Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ದೋಸೆ ಮಾಡಲು ಹಿಂದಿನ ದಿನ ತಯಾರಿ ಮಾಡಬೇಕಿಲ್ಲ..! 5 ನಿಮಿಷದಲ್ಲಿ ಹಿಟ್ಟು ರೆಡಿ..!
ದಕ್ಷಿಣ ಭಾರತದಲ್ಲಿ ಬೆಳಗ್ಗೆ ತಿಂಡಿಗೆ ಬಹುತೇಕರು ದೋಸೆಯನ್ನು ಸವಿಯುತ್ತಾರೆ. ಈಗಂತು ದೋಸೆಯಲ್ಲಿ ಹತ್ತಾರು ವಿಧಗಳು ಬಂದುಬಿಟ್ಟಿವೆ. ಹೋಟೆಲ್ಗಳಲ್ಲಿ ಹತ್ತಾರು ವಿಧದ, ರುಚಿ ರುಚಿಯ ದೋಸೆಗಳು ಸವಿಯಲು ಸಿಗುತ್ತವೆ. ಹೀಗಾಗಿ ಎಲ್ಲರು ದೋಸೆ ಪ್ರಿಯರಾಗಿರುತ್ತಾರೆ. ಇನ್ನು ದೋಸೆ ಸವಿಯಲು ಎಷ್ಟು ರುಚಿಯೋ ಮಾಡಲು ಅಷ್ಟೇ ಸುಲಭವೂ ಹೌದು.
ಇನ್ನು ದೋಸೆ ಮಾಡಬೇಕು ಎಂದರೆ ಒಂದು ದಿನ ಮೊದಲೇ ಅದಕ್ಕೆ ತಯಾರಿ ಬೇಕು. ದೋಸೆ ಹಿಟ್ಟನ್ನು ಒಂದು ದಿನ ಮೊದಲೇ ರೆಡಿ ಮಾಡಿಕೊಂಡು ಮಾರನೆ ದಿನ ಬೆಳಗ್ಗೆ ದೋಸೆ ಮಾಡುವುದನ್ನು ನಾವು ನೋಡಿದ್ದೇವೆ. ಆದರೆ ನಾವಿಂದು ಬೆಳಗ್ಗೆಯೇ ಸಡನ್ ಆಗಿ ದೋಸೆ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ. ರಾತ್ರಿ ಹಿಟ್ಟು ಮಾಡಿಕೊಳ್ಳದಿದ್ದರೂ ಬೆಳಗ್ಗೆ ತ್ವರಿತ ರೀತಿಯಲ್ಲಿ ದೋಸೆ ಹಿಟ್ಟು ರೆಡಿ ಮಾಡುವುದು ಹೇಗೆ ಎಂಬುದನ್ನು ನೋಡಿ.

ಇನ್ಸ್ಟಂಟ್ ದೋಸೆ ಹಿಟ್ಟು ಮಾಡಲು ಬೇಕಾದ ಪದಾರ್ಥಗಳು
- ರವೆ-1 ಕಪ್
- ಮೈದಾ ಹಿಟ್ಟು-1ರಿಂದ 2 ಚಮಚ (ದೊಡ್ಡ ಚಮಚ)
- ಕಡಲೆ ಹಿಟ್ಟು-ಒಂದು ಚಮಚ
- ಸಕ್ಕರೆ-ಒಂದು ಚಮಚ
- ಮೊಸರು-ಅರ್ಧ ಕಪ್
- ಅಡಿಗೆ ಸೋಡಾ
- ನೀರು
- ಉಪ್ಪು
ತ್ವರಿತವಾಗಿ ದೋಸೆ ಮಾಡಲು ಹೀಗೆ ಹಿಟ್ಟು ತಯಾರಿಸಿ
ಮೊದಲು ಒಂದು ಕಪ್ ರವೆಯನ್ನು ತೆಗೆದುಕೊಂಡು ಮಿಕ್ಸರ್ನಲ್ಲಿ ಚೆನ್ನಾಗಿ ರುಬ್ಬಿಕೊಳ್ಳಿ, ಈಗ 2 ರಿಂದ 3 ಚಮಚ ಮೈದಾ ಹಿಟ್ಟು ಹಿಟ್ಟು ಸೇರಿಸಿ. ನಂತರ ಅದಕ್ಕೆ ಒಂದು ಚಮಚ ಕಡಲೇ ಹಿಟ್ಟನ್ನು ಸೇರಿಸಿ. ಒಂದು ಚಮಚ ಉಪ್ಪು ಮತ್ತು ಒಂದು ಚಮಚ ಸಕ್ಕರೆ ಸೇರಿಸಿ. ಈಗ ಅದನ್ನು ಚೆನ್ನಾಗಿ ರುಬ್ಬಿಕೊಳ್ಳಿ. ಈಗ ಅದನ್ನು ಒಂದು ಬಟ್ಟಲಿನಲ್ಲಿ ತೆಗೆದುಕೊಂಡು ಅದಕ್ಕೆ ಅರ್ಧ ಬೌಲ್ ಮೊಸರು ಸೇರಿಸಿ.
