Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಗಡಿಬಿಡಿಯಲ್ಲಿದ್ದಾಗ ಥಟ್ ಅಂತ ಮಾಡಿ ಸ್ಪೆಷಲ್ ಅವಲಕ್ಕಿ ಚಿತ್ರಾನ್ನ..!10 ನಿಮಿಷವೂ ಅಗತ್ಯವಿಲ್ಲ
ಬೆಳಗ್ಗೆ ಸಮಯ ಇಲ್ಲದಾಗ ನೀವು ಗಡಿ ಬಿಡಿಯಲ್ಲಿ ಯಾವ ತಿಂಡಿ ಮಾಡಬೇಕು ಎಂಬ ಗೊಂದಲದಲ್ಲೇ ಸಮಯ ಕಳೆಯುತ್ತಿರುತ್ತದೆ. ಕೆಲವೊಮ್ಮೆ ಬೆಳಗ್ಗೆ ಕಡಿಮೆ ಸಮಯದಲ್ಲಿ ಯಾವುದಾದರು ತಿಂಡಿ ಮಾಡಬೇಕಾಗಿರುತ್ತೆ. ಈ ಸಮಯದಲ್ಲಿ ನೀವು ಚಿತ್ರಾನ್ನ ಅಥವಾ ಅವಲಕ್ಕಿ ಮಾಡುವುದು ಕಾಮನ್. ಏಕೆಂದರೆ ಈ ತಿಂಡಿ ಸುಲಭವಾಗಿ ಕಡಿಮೆ ಸಮಯದಲ್ಲಿ ಮಾಡುತ್ತೀರಿ.
ಆದ್ರೆ ಚಿತ್ರಾನ್ನ ಹಾಗೂ ಅವಲಕ್ಕಿ ಒಟ್ಟಿಗೆ ಮಾಡುವಂತಹ ಖಾದ್ಯ ನಿಮಗೆ ಗೊತ್ತಾ? ಹೌದು ಅವಲಕ್ಕಿ ಚಿತ್ರಾನ್ನ ಇದಕ್ಕೆಲ್ಲ ಉತ್ತರ ನೀಡಲಿದೆ. ಅವಲಕ್ಕಿ ಚಿತ್ರಾನ್ನವನ್ನು ನೀವು ಒಮ್ಮೆ ಸವಿದರೆ ಮತ್ತೆ ಮತ್ತೆ ಮಾಡಿ ಸವಿಯಲು ಮುಂದಾಗುತ್ತೀರಿ. ಇದನ್ನು ಮಾಡೋದು ಕೂಡ ತುಂಬಾನೆ ಸುಲಭ. ಅದರಲ್ಲೂ ಬೆಳಗ್ಗೆ ಸಮಯ ಇಲ್ಲದಾಗ ಮಾಡುವಂತಹ ಖಾದ್ಯ ಇದಾಗಿದೆ.

ಹೀಗಾಗಿ ನಾವಿಂದು ಸುಲಭವಾಗಿ ಬೆಳಗ್ಗೆ ತಿಂಡಿಗೆ ಕಡಿಮೆ ಸಮಯದಲ್ಲಿ ಅವಲಕ್ಕಿ ಚಿತ್ರಾನ್ನ ಮಾಡುವ ಕುರಿತು ತಿಳಿದುಕೊಳ್ಳೋಣ. ಈ ಚಿತ್ರಾನ್ನ ನೆಲಗಡಲೆ ಬಳಸಿ ಮಾಡುವುದನ್ನು ನೋಡೋಣ. ಹೀಗಾಗಿ ಇರ ರುಚಿ ಕೂಡ ಬೇರೆ ರೀತಿಯ ಸ್ವಾದ ನೀಡಲಿದೆ. ಈ ಅವಲಕ್ಕಿ ಚಿತ್ರಾನ್ನ ಮಾಡುವುದು ಹೇಗೆ?, ಅವಲಕ್ಕಿ ಚಿತ್ರಾನ್ನ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ಇಲ್ಲಿ ತಿಳಿದಿಕೊಳ್ಳೋಣ.
