Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಅರ್ಧ ಗಂಟೆಯಲ್ಲಿ ಹಿಟ್ಟು-ಇಡ್ಲಿ ಎರಡೂ ಮಾಡಿ ಮುಗಿಸಿ..! ಸುಲಭದ ವಿಧಾನ ಇಲ್ಲಿದೆ!
ನೀವು ಬೆಳಗ್ಗೆ ತಿಂಡಿಗೆ ಇಡ್ಲಿ ಮಾಡಿ ಸವಿಯುವುದು ಕಾಮನ್. ಯವಾಗಲು ಇಡ್ಲಿ ಮಾಡುವಾಗ ಹಿಂದಿನ ದಿನವೇ ಅದಕ್ಕೆ ತಯಾರಿ ಮಾಡಿಕೊಳ್ಳಬೇಕಾಗುತ್ತದೆ. ಉದ್ದು, ಮೆಂತ್ಯ ನೆನೆಸಿಟ್ಟು ಹಿಟ್ಟು ರೆಡಿ ಮಾಡಿ ಒಂದು ದಿನ ಹುಳಿ ಬರಲು ಇಡಲಾಗುತ್ತದೆ. ಸಾಮಾನ್ಯವಾಗಿ ಇದೇ ವಿಧಾನವಾಗಿಯೇ ಇಡ್ಲಿ ಮಾಡುತ್ತಾರೆ. ಹಾಗೆ ಕೆಲವೊಮ್ಮೆ ಇನ್ಸ್‌ಸ್ಟಂಟ್ ಹಿಟ್ಟು ಖರೀದಿಸಿ ತಂಡು ಇಡ್ಲಿ ಮಾಡುವುದು ಕೂಡ ನಾವು ನೋಡಬಹುದು.
ಆದ್ರೆ ನಾವಿಂದು ಸುಲಭವಾಗಿ ಹಿಟ್ಟು ಮಾಡಿಕೊಂಡು ಕೇವಲ ಅರ್ಧ ಗಂಟೆಯಲ್ಲಿ ಹಿಟ್ಟು ಹಾಗೆ ಇಡ್ಲಿ ಕೂಡ ರೆಡಿ ಮಾಡಿಕೊಳ್ಳುವ ವಿಭಿನ್ನ ರೀತಿಯ ಇಡ್ಲಿ ಮಾಡಿ ಸವಿಯುವ ಕುರಿತು ತಿಳಿದುಕೊಳ್ಳೋಣ. ಈ ಇಡ್ಲಿ ರೆಡಿ ಮಾಡಲು ಹಿಂದಿನ ದಿನದ ತಯಾರಿ ಬೇಕಿಲ್ಲ. ಹಾಗೆ ಹಿಟ್ಟು ಹುಳಿ ಬರಬೇಕೆಂಬ ಅವಶ್ಯಕತೆಯೂ ಇಲ್ಲ. ಸಾಮಾನ್ಯವಾಗಿ ಆರೋಗ್ಯಕ್ಕೆ ಉತ್ತಮ ಎಂಬ ಕಾರಣಕ್ಕೆ ಇಡ್ಲಿ ಮಾಡುವುದು ನೋಡಬಹುದು. ಎಲ್ಲರಿಗೂ ಇಡ್ಲಿ ಸವಿಯಲು ಇಷ್ಟವಾಗುತ್ತೆ.

ಹಾಗಾದ್ರೆ ಹಿಂದಿನ ದಿನದ ತಯಾರಿ ಇಲ್ಲದೆ ಇಡ್ಲಿ ಮಾಡುವುದು ಹೇಗೆ? ಕೇವಲ ಅರ್ಧ ಗಂಟೆಯಲ್ಲಿ ಇಡ್ಲಿ ಮಾಡಿಕೊಳ್ಳಲು ಯಾವೆಲ್ಲಾ ಪದಾರ್ಥಗಳು?, ಮಾಡುವ ವಿಧಾನವೇನು?, ಇಡ್ಲಿ ಮಾಡುವ ವಿಧಾನವೇನು ಎಂಬುದನ್ನು ತಿಳಿದುಕೊಳ್ಳೋಣ.
ಅರ್ಧ ಗಂಟೆಯಲ್ಲಿ ಇಡ್ಲಿ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
ಅವಲಕ್ಕಿ- 1 ಕಪ್
ಇಡ್ಲಿ ರವೆ - ಒಂದುವರೆ ಕಪ್
ಮೊಸರು- 1 ಕಪ್
ಈನೋ ಪುಡಿ
ಎಣ್ಣೆ
ಉಪ್ಪು
ಅರ್ಧ ಗಂಟೆಯಲ್ಲಿ ಇಡ್ಲಿ ಮಾಡುವ ವಿಧಾನವೇನು?
