Latest Updates
-
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು
ಅಕ್ಕಿ, ಉದ್ದು ನೆನೆಸದೆ ದಿಢೀರ್ ದೋಸೆ ಮಾಡಿ..! 5 ನಿಮಿಷವೂ ಬೇಡ..!
ಎಲ್ಲರ ಮನೆಯಲ್ಲಿ ವಿಶೇಷವಾಗಿ ಮಾಡುವ ತಿಂಡಿ ದೋಸೆ, ದಕ್ಷಿಣ ಭಾರತದಲ್ಲಿ ದೋಸೆ ಬಹಳ ಫೇಮಸ್. ಎಲ್ಲರ ಮನೆಯಲ್ಲು ವಾರದಲ್ಲಿ ಒಮ್ಮೆಯಾದರು ಮಾಡಿಯೇ ಮಾಡುತ್ತಾರೆ. ಏಕೆಂದರೆ ದೋಸೆ ಮಾಡುವುದು ತುಂಬಾನೆ ಸುಲಭ. ಅರೇ ಸುಲಭ ಹೇಗೆ ಎಂದು ನೋವು ಯೋಚಿಸುತ್ತಿರಬಹುದು. ದೋಸೆ ಮಾಡೋಕೆ ಕೇವಲ 5 ನಿಮಿಷ ಸಮಯ ಸಾಕಾಗುತ್ತೆ.
ಆದ್ರೆ ನೀವು ದೋಸೆ ಮಾಡುವಾಗ ಹಿಂದಿನ ದಿನವೇ ಅಕ್ಕಿ, ಉದ್ದು ನೆನೆಸಿಟ್ಟು ಅದನ್ನು ಮಿಕ್ಸಿಗೆ ಹಾಕಿ ಹಿಟ್ಟು ಮಾಡಿಕೊಳ್ಳುತ್ತೀರಿ. ಸಾಮಾನ್ಯವಾಗಿ ಇದೇ ರೀತಿ ವಿಧಾನವನ್ನೇ ಎಲ್ಲರು ಬಳಸುತ್ತಾರೆ. ಏಕೆಂದರೆ ಹಿಟ್ಟು ಹುಳಿ ಬಂದಷ್ಟು ದೋಸೆ ಚೆನ್ನಾಗಿ ಬರುತ್ತದೆ. ಆದ್ರೆ ಎಲ್ಲಾ ದಿನ ಹಿಟ್ಟು ಮಾಡಿಕೊಳ್ಳಲು ಸಮಯ ಸಿಗಬೇಕಲ್ಲವೇ.

ಆದ್ರೆ ನಾವಿಂದು ಹೇಳುವ ದೋಸೆ ವಿಧದಲ್ಲಿ ನೀವು ಹಿಂದಿನ ದಿನ ಹಿಟ್ಟು ಮಾಡಿಕೊಳ್ಳುವುದೇ ಬೇಡ. ಹೌದು ಇದೊಂದು ಇನ್ಸ್ಸ್ಟಂಟ್ ದೋಸೆ. ಅಂದ್ರೆ ತಕ್ಷಣವೇ ಮಾಡಿಕೊಳ್ಳುವ ದೋಸೆ. ಇದಕ್ಕೆ ನೀವು ಹಿಂದಿನ ದಿನ ಅಕ್ಕಿ, ಉದ್ದು ನೆನೆಸಿಟ್ಟು ಬೆಳಗ್ಗೆ ಎದ್ದು ಹಿಟ್ಟು ಹೂದಲು ಬಂದಿದ್ಯಾ ಎಂದು ನೋಡಿಕೊಂಡು ದೋಸೆ ಮಾಡುವ ಪಜೀತಿಯೆ ಇಲ್ಲ. ಥಟ್ ಅಂತ ಮಾಡಬಹುದಾದ ದೋಸೆ ರೆಸಿಪಿ ಇದು.
