Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಹೈದ್ರಾಬಾದಿ ಮಸಾಲ ಪಲಾವ್: ಬೆಳಗ್ಗೆ ಮಾಡಿದ್ರೆ ಮೂರು ಹೊತ್ತು ಸವಿಯೋದು ಪಕ್ಕ!
ಬೆಳಗ್ಗೆ ತಿಂಡಿ ಸಮಯಕ್ಕೆ ನೀವು ರುಚಿ ರುಚಿಯಾದ ಅಡುಗೆಗಳ, ತಿಂಡಿಗಳನ್ನು ಮಾಡಿ ಸವಿಯೋಕೆ ಇಷ್ಟಪಡುವ ಮಂದಿ ಆಗಿರಬಹುದು. ಅದ್ರಲ್ಲೂ ಮಧ್ಯಾಹ್ನದ ಬಾಕ್ಸ್‌ಗೂ ಸಹ ನೀವು ಈ ತಿಂಡಿಯನ್ನು ಸವಿಯಬೇಕು ಎನ್ನುವಂತಿದ್ದರೆ ರುಚಿ ರುಚಿಯಾದ ಹಲವು ರೀತಿಯ ರೈಸ್ ರೆಸಿಪಿಗಳ ಮಾಡಿರುತ್ತೀರಿ. ಅನ್ನ ಬಳಸಿ ಮಾಡುವ ತಿಂಡಿಗಳಲ್ಲಿ ಹತ್ತಾರು ಬಗೆಗಳಿವೆ. ಪಲಾವ್, ರೈಸ್ ಬಾತ್, ಪುಳಿಯೋಗರೆ, ಚಿತ್ರಾನ್ನ, ವೆಜ್ ಬಿರಿಯಾನಿ, ಫ್ರೈಡ್ ರೈಸ್ ಹೀಗೆ ಈ ಪಟ್ಟಿ ಉದ್ದವಾಗುತ್ತಲೇ ಹೋಗುತ್ತದೆ.
ಆದ್ರೆ ಬಗೆ ಬಗೆಯ ತಿಂಡಿ ಸವಿಯುವ ನಿಮ್ಮ ಬಯಕೆಯಲ್ಲಿ ನಾವಿಂದು ಹೊಸ ರೀತಿಯ ಪಲಾವ್ ಮಾಡುವ ಕುರಿತು ಹೇಳಲಿದ್ದೇವೆ. ಬೆಳಗ್ಗಿನ ತಿಂಡಿಯ ಸಮಯಕ್ಕೆ ಎಲ್ಲರಿಗೂ ಥಟ್ ಅಂತ ನೆನಪಿಗೆ ಬರುವ ಖಾದ್ಯ ಅಂದ್ರೆ ಅದು ಪಲಾವ್ ಆಗಿರಲಿದೆ. ಎಲ್ಲರೂ ಈ ಪಲಾವ್ ಸವಿಯಲು ಇಷ್ಟಪಡುತ್ತಾರೆ. ಹಾಗೆ ವಿವಿಧ ಬಗೆಯ ಪಲಾವ್ ಮಾಡಿ ನೀವು ಸಹ ಸವಿದಿರುತ್ತಿರಿ. ಹೋಟೆಲ್‌ಗಳಲ್ಲಿ ಬಗೆ ಬಗೆಯ ಪಲಾವ್ ಸಿಗುವುದು ಸಹಜ.

ಆದ್ರೆ ನಾವಿಂದು ಮನೆಯಲ್ಲಿ ಸುಲಭವಾಗಿ ಹೈದ್ರಾಬಾದಿ ಮಸಾಲ ಪಲಾವ್ ಮಾಡುವ ಕುರಿತು ತಿಳಿಯೋಣ. ಹೈದ್ರಾಬಾದ್‌ನ ಮಸಾಲ ಅಡುಗೆ ಎಲ್ಲಾ ಕಡೆಯೂ ಫೇಮಸ್, ಅಲ್ಲಿನ ಮಸಾಲೆ ಭರಿತ ಊಟ ಅಂದ್ರೆ ಎಲ್ಲರ ಬಾಯಲ್ಲೂ ನೀರು ಬರುವುದು ಖಚಿತ. ಹಾಗೆ ಸುಲಭವಾಗಿ ಮನೆಯಲ್ಲಿ ಮಾಡಬಹುದು. ಹಾಗಾದ್ರೆ ನಾವಿಂದು ಮನೆಯಲ್ಲಿ ಬೆಳಗ್ಗೆ ತಿಂಡಿಗೆ ಹಾಗೆ ಮಧ್ಯಾಹ್ನದ ಬಾಕ್ಸ್‌ಗೂ ಕೂಡ ಈ ರುಚಿ ರುಚಿ ಹೈದ್ರಾಬಾದಿ ಮಸಾಲ ಪಲಾವ್ ಮಾಡುವ ಕುರಿತು ಹೇಳಲಿದ್ದೇವೆ.
