Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
Breakfast Recipe: ರವೆ ಬಳಸಿ ಥಟ್ ಅಂತ ಸೆಟ್ ದೋಸೆ ಮಾಡಿ..! ಈ ವಿಧಾನ ನೀವೆಂದು ನೋಡಿರಲ್ಲ!
Breakfast Recipe: ಬ್ರೇಕ್ಫಾಸ್ಟ್ಗೆ ನೀವು ಬಹಳ ರುಚಿ ರುಚಿಯಾದ ತಿಂಡಿಯನ್ನು ಮಾಡಿ ಸವಿದಿರುತ್ತೀರಿ. ಅದರಲ್ಲೂ ಬೆಳಗ್ಗೆ ನಿಮ್ಮ ದಿನ ಚೆನ್ನಾಗಿ ಕಳೆಯಬೇಕಾದರೆ ಯಾವುದಾದರು ವಿಶೇಷ ಎನಿಸುವಂತಹ ರೆಸಿಪಿಯನ್ನು ಟ್ರೈ ಮಾಡಿರುತ್ತೀರಿ. ಅದರಲ್ಲೂ ಸುಲಭವಾಗಿ ಹೊಸ ರೀತಿಯ ರುಚಿ ನೀಡುವಂತಹ ರೆಸಿಪಿ ಯಾವಾಗಲು ಸವಿಯಲು ಇಷ್ಟಪಡುತ್ತೀರಿ.
ಇಂತಹ ಸಮಯದಲ್ಲಿ ನಾವು ಸುಲಭವಾಗಿ ಎಲ್ಲರಿಗೂ ಇಷ್ಟವಾಗುವಂತಹ ಹಾಗೆ ನಿಮಿಷಗಳಲ್ಲಿ ರೆಡಿ ಮಾಡುವ ದೋಸೆ ಕುರಿತಾಗಿ ಇಂದು ತಿಳಿದುಕೊಳ್ಳೋಣ. ಅದರಲ್ಲೂ ನೀವು ಹಲವು ಬಗೆ ದೋಸೆಯ ರುಚಿ ನೋಡಿರುತ್ತೀರಿ. ಶುಭ ಕಾರ್ಯಗಳಿದ್ದಾಗ ಇಲ್ಲವೆ ಯಾರಾದರು ಅತಿಥಿಗಳು ಬಂದಾಗ ಕೂಡ ನೀವು ಹೊಸ ರೀತಿಯ ದೋಸೆಗಳ ಟ್ರೈ ಮಾಡಿರಬಹುದು.

ದೋಸೆಗಳೆಂದರೆ ಎಲ್ಲರಿಗೂ ಸುಲಭವಾಗಿ ಇಷ್ಟವಾಗುವಂತಹ ಖಾದ್ಯಗಳು, ಇನ್ನು ನಾವು ಸುಲಭವಾಗಿ ಮಾಡಬಹುದಾದ ದೋಸೆಗಳ ಪೈಕಿ ಇಂದು ರವೆ ಬಳಸಿ ಮಾಡುವ ಸೆಟ್ ದೋಸೆ ಕುರಿತು ತಿಳಿದುಕೊಳ್ಳೋಣ. ಈ ರೀತಿಯಲ್ಲಿ ನೀವೆಂದು ದೋಸೆ ಮಾಡಿ ಸವಿದಿರುವುದಿಲ್ಲ. ಹಾಗೆ ಇದರ ರುಚಿ ಕೂಡ ಅದ್ಭುತವಾಗಿರಲಿದೆ.
ಹಾಗಾದ್ರೆ ನಾವಿಂದು ಈ ರವೆ ಸೆಟ್ ದೋಸೆ ಮಾಡುವ ಕುರಿತು ತಿಳಿದುಕೊಳ್ಳೋಣ. ಅದರಲ್ಲೂ ಈ ದೋಸೆ ಸ್ಪಂಜಿನಂತೆ ಮೃದುವಾಗಿರಲಿದೆ. ಈ ರವೆ ಸೆಟ್ ದೋಸೆ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು? ಮಾಡುವಾಗ ಏನೆಲ್ಲಾ ತಯಾರಿ ಮಾಡಿಕೊಳ್ಳಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ರವೆ ಸೆಟ್ ದೋಸೆ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ರವೆ- 1 ಕಪ್
- ಅವಲಕ್ಕಿ- ಅರ್ಧ ಕಪ್
- ಕೊಬ್ಬರಿ ಪುಡಿ- ಅರ್ಧ ಕಪ್
- ಸಕ್ಕರೆ
- ಉಪ್ಪು
- ಎಣ್ಣೆ
- ಮೊಸರು
- ಸೋಡಾ
ರವೆ ಸೆಟ್ ದೋಸೆ ಮಾಡುವ ವಿಧಾನವೇನು?
