Latest Updates
-
ಲಕ್ಷ್ಮಿ ಪೂಜೆಯ ಮುಹೂರ್ತದ ಗೊಂದಲ: ಕುಟುಂಬದ ಶಾಂತಿಗಾಗಿ ಇಲ್ಲಿದೆ ಸರಳ ಪರಿಹಾರಗಳು -
ದೀಪಾವಳಿ ಹಬ್ಬದ ಸಂಭ್ರಮ: ಡಯಾಬಿಟಿಸ್ ಇದ್ದರೂ ಸಿಹಿ ಸವಿಯಲು ಈ ಟಿಪ್ಸ್ ಫಾಲೋ ಮಾಡಿ -
ಅಯೋಧ್ಯೆ ದೀಪೋತ್ಸವ 2026: 36 ಲಕ್ಷ ದೀಪಗಳ ಬೆಳಕಿನ ವೈಭವ, ಸಂಚಾರ ಮಾರ್ಗ ಮತ್ತು ವೀಕ್ಷಣೆಯ ಟಿಪ್ಸ್ -
ದೀಪಾವಳಿ ಸಂಭ್ರಮದಲ್ಲಿ ಬೆನ್ನು ನೋವಾ? ಲಕ್ಷ್ಮಿ ಪೂಜೆಗೂ ಮುನ್ನ ಈ 7 ನಿಮಿಷದ ಸ್ಟ್ರೆಚಿಂಗ್ ಟ್ರೈ ಮಾಡಿ! -
ದೀಪಾವಳಿ ಸಂಭ್ರಮಕ್ಕೆ ಮೆಗಾ ಬ್ಲಾಕ್ ಅಡ್ಡಿ: ಮುಂಬೈ ರೈಲು ಪ್ರಯಾಣಿಕರೇ ಎಚ್ಚರ, ಪ್ಲಾನ್ ಬದಲಾಯಿಸಿ! -
ದೀಪಾವಳಿ ಸಿಹಿ ತಿಂಡಿಗಳಲ್ಲಿ ಕಲಬೆರಕೆ? 30 ಸೆಕೆಂಡ್ಗಳಲ್ಲಿ ಪರೀಕ್ಷಿಸಿ ನಿಮ್ಮ ಕುಟುಂಬದ ಆರೋಗ್ಯ ಕಾಪಾಡಿ! -
ಬಿಗ್ ಬಾಸ್ ಕನ್ನಡ 13: ಈ ವಾರ ಎಲಿಮಿನೇಷನ್ ಇಲ್ಲವೇ? ಭಾವುಕ ಪತ್ರಗಳೇ ಬದಲಾಯಿಸಿದ ಆಟದ ಸಮೀಕರಣ! -
ದೆಹಲಿ ವಾಯುಮಾಲಿನ್ಯದ ಭೀತಿ: ಮನೆಯಲ್ಲೇ 12 ನಿಮಿಷದ ಸರಳ ವರ್ಕೌಟ್ ಮೂಲಕ ಆರೋಗ್ಯ ಕಾಪಾಡಿಕೊಳ್ಳಿ -
ವಾಟ್ಸಾಪ್ನಲ್ಲಿ ದೀಪಾವಳಿ ಬೋನಸ್ ಲಿಂಕ್ ಬಂದಿದೆಯೇ? ಮೋಸ ಹೋಗುವ ಮುನ್ನ ಈ 30 ಸೆಕೆಂಡ್ ಕೆಲಸ ಮಾಡಿ! -
ದೆಹಲಿ ಮಾಲಿನ್ಯದ ಭೀತಿ: ₹150 ಬಜೆಟ್ನಲ್ಲಿ ನಿಮ್ಮ ಆರೋಗ್ಯ ರಕ್ಷಿಸುವ ಆಂಟಿ-ಸ್ಮಾಗ್ ಡಯಟ್ ಪ್ಲಾನ್ ಇಲ್ಲಿದೆ!