ಹೈದ್ರಾಬಾದಿ ಮಸಾಲ ಪಲಾವ್ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?, ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ? ಯಾವೆಲ್ಲಾ ಮಸಾಲೆಗಳನ್ನು ಇದಕ್ಕೆ ಬಳಸಬೇಕು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಹೈದ್ರಾಬಾದಿ ಮಸಾಲ ಪಲಾವ್ ಮಾಡಲು ಬೇಕಾಗುವ ವಸ್ತುಗಳು
- ಅನ್ನ
- ಈರುಳ್ಳಿ - 2
- ಶುಂಠಿ ಬೆಳ್ಳುಳ್ಳಿ ಪೇಸ್ಟ್
- ಹಸಿ ಮೆಣಸಿನಕಾಯಿ
- ಹಸಿರು ಬಟಾಣಿ - 1/4 ಕಪ್
- ಕ್ಯಾರೆಟ್ - 1
- ಕ್ಯಾಪ್ಸಿಕಂ - 1/4 ಕಪ್
- ಎಲೆಕೋಸು - 1/2 ಕಪ್
- ಹಸಿರು ಬೀನ್ಸ್ - 1/4 ಕಪ್
- ಅರಿಶಿನ ಪುಡಿ - 1/4 ಚಮಚ
- ಗರಂ ಮಸಾಲ ಪುಡಿ - 1/2 ಚಮಚ
- ಖಾರದ ಪುಡಿ - 1/2 ಚಮಚ
- ಕೊತ್ತಂಬರಿ ಪುಡಿ - 1 ಚಮಚ
- ಕಸುರಿ ಮೇಥಿ - 1 ಚಮಚ
- ಟೊಮೆಟೋ - 1
- ಪುದೀನ ಎಲೆಗಳು - 1/2 ಕಪ್
- ಕೊತ್ತಂಬರಿ ಸೊಪ್ಪು - 1/2 ಕಪ್
- ಅಡುಗೆ ಎಣ್ಣೆ
- ರುಚಿಗೆ ತಕ್ಕಷ್ಟು ಉಪ್ಪು
ಹೈದ್ರಾಬಾದಿ ಮಸಾಲ ಪಲಾವ್ ಮಾಡುವ ವಿಧಾನವೇನು?
- ಮೊದಲು ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಬಳಿಕ ಈರುಳ್ಳಿ ಹಾಕಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಹಸಿ ಮೆಣಸು, ಹಸಿ ಬಟಾಣಿ, ಕ್ಯಾರೆಟ್, ಎಲೆಕೋಸು, ಹೂಕೋಸು, ಕ್ಯಾಪ್ಸಿಕಂ ಸಹ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಫ್ರೈ ಆಗಲು ಬಿಡಿ.
- ಈಗ ಒಂದು ನಿಮಿಷಗಳ ಕಾಲ ಇದನ್ನು ಫ್ರೈ ಮಾಡಿಕೊಳ್ಳಿ. ಹಾಗೆ ಇದಕ್ಕೆ ಒಂದು ಟೊಮೆಟೋ, ಉಪ್ಪು ಹಾಕಿ ಮತ್ತೆ 1 ನಿಮಿಷ ಫ್ರೈ ಮಾಡಿ. ಅರಶಿಣ ಪುಡಿ, ಗರಂ ಮಸಾಲ, ಖಾರದ ಪುಡಿ, ಧನಿಯ ಪುಡಿ ಸಹ ಇದಕ್ಕೆ ಹಾಕಿ ಮಿಕ್ಸ್ ಮಾಡಿಕೊಳ್ಳಿ.
- ಈಗ ಇದಕ್ಕೆ ಸ್ಪೂನ್ ಕಸೂರಿ ಮೇಥಿ ಹಾಕಿ 1 ನಿಮಿಷ ಫ್ರೈ ಮಾಡಿಕೊಳ್ಳಿ. ಹಾಗೆ 3ರಿಂದ 4 ನಿಮಿಷ ತಳ ಹಿಡಿಯದಂತೆ ಬೇಯಿಸಿಕೊಳ್ಳಿ. ಈಗ ಮೊದಲೇ ಮಾಡಿಟ್ಟುಕೊಂಡಿರುವ ರೈಸ್ ಅನ್ನು ಇದಕ್ಕೆ ಹಾಕಬೇಕು. ಹುಡಿ ಹುಡಿಯಾಗಿ ಈ ರೈಸ್ ಮಾಡಿಕೊಂಡಿರಿ. ರೈಸ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
- ಈ ಅನ್ನಕ್ಕೆ ಮಸಾಲೆ ಚೆನ್ನಾಗಿ ಹಿಡಿಯುವಂತೆ ತಿರುಗಿಸುತ್ತಾ ಇರಿ, ಇದು ಫ್ರೈಡ್ ರೈಸ್ ಮಾಡಿದ ವಿಧಾನದಲ್ಲಿ ಮಾಡುವ ಪಲಾವ್ ಆಗಿದೆ.
- ಕೊನೆಯಲ್ಲಿ ಪುದಿನ ಹಾಗೂ ಕೊತ್ತಂಬರಿ ಸೊಪ್ಪು ಸಹ ಹಾಕಿ ಮಿಕ್ಸ ಮಾಡಿ 3 ನಿಮಿಷ ಫ್ರೈ ಮಾಡಿ. ಇಷ್ಟಾದರೆ ನಿಮ್ಮ ಮುಂದೆ ಹೈದ್ರಾಬಾದಿ ಮಸಾಲ ಪಲಾವ್ ಸಿದ್ದವಾಗುತ್ತೆ. ನೀವು ಸಹ ಮನೆಯಲ್ಲಿ ಈ ರೀತಿಯ ಪಲಾವ್ ಒಮ್ಮೆ ಟ್ರೈ ಮಾಡಿ ನೋಡಿ.



Click it and Unblock the Notifications
