Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಬ್ಯುಸಿ ಲೈಫ್, ಹೆಲ್ದಿ ಫುಡ್! ನುಗ್ಗೆ ಸೊಪ್ಪಿನ ಚಟ್ನಿ ಪುಡಿ ಮಾಡಿ.. ಬೊಜ್ಜು ಕರಗುತ್ತೆ, ತೂಕ ಇಳಿಯುತ್ತೆ
ನುಗ್ಗೆ ಸೊಪ್ಪಿನ ಪುಡಿಯನ್ನು ಹೀಗೆ ತಿಂದ್ರೆ ಸಾಕು! ಬೊಜ್ಜು ಕರಗಿ, ದೇಹದ ತೂಕ ಇಳಿಯೋದು ಗ್ಯಾರಂಟಿ. ಪ್ರಸ್ತುತ ಜೀವನಶೈಲಿಯಲ್ಲಿ ಆರೋಗ್ಯಕರ ಮತ್ತು ರುಚಿಕರವಾದ ಆಹಾರವನ್ನು ತಯಾರಿಸುವುದು ಒಂದು ಸವಾಲೇ ಸರಿ. ಆದರೆ, ಅಡುಗೆಮನೆಯಲ್ಲಿ ಸುಲಭವಾಗಿ ತಯಾರಿಸಬಹುದಾದ, ಪೌಷ್ಟಿಕಾಂಶಗಳಿಂದ ತುಂಬಿರುವ ಒಂದು ಅದ್ಭುತ ರೆಸಿಪಿಯನ್ನು ನಾವು ನಿಮಗೆ ತಿಳಿಸುತ್ತಿದ್ದೇವೆ. ಅದುವೇ ನುಗ್ಗೆ ಸೊಪ್ಪಿನ ಚಟ್ನಿ ಪುಡಿ (Moringa Chutney Powder). ಹೌದು, ನುಗ್ಗೆ ಸೊಪ್ಪು ತನ್ನ ಅಪಾರ ಔಷಧೀಯ ಗುಣಗಳು ಮತ್ತು ಪೌಷ್ಟಿಕಾಂಶಗಳಿಗಾಗಿ 'ಸೂಪರ್ಫುಡ್' ಎಂದು ಗುರುತಿಸಿಕೊಂಡಿದೆ. ಈ ಚಟ್ನಿ ಪುಡಿಯನ್ನು ಒಮ್ಮೆ ತಯಾರಿಸಿಟ್ಟುಕೊಂಡರೆ, ಬೇಕೆಂದಾಗ ತಕ್ಷಣವೇ ತಾಜಾ ಮತ್ತು ಪರಿಮಳಯುಕ್ತ ಚಟ್ನಿಯನ್ನು ಸವಿಯಬಹುದು.
ನುಗ್ಗೆ ಸೊಪ್ಪಿನಲ್ಲಿ ವಿಟಮಿನ್ಗಳು, ಖನಿಜಗಳು ಮತ್ತು ಆಂಟಿಆಕ್ಸಿಡೆಂಟ್ಗಳು ಹೇರಳವಾಗಿವೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರಿಂದ ಹಿಡಿದು ಜೀರ್ಣಕ್ರಿಯೆಗೆ ಸಹಾಯ ಮಾಡುವುದು, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದು ಸೇರಿದಂತೆ ಹಲವು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಈ ಚಟ್ನಿ ಪುಡಿಯು ನಿಮ್ಮ ದೈನಂದಿನ ಆಹಾರದಲ್ಲಿ ನುಗ್ಗೆ ಸೊಪ್ಪನ್ನು ಸೇರಿಸಲು ಒಂದು ರುಚಿಕರ ಮಾರ್ಗವಾಗಿದೆ. ಬನ್ನಿ, ನುಗ್ಗೆ ಸೊಪ್ಪಿನ ಚಟ್ನಿ ಪುಡಿ ತಯಾರಿಸಲು ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನವನ್ನು ತಿಳಿಯೋಣ.