ಅರ್ಧ ಗಂಟೆಯ ಇಡ್ಲಿ; ನೆನೆಸುವ ಅಗತ್ಯವಿಲ್ಲ, ಹಿಟ್ಟು ರುಬ್ಬೋದು ಬೇಡ!
ಬೆಳಗ್ಗೆ ತಿಂಡಿಗೆ ನೀವು ಹಲವು ಬಗೆಯ ಖಾದ್ಯಗಳ ಮಾಡಿ ಸವಿಯುವ ಆಲೋಚನೆಯಲ್ಲಿರುತ್ತೀರಿ. ಅಂದ ಹಾಗೆ ಬೆಳಗ್ಗೆ ತಿಂಡಿಗೆ ಇಡ್ಲಿ ಮಾಡಿ ಸವಿಯುವ ನಿಮ್ಮ ಆಸೆ ಯಾವಾಗಲು ಈಡೇರಿಸಿಕೊಳ್ಳುವಿರಿ. ಇಡ್ಲಿ ಅಂದ್ರೆ ಎಲ್ಲರಿಗೂ ಇಷ್ಟವಾಗುವ ಖಾದ್ಯ. ಅದ್ರಲ್ಲೂ ಕಡಿಮೆ ಎಣ್ಣೆ ಬಳಸಿಕೊಂಡು ಮಾಡುವುದರಿಂದ ಆರೋಗ್ಯಕ್ಕೂ ಸಹ ಇದು ಬಹಳ ಉತ್ತಮ.
ಆದ್ರೆ ಇಡ್ಲಿ ಅಂದ್ರೆ ಹಿಂದಿನ ದಿನವೇ ಅದಕ್ಕೆ ತಯಾರಿ ಮಾಡಿಕೊಳ್ಳಬೇಕಾಗುತ್ತದೆ. ಹೀಗಾಗಿ ಹಲವರು ಇಡ್ಲಿ ಮಾಡುವ ಬದಲಾಗಿ ಬೇರೆ ಬೇರೆ ಖಾದ್ಯಗಳ ಮಾಡಿ ಸವಿಯೋದನ್ನು ಇಷ್ಟಪಡುತ್ತಾರೆ. ಆದ್ರೆ ನೀವು ಥಟ್ ಅಂತ ಅರ್ಧ ಗಂಟೆಯಲ್ಲಿ ಇಡ್ಲಿ ಮಾಡಿ ಸವಿಯಬಹುದು ಎಂಬುದು ನಿಮಗೆ ಗೊತ್ತಾ? ಇಡ್ಲಿಯಲ್ಲಿನ ಹಲವು ಬಗೆಯಲ್ಲಿ ಈ ವಿಧಾನದಲ್ಲಿ ಇಡ್ಲಿಯನ್ನು ಅರ್ಧ ಗಂಟೆಯಲ್ಲಿ ಮಾಡಿ ಸವಿಯಬಹುದು.

ಹಾಗಾದ್ರೆ ಸುಲಭವಾಗಿ ಅರ್ಧ ಗಂಟೆಯಲ್ಲಿ ರವೆ ಬಳಸಿಕೊಂಡು ಈ ಇಡ್ಲಿಯನ್ನು ಮಾಡುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ. ಇನ್ಸ್ಟಂಟ್ ಇಡ್ಲಿ ಮಾಡುವ ವಿಧಾನವೇನು? ರವೆ ಇಡ್ಲಿ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ರವೆ ಇಡ್ಲಿ ಮಾಡಲು ಬೇಕಾಗುವ ಪದಾರ್ಥಗಳು
- ರವೆ
- ಸೋಡಾ
- ಎಣ್ಣೆ
- ಮೊಸರು
- ಉಪ್ಪು
ರವೆ ಇಡ್ಲಿ ಮಾಡುವ ಸುಲಭದ ವಿಧಾನವೇನು?
