Latest Updates
-
ಗಣೇಶೋತ್ಸವದ ಸಂಭ್ರಮದಲ್ಲಿ ದಂಪತಿಗಳ ಜಗಳ ಬೇಡ: ಸಮಯ ಮತ್ತು ಬಜೆಟ್ ನಿರ್ವಹಣೆಗೆ ಇಲ್ಲಿದೆ ಸಿಂಪಲ್ ಪ್ಲಾನ್! -
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ
ದೋಸೆ, ಪೂರಿ, ಚಪಾತಿಗೆ ಈ ಸಾಗು ಒಂದಿದ್ದರೆ ಸಾಕು..! ಅವರೆಕಾಳಿನ ಸಾಗು ಮಾಡೋದು ಹೇಗೆ?
ನೀವು ಚಪಾತಿ, ಅನ್ನಕ್ಕೆ ಹಾಗೆ ಯಾವುದೇ ತಿಂಡಿ ಮಾಡಿದ್ದರೂ ಕೂಡ ಅದರೊಂದಿಗೆ ಸವಿಯಲು ಒಂದು ಪಲ್ಯ, ಚಟ್ನಿ, ಸಾಗು ಮಾಡುತ್ತೇವೆ. ಈ ಎಲ್ಲಾ ಪದಾರ್ಥಗಳು ಉಟ, ತಿಂಡಿಗೆ ಹೇಳಿ ಮಾಡಿಸಿದ ಖಾದ್ಯಗಳು, ಈ ಖಾದ್ಯಗಳ ಹೊರತು ಊಟಕ್ಕೆ ರುಚಿ ಇರುವುದಿಲ್ಲ. ಹಾಗೆ ಬೆಳಗ್ಗೆ ತಿಂಡಿಗೆ ಮಾಡುವ ಸಾಗು ಮೂರು ಹೊತ್ತು ಸವಿಯಲು ಬರುವಂತೆ ಮಾಡಿದ್ರೆ ಕೆಲಸವೂ ಕಡಿಮೆಯಾಗುತ್ತೆ.
ಹಾಗಾದ್ರೆ ಮೂರು ಹೊತ್ತು ಸವಿಯಲು ಯಾವ ಖಾದ್ಯ ಮಾಡಬಹುದು ಎಂಬುದಕ್ಕೆ ನಾವಿಂದು ಸಾಗು ಮಾಡುವ ಕುರಿತು ತಿಳಿಯೋಣ. ತಿಂಡಿಗೆ ಊಟಕ್ಕೆ ಅವರೆಕಾಳಿನ ಸಾಗು ಮಾಡಿದ್ರೆ ಅದ್ಭುತ ರುಚಿ ನೀಡುತ್ತೆ. ಅದರಲ್ಲೂ ಅವರೆಕಾಳು ಆರೋಗ್ಯಕ್ಕೂ ಕೂಡ ಬಹಳ ಉತ್ತಮ. ಇದರಲ್ಲಿನ ಫೈಬರ್ ಅಂಶವು ನಮ್ಮ ಜೀರ್ಣಕ್ರಿಯೆಗೆ ಬಹಳ ಉಪಕಾರಿ.

ಅವರೆಕಾಳಿನಿಂದ ಮಾಡುವ ಪಲ್ಯ, ಸಾಂಬಾರ್ ಅನ್ನು ನೀವು ಕೂಡ ಸವಿದಿರುತ್ತೀರಿ. ಹಾಗೆ ಸಾಗು ಕೂಡ ಅಷ್ಟೇ ರುಚಿ ನೀಡುತ್ತೆ. ಹಾಗಾದ್ರೆ ನಾವಿಂದು ಈ ಸಾಗು ಮಾಡುವ ಕುರಿತಂತೆ ತಿಳಿದುಕೊಳ್ಳೋಣ. ಈ ಅವರೆಕಾಳಿನ ಪಲ್ಯವು ಅತ್ಯಂತ ರುಚಿಕರವಾಗಿ ಎಲ್ಲಾ ತಿಂಡಿಗೂ ಅದ್ಭುತವಾಗಿರುತ್ತೆ. ಅದರಲ್ಲೂ ಚಪಾತಿಗೆ ಹೇಳಿ ಮಾಡಿಸಿದ ಖಾದ್ಯ.
ಅವರೆಕಾಳಿನ ಸಾಗು ಅನ್ನು ನೀವು ಶುಭ ಸಮಾರಂಭಗಳಲ್ಲಿ ಅಡುಗೆ ಭಟ್ಟರು ಮಾಡುವ ಶೈಲಿಯಲ್ಲಿ ನಾವಿಂದು ಮಾಡುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ. ಈ ಅವರೆಕಾಳಿನ ಕಾಳು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು?, ಈ ಅವರೆಕಾಳಿನ ಸಾಗು ಮಾಡಲು ಎಷ್ಟು ಸಮಯ ಬೇಕು ಎನ್ನುವುದನ್ನು ತಿಳಿದುಕೊಳ್ಳಿ.
