Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಥಟ್ ಅಂತ ಮನೆಯಲ್ಲಿ ಮಾಡಿ ಡ್ರೈ ಜಾಮೂನ್: ಸುಲಭದ ವಿಧಾನ ಇಲ್ಲಿದೆ!!
ದೀಪಾವಳಿಯಲ್ಲಿ ಸಿಹಿ ತಿಂಡಿ ಮಾಡಿ ಸವಿಯೋದು ಕಾಮನ್. ಅದ್ರಲ್ಲೂ ವಿಶೇಷ ರುಚಿ ನೀಡುವಂತಹ ಹಲವು ತಿಂಡಿಗಳ ಮಾಡಿ ಸವಿಯುತ್ತೀರಿ. ಹಾಗೆ ನಿಮ್ಮ ಮನೆಯಲ್ಲಿರುವ ವಸ್ತುಗಳನ್ನೇ ಬಳಸಿಕೊಂಡು ಕೆಲವೆ ನಿಮಿಷದಲ್ಲಿ ಮಾಡಿ ಮುಗಿಸಬಹುದಾದ ತಿಂಡಿ ಅಂದರೆ ಎಲ್ಲರಿಗೂ ಇಷ್ಟವಾಗುತ್ತೆ. ಹಾಗಾದ್ರೆ ದೀಪಾವಳಿಯಲ್ಲಿ ನಾವಿಂದು ಸುಲಭವಾಗಿ ಮಾಡಿ ಸವಿಯಬಹುದಾದ ಡ್ರೈ ಜಾಮೂನ್ ಮಾಡಿ ಸವಿಯುವ ಕುರಿತು ತಿಳಿದುಕೊಳ್ಳೋಣ.
ನೀವು ಕೂಡ ಹಲವು ಹಬ್ಬಗಳು, ವಿಶೇಷ ದಿನಗಳು, ಹಾಗೆ ಶುಭ ಸಮಯದಲ್ಲಿ ಸಿಹಿ ತಿಂಡಿ ಮಾಡಿರುತ್ತೀರಿ. ಅದ್ರಲ್ಲೂ ಸುಲಭವಾಗಿ ಮಾಡಿ ಮುಗಿಸುವಂತಹ ಡ್ರೈ ಜಾಮೂನ್ ಮಾಡಿ ಸವಿಯುವ ಕುರಿತು ತಿಳಿದುಕೊಳ್ಳೋಣ. ಡ್ರೈ ಜಾಮೂನ್ ಅನ್ನು ನೀವು ಕೂಡ ಹಲವು ಸಂದರ್ಭದಲ್ಲಿ ಸವಿದಿರುತ್ತೀರಿ. ಬೇಕರಿಗಳಲ್ಲಿ, ಅಂಗಡಿಗಳಲ್ಲಿಯೂ ಈ ಜಾಮೂನ್ ಸಿಗಲಿದೆ, ಹೀಗಾಗಿ ನಿಮಗೂ ಸಹ ಇದರ ರುಚಿ ಕಂಡು ಬಾಯಲ್ಲಿ ನೀರು ಬಂದಿರುವುದು ಸಹಜ.

ಹಾಗಾದ್ರೆ ದೀಪಾವಳಿಯ ಸಮಯದಲ್ಲಿ ನಾವು ಸುಲಭವಾಗಿ ಮನೆಯಲ್ಲಿ ಎಲ್ಲರ ಇಷ್ಟದ ಡ್ರೈ ಜಾಮೂನ್ ಮಾಡಿ ಸವಿಯುವ ಕುರಿತು ತಿಳಿದುಕೊಳ್ಳೋಣ. ಹಲವರು ಡ್ರೈ ಜಾಮೂನ್ ಮಾಡಿದ್ರೆ ಗಟ್ಟಿಯಾಗುವುದು ಇಲ್ಲವೆ ಬಹಳ ಮೃದುವಾಗುವುದು, ಹಾಗೆ ಕಪ್ಪಾಗುವುದು ಇಂತಹ ಸಮಸ್ಯೆ ಎದುರಿಸುವುದು ನೋಡಬಹುದು.
