Latest Updates
-
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ
ಅಂಗಡಿಯಲ್ಲಿ ಸಿಗುವ ಪ್ಯಾಕೆಟ್ನ ರವೆ ಇಡ್ಲಿ ಮಾಡೋದು ಹೇಗೆ? ನಿಮಿಷಗಳಲ್ಲಿ ರೆಡಿ ಮಾಡಬಹುದು!
ನಿಮ್ಮ ಮನೆಯಲ್ಲಿ ಬೆಳಗ್ಗೆ ತಿಂಡಿಗೆ ನೀವು ಇಡ್ಲಿ ಮಾಡಿಯೇ ಮಾಡಿರುತ್ತೀರಿ. ವಾರದಲ್ಲಿ ಒಮ್ಮೆಯಾದರು ಇಡ್ಲಿ ಸವಿಯುವುದು ಕಾಮನ್. ಹಾಗೆ ಇಡ್ಲಿಗೆ ಯಾವ ರೀತಿಯ ತಯಾರಿ ಬೇಕು ಎಂಬುದನ್ನು ಕೂಡ ನೀವು ತಿಳಿದಿದ್ದೀರಿ. ಇಡ್ಲಿ ಮಾಡಬೇಕೆಂದರೆ ಹಿಂದಿನ ದಿನವೇ ಅದಕ್ಕೆ ತಯಾರಿ ಬೇಕು. ಅದರ ಹಿಟ್ಟು ಹೇಗೆ ಮಾಡಿಕೊಳ್ಳಬೇಕು ಎಂಬುದು ಕೂಡ ಮುಖ್ಯವಾಗುತ್ತದೆ.
ಇಡ್ಲಿ ಮೃದುವಾಗಿ ಹೂವಿನಂತೆ ಬರಬೇಕಾದರೆ ಒಂದು ಹದದಲ್ಲಿ ಹಿಟ್ಟು ಮಾಡಿಕೊಳ್ಳಬೇಕು. ಹಾಗೆ ಸರಿಯಾದ ಪ್ರಮಾಣದಲ್ಲಿ ಪದಾರ್ಥಗಳ ತೆಗೆದುಕೊಂಡಿರಬೇಕಾಗುತ್ತದೆ. ಹಾಗೆ ಇಡ್ಲಿಯ ಹಿಟ್ಟು ಮಾಡುವಾಗ ಯಾವ ವಿಧಾನ ಅನುಸರಿಸುತ್ತೇವೆ ಅನ್ನೋದು ಕೂಡ ಮುಖ್ಯ. ಆದ್ರೆ ನಾವಿಂದು ರೆಡಿಯಾಗಿ ಸಿಗುವಂತಹ ರವೆಯನ್ನು ಬಳಿಸಿ ಇಡ್ಲಿ ಮಾಡುವುದನ್ನು ತಿಳಿದುಕೊಳ್ಳೋಣ.

ಈಗ ಮಾರುಕಟ್ಟೆಯಲ್ಲಿ ಇನ್ಸ್ಸ್ಟಂಟ್ ರೆಡಿ ದೋಸೆ, ಇಡ್ಲಿ ಮಾಡಬಹುದಾದ ಹಿಟ್ಟು ಬಂದುಬಿಟ್ಟಿದೆ. ಮನೆಯಲ್ಲಿ ಹಿಟ್ಟು ಮಾಡಿಕೊಳ್ಳುವ ಅಗತ್ಯವೇ ಇಲ್ಲ. ಬದಲಿಗೆ ಅಂಗಡಿಯಿಂದ ಹಿಟ್ಟು ತಂದು ಕ್ಷಣದಲ್ಲಿ ದೋಸೆ, ಇಡ್ಲಿ ಮಾಡಿ ಸವಿಯಬಹುದು. ಹಾಗೆ ರೆಡಿಯಾಗಿರುವ ರವೆ ತಂದು ಅದರಿಂದ ಸುಲಭವಾಗಿ ಇಡ್ಲಿ ಮಾಡಬಹುದು.
ಇಂತಹ ರೆಡಿಮೇಡ್ ಇಡ್ಲಿಯಲ್ಲಿ ನಾವಿಂದು ಅಂಗಡಿಯಲ್ಲಿ ಸಿಗುವ ಇನ್ಸ್ಸ್ಟಂಟ್ ರವೆ ಇಡ್ಲಿ ಮಾಡುವ ಕುರಿತು ತಿಳಿದುಕೊಳ್ಳೋಣ. ಇಲ್ಲಿ ಇಡ್ಲಿಗೆ ಬೇಕಾದ ವಸ್ತುಗಳನ್ನು ಮೊದಲೇ ಬೆರೆಸಿರುವ ರವೆ ಸಿಗುತ್ತದೆ. ಅದನ್ನು ಮನೆಗೆ ತಂದು ತಕ್ಷಣೆ ಹಿಟ್ಟು ರೆಡಿಮಾಡಿಕೊಂಡು ಇಡ್ಲಿ ಮಾಡಬಹುದು. ಹಾಗಾದ್ರೆ ಈ ರವೆ ಇಡ್ಲಿ ಮಾಡುವುದು ಹೇಗೆ ನೋಡಿ.
