Latest Updates
-
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು!
ಈ ರೀತಿ ಐಸ್ ಕ್ರೀಮ್ ಮನೆಯಲ್ಲೇ ಮಾಡಿ: ಇನ್ನೆಂದು ಅಂಗಡಿಯಿಂದ ಖರೀದಿಸೋದಿಲ್ಲ!
ಬೇಸಿಗೆಯ ಸಮಯದಲ್ಲಿ ದೇಹಕ್ಕೆ ತಂಪಾಗಿಸುವ ಹಲವು ಪಾನಿಯ ಕುಡಿಯಲು ನೀವು ಇಚ್ಛಿಸಬಹುದು. ಹಾಗೆ ಮಧ್ಯಾಹ್ನದ ಸಮಯದಲ್ಲಿ ನೀವು ರುಚಿ ರುಚಿಯಾದ ಜ್ಯೂಸ್, ಐಸ್ ಕ್ರೀಮ್ ಸವಿಯಲು ಕೂಡ ನೀವು ಇಷ್ಟಪಡುವ ಮಂದಿಯಾಗಿರಬಹುದು. ಅದ್ರಲ್ಲೂ ಮಕ್ಕಳು ಐಸ್ ಕ್ರೀಮ್ ಸವಿಯೋದು ಅಂದ್ರೆ ಬಹಳ ಇಷ್ಟಪಡುತ್ತಾರೆ. ಇನ್ನು ಹಲವು ಬಾರಿ ಜ್ಯೂಸ್ ಕುಡಿದಾಗ ನಿಮಗೆ ನೆಮ್ಮದಿ ಹಾಗೆ ವಿಶ್ರಾಂತಿ ಪಡೆದ ಅನುಭವವಾಗಬಹುದು.
ಇನ್ನು ಐಸ್ ಕ್ರೀಮ್ ಸವಿದಾಗ ದೇಹ ತಣ್ಣಗಾಗುವುದು ಹಾಗೆ ಬಹಳ ರುಚಿಕರವಾಗಿದ್ದರೆ ಇನ್ನೊಂದು ಸವಿಯುವ ಮನಸಾಗುವುದು. ಐಸ್ ಕ್ರೀಮ್ನಲ್ಲಿರುವ ಹಲವು ಬಗೆಗಳು ಬಾಯಲ್ಲಿ ನೀರು ತರಿಸಬಹುದು. ಅದ್ರಲ್ಲೂ ಮನೆಯಲ್ಲೇ ಮಾಡಿ ಸವಿಯುವ ಐಸ್ ಕ್ರೀಮ್ಗಳ ಕುರಿತಾಗಿ ನಿಮಗೆ ತಿಳಿದಿದ್ಯಾ? ಹೌದು ನೀವು ಬಹಳ ಇಷ್ಟಪಟ್ಟು ಸವಿಯುವ ಐಸ್ ಕ್ರೀಮ್ ಅನ್ನು ಮನೆಯಲ್ಲೇ ಮಾಡಿ ಸವಿಯಬಹುದು.

ನಾವಿಂದು ಮನೆಯಲ್ಲಿ ಸುಲಭವಾಗಿ ಕೆಲವೇ ವಸ್ತುಗಳ ಬಳಸಿಕೊಡು ಹಾಗೆ ಕಡಿಮೆ ಸಮಯದಲ್ಲಿ ಅದ್ಭುತವಾಗಿ ಮಾಡಿ ಸವಿಯುವ ಐಸ್ ಕ್ರೀಮ್ ಕುರಿತು ನಾವಿಲ್ಲಿ ಹೇಳಲಿದ್ದೇವೆ. ಅಂಗಡಿಗಳಲ್ಲಿ ಸಿಗುವಂತಹ ರೀತಿಯಲ್ಲೇ ಈ ಐಸ್ ಕ್ರೀಮ್ ಮನೆಯಲ್ಲೂ ಮಾಡಬಹುದು. ಅದ್ರಲ್ಲೂ ಮಕ್ಕಳು ಇಷ್ಟಪಡುವ ಈ ರೀತಿಯ ಐಸ್ ಕ್ರೀಮ್ ಮನೆಯಲ್ಲಿ ಮಾಡುವುದು ಹೇಗೆ ನೋಡಿ.
ಈ ಐಸ್ ಕ್ರೀಮ್ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬೆಲ್ಲಾ ಕುರಿತಾಗಿ ತಿಳಿದುಕೊಳ್ಳಿ.
ಐಸ್ ಕ್ರೀಮ್ ಮಾಡಲು ಬೇಕಾಗುವ ಪದಾರ್ಥಗಳು
- ಹಾಲು
- ಸಕ್ಕರೆ
- ಕಸ್ಟರ್ ಪೌಡರ್
- ಬೆರಿ ಅಥವಾ ಡ್ರೈ ಫ್ರೂಟ್ಸ್
ಐಸ್ ಕ್ರೀಮ್ ಮಾಡುವ ವಿಧಾನವೇನು?
