Latest Updates
-
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ!
ಚಿಕನ್, ಮಟನ್ ಬೇಡ! ಹೈದರಾಬಾದ್ ಸ್ಟೈಲ್ ಕಡಲೆಕಾಳು ಬಿರಿಯಾನಿ ಮಾಡಿ.. ಹೇಗೆ ಗೊತ್ತಾ?
ಸಾಮಾನ್ಯವಾಗಿ ನೀವು ಚಿಕನ್, ಮಟನ್, ಸೀಗಡಿ, ಮೀನು ಸೇರಿದಂತೆ ಹಲವು ಬಗೆಯ ಬಿರಿಯಾನಿಗಳನ್ನು ಸವಿದಿರುತ್ತಾರೆ. ಆದರೆ, ಮತ್ತಷ್ಟು ಹೊಸ ರುಚಿಗಳನ್ನು ಸವಿಯುವ ಬಯಕೆ ಅನೇಕರಿಗೆ ಇರುತ್ತದೆ. ಹೌದು, ಭಾರತೀಯರು ಸಾಮಾನ್ಯವಾಗಿ ಆಹಾರ ಪ್ರಿಯರು. ಭಾರತದ ಎಲ್ಲೆಡೆ ಬಿರಿಯಾನಿ ಲಭ್ಯವಿದ್ದರೂ, ಪ್ರತಿ ರಾಜ್ಯದಲ್ಲೂ ಇದನ್ನು ವಿಭಿನ್ನವಾಗಿ ತಯಾರಿಸಲಾಗುತ್ತದೆ. ರುಚಿಯೂ ವಿಭಿನ್ನವಾಗಿರುತ್ತದೆ. ಇಂತಹ ವಿಭಿನ್ನ ಬಗೆಯ ಬಿರಿಯಾನಿಗಳಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನಪ್ರಿಯವಾಗಿರುವುದು ಹೈದರಾಬಾದಿ ಕಾಬೂಲಿ ಬಿರಿಯಾನಿ (Hyderabad Kabuli Biryani). ಇದನ್ನು ಕಡಲೆಕಾಳು ಬಿರಿಯಾನಿ (Kabuli Biryani) ಎಂದೂ ಕರೆಯಲಾಗುತ್ತದೆ.
ಹೈದರಾಬಾದ್ ಕಾಬೂಲಿ ಬಿರಿಯಾನಿ ಸಾಮಾನ್ಯ ಬಿರಿಯಾನಿಗಿಂತ ವಿಭಿನ್ನ ರುಚಿಯನ್ನು ಹೊಂದಿರುವ ರುಚಿಕರವಾದ ಖಾದ್ಯವಾಗಿದೆ. ಇದನ್ನು ಹಿಂದಿನ ದಿನ ನೆನೆಸಿದ ಕಡಲೆ ಮತ್ತು ಬಾಸ್ಮತಿ ಅಕ್ಕಿಯನ್ನು ಈರುಳ್ಳಿ, ಟೊಮೆಟೊ ಮತ್ತು ಮಸಾಲೆಗಳನ್ನು ಬಳಸಿ ತಯಾರಿಸಲಾಗುವುದು. ಅಂದಹಾಗೆ, ನೀವು ಮಟನ್, ಚಿಕನ್ ಬದಲು ಕಡಲೆಕಾಳು ಬಿರಿಯಾನಿ ರುಚಿ ನೋಡಿ. ಚಿಕನ್ ಬಿರಿಯಾನಿಯನ್ನು ಮರೆತು ಬಿಡುತ್ತೀರಾ. ಹಾಗಿದ್ರೆ, ಹೈದರಾಬಾದಿ ಕಡಲೆ ಬಿರಿಯಾನಿ ಮಾಡಲು ಬೇಕಾಗುವ ಸಾಮಗ್ರಿಗಳು ಮತ್ತು ತಯಾರಿಸುವ ವಿಧಾನವನ್ನು (Hyderabad Kabuli Biryani Recipe) ತಿಳಿಯೋಣ ಬನ್ನಿ.

