Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಬಾಯಲ್ಲಿ ನೀರು ತರಿಸುವ ಅವಲಕ್ಕಿ ಪೊಂಗಲ್ ಥಟ್ ಅಂತ ಮಾಡಿ! ಇಲ್ಲಿದೆ ಸುಲಭದ ವಿಧಾನ!'
ನೀವು ಬೆಳಗ್ಗೆ ತಿಂಡಿಗೆ ರುಚಿ ರುಚಿಯ ಖಾದ್ಯಗಳ ಮಾಡಿ ಸವಿದಿರುತ್ತೀರಿ. ಅದ್ರಲ್ಲೂ ಬೆಳಗ್ಗೆ ಸಮಯದಲ್ಲಿ ನೀವು ರೈಸ್ ಬಳಸಿ ಮಾಡುವಂತಹ ಹಲವು ಖಾದ್ಯ ಸವಿಯಲು ಇಷ್ಟಪಡುತ್ತೀರಿ. ಹಾಗೆ ರೈಸ್‌ನಿಂದ ಮಾಡುವ ಹಲವು ಸುಲಭದ ರೆಸಿಪಿಗಳಲ್ಲಿ ನಾವಿಂದು ಪೊಂಗಲ್ ಮಾಡುವ ಕುರಿತು ತಿಳಿದುಕೊಳ್ಳೋಣ.
ನೀವು ಸುಲಭವಾಗಿ ರೈಸ್‌ನಿಂದ ಮನೆ ಮಂದಿಗೆಲ್ಲಾ ಇಷ್ಟವಾಗುವ ರೀತಿಯಲ್ಲಿ ಪೊಂಗಲ್ ಮಾಡಿ ಸವಿದಿರುತ್ತೀರಿ. ಅದ್ರಲ್ಲೂ ಖಾರ ಪೊಂಗಲ್ ಮಳೆಗಾಲದಲ್ಲಿ ಸವಿಯಲು ಬಹಳ ಅದ್ಭುತ ರುಚಿ ನೀಡಲಿದೆ. ಇದನ್ನು ಮಾಡುವ ವಿಧಾನ ಹಾಗೆ ಮಾಡಲು ಕಡಿಮೆ ವಸ್ತುಗಳು ಬೇಕಾಗುವ ಕಾರಣ ಎಲ್ಲರು ಮಾಡಿ ಸವಿಯುತ್ತಾರೆ.

ಇನ್ನು ರೈಸ್‌ನಿಂದ ಮಾಡುವ ಪೊಂಗಲ್ ಒಂದು ಕಡೆಯಾದರೆ ಅವಲಕ್ಕಿ ಬಳಸಿಯೂ ರುಚಿ ರುಚಿಯ ಪೊಂಗಲ್ ಮಾಡಬಹುದು, ಅವಲಕ್ಕಿಯಲ್ಲಿ ಹಲವು ಖಾದ್ಯ ಮಾಡಬಹುದಾದರು ಈ ಪೊಂಗಲ್ ಮಾತ್ರ ಅದ್ಭುತ ರುಚಿ ನೀಡುವಂತಹ ಖಾದ್ಯವಾಗಿದೆ. ಹಾಗಾದ್ರೆ ನಾವಿಂದು ಅವಲಕ್ಕಿಯಲ್ಲಿ ರುಚಿ ರುಚಿಯ ಪೊಂಗಲ್ ಮಾಡುವ ಕುರಿತು ತಿಳಿಯೋಣ.
ಅವಲಕ್ಕಿಯಿಂದ ಪೊಂಗಲ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಅವಲಕ್ಕಿ ಪೊಂಗಲ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಹೆಸರು ಬೇಳೆ
- ಅವಲಕ್ಕಿ
- ಕಾಳು ಮೆಣಸು
- ಜೀರಿಗೆ
- ಸಾಸಿವೆ
- ತುಪ್ಪ
- ಗೋಡಂಬಿ
- ಅರಶಿಣ
- ಉಪ್ಪು
- ಕೊತ್ತಂಬರಿ ಸೊಪ್ಪು
- ಹಸಿ ಮೆಣಸು
ಅವಲಕ್ಕಿ ಪೊಂಗಲ್ ಮಾಡುವುದು ಹೇಗೆ?