ನಂತರ ಅದಕ್ಕೆ ಒಂದು ಲೋಟ ನೀರು ಸೇರಿಸಿ. ಈಗ ಅದನ್ನು 10 ನಿಮಿಷಗಳ ಕಾಲ ಮುಚ್ಚಿಡಿ. ಬಳಿಕ ನೀವು ಎರಡು ಚಮಚ ನೀರಿನಲ್ಲಿ ಅರ್ಧ ಚಮಚ ಅಡಿಗೆ ಸೋಡಾವನ್ನು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ. ನಂತರ ಪ್ಯಾನ್ ಅನ್ನು ಗ್ಯಾಸ್ ಮೇಲೆ ಇರಿಸಿ ಮತ್ತು ಅದು ಬಿಸಿಯಾಗಲು ಬಿಡಿ. ಈಗ ನೀರು ಚಿಮುಕಿಸಿ ಎಣ್ಣೆ ಹಚ್ಚಿರಿ. ಬಳಿಕ ಅದಕ್ಕೆ ರೆಡಿ ಮಾಡಿಕೊಂಡಿರುವ ದೋಸೆ ಹಿಟ್ಟನ್ನು ಹಾಕಿ ಎಂದಿನಂತೆ ದೋಸೆ ಮಾಡಿ, ದೋಸೆ ಚೆನ್ನಾಗಿ ಬ್ರೌನ್ ಕಲರ್ ಬರುವವರೆಗೂ ಎರಡೂ ಕಡೆ ಬೇಯಿಸಿ. ಬಳಿಕ ಬೆಣ್ಣೆ ಅಥವಾ ತುಪ್ಪದ ಸಿಂಪಡಣೆ ಮಾಡಿ ಸವಿಯಲು ಸಿದ್ಧ ಮಾಡಿ.
ಮಸಾಲಾ ದೋಸೆ
ಇದು ದೋಸೆ ವೆರೈಟಿಗಳಲ್ಲಿ ಹೆಚ್ಚು ಜನಪ್ರಿಯವಾದ ದೋಸೆಯಾಗಿದೆ. ಸ್ಟಫ್ ಮಾಡಿದ ಆಲೂಗಡ್ಡೆ ಇದಕ್ಕೆ ಉತ್ತಮ ಕಾಂಬಿನೇಶನ್. ಚಟ್ನಿ ಹಾಗೂ ಸಾಂಬಾರ್ ಜೊತೆ ಕೂಡ ಈ ದೋಸೆಯನ್ನು ಸೇವಿಸಲು ಇನ್ನಷ್ಟು ರುಚಿಕರವಾಗಿರುತ್ತದೆ. ಕೆಲವು ಹೋಟೆಲ್ಗಳು ಮಸಾಲಾ ದೋಸೆ ಯೊಂದಿಗೆ ವಡೆಯನ್ನು ನೀಡುತ್ತಾರೆ. ಆದರೆ ನಾವು ಮನೆಯಲ್ಲೂ ಈ ದೋಸೆ ಮಾಡಬಹುದು. ಆದರೆ ಸಾಮಾನ್ಯ ದೋಸೆಯನ್ನು ಮಸಾಲೆಯಾಗಿಸುವುದು ಅದಕ್ಕೆ ನೀಡುವ ಆಲೂಗಡ್ಡೆ ಪಲ್ಯ ಆಗಿರುತ್ತೆ. ಹಾಗಾದರೆ ಈ ಆಲೂಗಡ್ಡೆ ಪಲ್ಯ ಮಾಡುವುದು ಹೇಗೆ ನೋಡಿ.
ಮೊದಲಿಗೆ ಆಲೂಗಡ್ಡೆಯನ್ನು ಬೇಯಿಸಿಕೊಳ್ಳಿ ಬಳಿಕ ಆಲೂಗಡ್ಡೆಯನ್ನು ಹಿಸುಕಿ ಪುಡಿ ಮಾಡಿಕೊಳ್ಳಿ. ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿಕೊಳ್ಳಿ ಇದಕ್ಕೆ ಜೀರಿಗೆ ಸೇರಿಸಿ. ಉಪ್ಪು ಹಾಗೂ ಮೆಣಸಿನ ಹುಡಿ ಮಿಶ್ರ ಮಾಡಿಕೊಳ್ಳಿ. ಇದೆಲ್ಲವನ್ನೂ ಚೆನ್ನಾಗಿ ಮಿಶ್ರ ಮಾಡಿಕೊಂಡು ಬೇಯಿಸಿದ ಆಲೂಗಡ್ಡೆ ಚಿನ್ನದ ಬಣ್ಣಕ್ಕೆ ತಿರುಗುವವರೆಗೆ ಚೆನ್ನಾಗಿ ಬೇಯಿಸಿಕೊಳ್ಳಿ.ಇನ್ನು ಇದಕ್ಕೆ ಅರಶಿನ, ಬೆಳ್ಳುಳ್ಳಿ ಹುಡಿ, ಮೆಣಸು ಮತ್ತು ಉಪ್ಪು ಚಿಮುಕಿಸಿ. ಇದೆಲ್ಲವನ್ನೂ ಚೆನ್ನಾಗಿ ಮಿಶ್ರ ಮಾಡಿಕೊಂಡು, ಎಣ್ಣೆ ಇಲ್ಲದೆ ನಿಮ್ಮ ದೋಸೆಯನ್ನು ಬೇಯಿಸಿಲು ಪ್ರಾರಂಭಿಸಿ. ಪ್ರತೀ ದೋಸೆ ತಯಾರಾದ ಕೂಡಲೇ ಇದರ ಮಧ್ಯಕ್ಕೆ ಪಲ್ಯವನ್ನು ಹಾಕಿಕೊಳ್ಳಿ.



Click it and Unblock the Notifications