ನುಗ್ಗೆ ಸೊಪ್ಪಿನ ಚಟ್ನಿ ಪುಡಿ ತಯಾರಿಸಲು ಬೇಕಾಗುವ ಸಾಮಗ್ರಿಗಳು
• ನುಗ್ಗೆ ಸೊಪ್ಪು- 2 ಕಪ್ ಅಥವಾ 1 ಕಪ್ ಒಣಗಿದ ನುಗ್ಗೆ ಸೊಪ್ಪು
• ಒಣ ಮೆಣಸಿನಕಾಯಿ - 4
• ಒಣ ಕೊಬ್ಬರಿ - 1/2 ಕಪ್ (ತುರಿದ)
• ಕಡಲೆಕಾಯಿ - 4 ಚಮಚ
• ಹುರಿಗಡಲೆ - 4 ಚಮಚ
• ಉದ್ದಿನ ಬೇಳೆ - 4 ಚಮಚ
• ಬಿಳಿ ಎಳ್ಳು - 1 ಚಮಚ
• ಬೆಳ್ಳುಳ್ಳಿ - 4 ಎಸಳುಗಳು
• ಇಂಗು - 1 ಚಿಟಿಕೆ
• ಉಪ್ಪು - ರುಚಿಗೆ ತಕ್ಕಷ್ಟು
ಚಟ್ನಿ ತಯಾರಿಸಲು ಬೇಕಾಗುವ ಸಾಮಗ್ರಿಗಳು
• ಬೆಲ್ಲ - 1 ಸಣ್ಣ ತುಂಡು
• ನಿಂಬೆ ರಸ - 1 ಚಮಚ
• ನೀರು - ಅಗತ್ಯವಿರುವಷ್ಟು

ನುಗ್ಗೆ ಸೊಪ್ಪಿನ ಚಟ್ನಿ ಪುಡಿ ತಯಾರಿಸುವ ವಿಧಾನ
ಮೊದಲಿಗೆ, ನುಗ್ಗೆ ಸೊಪ್ಪನ್ನು ಚೆನ್ನಾಗಿ ತೊಳೆಯಿರಿ. ಅದನ್ನು ಬಟ್ಟೆಯ ಮೇಲೆ ಹರಡಿ ನೀರು ಸಂಪೂರ್ಣವಾಗಿ ಒಣಗುವವರೆಗೆ ಒಣಗಿಸಿ. ಇದರಲ್ಲಿ ಯಾವುದೇ ತೇವಾಂಶ ಇರದಂತೆ ನೋಡಿಕೊಳ್ಳಬೇಕು. ಒಣಗಿದ ನುಗ್ಗೆ ಸೊಪ್ಪನ್ನು ನುಗ್ಗೆಸೊಪ್ಪಿನ ಪುಡಿಯನ್ನು ಈ ರೀತಿಯಾಗಿ ಸೇವಿಸಿದ್ರೆ ಸಾಕು... ದೇಹ ತೂಕ ಸುಲಭವಾಗಿ ಕರಗುತ್ತೆ!ನಲ್ಲಿ ಹಾಕಿ ಅತಿ ಕಡಿಮೆ ತಾಪಮಾನದಲ್ಲಿ 2 ನಿಮಿಷಗಳ ಕಾಲ ಹುರಿಯಿರಿ. ಪ್ರತ್ಯೇಕ ಟ್ರೇನಲ್ಲಿ ಒಣ ಮೆಣಸಿನಕಾಯಿ ಮತ್ತು ತುರಿದ ಕೊಬ್ಬರಿಯನ್ನು ಹಾಕಿ, ಏರ್ ಫ್ರೈಯರ್ನಲ್ಲಿ 3 ನಿಮಿಷ ಹುರಿಯಿರಿ.
