Latest Updates
-
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ! -
ಮಳೆಗಾಲದಲ್ಲಿ ಬೆಂಗಳೂರಿನ ಮನೆ ಮತ್ತು ಬಾಲ್ಕನಿ ರಕ್ಷಣೆ: 40 ನಿಮಿಷದ ಸಿಂಪಲ್ ಚೆಕ್ಲಿಸ್ಟ್ -
ಬೆಂಗಳೂರಿನಲ್ಲಿ 2 ದಿನ ಭಾರಿ ಪವರ್ ಕಟ್: ಈ 70 ಪ್ರದೇಶಗಳಲ್ಲಿ ಕರೆಂಟ್ ಇರಲ್ಲ, ಮುನ್ನೆಚ್ಚರಿಕೆ ವಹಿಸಿ! -
ಈರುಳ್ಳಿ ಬೆಲೆ ಏರಿಕೆ ಬಿಸಿ: ₹800ರಲ್ಲಿ ವಾರಪೂರ್ತಿ ಪ್ರೋಟೀನ್ ಯುಕ್ತ ಆರೋಗ್ಯಕರ ಊಟದ ಪ್ಲಾನ್! -
ಹಬ್ಬದ ಸಿಹಿ ತಯಾರಿಗೆ ಸಕ್ಕರೆ ಬೆಲೆ ಬಿಸಿ: ಜೇಬಿಗೆ ಹೊರೆಯಾಗದಂತೆ ಸಂಭ್ರಮಿಸುವುದು ಹೇಗೆ? -
LPG e-KYC ಗಡುವು: ನಾಳೆಯೇ ಕೊನೆಯ ದಿನ, ನಿಮ್ಮ ಗ್ಯಾಸ್ ಸಂಪರ್ಕ ಕಡಿತವಾಗದಂತೆ ತಡೆಯುವುದು ಹೇಗೆ? -
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ?
ಹತ್ತಿಯಂತೆ ಮೃದು.. ಬೆಳಗಿನ ತಿಂಡಿಗೆ 10 ನಿಮಿಷದಲ್ಲಿ ಲೆಮನ್ ಇಡ್ಲಿ! ಮಾಡೋದು ಹೇಗೆ?
ಇಡ್ಲಿ ಇಷ್ಟವೋ? ಹೀಗಾದ್ರೆ ಬೆಳಗಿನ ಉಪಾಹಾರಕ್ಕೆ ಹೊಸ ಟ್ವಿಸ್ಟ್! ಈ ಲೆಮನ್ ಇಡ್ಲಿ ಟ್ರೈ ಮಾಡಿ ನೋಡಿ. ಪ್ರತೀ ಬೈಟ್‌ನಲ್ಲಿ ಪರಿಪೂರ್ಣ ರುಚಿ. ಬೆಳಗಿನ ಉಪಾಹಾರವು ದಿನದ ಅತ್ಯಂತ ಪ್ರಮುಖ ಊಟ. ಸಾಮಾನ್ಯವಾಗಿ ಇಡ್ಲಿ (idli), ದೋಸೆಗಳಂತಹ ಸಾಂಪ್ರದಾಯಿಕ ತಿಂಡಿಗಳು ಬಹಳ ಜನಪ್ರಿಯವಾಗಿವೆ. ಆದರೆ, ಕೆಲವೊಮ್ಮೆ ಹೊಸ ಮತ್ತು ವಿಭಿನ್ನ ರುಚಿಯನ್ನು ಸವಿಯಲು ಬಯಸುತ್ತಾರೆ. ಅಂತಹವರಿಗೆ 'ಲೆಮನ್ ಇಡ್ಲಿ' (Lemon Idli) ಉತ್ತಮ ಆಯ್ಕೆಯಾಗಿದೆ.