ಮೊದಲಿಗೆ ಅಳತೆ ಕಪ್ನಲ್ಲಿ 2 ಕಪ್ ರವೆ ತೆಗೆದುಕೊಳ್ಳಿ. ಇದು ಉಪ್ಪಿಟ್ಟು ರವೆ ಆಗಿರಲಿ. ಇದನ್ನು ಬಾಣಲೆಗೆ ಹಾಕಿ ಚೆನ್ನಾಗಿ ಹುರಿದುಕೊಳ್ಳಿ. 2 ನಿಮಿಷ ಹುರಿದುಕೊಂಡರೆ ಸಾಕಾಗುತ್ತದೆ. ಉಪ್ಪಿಟ್ಟಿಗೆ ಹುರಿಯುವಷ್ಟು ಹುರಿದುಕೊಳ್ಳುವ ಅಗತ್ಯವಿಲ್ಲ. ಅನಂತರ ಇದನ್ನು ಒಂದು ಪ್ಲೇಟ್ಗೆ ಹಾಕಿಕೊಂಡು ತಣ್ಣಗಾಗಲು ಬಿಡಬೇಕು.
ಈಗ ಬೌಲ್ಗೆ ಈ ರವೆ ಹಾಕಿ ಅದಕ್ಕೆ 1 ಕಪ್ ಮೊಸರು ಸೇರಿಸಿಕೊಂಡು 1 ಕಪ್ ನೀರು ಸಹ ಸೇರಿಸಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಈಗ ಉಪ್ಪು ಸೇರಿಸಿ ಕಾಲು ಕಪ್ ನೀರು ಸೇರಿಸಿ ಮಿಕ್ಸ್ ಮಾಡಿಕೊಳ್ಳಬೇಕು. ಇದು ಗಟ್ಟಿಯಾಗಿ ಬರಬೇಕು. ನಂತರ ಮುಚ್ಚಳ ಮುಚ್ಚಿ ಅರ್ಧ ಗಂಟೆ ಹಿಟ್ಟನ್ನು ನೆನೆಯಲು ಬಿಡಬೇಕು. ಈ ಸಮಯದಲ್ಲಿ ನೀವು ಇಡ್ಲಿಗೆ ಬೇಕಾಗುವ ಚಟ್ನಿ ಮಾಡಿಕೊಳ್ಳಬಹುದು.
ಈಗ ಇಡ್ಲಿ ಹಿಟ್ಟನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಗಟ್ಟಿಯಾಗಿದ್ದರೆ ನೀರು ಹಾಕಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ ಚಿಟಿಕೆ ಸೋಡಾ ಸಹ ಸೇರಿಸಿಕೊಂಡು ಮಿಶ್ರಣ ಮಾಡಿಕೊಂಡರೆ ಉತ್ತಮ. ಇಷ್ಟಾದರೆ ಇಡ್ಲಿ ಹಿಟ್ಟು ಸಿದ್ದವಾಗುತ್ತೆ. ಈಗ ಇಡ್ಲಿ ಅಚ್ಚುಗಳಿಗೆ ಎಣ್ಣೆ ಸವರಿಕೊಂಡು ನಿಧಾನವಾಗಿ ಇಡ್ಲಿ ಹಿಟ್ಟು ಹಾಕಿಕೊಳ್ಳಿ. ಆದ್ರೆ ಇಡ್ಲಿ ಕುಕ್ಕರ್ ಒಲೆ ಮೇಲೆ ಇಟ್ಟ ಅದು ಬಿಸಿಯಾದ ಬಳಿಕ ಈ ಇಡ್ಲಿ ಅಚ್ಚುಗಳನ್ನು ಅದರೊಳಗೆ ಇಡಬೇಕು. ಅನಂತರ 12ರಿಂದ 15 ನಿಮಿಷ ಬೇಯಿಸಿಕೊಂಡರೆ ಸಾಕಾಗುತ್ತದೆ. ನೀವು ಸಹ ಒಮ್ಮೆ ಮನೆಯಲ್ಲಿ ಈ ರೀತಿಯಾಗಿ ಇಡ್ಲಿ ಮಾಡಿ ಸವಿದು ನೋಡಿ.



Click it and Unblock the Notifications