ಮೊದಲು ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಒಂದು ಲೀಟರ್ ಹಾಲು ಹಾಕಿ ಕಾಯಲು ಬಿಡಿ. ನಿಧಾನಕ್ಕೆ ತಿರುಗಿಸುತ್ತಾ ಇರಿ. ಈಗ ಒಂದು ಬೌಲ್ ತೆಗೆದುಕೊಂಡು ಅದಕ್ಕೆ ಕಸ್ಟಡ್ ಪೌಡರ್ ಹಾಕಿಕೊಳ್ಳಿ. ನಂತರ ಇದಕ್ಕೆ ಸ್ವಲ್ಪ ಹಾಲು ಹಾಕಿ ಮಿಕ್ಸ್ ಮಾಡಿ. ಗಂಟು ಇಲ್ಲದೆ ಮಿಕ್ಸ್ ಮಾಡಿಕೊಂಡು ಒಲೆ ಮೇಲೆ ಇರುವ ಹಾಲಿಗೆ ಈ ಮಿಶ್ರಣವನ್ನು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ.
ಹಾಲು ಕುದಿಬರಲು ಆರಂಭಿಸಿದಾಗ ಹಾಗೆ ಅದು ಸ್ವಲ್ಪ ಗಟ್ಟಿಯಾಗಬೇಕು. ಇದಕ್ಕೆ ಸಕ್ಕರೆ ಹಾಕಿಕೊಳ್ಳಬೇಕು. ಅರ್ಧ ಕಪ್ ಸಕ್ಕರೆ ಹಾಕಿ ಮಿಕ್ಸ್ ಮಾಡುತ್ತಾ 4 ನಿಮಿಷ ಕುದಿಬರಲು ಬಿಡಿ. ಹಾಗೆ ಕೈ ಬಿಡದೆ ಮಿಕ್ಸ್ ಮಾಡುತ್ತಾ ಇರಬೇಕು. ಇದು ತಳ ಹಿಡಿಯಬಹುದು. 4 ರಿಂದ 5 ನಿಮಿಷ ಬಿಟ್ಟು ಒಲೆ ಆಫ್ ಮಾಡಿಕೊಳ್ಳಿ. ಅನಂತರ ಇದು ಸಂಪೂರ್ಣ ತಣ್ಣಗಾಗಲು ಬಿಡಬೇಕು.
ಇದು ತಣ್ಣಗಾದಾಗ ಸ್ವಲ್ಪ ಗಟ್ಟಿಯಾಗುತ್ತದೆ. ಈಗ ಒಂದು ಮಿಕ್ಸಿ ಜಾರ್ಗೆ ಈ ಹಾಲನ್ನು ಹಾಕಿಕೊಂಡು 1 ನಿಮಿಷ ರುಬ್ಬಬೇಕು. ಆಗಾಗ ಆಫ್ ಆನ್ ಮಾಡಿಕೊಳ್ಳುತ್ತಾ ರುಬ್ಬಬೇಕು. ನಂತರ ಒಂದು ಬೌಲ್ಗೆ ಹಾಕಿಟ್ಟುಕೊಳ್ಳಿ ಅಥವಾ ಟೀ ಕುಡಿಯುವ ಕಪ್, ಇಡ್ಲಿ ಕಪ್ಗೂ ಹಾಕಿಕೊಳ್ಳಬಹುದು. ಈಗ ಈ ಕ್ರೀಮ್ ಅನ್ನು ಫ್ರಿಡ್ಜ್ನ ಫ್ರೀಜರ್ನಲ್ಲಿ ಒಂದು ದಿನ ರಾತ್ರಿ ಇಡಬೇಕು.
ಮಾರನೆ ದಿನ ಬೆಳಗ್ಗೆ ಇದನ್ನು ಹೊರತೆಗೆದು ಐಸ್ ಕ್ರೀಮ್ ಅನ್ನು ತೆಗೆಯಬಹುದು. ನೀವು ಇದಕ್ಕೆ ಬೆರಿ ಕತ್ತರಿಸಿಕೊಂಡು ಹಾಕಿಕೊಳ್ಳಬಹುದು. ಅಥವಾ ಡ್ರೈ ಫ್ರೂಟ್ಸ್ ಸಹ ಮೇಲೆ ಹಾಕಿಕೊಂಡು ಸವಿಯಬಹುದು. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯಾದ ಐಸ್ ಕ್ರೀಮ್ ರೆಡಿಯಾಗುತ್ತೆ.



Click it and Unblock the Notifications