ಬೆಳಗಿನ ಉಪಹಾರ ಬೇಗನೇ ತಯಾರಾಗಬೇಕು ಮತ್ತು ಉತ್ತಮ ರುಚಿ ಹೊಂದಿರಬೇಕು ಅಂತ ನೀವು ಬಯಸಿದರೆ, ಈ ಸ್ಪೆಷಲ್ ಲೆಮನ್ ಇಡ್ಲಿ ರೆಸಿಪಿಯನ್ನು ಖಂಡಿತಾ ಒಮ್ಮೆ ಟ್ರೈ ಮಾಡಿ. ಈ ಲೆಮನ್ ಇಡ್ಲಿ (Lemon Idli Recipe) ಸಾಂಪ್ರದಾಯಿಕ ಇಡ್ಲಿಗೆ ವಿಶಿಷ್ಟ ಸ್ಪರ್ಶ ನೀಡುತ್ತದೆ. ನಿಂಬೆಹಣ್ಣಿನ ಲಘು ಹುಳಿ ಮತ್ತು ಖಾರ-ಹುಳಿ ಮಿಶ್ರಿತ ರುಚಿಯಿಂದ ಕೂಡಿದ ಇದು, ಮೃದುವಾಗಿ, ಆರೋಗ್ಯಕರವಾಗಿ ಮತ್ತು ಅತ್ಯಂತ ರುಚಿಕರವಾಗಿರುವುದು ವಿಶೇಷ.
ಬೆಳಗ್ಗೆ ಬೇಗನೆ ತಯಾರಿಸಬಹುದಾದ ಈ ಖಾದ್ಯ ಇಡೀ ಕುಟುಂಬಕ್ಕೆ ಇಷ್ಟವಾಗುತ್ತದೆ. ಮನೆಯಲ್ಲೇ ಸುಲಭವಾಗಿ 'ಲೆಮನ್ ಇಡ್ಲಿ' (Instant Lemon idli) ತಯಾರಿಸುವ ವಿಧಾನವನ್ನು ಈ ಲೇಖನದಲ್ಲಿ ತಿಳಿಸಲಾಗಿದೆ. ಆರೋಗ್ಯಕರವೂ, ರುಚಿಕರವೂ ಆದ ಈ ಇಡ್ಲಿ ಎಲ್ಲರಿಗೂ ಇಷ್ಟವಾಗುವ ಬ್ರೇಕ್‌ಫಾಸ್ಟ್.
ಲೆಮನ್ ಇಡ್ಲಿ ತಯಾರಿಸಲು ಬೇಕಾಗುವ ಸಾಮಗ್ರಿಗಳು
• ಇಡ್ಲಿ ರವೆ - 1 ಕಪ್
• ಮೊಸರು - 1/2 ಕಪ್
• ನೀರನ್ನು - 1/2 ಕಪ್ (ಅಗತ್ಯವಿರುವಷ್ಟು)
• ನಿಂಬೆ ರಸ - 2 ಚಮಚ
• ಹಸಿ ಮೆಣಸಿನಕಾಯಿ - 1-2
• ಶುಂಠಿ - 1 ಸಣ್ಣ ತುಂಡು
• ಕೊತ್ತಂಬರಿ ಸೊಪ್ಪು - 2 ಚಮಚ
• ಅಡುಗೆ ಸೋಡಾ - 1/2 ಚಮಚ
• ಉಪ್ಪು - ರುಚಿಗೆ ತಕ್ಕಷ್ಟು
• ಇಡ್ಲಿಗೆ ಹಚ್ಚಲು ಎಣ್ಣೆ - 1 ಚಮಚ
ಲೆಮನ್ ಇಡ್ಲಿ ತಯಾರಿಸುವ ಸರಳ ವಿಧಾನ
- ಮನೆಯಲ್ಲೇ ರುಚಿಕರವಾದ, ಮೃದುವಾದ ನಿಂಬೆ ಇಡ್ಲಿ ತಯಾರಿಸುವ ತುಂಬಾ ಸುಲಭ.
- ಮೊದಲಿಗೆ, ಇಡ್ಲಿ ರವೆಯನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಂಡು, ಸಾಕಷ್ಟು ನೀರು ಸೇರಿಸಿ 10-15 ನಿಮಿಷಗಳ ಕಾಲ ನೆನೆಯಲು ಬಿಡಬೇಕು. ರವೆ ಸರಿಯಾಗಿ ನೆನೆದರೆ ಇಡ್ಲಿ ಮೃದುವಾಗಿ, ರುಚಿಯಾಗಿ ಬರುತ್ತದೆ.