ಮೊದಲು ಒಂದು ಕಪ್ ದಪ್ಪ ಅವಲಕ್ಕಿಯನ್ನು ಮಿಕ್ಸಿ ಜಾರ್‌ಗೆ ಹಾಕಿಕೊಂಡು ಹುಡಿ ಮಾಡಿಕೊಳ್ಳಿ. ನುಣ್ಣಗೆ ಆಗುವ ಅವಶ್ಯಕತೆ ಇಲ್ಲ, ರವೆ ರೀತಿ ಆದರೆ ಸಾಕು. ನಂತರ ಇದನ್ನು ಒಂದು ಬೌಲ್‌ಗೆ ಹಾಕಿಕೊಳ್ಳಿ, ಈಗ ಮತ್ತೊಂದು ಬೌಲ್‌ಗೆ ಇಡ್ಲಿ ರವೆ ಹಾಕಿಕೊಳ್ಳಿಮ ನಂತರ ಇದನ್ನು ಎರಡು ಮೂರು ಬಾರಿ ನೀರಿನಿಂದ ಚೆನ್ನಾಗಿ ತೊಳೆದುಕೊಳ್ಳಿ.
ಬಳಿಕ ರವೆಯನ್ನು ಹಿಂಡಿಯಿಂಡು ಅವಲಕ್ಕಿ ಪುಡಿ ಮಾಡಿರುವ ಬೌಲ್‌ಗೆ ಹಾಕಿಕೊಳ್ಳಿ. ನಂತರ ಕೈಯಲ್ಲಿ ಎರಡು ಬಗೆಗಳು ಚೆನ್ನಾಗಿ ಮಿಕ್ಸ್ ಆಗುವಂತೆ ಮಾಡಿಕೊಳ್ಳಿ. ಇದು ಹುಡಿ ಹುಡಿಯಾಗಿ ಬರಲಿದೆ. ಈ ಒಂದು ಕಪ್ ಅಳತೆಯಲ್ಲಿ ಮೊಸರು ಹಾಗೆ ಒಂದು ಕಪ್ ನೀರು ಹಾಕಿ, ಪುಡಿ ಉಪ್ಪು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ.
ಈ ಹದ ಗಟ್ಟಿಯಾದರೆ ಮತ್ತೆ ಸ್ವಲ್ಪ ನೀರು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇದನ್ನು 15 ನಿಮಿಷ ಇಟ್ಟು ಹದ ಆಗಲು ಬಿಡಬೇಕು, 15 ನಿಮಷದಲ್ಲಿ ಇದು ಗಟ್ಟಿಯಾಗುತ್ತದೆ. ಬಳಿಕ ಮತ್ತೆ ಸ್ವಲ್ಪ ನೀರು ಹಾಕಿಕೊಂಡು ಮಿಕ್ಸ್ ಮಾಡುತ್ತಾ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಬೇಕು. ಈ ಸಮಯದಲ್ಲಿ ಸ್ವಲ್ಪ ಈನೋ ಪೌಡರ್ ಅಥವಾ ಚಿಟಿಕೆಯಷ್ಟು ಸೋಡಾ ಸಹ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ.
ಇಡ್ಲಿ ಹಿಟ್ಟಿನ ಹದಕ್ಕೆ ಇದನ್ನು ಕಲಸಿಕೊಂಡು ಇಡ್ಲಿ ಅಚ್ಚಿಗೆ ಎಣ್ಣೆ ಸವರಿಕೊಳ್ಳಿ. ಅನಂತರ ಹಿಟ್ಟನ್ನು ಈ ಎಲ್ಲಾ ಅಚ್ಚುಗಳಿಗೆ ಹಾಕಿಕೊಂಡು ಇಡ್ಲಿ ಕುಕ್ಕರ್‌ನಲ್ಲಿ ನೀರು ಹಾಕಿ ಬೇಯಲು ಬಿಡಿ. ಕುಕ್ಕರ್ ಅನ್ನು ಮೊದಲೇ ಬಿಸಿ ಮಾಡಿಕೊಂಡ ತದನಂತರ ಇಡ್ಲಿಗಳನ್ನು ಅದರೊಳಗೆ ಇಟ್ಟು ಬೇಯಿಸಬೇಕು, ಸುಮಾರು 10 ನಿಮಿಷ ಬೇಯಿಸಿಕೊಂಡರೆ ಸಾಕಾಗುತ್ತದೆ. ಇಷ್ಟಾದರೆ ನಿಮ್ಮ ಮುಂದೆ ಮೃದುವಾದ ಇಡ್ಲಿ ರೆಡಿಯಾಗುತ್ತದೆ. ಇದಕ್ಕೆ ಬೇಳೆಯ ಅಗತ್ಯವೇ ಇಲ್ಲ, ಹಾಗೆ ಹಿಂದಿನ ದಿನ ಹಿಟ್ಟು ಮಾಡಿಕೊಳ್ಳಬೇಕು ಎಂಬುದೂ ಇಲ್ಲ.



Click it and Unblock the Notifications