ಮೊದಲು ಕುಕ್ಕರ್‌ಗೆ 1 ಕಪ್ ಹೆಸರು ಬೇಳೆ ಹಾಕಿ ಮೂರು ಬಾರಿ ತೊಳೆದು 3 ಕಪ್ ನೀರು ಹಾಕಿಲ ಅರಶಿಣ ಹಾಕಿ ಬೇಯಲು ಬಿಡಿ. 3 ಸೀಟಿ ಹೊಡೆಯಲು ಬಿಡಿ. ಈಗ ಅವಲಕ್ಕಿಯನ್ನು 2 ಕಪ್ ಅವಲಕ್ಕಿ ಹಾಕಿ ಅದನ್ನು ನೀರಿನಿಂದ ತೊಳೆದುಕೊಳ್ಳಿ. ನಂತರ 10 ನಿಮಿಷಗಳ ಕಾಲ ಇದನ್ನು ನೆನೆಸಿಡಬೇಕು.
ಈಗ ಕಾಳು ಮೆಣಸನ್ನು ಜಜ್ಜಿ ಪುಡಿ ಮಾಡಿಕೊಳ್ಳಿ. ಈಗ 3 ಸೀಟಿ ಹೊಡೆದಿರುವ ಹೆಸರು ಬೇಳೆಯ ಮುಚ್ಚಳ ತೆಗೆದು ಸ್ವಲ್ಪ ನೀರು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಬೇಕು. ಇದರಿಂದ ಬೇಳೆ ಸ್ವಲ್ಪ ಪುಡಿ ಯಾಗಲಿದೆ. ಬೇಳೆ ಮುಳುಗುವಷ್ಟು ನೀರು ಇರಲಿ. ಈಗ ಒಲೆ ಮೇಲೆ ಇಟ್ಟು ಕುದಿಬರಲು ಬಿಡಿ. ಬೇಳೆ ಕುದಿಬರಲು ಆರಂಭಿಸಿದಾಗ ಅದಕ್ಕೆ ಒಲೆ ಮೇಲೆ ಇಟ್ಟು ಅವಲಕ್ಕಿಯನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಿ.
ಹಾಗೆ ಇದಕ್ಕೆ ಪುಡಿ ಮಾಡಿಕೊಂಡಿದ್ದ ಕಾಳು ಮೆಣಸು, ತೆಂಗಿನಕಾಯಿ ತುರಿ, ರುಚಿಗೆ ತಕ್ಕಷ್ಟು ಉಪ್ಪು ಕೂಡ ಹಾಕಿಕೊಂಡು ಮಿಕ್ಸ ಮಾಡಬೇಕು. ಹಾಗೆ 4ರಿಂದ 5 ನಿಮಿಷ ಕುದಿಯಲು ಬಿಟ್ಟು ಆಗಾಗ ಕಲಸಿಕೊಳ್ಳುತ್ತಾ ಇರಿ. ಈಗ ಮತ್ತೊಂದು ಒಲೆ ಮೇಲೆ ಬಾಣಲೆ ಇಟ್ಟ 4 ಚಮಚ ತುಪ್ಪ ಅಥವಾ ಎಣ್ಣೆ ಹಾಕಿಕೊಳ್ಳಿ. ನಂತರ ಜೀರಿಗೆ, ಸಾಸಿವೆ, ಹಸಿ ಮೆಣಸು, ಗೋಡಂಬಿ ಹಾಕಿ ಹುರಿದುಕೊಳ್ಳಿ.
3ರಿಂದ 4 ನಿಮಿಷ ಬಿಟ್ಟು ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ ಈ ಒಗ್ಗರಣೆಯನ್ನು ಇಳಿಸಿ ಕುಕ್ಕರ್‌ನಲ್ಲಿರುವ ಅವಲಕ್ಕಿ ಬೇಳೆ ಜೊತೆಗೆ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಅವಲಕ್ಕಿ ಪೊಂಗಲ್ ಸಿದ್ಧವಾಗುತ್ತೆ. ನೀವು ಸಹ ಬೆಳಗ್ಗೆ ತಿಂಡಿಗೆ ಇದನ್ನು ಟ್ರೈ ಮಾಡಿ ನೋಡಿ. ನಿಮಗೂ ಇದ್ದು ಇಷ್ಟವಾಗಲಿದೆ, ಹಾಗೆ ಮಾಡೋದು ಕೂಡ ಬಹಳ ಸುಲಭ, ಕಡಿಮೆ ವಸ್ತುಗಳ ಬಳಸಿಕೊಂಡು ಮಾಡಬಹುದು.



Click it and Unblock the Notifications