ರವೆ ಇಡ್ಲಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು?, ಈ ಇಡ್ಲಿ ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಪ್ಯಾಕೆಟ್ ರವೆ ಇಡ್ಲಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಎಂಟಿಆರ್ ಇಡ್ಲಿ ರವೆ - 200 ಗ್ರಾಮ್
- ಕ್ಯಾರೆಟ್
- ಗೋಡಂಬಿ
- ಕರಿಬೇವು
- ಕೊತ್ತಂಬರಿ
- ಹುಳಿ ಮೊಸರು
- ಉಪ್ಪು
- ಎಣ್ಣೆ
ಪ್ಯಾಕೆಟ್ ರವೆ ಇಡ್ಲಿ ಮಾಡುವ ವಿಧಾನವೇನು?
ಈ ರವೆಗೆ ನೀವು ಯಾವುದೇ ಬೇಳೆಯನ್ನು ಸೇರಿಸಿಕೊಳ್ಳುವ ಅವಶ್ಯಕತೆ ಇಲ್ಲ. ಇದರಲ್ಲಿ ಎಲ್ಲವೂ ಮೊದಲೇ ಹಾಕಿರುತ್ತಾರೆ. ಈಗ ಒಂದು ಅಳತೆ ಕಪ್ನಲ್ಲಿ ಒಂದು ಕಪ್ ರವೆ ತೆಗೆದುಕೊಂಡು ಬೌಲ್ಗೆ ಹಾಕಿ ತುರಿದಿರುವ ಕ್ಯಾರೆಟ್, ಸಣ್ಣಗಾಗಿ ಹೆಚ್ಚಿಕೊಂಡಿರುವ ಕೊತ್ತಂಬರಿ ಸೊಪ್ಪು ಮತ್ತು ಕರಿಬೇವು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಡ್ರೈ ಮಿಕ್ಸ್ ಮಾಡಬೇಕು. ನೀರು ಹಾಕದೆಯೇ ಮಿಕ್ಸ್ ಮಾಡಿ.
ನಂತರ ಇದಕ್ಕೆ ರವೆ ತೆಗೆದುಕೊಂಡ ಕಪ್ನಲ್ಲಿಯೆ ಒಂದು ಕಪ್ ಹುಳಿ ಮೊಸರನ್ನು ಹಾಕಿಕೊಳ್ಳಿ. ನಂತರ ಹಿಟ್ಟನ್ನು ಚೆನ್ನಾಗಿ ಕಲಸಿಕೊಳ್ಳಿ. ಈ ಹಿಟ್ಟನ್ನು 3 ನಿಮಿಷ ಹಾಗೆ ನೆನೆಯಲು ಬಿಡಿ. ಅನಂತರ ಇದು ಸ್ವಲ್ಪ ಗಟ್ಟಿಯಾಗಿರುತ್ತದೆ. ಹೀಗಾಗಿ ಮತ್ತೆ ಸ್ವಲ್ಪ ಮೊಸರು ಇದ್ದರೆ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಬೇಕಾದರೆ ಸ್ವಲ್ಪ ಉಪ್ಪು ಕೂಡ ಹಾಕಿಕೊಳ್ಳಿ. ಹಾಗೆ ಒಂದೆರಡು ನಿಮಿಷ ಬಿಡಿ.
ಈಗ ಇಡ್ಲಿ ಅಚ್ಚುಗಳ ತೆಗೆದುಕೊಂಡು ಅದಕ್ಕೆ ಸ್ವಲ್ಪ ಎಣ್ಣೆ ಸವರಿಕೊಳ್ಳಬೇಕು. ಅನಂತರ ಈ ಹಿಟ್ಟನ್ನು ಅಚ್ಚಿನೊಳಗೆ ಹಾಕಿಕೊಂಡು ಇಡ್ಲಿ ಕುಕ್ಕರ್ನಲ್ಲಿ ಇಟ್ಟು ಬೇಯಿಸಿಕೊಳ್ಳಿ. ಸುಮಾರು 15 ನಿಮಿಷ ಬೇಯಿಸಿಕೊಂಡರೆ ಸಾಕಾಗುತ್ತದೆ. ಇಷ್ಟಾದರೆ ನಿಮ್ಮ ಮುಂದೆ ರುಚಿ ಇಡ್ಲಿ ರೆಡಿಯಾಗುತ್ತೆ. ಹಿಂದಿನ ದಿನ ಹಿಟ್ಟು ಮಾಡುವ ಅಗತ್ಯವಿಲ್ಲ. ಹಾಗೆಯೇ ಮಾಡಿ ನೋಡಿ. ನೀವು ಕೂಡ ಮನೆಯಲ್ಲಿ ಈ ಎಂಟಿಆರ್ ರವೆ ಇಡ್ಲಿ ಥಟ್ ಅಂತ ಮಾಡಿ.



Click it and Unblock the Notifications