ಅವರೆಕಾಳಿನ ಸಾಗು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಅವರೆಕಾಳು
- ಹಸಿಮೆಣಸು
- ಸಾಸಿವೆ
- ಕರಿಬೇವು
- ಏಲಕ್ಕಿ
- ಮರಾಠಿ ಮೊಗ್ಗು
- ಲವಂಗ
- ಹುರಿಗಡಲೆ
- ಗಸೆಗಸೆ
- ಈರುಳ್ಳಿ
- ಟೊಮೆಟೋ
- ತೆಂಗಿನಕಾಯಿ
- ಒಣ ಮೆಣಸು
- ಶುಂಠಿ
- ಧನಿಯಾ ಕಾಳು
- ಬೆಳ್ಳುಳ್ಳಿ
- ಉಪ್ಪು
- ಎಣ್ಣೆ
ಅವರೆಕಾಳಿನ ಸಾಗು ಮಾಡುವ ವಿಧಾನವೇನು?
ಮೊದಲು ಅವರೆಕಾಳನ್ನು 1 ಕಪ್ ಅವರೆಕಾಳನ್ನು ಕುಕ್ಕರ್ಗೆ ಹಾಕಿ ಅರಶಿಣ, ಉಪ್ಪು, ನೀರು ಹಾಕಿಕೊಂಡು ಬೇಯಿಸಿಕೊಳ್ಳಬೇಕು. ಈಗ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಬೆಳ್ಳುಳ್ಳಿ, ಶುಂಠಿ, ಧನಿಯಾ ಕಾಳು, ಜೀರಿಗೆ, ಹಸಿ ಮೆಣಸು, ಲವಂಗ, ಚಕ್ಕೆ, ಮರಾಠಿ ಮೊಗ್ಗು, ಏಲಕ್ಕಿ, ಹುರಿಗಡಲೆ, ಗಸೆಗಸೆ, ತೆಂಗಿನ ತುರಿಯನ್ನು ಹಾಕಿಕೊಂಡು ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಿ.
ಈಗ ಒಂದು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಬಳಿಕ ಸಾಸಿವೆ, ಒಣ ಮೆಣಸು, ಕರಿಬೇವು, ಅರಶಿಣ, ಇಂಗು ಹಾಕಿಕೊಳ್ಳಿ. ಬಳಿಕ ಒಂದು ಈರುಳ್ಳಿ ಹಾಕಿ 2 ನಿಮಿಷ ಫ್ರೈ ಮಾಡಿಕೊಳ್ಳಿ. ನಂತರ ಸಣ್ಣದಾಗಿ ಹೆಚ್ಚಿರುವ ಟೊಮೆಟೋವನ್ನು ಕೂಡ ಹಾಕಿಕೊಂಡು 1 ನಿಮಿಷ ಫ್ರೈ ಮಾಡಿಕೊಳ್ಳಿ. ಈಗ ರುಬ್ಬಿಕೊಂಡಿರುವ ಎಲ್ಲಾ ಮಸಾಲೆಯನ್ನು ಕೂಡ ಇದಕ್ಕೆ ಹಾಕಿ ಸ್ವಲ್ಪ ನೀರು ಹಾಕಿ ಫ್ರೈ ಮಾಡಿಕೊಳ್ಳಿ.
ಒಲೆ ಮೇಲಿನ ಪದಾರ್ಥ ಕುದಿಯಲು ಆರಂಭಿಸಿದಾಗ ಈಗ ಬೇಯಿಸಿಕೊಂಡಿರುವ ಅವರೆಕಾಳುಗಳನ್ನು ನೀರಿನ ಸಮೇತವಾಗಿ ಅದಕ್ಕೆ ಹಾಕಿ ಮಿಕ್ಸ್ ಮಾಡಿ. ಹಾಗೆ ರುಚಿಗೆ ತಕ್ಕಷ್ಟು ಉಪ್ಪು ಕೂಡ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಹಾಗೆ ಮುಚ್ಚಳ ಮುಚ್ಚಿ ಬೇಯಲು ಬಿಡಿ. ಹೆಚ್ಚು ಸಮಯ ಬೇಡ 4 ರಿಂದ 5 ನಿಮಿಷ ಕುದಿಸಿದರೆ ಸಾಕಾಗುತ್ತದೆ. ಇಷ್ಟಾದರೆ ನಿಮ್ಮ ಮುಂದೆ ಈ ಅವರೆಕಾಳಿನ ಸಾಗು ರೆಡಿಯಾಗುತ್ತೆ. ಇಷ್ಟೊಂದು ಸುಲಭವದ ವಿಧಾನದಲ್ಲಿ ನೀವು ಕೂಡ ಮಾಡಿ ನೋಡಿ.



Click it and Unblock the Notifications