ಹೈದರಾಬಾದಿ ಕಡಲೆ ಬಿರಿಯಾನಿ ಮಾಡಲು ಬೇಕಾಗುವ ಸಾಮಗ್ರಿಗಳು
• ಬಾಸ್ಮತಿ ಅಕ್ಕಿ - 1 ಕೆಜಿ
• ಕಡಲೆಕಾಳು - 100 ಗ್ರಾಂ
• ಈರುಳ್ಳಿ - 2
• ಶುಂಠಿ ಬೆಳ್ಳುಳ್ಳಿ ಪೇಸ್ಟ್ - 2 ಚಮಚ
• ಟೊಮೆಟೊ - ಅರ್ಧ ಕೆಜಿ (1/2 ಕೆಜಿ)
• ಮೊಸರು - 200 ಗ್ರಾಂ
• ಗರಂ ಮಸಾಲಾ - 70 ಗ್ರಾಂ
• ಕೆಂಪು ಮೆಣಸಿನ ಪುಡಿ - 20 ಗ್ರಾಂ
• ಕೊತ್ತಂಬರಿ ಸೊಪ್ಪು - ಒಂದು ಹಿಡಿ
• ಹಸಿ ಮೆಣಸಿನಕಾಯಿ - 30 ಗ್ರಾಂ
• ತುಪ್ಪ - ಸ್ವಲ್ಪ
• ಅಡುಗೆ ಎಣ್ಣೆ - ಅಗತ್ಯವಿರುವಷ್ಟು
ಹೈದರಾಬಾದಿ ಕಡಲೆ ಬಿರಿಯಾನಿ ಮಾಡುವ ವಿಧಾನ
ಕಡಲೆಕಾಳು ನೆನೆಸಿ: ಮೊದಲಿಗೆ, ಅಕ್ಕಿ ಮತ್ತು ಕಡಲೆಕಾಳನ್ನು ಹಿಂದಿನ ರಾತ್ರಿಯೇ ಚೆನ್ನಾಗಿ ನೆನೆಸಿಡಿ. ನಂತರ, ಈರುಳ್ಳಿ, ಟೊಮೆಟೊ ಕತ್ತರಿಸಿಕೊಳ್ಳಿ. ಕೊತ್ತಂಬರಿ ಸೊಪ್ಪನ್ನು ಉದ್ದವಾಗಿ ಕತ್ತರಿಸಿ. ಈಗ ಅರ್ಧ ಕೆಜಿ ಟೊಮೆಟೊಗೆ 30 ಗ್ರಾಂ ಹಸಿ ಮೆಣಸಿನಕಾಯಿ ಬಳಸಿದರೆ ಸಾಕು.
ಮಸಾಲೆ ತಯಾರಿಸಿ: ಈಗ ಒಂದು ಕುಕ್ಕರ್ನಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ. ಎಣ್ಣೆ ಬಿಸಿಯಾದ ನಂತರ, ಕತ್ತರಿಸಿದ ಈರುಳ್ಳಿ, ಟೊಮೆಟೊ, ಹಸಿ ಮೆಣಸಿನಕಾಯಿ ಮತ್ತು ಎಲ್ಲ ಪದಾರ್ಥಗಳನ್ನು ಹಾಕಿ. ಎಲ್ಲವೂ ಚಿನ್ನದ ಬಣ್ಣಕ್ಕೆ ತಿರುಗಿದ ನಂತರ, 200 ಗ್ರಾಂ ಮೊಸರು, ಕೊತ್ತಂಬರಿ ಸೊಪ್ಪು, ಮೆಣಸಿನ ಪುಡಿ ಮತ್ತು ಉಪ್ಪು ಹಾಕಿ. ಕಡಿಮೆ ಉರಿಯಲ್ಲಿ ಚೆನ್ನಾಗಿ ಹುರಿಯಿರಿ.

ನೀರು ಹಾಕಿ ಬೇಯಿಸಿ: ಈಗ ಇದಕ್ಕೆ ರಾತ್ರಿಯಿಡೀ ನೆನೆಸಿದ ಕಡಲೆಕಾಳು ಹಾಕಿ. ನಂತರ, ನೆನೆಸಿದ ಅಕ್ಕಿ ಮತ್ತು ಅಗತ್ಯವಿರುವಷ್ಟು ನೀರು ಸೇರಿಸಿ ಕುಕ್ಕರ್ ಮುಚ್ಚಿ. ಕುಕ್ಕರ್ ಬದಲಿಗೆ ಪಾತ್ರೆಯಲ್ಲಿ ತಯಾರಿಸುವುದಾದರೆ, ಅಕ್ಕಿ ಕುದಿಯಲು ಪ್ರಾರಂಭಿಸಿದಾಗ, ನೀರನ್ನು ಬಸಿದು, ಮಸಾಲೆ ಪದಾರ್ಥಗಳಿರುವ ಪಾತ್ರಕ್ಕೆ ಹಾಕಿ. ಕಡಿಮೆ ಉರಿಯಲ್ಲಿ 15 ನಿಮಿಷ ಬೇಯಿಸಿ. ಇಷ್ಟು ಮಾಡಿದರೆ, ಹೈದರಾಬಾದಿ ಕಡೆಲೆ ಬಿರಿಯಾನಿ ಸವಿಯಲು ಸಿದ್ಧ.
ಒಟ್ಟಾರೆಯಾಗಿ, ಕಡಲೆಕಾಳು ಬಿರಿಯಾನಿ ಜನಪ್ರಿಯ ಸಸ್ಯಾಹಾರಿ ಖಾದ್ಯವಾಗಿದೆ. ಇದು ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್ಗಳ ಉತ್ತಮ ಮೂಲವಾಗಿದೆ. ಇದನ್ನು ಮೊಸರು ರೈತಾ ಅಥವಾ ಸಲಾಡ್ ಜೊತೆ ಸವಿಯಬಹುದು. ನೀವು ಒಮ್ಮೆ ಮನೆಯಲ್ಲಿ ಹೈದರಾಬಾದಿ ಶೈಲಿಯ ಕಡಲೆಕಾಳು ಬಿರಿಯಾನಿ ಟ್ರೈ ಮಾಡಿ.



Click it and Unblock the Notifications