂಡು ಅದಕ್ಕೆ ಗೋಧಿ ಹಿಟ್ಟು ಹಾಕಿಕೊಂಡು ಅದಕ್ಕೆ ಚಿರೋಟಿ ರವೆ, ಕಾಳು ಮೆಣಸಿನ ಪುಡಿ, ಉಪ್ಪು, ಜೀರಿಗೆ, ಹಸಿ ಮೆಣಸು, ಕರಿಬೇವು, ಕೊತ್ತಂಬರಿ ಸೊಪ್ಪು ಸ್ವಲ್ಪ ಸ್ವಲ್ಪ ನೀರು ಹಾಕಿಕೊಳ್ಳುತ್ತಾ ಮಿಕ್ಸ್ ಮಾಡಿಕೊಳ್ಳಿ. ಒಂದೇ ಬಾರಿಗೆ ನೀರು ಹಾಕಿಕೊಳ್ಳಬೇಡಿ, ನಿಧಾನವಕ್ಕೆ ಸ್ವಲ್ಪ ಸ್ವಲ್ಒ ನೀರು ಹಾಕಿ ಮಿಕ್ಸ್ ಮಾಡಿಕೊಳ್ಳಿ.
ಇದು ದೋಸೆ ಹಿಟ್ಟಿನಂತೆಯೇ ದಪ್ಪವಾಗಿರ ಇರಬೇಕು. ಹಿಟ್ಟು ತೆಳು ಮಾಡಿಕೊಳ್ಳಬೇಡಿ. ತೆಳುವಾದರೆ ಮತ್ತೆ ಗೋಧಿ ಹಿಟ್ಟು ಹಾಕಿ ಮಿಕ್ಸ್ ಮಾಡಿಕೊಳ್ಳಿ. ನಂತರ ಒಲೆ ಮೇಲೆ ಒಂದು ದೋಸೆ ಕಾವಲಿ ಇಟ್ಟು ಬಿಸಿ ಮಾಡಿ ನಂತರ ಎಣ್ಣೆ ಹಚ್ಚಿಕೊಂಡು ಹಿಟ್ಟನ್ನು ಹಾಕಿಕೊಂಡು ಮೇಲೆ ಎಣ್ಣೆ ಹಾಕಿ ಕರಿಯಲು ಬಿಡಿಬೇಕು.
ರವೆ ಹಾಕಿರುವುದರಿಂದು ರೋಸ್ಟ್ ಮಾಡಿದರೆ ರುಚಿ ದುಪ್ಪಟ್ಟಾಗುತ್ತೆ, ದೋಸೆಯ ಎರಡೂ ಕಡೆ ಕರಿದುಕೊಳ್ಳಿ. ಇಷ್ಟಾದರೆ ಸುಲಭದ ಗೋಧಿ ಮಸಾಲೆ ದೋಸೆ ರೆಡಿಯಾಗುತ್ತೆ. ನೀವು ಕೂಡ ಬೆಳಗ್ಗೆ ಮನೆಯಲ್ಲಿ ಈ ದೋಸೆಯನ್ನೊಮ್ಮೆ ಟ್ರೈ ಮಾಡಿ ನೋಡಿ. ಇದರ ರುಚಿಗೆ ನೀವು ಮತ್ತೆ ಮತ್ತೆ ಮಾಡಿ ಸವಿಯೋದು ಖಚಿತ.



Click it and Unblock the Notifications