- ನಂತರ, ದೊಡ್ಡ ಬೌಲ್ ಒಂದಕ್ಕೆ ಮೊಸರು, ನಿಂಬೆ ರಸ, ಸಣ್ಣದಾಗಿ ಹೆಚ್ಚಿದ ಹಸಿಮೆಣಸಿನಕಾಯಿ, ತುರಿದ ಶುಂಠಿ ಮತ್ತು ತಾಜಾ ಕೊತ್ತಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪನ್ನೂ ಸೇರಿಸಿ ಸಮವಾಗಿ ಕಲೆಸಬೇಕು.
- ಈಗ ನೆನೆಸಿಟ್ಟ ರವೆಯನ್ನು ಈ ಮಿಶ್ರಣಕ್ಕೆ ಸೇರಿಸಿ, ಎಲ್ಲವನ್ನೂ ಮತ್ತೊಮ್ಮೆ ಚೆನ್ನಾಗಿ ಮಿಕ್ಸ್ ಮಾಡಬೇಕು. ಇಡ್ಲಿ ಹಿಟ್ಟು ತುಂಬಾ ತೆಳುವಾಗಬಾರದು, ಸ್ವಲ್ಪ ಗಟ್ಟಿಯಾಗಿಯೇ ಇರಬೇಕು. ಬೇಕಿದ್ದರೆ, ಅಲ್ಪ ಪ್ರಮಾಣದಲ್ಲಿ ನೀರು ಸೇರಿಸಿ ಸರಿಯಾದ ಹದಕ್ಕೆ ಹೊಂದಿಸಿಕೊಳ್ಳಬಹುದು.
- ಅಂತಿಮವಾಗಿ, ಹಿಟ್ಟಿಗೆ ಅಡುಗೆ ಸೋಡಾ (Baking Soda) ಸೇರಿಸಿ, ನಿಧಾನವಾಗಿ ಕಲೆಸಿ. ಸೋಡಾ ಸೇರಿಸಿದ ನಂತರ ಹೆಚ್ಚು ಹೊತ್ತು ಕಾಯದೆ ತಕ್ಷಣವೇ ಇಡ್ಲಿ ಮಾಡಲು ಸಿದ್ಧರಾಗಬೇಕು. ಇಡ್ಲಿ ಸ್ಟ್ಯಾಂಡ್‌ಗಳಿಗೆ ಎಣ್ಣೆ ಸವರಿ, ಹಿಟ್ಟನ್ನು ತುಂಬಿಸಿ.
- ಇಡ್ಲಿ ಪಾತ್ರೆಯಲ್ಲಿ (ಸ್ಟೀಮರ್‌ನಲ್ಲಿ) ಈ ಸ್ಟ್ಯಾಂಡ್‌ಗಳನ್ನು ಇರಿಸಿ, ಮಧ್ಯಮ ಉರಿಯಲ್ಲಿ 10-12 ನಿಮಿಷಗಳ ಕಾಲ ಹಬೆಯಲ್ಲಿ ಬೇಯಿಸಿ. ಇಡ್ಲಿ ಬೆಂದ ನಂತರ ತಕ್ಷಣ ಸ್ಟೀಮರ್ ತೆರೆಯಬೇಡಿ. ಸ್ವಲ್ಪ ಸಮಯ ತಣ್ಣಗಾಗಲು ಬಿಟ್ಟರೆ, ಇಡ್ಲಿಗಳು ಮುರಿಯದೆ ಸುಲಭವಾಗಿ ಹೊರಬರುತ್ತವೆ.
- ಇಷ್ಟು ಮಾಡಿದರೆ, ಬಿಸಿಬಿಸಿಯಾದ ಲೆಮನ್ ಇಡ್ಲಿ ಸವಿಯಲು ಸಿದ್ಧ. ಇದನ್ನು ತೆಂಗಿನಕಾಯಿ ಚಟ್ನಿ ಅಥವಾ ಟೊಮೆಟೊ ಚಟ್ನಿಯೊಂದಿಗೆ ಸವಿದರೆ, ಇದರ ರುಚಿ ಇನ್ನಷ್ಟು ಹೆಚ್ಚುತ್ತದೆ.



Click it and Unblock the Notifications