ಹಾಗಾದ್ರೆ ತಕ್ಷಣ ಬೆಣ್ಣೆ ಹಾಕಿರುವ ದೋಸೆ ಮಾಡುವುದು ಹೇಗೆ? ಇದನ್ನು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಹಿಟ್ಟು ಹೇಗೆ ರೆಡಿ ಮಾಡಿಕೊಳ್ಳಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಥಟ್ ಅಂತ ದೋಸೆ ಮಾಡಲು ಬೇಕಾಗುವ ಪದಾರ್ಥಗಳು
- ಅಕ್ಕಿ ಹಿಟ್ಟು - 1 ಕಪ್
- ಕಡಲೆ ಹಿಟ್ಟು - 1/4 ಕಪ್
- ಮೊಸರು - 1/2 ಕಪ್
- ಆಲೂಗಡ್ಡೆ- 1
- ಒಣ ಮೆಣಸಿನಕಾಯಿ -5
- ಅಡುಗೆ ಎಣ್ಣೆ
- ಬೆಣ್ಣೆ
- ರುಚಿಗೆ ಉಪ್ಪು
ದೋಸೆ ಮಾಡುವ ವಿಧಾನ
ಒಂದು ನಿಕ್ಸಿ ಜಾರ್ಗೆ ಅಕ್ಕಿ ಹಿಟ್ಟು ಹಾಕಿ ಹಾಗೂ ಅದಕ್ಕೆ ಕಡಲೆ ಹಿಟ್ಟು , ಅರ್ಧ ಕಪ್ ಮೊಸರು ಹಾಕಿಕೊಳ್ಳಿ. ಜೊತೆಗೆ ಸ್ವಲ್ಪ ನೀರು ಹಾಕಿಕೊಳ್ಳಿ. ಇದಕ್ಕು ಮೊದಲು 5 ಒಣ ಮೆಣಸಿನಕಾಯಿಯನ್ನು ಬಿಸಿ ನೀರಿನಲ್ಲಿ ನೆನೆಸಿಡಬೇಕು. ಈ ಮೆಣಸಿನಕಾಯಿಯನ್ನು ಇದೇ ಜಾರ್ಗೆ ಹಾಕಿಕೊಳ್ಳಿ.
ಬಳಿಕ ಇದಕ್ಕೆ ಸಿಪ್ಪೆ ತೆಗೆದು ಹೆಚ್ಚಿಕೊಂಡಿರುವ ಒಂದು ಆಲೂಗಡ್ಡೆಯನ್ನು ಸಣ್ಣದಾಗಿ ಕತ್ತರಿಸಿಕೊಂಡು ಹಾಕಿ. ಇದಕ್ಕೆ ಉಪ್ಪು ಸಹ ಹಾಕಿಕೊಂಡು ರುಬ್ಬಿಕೊಳ್ಳಿ. ರುಬ್ಬಿಕೊಳ್ಳುವಾಗ ಹೆಚ್ಚು ರುಬ್ಬಿಕೊಳ್ಳಬೇಡಿ. ದೋಸೆ ಹಿಟ್ಟಿನ ಹದ ಬರುವಂತೆ ರುಬ್ಬಿಕೊಳ್ಳಿ. ರುಬ್ಬಿಕೊಂಡ ಹಿಟ್ಟನ್ನು ಒಂದು ಪಾತ್ರೆಗೆ ಹಾಕಿಕೊಳ್ಳಿ.
ಈಗ ರೆಡಿ ಮಾಡಿಕೊಂಡ ಹಿಟ್ಟಿಗೆ ಸ್ವಲ್ಪ ಅಡುಗೆ ಸೋಡಾ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಈ ವೇಳೆ ಒಲೆ ಮೇಲೆ ದೋಸೆ ಕಾವಲಿ ಒಲೆ ಮೇಲೇ ಇಟ್ಟು ಅದಕ್ಕೆ ನೀರು ಚಿಮುಕಿಸಿ ಬಳಿಕ ಕಾವಲಿಯನ್ನು ಒರೆಸಿಕೊಂಡು ಅದಕ್ಕೆ ಹಿಟ್ಟು ಹಾಕಿಕೊಳ್ಳಿ. ಬಳಿಕ ದೋಸೆ ಮೇಲೆ ಬೆಣ್ಣೆಯನ್ನು ಸಣ್ಣದಾಗಿ ಕತ್ತರಿಸಿ ದೋಸೆ ಮೇಲೆ ಹಾಕಿಕೊಳ್ಳಿ. ದೋಸೆ ಎರಡೂ ಕಡೆ ಚೆನ್ನಾಗಿ ಕಾಯಿಸಿಕೊಳ್ಳಿ.
ಅದರಲ್ಲೂ ಒಂದು ಕಡೆ ದೋಸೆ ಬಣ್ಣ ಕೇಸರಿಗೆ ತಿರುಗುವಷ್ಟು ಕಾಯಿಸಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಇನ್ಸ್ಸ್ಟಂಟ್ ದೋಸೆ ರೆಡಿಯಾಗಿರುತ್ತದೆ. ಇದೇ ರೀತಿ ಉಳಿದ ಹಿಟ್ಟನ್ನು ಕಾವಲಿಗೆ ಹಾಕಿ ದೋಸೆ ಮಾಡಿಕೊಳ್ಳಿ. ಈ ದೋಸೆ ಸವಿಯಲು ಆಲೂ ಪಲ್ಯ, ತೆಂಗಿನ ಕಾಯಿ ಚಟ್ನಿ, ಕಡಲೇ ಚಟ್ನಿ, ಪುದಿನ ಚಟ್ನಿ ಯಾವುದೇ ಇದ್ದರೂ ರುಚಿಯಂತು ಬೊಂಬಾಟ್ ಆಗಿರಲಿದೆ.



Click it and Unblock the Notifications