ಅವಲಕ್ಕಿ ಚಿತ್ರಾನ್ನ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಅವಲಕ್ಕಿ- 2 ಕಪ್
- ಈರುಳ್ಳಿ - 1
- ಕಡಲೆ ಬೇಳೆ
- ನೆಲಗಡಲೆ
- ಹಸಿರು ಮೆಣಸಿನಕಾಯಿ - 3
- ಕರಿಬೇವಿನ ಎಲೆಗಳು
- ಅರಿಶಿನ ಪುಡಿ
- ನಿಂಬೆಹಣ್ಣು
- ಸಾಸಿವೆ
- ಜೀರಿಗೆ
- ರುಚಿಗೆ ಉಪ್ಪು
- ಎಣ್ಣೆ
ಅವಲಕ್ಕಿ ಚಿತ್ರಾನ್ನ ಮಾಡುವುದು ಹೇಗೆ?
ಮೊದಲು ಅವಲಕ್ಕಿಯನ್ನು ನೀರಿನಲ್ಲಿ ತೊಳೆದು ಹಿಂಡಿಕೊಂಡು ಒಂದು ಬೌಲ್‌ಗೆ ಹಾಕಿಟ್ಟುಕೊಳ್ಳಿ. ಅಥವಾ ನೀರು ಸಂಪೂರ್ಣ ಇಳಿದು ಚೆನ್ನಾಗಿ ಡ್ರೈ ಆಗುವಂತೆ ಮಾಡಿಕೊಳ್ಳಿ. ಅನಂತರ ಒಲೆ ಮೇಲೆ ಒಂದು ಬಾಣಲೆ ಇಟ್ಟು ಎಣ್ಣೆ ಹಾಕಿ ಎಣ್ಣೆ ಬಿಸಿಯಾದ ಬಳಿಕ ಅದಕ್ಕೆ ಕಡಲೆ ಬೀಜ ಹಾಕಿ ಫ್ರೈ ಮಾಡಿ. ಹಾಗೆ ಎತ್ತಿಟ್ಟುಕೊಳ್ಳಿ.
ಈ ಅದೇ ಪಾತ್ರೆಗೆ ಕಡಲೆಬೇಳೆ, ಸಾಸಿವೆ, ಜೀರಿಗೆ ಹಾಕಿಕೊಂಡು ಫ್ರೈ ಮಾಡಿ. ಹಾಗೆ ಇದಕ್ಕೆ ಹಸಿ ಮೆಣಸು, ಈರುಳ್ಳಿ, ಕರಿಬೇವು ಸಹ ಹಾಕಿಕೊಂಡು 2 ನಿಮಿಷ ಫ್ರೈ ಮಾಡಿ. ಈ ನಡುವೆ ಸ್ವಲ್ಪ ಅರಶಿಣ ಕೂಡ ಹಾಕಿಕೊಳ್ಳಿ. ಈಗ ಮೊದಲು ಹುರಿದು ಇಟ್ಟಿರುವ ಕಡಲೆ ಬೀಜವನ್ನು ಕೂಡ ಹಾಕಿಕೊಂಡು ಚೆನ್ನಾಗಿ ಕಲಸಿಕೊಳ್ಳಿ.
ಈಗ ತೊಳೆದಿಟ್ಟಿದ್ದ ಅವಕ್ಕಿಯನ್ನು ಇದಕ್ಕೆ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಮೀಡಿಯಂ ಅವಲಕ್ಕಿ ಬಳಸಿಕೊಳ್ಳಿ. ಇದಕ್ಕೆ ರುಚಿಗರ ತಕ್ಕಷ್ಟು ಉಪ್ಪು ಹಾಕಿಕೊಂಡು ಕಲಸಿಕೊಳ್ಳಿ. ಕೊನೆಯದಾಗಿ ನಿಂಬೆ ಹಣ್ಣಿನ ರಸ ಹಾಗೂ ಕೊತ್ತಂಬರಿ ಸೊಪ್ಪ ಹಾಕಿಕೊಂಡು ಒಮ್ಮೆ ಮಿಕ್ಸ್ ಮಾಡಿ ಒಲೆ ಆಫ್ ಮಾಡಿಕೊಂಡು ಇಳಿಸಿಕೊಳ್ಳಿ.
ಇಷ್ಟಾದರೆ ಬೆಳಗ್ಗೆ ಸವಿಯಲು ಈ ಅವಲಕ್ಕಿ ಚಿತ್ರಾನ್ನ ರೆಡಿಯಾಗುತ್ತದೆ, ನೀವು ಕೂಡ ಮನೆಯಲ್ಲಿ ಬೆಳಗ್ಗೆ ಟ್ರೈ ಮಾಡಿ ನೋಡಿ.



Click it and Unblock the Notifications