ಈಗ ಕಡಲೆಕಾಯಿ, ಹುರಿಗಡಲೆ, ಉದ್ದಿನ ಬೇಳೆ ಮತ್ತು ಎಳ್ಳನ್ನು ಒಟ್ಟಿಗೆ ಸೇರಿಸಿ ಏಳು ನಿಮಿಷಗಳ ಕಾಲ ಹುರಿಯಿರಿ. ಅಂದರೆ ಹೊಂಬಣ್ಣ ಬರುವವರೆಗೆ ಮತ್ತು ಪರಿಮಳ ಬರುವವರೆಗೆ ಏರ್ ಫ್ರೈಯರ್ನಲ್ಲಿ ಹುರಿಯಿರಿ. ಹುರಿದ ಎಲ್ಲಾ ಪದಾರ್ಥಗಳನ್ನು ಸ್ವಲ್ಪ ತಣ್ಣಗಾಗಲು ಬಿಡಿ. ಬಳಿಕ ಇವುಗಳನ್ನು ಬೆಳ್ಳುಳ್ಳಿ ಎಸಳುಗಳು, ಉಪ್ಪು ಮತ್ತು ಚಿಟಿಕೆ ಇಂಗಿನ ಜೊತೆಗೆ ಬ್ಲೆಂಡರ್ಗೆ ಸೇರಿಸಿ. ನಿಮ್ಮ ಇಷ್ಟಾನುಸಾರ ತರಿತರಿಯಾಗಿ ಅಥವಾ ನುಣುಪಾಗಿ ಪುಡಿ ಮಾಡಿ. ಈ ನುಗ್ಗೆ ಸೊಪ್ಪಿನ ಪುಡಿಯನ್ನು ಗಾಳಿಯಾಡದ ಡಬ್ಬದಲ್ಲಿ ಸಂಗ್ರಹಿಸಿಡಿ.
ನುಗ್ಗೆ ಸೊಪ್ಪಿನ ಚಟ್ನಿ ತಯಾರಿಸುವ ವಿಧಾನ
ಮೊದಲಿಗೆ ಒಂದು ಬೌಲ್ನಲ್ಲಿ 2 ಚಮಚ ಚಟ್ನಿ ಪುಡಿಯನ್ನು ತೆಗೆದುಕೊಳ್ಳಿ. ಅದಕ್ಕೆ 1 ಚಮಚ ಬೆಲ್ಲ, 1 ಚಮಚ ನಿಂಬೆ ರಸ ಮತ್ತು ಸ್ವಲ್ಪ ನೀರನ್ನು ಸೇರಿಸಿ. ನುಣುಪಾಗುವವರೆಗೆ ಚೆನ್ನಾಗಿ ಮಿಕ್ಸ್ ಮಾಡಿ ಅಥವಾ ಬ್ಲೆಂಡ್ ಮಾಡಿ. ಈ ತಾಜಾ ಚಟ್ನಿಯನ್ನು ದೋಸೆ, ಇಡ್ಲಿ, ಅನ್ನ ಅಥವಾ ನಿಮ್ಮ ನೆಚ್ಚಿನ ತಿಂಡಿಯೊಂದಿಗೆ ಸವಿಯಬಹುದು.

ಒಟ್ಟಾರೆಯಾಗಿ, ಈ ನುಗ್ಗೆ ಸೊಪ್ಪಿನ ಚಟ್ನಿ ಪುಡಿಯು ಒಂದು ಆರೋಗ್ಯಕರ ಮತ್ತು ರುಚಿಕರ ಸಂಗಮವಾಗಿದೆ. ಇದನ್ನು ತಯಾರಿಸುವುದು ಸುಲಭ. ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ನೀವು ಒಮ್ಮೆ ಇದನ್ನು ಮನೆಯಲ್ಲಿ ಟ್ರೈ ಮಾಡಿ. ನಿಮ್ಮ ಕುಟುಂಬದವರಿಗೆ ಆರೋಗ್ಯಕರವಾದ ಈ ಚಟ್ನಿ ಪುಡಿಯ ರುಚಿಯನ್ನು ಉಣಬಡಿಸಿ.



Click it and Unblock the Notifications
