Latest Updates
-
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ?
ಉದ್ದು ಮೆಂತ್ಯೆ ಇಲ್ಲದೆ..ಹಿಟ್ಟು ನೆನೆಸದೆ ಥಟ್ ಅಂತ ಮಲ್ಲಿಗೆ ಇಡ್ಲಿ ಮಾಡಿ..! ವಿಧಾನ ಇಲ್ಲಿದೆ
ನೀವು ಬೆಳಗ್ಗೆ ತಿಂಡಿಗೆ ಇಡ್ಲಿ ಮಾಡಿಯೇ ಮಾಡಿರುತ್ತೀರಿ. ಇಡ್ಲಿ ಮಾಡಿ ಸವಿಯುವುದ ಅಂದ್ರೆ ಎಲ್ಲರಿಗೂ ಇಷ್ಟವಾಗುವ ಖಾದ್ಯ. ಆದ್ರೆ ಇಡ್ಲಿ ಮಾಡಬೇಕು ಅಂದ್ರೆ ಹಿಂದಿನ ದಿನವೇ ನೀವು ತಯಾರಿ ಆರಂಭಿಸಬೇಕು. ಅದರಲ್ಲೂ ಹಿಂದಿನ ದಿನವೇ ಇಟ್ಟು ರೆಡಿ ಮಾಡಿಕೊಂಡು ಮಾರನೇ ದಿನ ಇಡ್ಲಿ ಅಥವಾ ದೋಸೆ ಮಾಡಬೇಕಾಗುತ್ತದೆ. ಇಮ್ಮು ಮೃದುವಾಗಿ ಇಡ್ಲಿ ಬರಬೇಕು ಅಂದ್ರೆ ಅದಕ್ಕೂ ಹಲವು ರೀತಿಯ ವಿಧಾನಗಳಿವೆ ಎಂಬುದನ್ನು ನೀವು ತಿಳಿದಿರಬಹುದು.
ಆದ್ರೆ ನಾವಿಂದು ಉದ್ದಿನ ಬೇಳೆ ನೆನೆಸದೆ ಹಿಂದಿನ ದಿನದ ಯಾವುದೇ ತಯಾರಿ ಮಾಡಿಕೊಳ್ಳದೆ ನೇರವಾಗಿ ಬೆಳಗ್ಗೆ ಎದ್ದ ಕೂಡಲೇ ಇಡ್ಲಿ ಮಾಡುವ ಕುರಿತು ಹೇಳಲಿದ್ದೇವೆ. ಹೌದು ಉದ್ದು ಹಾಕದೆಯೇ ಮಲ್ಲಿಗೆಯಂತಹ ಮೃದಯವಾದ ಇಡ್ಲಿ ಮಾಡಬಹುದು. ಈ ಕುರಿತಾಗಿ ನಾವಿಂದು ಹೊಸ ವಿಧಾನದಲ್ಲಿ ಇಡ್ಲಿ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ.

ಉದ್ದು ನೆನೆಸದೆ ಹಿಟ್ಟು ರೆಡಿ ಮಾಡಿಕೊಳ್ಳದೆ ಇಡ್ಲಿ ಮಾಡುವುದು ಹೇಗೆ? ಅದರಲ್ಲೂ ಮೃದುವಾದ ಮಲ್ಲಿಗೆ ಇಡ್ಲಿ ಮಾಡುವುದಾದರು ಹೇಗೆ? ಮಾಡಲು ಎಷ್ಟು ಪದಾರ್ಥಗಳು ಬೇಕು? ಮಾಡುವ ಸರಿಯಾದ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬೆಲ್ಲಾ ಕುರಿತಾಗಿ ನಾವಿಂದು ತಿಳಿದುಕೊಳ್ಳೋಣ.
ಉದ್ದು ಇಲ್ಲದೆ ತಕ್ಷಣ ಇಡ್ಲಿ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಅವಲಕ್ಕಿ ಅರ್ಧ ಕಪ್
- ಮಜ್ಜಿಗೆ
- ಇಡ್ಲಿ ರವೆ
- ಉಪ್ಪು
- ಎಣ್ಣೆ
- ಸೋಡಾ
ಉದ್ದು ಇಲ್ಲದೆ ತಕ್ಷಣ ಇಡ್ಲಿ ಮಾಡುವ ಸರಿಯಾದ ವಿಧಾನವೇನು?
ಮೊದಲು ಒಂದು ಬೌಲ್ಗೆ ಅವಲಕ್ಕಿ ಹಾಕಿಕೊಂಡು ಅದನ್ನು ಚೆನ್ನಾಗಿ ತೊಳೆಯಬೇಕು. 2 ಬಾರಿ ತೊಳೆದ ಬಳಿಕ ನೀರು ಹಿಂಡಿಕೊಂಡು ಅದೇ ಪಾತ್ರೆಯಲ್ಲಿ ಹಾಕಿ ನಂತರ ಒಂದು ಗ್ಲಾಸ್ ಮಜ್ಜಿಗೆ ಹಾಕಿಕೊಂಡು ಮಿಕ್ಸ್ ಮಾಡಿಕೊಂಡು ಮುಚ್ಚಳ ಮುಚ್ಚಿ ಅರ್ಧ ಗಂಟೆ ನೆನೆಯಲು ಬಿಡಿ.