ಮೊದಲು ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಒಂದು ಕಪ್ ರವೆ ಅಥವಾ ಬಾಂಬೆ ರವೆಯನ್ನು ಹಾಕಿಕೊಳ್ಳಿ. ಅದಕ್ಕೆ ಅರ್ಧ ಕಪ್ ಗಟ್ಟಿ ಅವಲಕ್ಕಿ, ಕೊಬ್ಬರಿ ತುರಿ, 2 ಸ್ಪೂನ್ ಸಕ್ಕರೆ, ಉಪ್ಪು, 1 ಕಪ್ ಮೊಸರು ಹಾಗೆ 1 ಕಪ್ ನೀರು ಹಾಕಿಕೊಂಡು ರುಬ್ಬಿಕೊಳ್ಳಬೇಕು. ಎಷ್ಟು ನುಣ್ಣಗೆ ರುಬ್ಬಲು ಸಾಧ್ಯವೋ ಅಷ್ಟು ನುಣ್ಣಗೆ, ಹದವಾದ ಹಿಟ್ಟನ್ನು ರುಬ್ಬಿಕೊಳ್ಳಬೇಕು.
ನಂತರ ಈ ಹಿಟ್ಟನ್ನು ಚೆನ್ನಾಗಿ ಕಲಸಿಕೊಂಡು ಮುಚ್ಚಳ ಮುಚ್ಚಿ 10 ನಿಮಿದ ಹಾಗೆಯೇ ಬಿಡಿ. ನಂತರ ಮತ್ತೆ ಹಿಟ್ಟನ್ನು ಮಿಕ್ಸ್ ಮಾಡಿಕೊಳ್ಳಬೇಕು. ಗಟ್ಟಿಯಾಗಿದ್ದರೆ ನೀರು ಹಾಕಿಕೊಳ್ಳಬಹುದು. ಈಗ ಚಿಟಿಕೆ ಅಡುಗೆ ಸೋಡಾ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಇದು ಸಾಮಾನ್ಯ ದೋಸೆ ಹಿಟ್ಟಿನಂತಹ ಹದದಲ್ಲಿ ಬರಬೇಕು.
ಈಗ ಒಲೆ ಮೇಲೆ ಕಾವಲಿ ಇಟ್ಟು ಎಣ್ಣೆ ಹಚ್ಚಿ ಕಾಯಲು ಬಿಡಿ. ನಂತರ ಒಂದೇ ಬಾರಿಗೆ ಎರಡು ಇಲ್ಲವೆ ಮೂರು ದೋಸೆ ಹಾಕಿಕೊಂಡು ಕಾಯಿಸಿಕೊಳ್ಳಿ. ಒಂದು ಕಡೆ ಎಣ್ಣೆ ಹಚ್ಚಿಕೊಂಡು ಎರಡು ಭಾಗದಲ್ಲಿ ಬೇಯಿಸಿಕೊಳ್ಳಿ. ನಂತರ ಈ ದೋಸೆಯನ್ನು ಬ್ರೇಕ್ ಫಾಸ್ಟ್ಗೆ ಬಡಿಸಲು ಸಿದ್ದ ಮಾಡಿ. ನೀವು ದೊಡ್ಡದಾಗಿ ಒಂದೇ ದೋಸೆ ಮಾಡಬಹುದು. ಇಲ್ಲವೆ ಚಿಕ್ಕ ಚಿಕ್ಕದಾಗಿಯೂ ಈ ದೋಸೆ ಮಾಡಬಹುದು.
ಹಿಟ್ಟು ಹದ ಸರಿಯಾಗಿ ಮಾಡಿಕೊಂಡರೆ ಹತ್ತಿಯಂತೆ ಮೃದುವಾಗಿ ಈ ದೋಸೆ ಬರಲಿದೆ. ನೀವು ಕೂಡ ಬ್ರೇಕ್ ಫಾಸ್ಟ್ಗೆ ಈ ದೋಸೆ ಮಾಡಿ ನೋಡಿ. ನಿತ್ಯ ಬೆಳಗ್ಗೆ ಸಮಯ ಇಲ್ಲದಾಗಲು ಈ ಹಿಟ್ಟು ಮಾಡಿಕೊಂಡು ಥಟ್ ಎಂದು ದೋಸೆ ಮಾಡಬಹುದು, ಹೆಚ್ಚಿನ ತಯಾರಿಯೂ ಬೇಡ ಹಾಗೆ ಸಮಯ ಕೂಡ ಹೆಚ್ಚು ಹಿಡಿಯುವುದಿಲ್ಲ.



Click it and Unblock the Notifications