ಆದ್ರೆ ನಾವಿಂದು ಹೇಳುವ ವಿಧಾನದಲ್ಲಿ ನೀವು ಈ ಜಾಮೂನ್ ಮಾಡಲು ಮುಂದಾದರೆ ಬಹಳ ಮೃದುವಾಗಿ, ಸರಿಯಾದ ವಿಧಾನದಲ್ಲಿ ಬರಲಿದೆ, ನೀವು ಕೂಡ ಇದನ್ನು ಮಾಡುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳಿ. ಡ್ರೈ ಜಾಮೂನ್ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?, ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಡ್ರೈ ಜಾಮೂನ್ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಜಾಮೂನ್ ಪೌಡರ್
- ಹಾಲು
- ಒಣ ಕೊಬ್ಬರಿ
- ಸಕ್ಕರೆ ಪುಡಿ
- ಏಲಕ್ಕಿ ಪುಡಿ
- ನಿಂಬೆ ರಸ
- ತುಪ್ಪ
- ಡ್ರೈ ಫ್ರೂಟ್ಸ್
- ಸಕ್ಕರೆ
ಡ್ರೈ ಜಾಮೂನ್ ಮಾಡುವ ಸುಲಭದ ವಿಧಾನ ಇಲ್ಲಿದೆ
ಮೊದಲು ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅಳತೆ ಕಪ್ನಲ್ಲಿ 2 ಕಪ್ ಸಕ್ಕರೆ ಹಾಕಿಕೊಂಡು ಅದಕ್ಕೆ ಒಂದು ಗ್ಲಾಸ್ ನೀರು ಹಾಕಿ ಕರಗಲು ಬಿಡಿ. ಹಾಗೆ ಇದು ಒಂದೆಳೆ ಪಾಕ ಬರಬೇಕು. ಇದಕ್ಕೆ ಏಲಕ್ಕಿ ಪುಡಿ ಸಹ ಹಾಕಿಕೊಂಡು ಕುದಿಯಲು ಬಿಟ್ಟು ಒಲೆ ಆಫ್ ಮಾಡಿ 5ರಿಂದ 6 ಹನಿ ನಿಂಬೆ ರಸ ಇದಕ್ಕೆ ಹಾಕಿಕೊಳ್ಳಿ. ಈಗ ಪಾಕ ಗಟ್ಟಿಯಾಗುವುದಿಲ್ಲ.
ಈಗ ಜರಡಿ ಹಿಡಿದ ಜಾಮೂನ್ ಹಿಟ್ಟು ತೆಗೆದುಕೊಂಡು ಅದಕ್ಕೆ ಹಾಲು ಹಾಕಿಕೊಳ್ಳುತ್ತಾ ಮಿಕ್ಸ್ ಮಾಡಿ. ಹಾಲಿಗೆ ಸ್ವಲ್ಪ ನೀರು ಹಾಕಿ ಸ್ವಲ್ಪ ಸ್ವಲ್ಪ ಹಾಕಿಕೊಂಡು ಮಿಕ್ಸ್ ಮಾಡಿ. ಚಪಾತಿ ಹಿಟ್ಟಿನಂತೆ ಬರುವವರೆಗೂ ಹದ ಮಾಡಿ ಹಿಟ್ಟನ್ನು ಬದಿಗಿಟ್ಟುಕೊಳ್ಳಿ. ಈಗ ಒಲೆ ಮೇಲೆ ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಕಾಯಲು ಇಡಿ.
ಈಗ ಎಣ್ಣೆ ಕಾದ ಬಳಿಕ ಹಿಟ್ಟನ್ನು ಮೃದುವಾದ ಉಂಡೆ ಮಾಡುತ್ತಾ ಬನ್ನಿ. ಈಗ ಎಣ್ಣೆಗೆ ಈ ಉಂಡೆಗಳನ್ನು ಹಾಕಿಕೊಳ್ಳುತ್ತಾ ಕರಿದುಕೊಳ್ಳಿ. ನಿಧಾನವಾಗಿ ಕರಿದುಕೊಳ್ಳಿ. ಇದು ಬ್ರೌನ್ ಕಲರ್ಗೆ ಬರಬೇಕು. 10 ನಿಮಿಷ ಆದರೂ ಬೇಯಿಸಬೇಕು. ನಂತರ ತೆಗೆದು ಜರಡಿಯಲ್ಲಿ ಹಾಕಿ ಇಟ್ಟುಕೊಳ್ಳಿ.
ಈಗ ಕರಿದುಕೊಂಡ ಉಂಡೆಯನ್ನು ನಿಧಾನವಾಗಿ ಸಕ್ಕರೆ ಪಾಕಕ್ಕೆ ಹಾಕಿಕೊಂಡು ಮುಳುಗಲು ಬಿಡಿ. ಪಾಕ ಸ್ವಲ್ಪ ಬಿಸಿಯಾಗಿರಬೇಕು. ಪಾಕದಲ್ಲಿ ಈ ಜಾಮೂನು 30 ನಿಮಿಷ ಬಿಟ್ಟು ಅನಂತರ ಕೊಬ್ಬರಿ ಪುಡಿ ಹಾಗೆ ಸಕ್ಕರೆ ಪುಡಿಯಲ್ಲಿ ಈ ಜಾಮೂನನ್ನು ಹಾಕಿ ಉರುಳಿಸಬೇಕು. ಇಷ್ಟಾದರೆ ನಿಮ್ಮ ಮುಂದೆ ಡ್ರೈ ಜಾಮೂನ್ ಸಿದ್ದವಾಗುತ್ತೆ.



Click it and Unblock the Notifications