ಈಗ ಮತ್ತೊಂದು ಪಾತ್ರೆಗೆ ಅದೇ ಕಪ್ನಲ್ಲಿ 1 ಕಪ್ ಇಡ್ಲಿ ರವೆ ಹಾಕಿಕೊಂಡು ಚೆನ್ನಾಗಿ ತೊಳೆದು ನೀರು ಬಸಿದು ಇಟ್ಟುಕೊಳ್ಳಿ. ನಂತರ ಇದಕ್ಕೆ ಮುಚ್ಚಳ ಮುಚ್ಚಿ 20 ನಿಮಿಷ ಇಡಿ.
ಈಗ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ನೆನೆಸಿಟ್ಟ ಅವಲಕ್ಕಿಯನ್ನು ಹಾಕಿಕೊಂಡು ರುಬ್ಬಿಕೊಳ್ಳಬೇಕು. ನೀರು ಹಾಕದೆ ದಪ್ಪವಾಗಿ ರುಬ್ಬಿಕೊಳ್ಳಿ. ರುಬ್ಬಿದ ಈ ಹಿಟ್ಟನ್ನು ಒಂದು ಪಾತ್ರೆಗೆ ಹಾಕಿಟ್ಟುಕೊಳ್ಳಿ. ಈಗ ರವೆಯನ್ನು ಕೂಡ ಅದೇ ಹಿಟ್ಟಿನ ಪಾತ್ರೆಗೆ ಹಾಕಿಕೊಳ್ಳಿ. ಹಾಗೆ ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಕಾಲು ಚಮಚ ಸೋಡಾ ಸಹ ಹಾಕಿ ಮತ್ತೆ ಮಿಕ್ಸ್ ಮಾಡಿಕೊಂಡು ಮುಚ್ಚಳ ಮುಚ್ಚಿ 10 ನಿಮಿಷ ಹಿಟ್ಟನ್ನು ಬಿಡಿ.
ಈ ಸಮಯದಲ್ಲಿ ಇಡ್ಲಿ ಕಪ್ಗಳಿಗೆ ಎಣ್ಣೆ ಹಚ್ಚಿಕೊಂಡು ಅದಕ್ಕೆ ಹಿಟ್ಟು ಹಾಕಿಕೊಂಡು ಇಡ್ಲಿ ಕುಕ್ಕರ್ನಲ್ಲಿ ಹಾಕಿಡಿ. 15 ನಿಮಿಷ ಬೇಯಲು ಬಿಟ್ಟು ನಂತರ ಒಲೆ ಆಫ್ ಮಾಡಿಕೊಳ್ಳಿ. ಇಷ್ಟಾದರೆ ಮಲ್ಲಿಗೆ ಇಡ್ಲಿ ರೆಡಿಯಾಗುತ್ತದೆ. ಇದು ಬಹಳ ಮೃದುವಾಗಿ ಬರುವಂತಹ ಇಡ್ಲಿಯಾಗಿದೆ. ನೀವು ಕೂಡ ಇದನ್ನು ಮಾಡಿ ನೋಡಿ. ಇದಕ್ಕೆ ಉದ್ದು ಮೆಂತ್ಯ ಬೇಡ. ಹಾಗೆ ಹಿಂದಿನ ದಿನ ತಯಾರಿ ಮಾಡಿಕೊಂಡು ಹಿಟ್ಟು ಹುಳಿ ಬರಲು ಬಿಡುವುದು ಕೂಡ ಬೇಡ. ನೇರವಾಗಿ ಬೆಳಗ್ಗೆಯೇ ಹಿಟ್ಟು ರೆಡಿಮಾಡಿಕೊಂಡು ಸುಲಭವಾಗಿ ಈ ಇಡ್ಲಿ ಮಾಡಬಹುದು. ಅವಲಕ್ಕಿ ಮಜ್ಜಿಗೆ ಬಳಸುವುದರಿಂದ ಬಹಳ ಮೃದುವಾಗಿ ಈ ಇಡ್ಲಿ ಬರುತ್ತದೆ. ಹತ್ತಿಯಂತೆ ಮೃದುವಾಗಿರುತ್ತೆ. ಇದಕ್ಕೊಂದು ಚಟ್ನಿ, ಅಥವಾ ಸಾಕು ಮಾಡಿದರೆ ಬೆಳಗ್ಗಿನ ತಿಂಡಿಯ ರುಚಿ ದುಪ್ಪಟ್ಟಾಗುತ್ತೆ.



Click it and Unblock the Notifications
